• Home
  • »
  • News
  • »
  • jobs
  • »
  • NIMHANS Recruitment 2022: ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಹಾಕಿ-ಮಾಸಿಕ ವೇತನ ₹ 24,000

NIMHANS Recruitment 2022: ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಹಾಕಿ-ಮಾಸಿಕ ವೇತನ ₹ 24,000

ನಿಮ್ಹಾನ್ಸ್​

ನಿಮ್ಹಾನ್ಸ್​

ಅಭ್ಯರ್ಥಿಗಳು ಆಫ್​​ಲೈನ್(Offline)​ ಮೂಲಕ ಅರ್ಜಿ ಸಲ್ಲಿಸಬೇಕು. ನವೆಂಬರ್ 25, 2022 ಅರ್ಜಿ ಹಾಕಲು ಕೊನೆಯ ದಿನವಾಗಿದೆ. ಬೆಂಗಳೂರಿನಲ್ಲಿ ಉದ್ಯೋಗ ಅರಸುತ್ತಿರುವ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಹಾಕಿ.

  • News18 Kannada
  • Last Updated :
  • Bangalore [Bangalore], India
  • Share this:

    NIMHANS Recruitment 2022: ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು(National Institute of Mental Health and Neuro Sciences) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 2 ಟೆಕ್ನಿಕಲ್ ಅಸಿಸ್ಟೆಂಟ್​(Technical Assistant) ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಆಫ್​​ಲೈನ್(Offline)​ ಮೂಲಕ ಅರ್ಜಿ ಸಲ್ಲಿಸಬೇಕು. ನವೆಂಬರ್ 25, 2022 ಅರ್ಜಿ ಹಾಕಲು ಕೊನೆಯ ದಿನವಾಗಿದೆ. ಬೆಂಗಳೂರಿನಲ್ಲಿ ಉದ್ಯೋಗ ಅರಸುತ್ತಿರುವ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಹಾಕಿ.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು
    ಹುದ್ದೆಯ ಹೆಸರುಟೆಕ್ನಿಕಲ್ ಅಸಿಸ್ಟೆಂಟ್
    ಒಟ್ಟು ಹುದ್ದೆ2
    ವಿದ್ಯಾರ್ಹತೆಡಿಪ್ಲೋಮಾ, ಬಿಎಸ್ಸಿ
    ವೇತನಮಾಸಿಕ ₹ 24,000
    ಸ್ಥಳಬೆಂಗಳೂರು
    ಅರ್ಜಿ ಸಲ್ಲಿಕೆ ಬಗೆಆಫ್​ಲೈನ್
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ10/11/2022
    ಅರ್ಜಿ ಸಲ್ಲಿಸಲು ಕೊನೆ ದಿನ25/11/2022


    ಹುದ್ದೆಯ ಮಾಹಿತಿ:
    ಟೆಕ್ನಿಕಲ್ ಅಸಿಸ್ಟೆಂಟ್-1
    ಟೆಕ್ನಿಕಲ್ ಅಸಿಸ್ಟೆಂಟ್(ನ್ಯೂರೋವೈರಾಲಜಿ)-1


    ಇದನ್ನೂ ಓದಿ: JOB ALERT: ನೀವು ಬಿಇ, ಬಿ ಟೆಕ್ ಮಾಡಿದ್ದೀರಾ? ಇಲ್ಲಿದೆ ಉದ್ಯೋಗಾವಕಾಶ- ತಿಂಗಳಿಗೆ 55 ಸಾವಿರ ಸಂಬಳ


    ವಿದ್ಯಾರ್ಹತೆ:
    ಟೆಕ್ನಿಕಲ್ ಅಸಿಸ್ಟೆಂಟ್-MLT ಯಲ್ಲಿ ಡಿಪ್ಲೋಮಾ, BMLT
    ಟೆಕ್ನಿಕಲ್ ಅಸಿಸ್ಟೆಂಟ್(ನ್ಯೂರೋವೈರಾಲಜಿ)-MLT ಯಲ್ಲಿ ಡಿಪ್ಲೋಮಾ, ಲೈಫ್​ ಸೈನ್ಸ್​ನಲ್ಲಿ ಬಿಎಸ್ಸಿ


    ವಯೋಮಿತಿ:
    ಟೆಕ್ನಿಕಲ್ ಅಸಿಸ್ಟೆಂಟ್- ಗರಿಷ್ಠ 35 ವರ್ಷ
    ಟೆಕ್ನಿಕಲ್ ಅಸಿಸ್ಟೆಂಟ್(ನ್ಯೂರೋವೈರಾಲಜಿ)- ಗರಿಷ್ಠ 30 ವರ್ಷ


    ವಯೋಮಿತಿ ಸಡಿಲಿಕೆ:
    ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರ, ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


    ಅರ್ಜಿ ಶುಲ್ಕ:
    PWD ಅಭ್ಯರ್ಥಿಗಳು- ಅರ್ಜಿ ಶುಲ್ಕ ಇಲ್ಲ
    SC/ST ಅಭ್ಯರ್ಥಿಗಳು-295 ರೂ.
    UR/OBC & EWS ಅಭ್ಯರ್ಥಿಗಳು-590 ರೂ.
    ಪಾವತಿಸುವ ಬಗೆ- ಆನ್​ಲೈನ್


    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ
    ಸಂದರ್ಶನ


    ಇದನ್ನೂ ಓದಿ: Railway Jobs: 10ನೇ ತರಗತಿ, ITI ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ-ಈಗಲೇ Apply ಮಾಡಿ


    ಅರ್ಜಿ ಸಲ್ಲಿಸುವ ಬಗೆ:
    ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ನವೆಂಬರ್ 25, 2022ರೊಳಗೆ ಕಳುಹಿಸಬೇಕು.


    ರಿಜಿಸ್ಟ್ರಾರ್
    ನಿಮ್ಹಾನ್ಸ್​
    ಪಿ.ಬಿ. ನಂ-2900
    ಹೊಸೂರ್ ರೋಡ್
    ಬೆಂಗಳೂರು-560029


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 10/11/2022
    ಅರ್ಜಿ ಸಲ್ಲಿಸಲು ಕೊನೆ ದಿನ: 25/11/2022

    Published by:Latha CG
    First published: