NIHFW Recruitment: ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇಮಕಾತಿ; ಪದವೀಧರರಿಗೆ ಉತ್ತಮ ಅವಕಾಶ

ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇಮಕಾತಿ

ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇಮಕಾತಿ

 • Share this:
  ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ (National Institute of Health and Family Welfare) ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ತಾಂತ್ರಿಕ ಹೆಚ್ಚುವರಿ ನಿರ್ದೇಶಕರ ಹಾಗೂ ಉಪ ನಿರ್ದೇಶಕರು ಹುದ್ದೆ ನೇಮಕಾತಿಗೆ ಮುಂದಾಗಿದ್ದು, ಅರ್ಹ ಆಸಕ್ತ ವ್ಯಕ್ತಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಆನ್​ಲೈನ್ (Online) ಮೂಲಕ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜೂನ್ 2 ಆಗಿದೆ.

  ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

  ಸಂಸ್ಥೆ: ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
  ಹುದ್ದೆ: ಹೆಚ್ಚುವರಿ ನಿರ್ದೇಶಕ (ತಾಂತ್ರಿಕ), ಉಪ ನಿರ್ದೇಶಕರು (ತಾಂತ್ರಿಕ)
  ಹುದ್ದೆ ಸಂಖ್ಯೆ: 2
  ಹುದ್ದೆ ಅವಧಿ: ಹೆಚ್ಚುವರಿ ನಿರ್ದೇಶಕ (ತಾಂತ್ರಿಕ) 5 ವರ್ಷದ ಗುತ್ತಿಗೆ, ಉಪ ನಿರ್ದೇಶಕರು (ತಾಂತ್ರಿಕ) 4 ವರ್ಷದ ಗುತ್ತಿಗೆ ಆಧಾರದ ಮೇಲೆ


  ಹುದ್ದೆಹುದ್ದೆ ಸಂಖ್ಯೆವೇತನ
  ಹೆಚ್ಚುವರಿ ನಿರ್ದೇಶಕ (ತಾಂತ್ರಿಕ)1ವೇತನ ಮ್ಯಾಟ್ರಿಕ್ಸ್​ನಲ್ಲಿ 13ನೇ ಹಂತ
  ಉಪ ನಿರ್ದೇಶಕರು (ತಾಂತ್ರಿಕ)1ವೇತನ ಮ್ಯಾಟ್ರಿಕ್ಸ್​ನಲ್ಲಿ 11ನೇ ಹಂತ

  ವಯೋಮಿತಿ: ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿಯಮಾನುಸಾರ ಅಭ್ಯರ್ಥಿ ವಯೋಮಿತಿ 55 ಮೀರಿರಬಾರದು.

  ವಿದ್ಯಾರ್ಹತೆ
  ಪರಿಮಾಣಾತ್ಮಕ ವಿಜ್ಞಾನ / ನಿರ್ವಹಣೆ / ಸಾರ್ವಜನಿಕ ಆರೋಗ್ಯ / ಕಂಪ್ಯೂಟರ್ ವಿಜ್ಞಾನ ಅಥವಾ ಐಟಿಯಲ್ಲಿ ಸ್ನಾತಕೋತ್ತರ ಪದವಿ.
  ಸರ್ಕಾರದಲ್ಲಿ ಅಥವಾ ಅದರೊಂದಿಗೆ ಕೆಲಸ ಮಾಡಿದ ಕನಿಷ್ಠ 10 ವರ್ಷಗಳ ಅನುಭವ
  ಆರೋಗ್ಯ / ಸಾಮಾಜಿಕ ವಲಯದಲ್ಲಿ 4-5 ವರ್ಷಗಳ ಅನುಭವ.

  ಇದನ್ನು ಓದಿ: ಸಹ ಪ್ರಾಧ್ಯಾಪಕ, ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ವಾಕ್​ ಇನ್ ಇಂಟರ್​ವ್ಯೂ

  ಅನುಭವ
  ಇ-ಆಡಳಿತ ಯೋಜನೆಗಳನ್ನು ವಿನ್ಯಾಸಗೊಳಿಸುವ, ನಿರ್ವಹಿಸುವ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
  ಜವಾಬ್ದಾರಿಗಳು ರಾಷ್ಟ್ರೀಯ ಆರೋಗ್ಯದ ಯೋಜನೆ, ವಿನ್ಯಾಸ, ಅಭಿವೃದ್ಧಿ ಮತ್ತು ಮಾರ್ಪಾಡುಗಳನ್ನು ಒಳಗೊಂಡಿರುತ್ತದೆ
  ಪೋರ್ಟಲ್, ಬಹು ಭಾಷೆಗಳಲ್ಲಿ ದೇಶದ ಆರೋಗ್ಯ ಮಾಹಿತಿ ಅಗತ್ಯಗಳನ್ನು ಪರಿಹರಿಸುವ ಸಾಮರ್ಥ್ಯ

  ಇದನ್ನು ಓದಿ: ಪದವೀಧರರಿಗೆ ಉದ್ಯೋಗಾವಕಾಶ; ವ್ಯವಸ್ಥಾಪಕರು ಮತ್ತು ನಿರ್ದೇಶಕರ ಹುದ್ದೆಗೆ ಅರ್ಜಿ ಆಹ್ವಾನ

  ಅರ್ಜಿ ಸಲ್ಲಿಕೆ
  ಆಫ್​ ಲೈನ್​

  ಪ್ರಮುಖ ದಿನಾಂಕ
  ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭ: ಮೇ 3, 2022
  ಅರ್ಜಿ ಸಲ್ಲಿಕೆಗೆ ಅಂತಿಮ ದಿನ: ಜೂನ್​ 2, 2022

  ಪ್ರಮುಖ ಲಿಂಕ್​ಗಳು
  ಅಧಿಕೃತ ಅಧಿಸೂಚನೆಗೆ ಇಲ್ಲಿ ಕ್ಲಿಕ್​ ಮಾಡಿ
  ಅಧಿಕೃತ ವೆಬ್​ಸೈಟ್​: https://main.mohfw.gov.in/

  ಸೂಚನೆ
  ಅಭ್ಯರ್ಥಿಗಳು ಎಸಿಆರ್/ಎಪಿಎಆರ್‌ಗಳ ದೃಢೀಕೃತ ಪ್ರತಿಗಳೊಂದಿಗೆ ನಿಗದಿತ ಪ್ರೋಫಾರ್ಮಾದಲ್ಲಿ ಅರ್ಜಿ ಸಲ್ಲಿಸಬೇಕು.
  ಲಕೋಟೆ ಮೇಲೆ ಯಾವ ಹುದ್ದೆ ಎಂಬುದನ್ನು ಸ್ಪಷ್ಟವಾಗಿ ನಮೂದಿಸಬೇಕು
  ಅರ್ಜಿಯನ್ನು ಈ ಕೆಳಕಂಡ ವಿಳಾಸಕ್ಕೆ ಜೂನ್ 2ಕ್ಕೆ ಮುಂಚೆ ತಲುಪಬೇಕು.
  ನಿರ್ದೇಶಕರು, ರಾಷ್ಟ್ರೀಯ ಆರೋಗ್ಯ ಸಂಸ್ಥೆ ಮತ್ತು
  ಕುಟುಂಬ ಕಲ್ಯಾಣ, ಬಾಬಾ ಗಂಗನಾಥ್ ಮಾರ್ಗ, ಮುನಿರ್ಕಾ, ನವದೆಹಲಿ-110067.
  Published by:Seema R
  First published: