NIELIT Scientist Recruitment 2021: ತಿಂಗಳಿಗೆ 2 ಲಕ್ಷ ರೂ. ಸಂಬಳ, ಎಂಜಿನಿಯರಿಂಗ್​ ಪಾಸಾದವರು ಅರ್ಜಿ ಸಲ್ಲಿಸಿ

ಸೈಂಟಿಸ್ಟ್​ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​​ನಿಂದ ಕಡ್ಡಾಯವಾಗಿ ಎಂಜಿನಿಯರಿಂಗ್​ ಪದವಿ ಪಡೆದಿರಬೇಕು. ಅಥವಾ ಟೆಕ್ನಾಲಜಿಯಲ್ಲಿ ಪದವಿ ಪಡೆದಿರಬೇಕು.

NIELIT

NIELIT

  • Share this:
NIELIT Scientist Recruitment 2021: ನ್ಯಾಷನಲ್ ಇನ್​ಸ್ಟಿಟ್ಯೂಟ್​ ಆಫ್​ ಎಲೆಕ್ಟ್ರಾನಿಕ್ಸ್​ & ಇನ್ಫರ್ಮೇಶನ್ ಟೆಕ್ನಾಲಜಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 33 ಸೈಂಟಿಸ್ಟ್​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಹಾಕಬಹುದಾಗಿದೆ. ಡಿಸೆಂಬರ್ 7 , 2021 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಲು NIELIT ನ ಅಧಿಕೃತ ವೆಬ್​ಸೈಟ್​ nielit.gov.in ಗೆ ಭೇಟಿ ನೀಡಿ. ಆಯ್ಕೆಯಾದ ವ್ಯಕ್ತಿಗೆ ಸಂಸ್ಥೆಯ ಹಿತದೃಷ್ಟಿಯಿಂದ ಭಾರತದಲ್ಲಿ ಎಲ್ಲಿ ಬೇಕಾದರೂ ಪೋಸ್ಟ್ ನೀಡಬಹುದು.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

































ಸಂಸ್ಥೆನ್ಯಾಷನಲ್ ಇನ್​ಸ್ಟಿಟ್ಯೂಟ್​ ಆಫ್​ ಎಲೆಕ್ಟ್ರಾನಿಕ್ಸ್​ & ಇನ್ಫರ್ಮೇಶನ್ ಟೆಕ್ನಾಲಜಿ
ಹುದ್ದೆಯ ಹೆಸರುಸೈಂಟಿಸ್ಟ್​ C, ಸೈಂಟಿಸ್ಟ್ D
ಒಟ್ಟು ಹುದ್ದೆಗಳು33
ವಿದ್ಯಾರ್ಹತೆಎಂಜಿನಿಯರಿಂಗ್
ವೇತನಮಾಸಿಕ ₹ 78,800-2,09,200
ಅರ್ಜಿ ಸಲ್ಲಿಸುವ ವಿಧಾನಆನ್​ಲೈನ್​
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ7/12/2021



ಹುದ್ದೆಯ ಮಾಹಿತಿ:

ಸೈಂಟಿಸ್ಟ್​ C- 28 ಹುದ್ದೆಗಳು

ಸೈಂಟಿಸ್ಟ್ D-5 ಹುದ್ದೆಗಳು

ಅರ್ಹತಾ ಮಾನದಂಡ:

ವಿದ್ಯಾರ್ಹತೆ

ಸೈಂಟಿಸ್ಟ್​ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​​ನಿಂದ ಕಡ್ಡಾಯವಾಗಿ ಎಂಜಿನಿಯರಿಂಗ್​ ಪದವಿ ಪಡೆದಿರಬೇಕು. ಅಥವಾ ಟೆಕ್ನಾಲಜಿಯಲ್ಲಿ ಪದವಿ ಪಡೆದಿರಬೇಕು.

ಇದನ್ನೂ ಓದಿ:ICMR Recruitment 2021: ತಿಂಗಳಿಗೆ ₹ 66,500 ಸಂಬಳ, ಪದವೀಧರರಿಗೆ ICMRನಲ್ಲಿ ಉದ್ಯೋಗ

ವಯೋಮಿತಿ

ಸೈಂಟಿಸ್ಟ್ C​ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 35 ವರ್ಷ ಮೀರಿರಬಾರದು.

ಸೈಂಟಿಸ್ಟ್ D​ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 40 ವರ್ಷ ಮೀರಿರಬಾರದು.

ಆಯ್ಕೆ ಪ್ರಕ್ರಿಯೆ:

ಆಯ್ಕೆ ಪ್ರಕ್ರಿಯೆಯು ಸ್ಕ್ರೀನಿಂಗ್​ ಟೆಸ್ಟ್​, ಶೈಕ್ಷಣಿಕ ದಾಖಲೆಗಳ ಮೌಲ್ಯಮಾಪನ ಮತ್ತು ವೈಯಕ್ತಿಕ ಸಂದರ್ಶನವನ್ನು ಒಳಗೊಂಡಿರುತ್ತದೆ. ಮೊದಲಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಸ್ಕ್ರೀನಿಂಗ್ ಟೆಸ್ಟ್ ನಡೆಸಲಾಗುತ್ತದೆ. ಬಳಿಕ ವೈಯಕ್ತಿಕ ಸಂದರ್ಶನ ನಡೆಸಲಾಗುತ್ತದೆ. ಸ್ಕ್ರೀನಿಂಗ್​ ಟೆಸ್ಟ್​ 150 ಅಂಕಗಳನ್ನು ಒಳಗೊಂಡಿರುತ್ತದೆ. ಬಹು ಆಯ್ಕೆಯ ಪ್ರಶ್ನೆಗಳಿಗೆ ಉತ್ತರಿಸಲು 150 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ. ಅಂತಿಮ ಮೆರಿಟ್​ ಲಿಸ್ಟ್​​ನ್ನು ಗರಿಷ್ಠ 150 ಅಂಕಗಳಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಸಿದ್ದಪಡಿಸಲಾಗುತ್ತದೆ.

ವೇತನ:

ಸೈಂಟಿಸ್ಟ್ C​ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ ₹ 67,700-2,08,700

ಸೈಂಟಿಸ್ಟ್ D​ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ ₹ 78,800-2,09,200

ಅರ್ಜಿ ಶುಲ್ಕ:

ಅಭ್ಯರ್ಥಿಗಳು 800 ರೂ.ಗಳನ್ನು ಅರ್ಜಿ ಶುಲ್ಕವನ್ನಾಗಿ ಪಾವತಿಸಬೇಕು. SC / ST / PWD ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಅವರು 400 ರೂ. ಪಾವತಿಸಿದರೆ ಸಾಕು.

ಇದನ್ನೂ ಓದಿ:TCS is Hiring: ಟಿಸಿಎಸ್​ ನೇಮಕಾತಿ; ಪದವೀಧರರು ಈಗಲೇ ಅರ್ಜಿ ಸಲ್ಲಿಸಿ​

ಅರ್ಜಿ ಸಲ್ಲಿಸುವುದು ಹೇಗೆ?

1. ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್ https://recruitment-delhi.nielit.gov.in/ ಗೆ ಭೇಟಿ ನೀಡಿ.

2. ಹೋಂ ಪೇಜ್​ ಓಪನ್ ಆದ ಬಳಿಕ ಹೊಸ ಬಳಕೆದಾರ ನೋಂದಣಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

3. ನಂತರ ನಿಮಗಾಗಿ ಹೊಸ ಪುಟ ತೆರೆದುಕೊಳ್ಳುತ್ತದೆ.

4. ಅಪ್ಲಿಕೇಶನ್‌ನಲ್ಲಿ ನಿಮ್ಮ ಹೆಸರು, ತಂದೆಯ ಹೆಸರು ಇತ್ಯಾದಿಗಳನ್ನು ನಮೂದಿಸಿ, ಅರ್ಜಿ ಸಲ್ಲಿಸಿ.

5. ನೋಂದಣಿ ನಂತರ, ನೋಂದಣಿ ID, ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ, ಲಾಗ್ ಇನ್ ಮಾಡಿ.

6. ನಂತರ ಸೂಚಿಸಿದ ವಿವರಗಳನ್ನು ನಮೂದಿಸಿ ಸಬ್​ಮಿಟ್ ಮಾಡಿ.


ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

Published by:Latha CG
First published: