NICS Recruitment: ಪದವಿ ಆಗಿದ್ರೆ ಇಲ್ಲಿದೆ ಅವಕಾಶ - ತಿಂಗಳಿಗೆ 50 ಸಾವಿರ ಸಂಬಳ

Job Alert: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಕರಿಯರ್ ಸರ್ವಿಸ್ ನಾರ್ಮ್ಸ್ ಪ್ರಕಾರ ವಯೋಮಿತಿ ಸಡಿಲಿಕೆ ಮಾಡಲಾಗುತ್ತದೆ.  

112 ಹುದ್ದೆಗೆ ಅರ್ಜಿ ಹಾಕಿ

112 ಹುದ್ದೆಗೆ ಅರ್ಜಿ ಹಾಕಿ

  • Share this:
NICS Recruitment 2022:  ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಕರಿಯರ್ ಸರ್ವಿಸ್ (National Institute for Career Service) ಯುವ ವೃತ್ತಿಪರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ. ಬಿಎ, ಬಿಎಡ್​, ಬಿಕಾಂ ಸೇರಿದಂತೆ ವಿವಿಧ ಪದವಿ ಪಡೆದಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದ್ದು, ಭಾರತದಾದ್ಯಂತ ಯಾವುದೇ ಸ್ಥಳದಲ್ಲಿ ಕೆಲಸ ಮಾಡಲು ಸಿದ್ಧರಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ. ಈ ಹುದ್ದೆಗೆ ಅರ್ಜಿ ಹಾಕುವ ಅಭ್ಯರ್ಥಿಗಳು ಏಪ್ರಿಲ್​ 12ರ ಮೊದಲು ಆನ್‌ಲೈನ್‌(Online)ನಲ್ಲಿ ಅರ್ಜಿ ಸಲ್ಲಿಸಬಹುದು.  ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮೊದಲು ಶಿಕ್ಷಣ ಅರ್ಹತೆ, ವೇತನ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಅರ್ಜಿ ಪ್ರಕ್ರಿಯೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿ.  











































ಸಂಸ್ಥೆಯ ಹೆಸರುನ್ಯಾಶನಲ್ ಇನ್‌ಸ್ಟಿಟ್ಯೂಟ್ ಫಾರ್ ಕರಿಯರ್ ಸರ್ವಿಸ್ (NICS)
ಹುದ್ದೆಗಳ ಸಂಖ್ಯೆ112
ಉದ್ಯೋಗ ಸ್ಥಳಭಾರತದಾದ್ಯಂತ
ಹುದ್ದೆಯ ಹೆಸರುಯಂಗ್ ಪ್ರೊಫೆಷನಲ್
ಸಂಬಳರೂ.50000/- ಪ್ರತಿ ತಿಂಗಳು
ಶೈಕ್ಷಣಿಕ ಅರ್ಹತೆB.A, B.E ಅಥವಾ B.Tech, B.Ed, ಸ್ನಾತಕೋತ್ತರ ಪದವಿ ಅಥವಾ MBA,
ವಯೋಮಿತಿಕನಿಷ್ಠ 24 ವರ್ಷ ಮತ್ತು ಗರಿಷ್ಠ 40 ವರ್ಷ
ವೆಬ್​ಸೈಟ್ಇಲ್ಲಿ ಕ್ಲಿಕ್ ಮಾಡಿ 
ಅರ್ಜಿ ಸಲ್ಲಿಸುವ ಲಿಂಕ್ಇಲ್ಲಿ ನೇರವಾಗಿ ಅರ್ಜಿ ಹಾಕಿ 
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ12-04-2022

ಖಾಲಿ ಇರುವ 112 ಯಂಗ್ ಪ್ರೊಫೆಷನಲ್ ಹುದ್ದೆಗಳ ಭರ್ತಿಗೆ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಫಾರ್ ಕರಿಯರ್ ಸರ್ವಿಸ್ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು, B.A, B.E ಅಥವಾ B.Tech, B.Ed, ಸ್ನಾತಕೋತ್ತರ ಪದವಿ ಅಥವಾ MBA, ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ.  ಈ ಹುದ್ದೆಗೆ ಕನಿಷ್ಠ 2 ವರ್ಷ ಅನುಭವವನ್ನು ಹೊಂದಿರುವ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಏಪ್ರಿಲ್​ 12ರ ಮೊದಲು ಅರ್ಜಿ ಹಾಕಿ. ಈ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.50000/- ವೇತನ ನೀಡಲಾಗುತ್ತದೆ.

ಸಂಸ್ಥೆಯ ಹೆಸರು: ನ್ಯಾಶನಲ್ ಇನ್‌ಸ್ಟಿಟ್ಯೂಟ್ ಫಾರ್ ಕರಿಯರ್ ಸರ್ವಿಸ್ (NICS)

ಹುದ್ದೆಗಳ ಸಂಖ್ಯೆ: 112

ಉದ್ಯೋಗ ಸ್ಥಳ: ಭಾರತದಾದ್ಯಂತ

ಹುದ್ದೆಯ ಹೆಸರು: ಯಂಗ್ ಪ್ರೊಫೆಷನಲ್

ಸಂಬಳ: ರೂ.50000/- ಪ್ರತಿ ತಿಂಗಳು

ನೇರವಾಗಿ ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ 

ಶೈಕ್ಷಣಿಕ ಅರ್ಹತೆ: NICS ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ, B.A, B.E ಅಥವಾ B.Tech, B.Ed, ಸ್ನಾತಕೋತ್ತರ ಪದವಿ ಅಥವಾ MBA, ಪದವೀಧರರಾಗಿರಬೇಕು.

ಅನುಭವದ ವಿವರಗಳು

ಅಭ್ಯರ್ಥಿಗಳು ಸ್ನಾತಕೋತ್ತರ ಪದವಿ, ಅರ್ಥಶಾಸ್ತ್ರ, ಮನೋವಿಜ್ಞಾನ, ಸಮಾಜಶಾಸ್ತ್ರ, ಕಾರ್ಯಾಚರಣೆ ಸಂಶೋಧನೆ, ಅಂಕಿಅಂಶಗಳು, ಸಮಾಜ ಕಾರ್ಯ, ನಿರ್ವಹಣೆ, ಹಣಕಾಸು, ವಾಣಿಜ್ಯ, ಕಂಪ್ಯೂಟರ್ ಅಪ್ಲಿಕೇಶನ್‌ಗಳು ಇತ್ಯಾದಿಗಳಲ್ಲಿ MBA ಸ್ನಾತಕೋತ್ತರ ಪದವಿ ನಂತರ ಸಂಬಂಧಿತ ಕ್ಷೇತ್ರದಲ್ಲಿ 04 ವರ್ಷಗಳ ಅನುಭವ  ಹೊಂದಿರಬೇಕು.

ಇದನ್ನೂ ಓದಿ: ಫಾರ್ಮ್ ಮ್ಯಾನೇಜರ್ ಸೇರಿ 9 ಹುದ್ದೆಗೆ ಅರ್ಜಿ ಆಹ್ವಾನ - ಇಲ್ಲಿದೆ ಸಂಬಳದ ವಿವರ

ಅಭ್ಯರ್ಥಿಯು UGC, AICTE ಇತ್ಯಾದಿಗಳಲ್ಲಿ 02 ವರ್ಷಗಳ ಅನುಭವವನ್ನು ಹೊಂದಿರಬೇಕು.

ವಯೋಮಿತಿ: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಕರಿಯರ್ ಸರ್ವಿಸ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು 11-03-2022 ರಂತೆ ಕನಿಷ್ಠ 24 ವರ್ಷಗಳು ಮತ್ತು ಗರಿಷ್ಠ 40 ವರ್ಷಗಳನ್ನು ಹೊಂದಿರಬೇಕು. (11-03-1982 ಮತ್ತು 11-03-1998 ನಡುವೆ ಜನಿಸಿದವರು)

ವಯಸ್ಸಿನ ಸಡಿಲಿಕೆ:

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಕರಿಯರ್ ಸರ್ವಿಸ್ ನಾರ್ಮ್ಸ್ ಪ್ರಕಾರ ವಯೋಮಿತಿ ಸಡಿಲಿಕೆ ಮಾಡಲಾಗುತ್ತದೆ.

ಅರ್ಜಿ ಶುಲ್ಕ:

ಅರ್ಜಿ ಶುಲ್ಕವಿಲ್ಲ

ಆಯ್ಕೆ ಪ್ರಕ್ರಿಯೆ:

ಲಿಖಿತ ಪರೀಕ್ಷೆ ಮತ್ತು ಸಂದರ್ಶನ

ಅರ್ಜಿ ಸಲ್ಲಿಸುವ ಲಿಂಕ್ :  ಇಲ್ಲಿ ಅರ್ಜಿ ಹಾಕಿ 

ವೆಬ್​ಸೈಟ್​: labour.gov.in  

ಬೇರೆ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್  ಮಾಡಿ 

ಪ್ರಮುಖ ದಿನಾಂಕಗಳು:

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 11-03-2022

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 12-04-2022
Published by:Sandhya M
First published: