• Home
  • »
  • News
  • »
  • jobs
  • »
  • JOB ALERT: ರಿಸರ್ಚ್ ಅಸೋಸಿಯೇಟ್ ಆಗಬೇಕೆ? ಇಲ್ಲಿದೆ ಅವಕಾಶ-ಈಗಲೇ Apply ಮಾಡಿ

JOB ALERT: ರಿಸರ್ಚ್ ಅಸೋಸಿಯೇಟ್ ಆಗಬೇಕೆ? ಇಲ್ಲಿದೆ ಅವಕಾಶ-ಈಗಲೇ Apply ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಕ್ಲಿನಿಕಲ್ ಸೈಕಾಲಜಿ/ ಕಾಗ್ನಿಟಿವ್ ಸೈನ್ಸ್​​ನಲ್ಲಿ ಪಿಎಚ್​.ಡಿ ಪೂರ್ಣಗೊಳಿಸಿರಬೇಕು.

  • Share this:

    NIMHANS Recruitment 2022: ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು(National Institute of Mental Health and Neuro Sciences) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 1 ರಿಸರ್ಚ್​ ಅಸೋಸಿಯೇಟ್(Research Associate)​ ಹುದ್ದೆ ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಆನ್​ಲೈನ್(Online)​ ಮೂಲಕ ಅರ್ಜಿ ಸಲ್ಲಿಸಬೇಕು. ನವೆಂಬರ್ 17, 2022 ಅರ್ಜಿ ಹಾಕಲು ಕೊನೆಯ ದಿನವಾಗಿದೆ. ಬೆಂಗಳೂರಿನಲ್ಲಿ ಉದ್ಯೋಗ ಅರಸುತ್ತಿರುವ ಅಭ್ಯರ್ಥಿಗಳು ಈ ಕೂಡಲೇ ಇ-ಮೇಲ್ ಮಾಡಿ.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು
    ಹುದ್ದೆಯ ಹೆಸರುರಿಸರ್ಚ್​ ಅಸೋಸಿಯೇಟ್
    ಒಟ್ಟು ಹುದ್ದೆ1
    ವಿದ್ಯಾರ್ಹತೆಪಿಎಚ್​.ಡಿ
    ವೇತನಮಾಸಿಕ ₹ 47,000
    ಸ್ಥಳಬೆಂಗಳೂರು
    ಅರ್ಜಿ ಸಲ್ಲಿಕೆ ಬಗೆಆನ್​ಲೈನ್
    ನೋಟಿಫಿಕೇಶನ್ ಬಿಡುಗಡೆ ದಿನಾಂಕ03/11/2022
    ಇ-ಮೇಲ್ ಕಳುಹಿಸಲು ಕೊನೆ ದಿನ17/11/2022


    ವಿದ್ಯಾರ್ಹತೆ
    ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರ, ರಿಸರ್ಚ್​ ಅಸೋಸಿಯೇಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಕ್ಲಿನಿಕಲ್ ಸೈಕಾಲಜಿ/ ಕಾಗ್ನಿಟಿವ್ ಸೈನ್ಸ್​​ನಲ್ಲಿ ಪಿಎಚ್​.ಡಿ ಪೂರ್ಣಗೊಳಿಸಿರಬೇಕು.


    ಇದನ್ನೂ ಓದಿ: JOBS: ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದಲ್ಲಿ ಮ್ಯಾನೇಜರ್ ಹುದ್ದೆಗಳು ಖಾಲಿ, ಇಲ್ಲಿ Apply ಮಾಡಿ


    ವಯೋಮಿತಿ:
    ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರ, ರಿಸರ್ಚ್​ ಅಸೋಸಿಯೇಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಗರಿಷ್ಠ 40 ವರ್ಷ ಮೀರಿರಬಾರದು.


    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ
    ಸಂದರ್ಶನ


    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ neurology.cognition@gmail.com ಗೆ ನವೆಂಬರ್ 17,2022ಕ್ಕೆ ಮುನ್ನ ಕಳುಹಿಸಬೇಕು.


    ಇದನ್ನೂ ಓದಿ: Bengaluru Jobs: ಎಂಜಿನಿಯರಿಂಗ್ ಪಾಸಾಗಿದ್ರೆ BELನಲ್ಲಿದೆ ಉದ್ಯೋಗ, ಮಾಸಿಕ ವೇತನ ₹ 55,000


    ಪ್ರಮುಖ ದಿನಾಂಕಗಳು:
    ನೋಟಿಫಿಕೇಶನ್ ಬಿಡುಗಡೆ ದಿನಾಂಕ: 03/11/2022
    ಇ-ಮೇಲ್ ಕಳುಹಿಸಲು ಕೊನೆ ದಿನ: 17/11/2022

    Published by:Latha CG
    First published: