NIMHANS Recruitment: ನಿಮ್ಹಾನ್ಸ್​ನಲ್ಲಿದೆ ವಿವಿಧ ಹುದ್ದೆ; ಅರ್ಜಿ ಸಲ್ಲಿಕೆಗೆ ಆ.26 ಕಡೆಯ ದಿನ

ಕ್ಷೇತ್ರ ಸಮನ್ವಯಾಧಿಕಾರಿ, ಫೀಲ್ಡ್ ಸ್ಟಾಫ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಕೆಲಸ ಖಾಲಿ ಇದೆ

ಕೆಲಸ ಖಾಲಿ ಇದೆ

  • Share this:
    nರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ( National Institute of Mental Health and Neuro Sciences) ಕ್ಷೇತ್ರ ಸಮನ್ವಯಾಧಿಕಾರಿ, ಫೀಲ್ಡ್ ಸ್ಟಾಫ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 6 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಪದವಿ ಮಾಡಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಇಮೇಲ್​ ಮೂಲಕ ಸಲ್ಲಿಸಬಹುದಾಗಿದೆ. ಇಮೇಲ್​ ಮೂಲಕ ಅರ್ಜಿ ಸಲ್ಲಿಸಲು ಕಡೆಯ ದಿನಾಂಕ ಆಗಸ್ಟ್​ 26 ಆಗಿದೆ.

    ಈ ಹುದ್ದೆಗಳನ್ನು ತಾತ್ಕಾಲಿಕವಾಗಿ ಒಪ್ಪಂದದ ಆಧಾರದ ಮೇಲೆ ನೇಮಕಾತಿ ನಡೆಸಲಾಗುತ್ತಿದೆ. ಹುದ್ದೆಯ ಅವಧಿ ಆರು ತಿಂಗಳಾಗಿದ್ದು, ಅಭ್ಯರ್ಥಿಯ ಕಾರ್ಯ ಕ್ಷಮತೆ ಆಧಾರದ ಮೇಲೆ ವಿಸ್ತರಣೆ ನಡೆಸಲಾಗುವುದು.ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

    ಸಂಸ್ಥೆಯ ಹೆಸರು: ನಿಮ್ಹಾನ್ಸ್
    ಹುದ್ದೆಯ ಹೆಸರು: ಫೀಲ್ಡ್ ಕೋಆರ್ಡಿನೇಟರ್, ಫೀಲ್ಡ್ ಸ್ಟಾಫ್
    ಹುದ್ದೆಗಳ ಸಂಖ್ಯೆ: 6
    ಉದ್ಯೋಗ ಸ್ಥಳ: ಬೆಂಗಳೂರು
    ವೇತನ: 25000-35000 ರೂ ಪ್ರತಿ ತಿಂಗಳು






















    ಹುದ್ದೆಹುದ್ದೆ ಸಂಖ್ಯೆವಿದ್ಯಾರ್ಹತೆವೇತನ
    ಫೀಲ್ಡ್​ ಕೋ ಆರ್ಡಿನೇಟರ್​​1ಸಾರ್ವಜನಿಕ ಆರೋಗ್ಯದಲ್ಲಿ ಸ್ನಾತಕೋತ್ತರ ಪದವಿ35000 ರೂ ಮಾಸಿಕ
    ಫೀಲ್ಡ್​ ಸ್ಟಾಫ್​5ನಿಮ್ಹಾನ್ಸ್​ ನಿಯಮದ ಪ್ರಕಾರ25000 ರೂ ಮಾಸಿಕ


    ವಯಸ್ಸಿನ ಮಿತಿ: ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 35 ವರ್ಷಗಳು.

    ಇದನ್ನು ಓದಿ: ಧಾರವಾಡದಲ್ಲಿದೆ ಸಹಾಯಕ ಪ್ರಾಧ್ಯಾಪಕರ ಹುದ್ದೆ; ಮಾಸಿಕ 45000 ರೂ ವೇತನ

    ವಯೋಮಿತಿ ಸಡಿಲಿಕೆ:
    ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ ನಿಯಮಗಳ ಪ್ರಕಾರ

    ಆಯ್ಕೆ ಪ್ರಕ್ರಿಯೆ
    ಲಿಖಿತ ಪರೀಕ್ಷೆ ಮತ್ತು ಸಂದರ್ಶನ

    ಅರ್ಜಿ ಸಲ್ಲಿಕೆ: ಇಮೇಲ್​ ಮುಖಾಂತರ

    ಇಮೇಲ್​ ವಿಳಾಸ: aravind_baa@yahoo.co.in

    ಪ್ರಮುಖ ದಿನಾಂಕಗಳು:
    ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 04 ಆಗಸ್ಟ್​​ 2022
    ಇ-ಮೇಲ್ ಕಳುಹಿಸಲು ಕೊನೆಯ ದಿನಾಂಕ: 26 ಆಗಸ್ಟ್ 2022

    ಅಧಿಸೂಚನೆ ಪ್ರಮುಖ ಲಿಂಕ್‌ಗಳು
    ಅಧಿಕೃತ ವೆಬ್‌ಸೈಟ್: nimhans.ac.in

    ಇದನ್ನು ಓದಿ: ಗದಗದಲ್ಲಿ ಅತಿಥಿ ಉಪನ್ಯಾಸಕರ ಹುದ್ದೆ; ನೇರ ಸಂದರ್ಶನದ ಮೂಲಕ ಆಯ್ಕೆ

    ಅರ್ಜಿ ಸಲ್ಲಿಕೆ ಪ್ರಕ್ರಿಯೆ

    ನೇಮಕಾತಿ ಅಧಿಸೂಚನೆ ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.

    ರೆಸ್ಯೂಮೆ ಜೊತೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ.

    ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಮೇಲಿನ ಇಮೇಲ್​ ವಿಳಾಸಕ್ಕೆ ನಿಗದಿತ ದಿನಾಂಕದ ಮುನ್ನ ಕಳುಹಿಸಬೇಕು.
    Published by:Seema R
    First published: