• Home
  • »
  • News
  • »
  • jobs
  • »
  • NIMHANS Recruitment: ನಿಮ್ಹಾನ್ಸ್​​​ನಲ್ಲಿ ನೇಮಕಾತಿ; ಮಾಸಿಕ 78 ಸಾವಿರ ರೂ

NIMHANS Recruitment: ನಿಮ್ಹಾನ್ಸ್​​​ನಲ್ಲಿ ನೇಮಕಾತಿ; ಮಾಸಿಕ 78 ಸಾವಿರ ರೂ

ಕೆಲಸ ಖಾಲಿ ಇದೆ

ಕೆಲಸ ಖಾಲಿ ಇದೆ

ನಿಮ್ಸಾನ್ಸ್​ನಲ್ಲಿ ವೃತ್ತಿ ಮಾಡುವ ಆಸಕ್ತಿ ಹೊಂದಿರುವ ವಿಜ್ಞಾನ ಪದವೀಧರರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ

  • Share this:

    ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಮತ್ತು ನ್ಯೂರೋ ಸೈನ್ಸಸ್​ನಲ್ಲಿ (NIMHANS) ಸಂಶೋಧನಾ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು ಆರು ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಅಭ್ಯರ್ಥಿಗಳು ಇ-ಮೇಲ್​ ಮೂಲಕ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜೂನ್​ 23 ಕಡೆಯ ದಿನಾಂಕವಾಗಿದೆ.


    ನಿಮ್ಸಾನ್ಸ್​ನಲ್ಲಿ ವೃತ್ತಿ ಮಾಡುವ ಆಸಕ್ತಿ ಹೊಂದಿರುವ ವಿಜ್ಞಾನ ಪದವೀಧರರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಕೇಂದ್ರ ಸರ್ಕಾರದ ನಿಯಮಾವಳಿಗಳ ಪ್ರಕಾರ ಅಭ್ಯರ್ಥಿ ಸವಲತ್ತುಗಳನ್ನು ಪಡೆಯಲಿದ್ದಾರೆ. ಹುದ್ದೆ ನೇಮಕಾತಿ, ಆಯ್ಕೆ ಪ್ರಕ್ರಿಯೆ ಸೇರಿದಂತೆ ಇನ್ನಿತರ ಮಾಹಿತಿಗಳು ಈ ಕೆಳಗಿನಂತೆ ಇದೆ.


    ಸಂಸ್ಥೆಯ ಹೆಸರು: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್ (ನಿಮ್ಹಾನ್ಸ್)
    ಹುದ್ದೆಗಳ ಸಂಖ್ಯೆ: 6
    ಉದ್ಯೋಗ ಸ್ಥಳ: ಬೆಂಗಳೂರು - ಕರ್ನಾಟಕ
    ಹುದ್ದೆಯ ಹೆಸರು: ಸಂಶೋಧನಾ ಸಹಾಯಕ
    ಸಂಬಳ: ರೂ.39000-78000ರೂ ಪ್ರತಿ ತಿಂಗಳು

    ಹುದ್ದೆಹುದ್ದೆ ಸಂಖ್ಯೆವೇತನವಿದ್ಯಾರ್ಹತೆ
    ಸಂಶೋಧನಾ ಸಹಾಯಕ (ಹಿರಿಯ)178000 ರೂ ಮಾಸಿಕಎಂಡಿ ಪಿಎಚ್​ಡಿ
    ಸಂಶೋಧನಾ ಸಹಾಯಕ539000 ರೂ ಮಾಸಿಎಂಫಿಲ್​, ಎಂಎಸ್ಸಿ

    ವಯಸ್ಸಿನ ಮಿತಿ: ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 35 ವರ್ಷಗಳು.


    ವಯೋಮಿತಿ ಸಡಿಲಿಕೆ:
    ನಿಮಾನ್ಸ್​ ನೇಮಕಾತಿ ನಿಯಮಗಳ ಅನುಸಾರ


    ಇದನ್ನು ಓದಿ: ಕಲಬುರಗಿ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ನೇಮಕಾತಿ; ಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ


    ಆಯ್ಕೆ ಪ್ರಕ್ರಿಯೆ
    ಲಿಖಿತ ಪರೀಕ್ಷೆ ಮತ್ತು ಸಂದರ್ಶನ


    ಅರ್ಜಿ ಸಲ್ಲಿಕೆ
    ಇ-ಮೇಲ್​
    ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಇ-ಮೇಲ್ ಐಡಿ, mtkpsy@gmail.com ಗೆ ಕಳುಹಿಸಬೇಕು.


    ಇದನ್ನು ಓದಿ: ಅಂಚೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗ; 2410 ಹುದ್ದೆಗಳ ನೇಮಕಾತಿ


    ಪ್ರಮುಖ ದಿನಾಂಕಗಳು:
    ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: ಜೂನ್​ 4
    ಇ-ಮೇಲ್ ಕಳುಹಿಸಲು ಕೊನೆಯ ದಿನಾಂಕ: 23 ಜೂನ್​, 2022
    ಅರ್ಜಿ ಸಲ್ಲಿಸುವ ವಿಧಾನ: ಇಮೇಲ್​


    ಅರ್ಜಿ ಸಲ್ಲಿಕೆ ಪ್ರಕ್ರಿಯೆ
    -ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ
    -ಆನ್‌ಲೈನ್ ಮೋಡ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ.
    ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ಈ ಇಮೇಲ್ ವಿಳಾಸಕ್ಕೆ mtkpsy@gmail.com ಅಭ್ಯರ್ಥಿಗಳು ಮೇಲ್​ ಮಾಡಬೇಕಿದೆ. ಇ ಮೇಲ್​ ಅನ್ನು ಜೂನ್​ 23 ಒಳಗೆ  ಮಾಡಬೇಕಿದೆ.

    Published by:Seema R
    First published: