NHB Recruitment 2021: ತಿಂಗಳಿಗೆ ₹ 70,000 ಸಂಬಳ, ನ್ಯಾಷನಲ್ ಹಾರ್ಟಿಕಲ್ಚರ್​ ಬೋರ್ಡ್​​ನಲ್ಲಿ ಪದವೀಧರರಿಗೆ ಉದ್ಯೋಗ

ನವೆಂಬರ್ 20ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಅಭ್ಯರ್ಥಿಗಳು ಆನ್​ಲೈನ್(Online)​ ಮೂಲಕ ಅರ್ಜಿ ಸಲ್ಲಿಸಬೇಕು. ಡಿಸೆಂಬರ್ 12 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ನ್ಯಾಷನಲ್ ಹಾರ್ಟಿಕಲ್ಚರ್ ಬೋರ್ಡ್​

ನ್ಯಾಷನಲ್ ಹಾರ್ಟಿಕಲ್ಚರ್ ಬೋರ್ಡ್​

  • Share this:
ರಾಷ್ಟ್ರೀಯ ತೋಟಗಾರಿಕಾ ಮಂಡಳಿ (ನ್ಯಾಷನಲ್ ಹಾರ್ಟಿಕಲ್ಚರ್ ಬೋರ್ಡ್-National Horticulture Board)​ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 18 ಕನ್ಸಲ್ಟೆಂಟ್(Consultant), ಚೀಫ್ ಕನ್ಸಲ್ಟೆಂಟ್(Chief Consultant), ರಿಸೋರ್ಸ್​​ ಪರ್ಸನ್(Resource Person) ಹುದ್ದೆಗಳು ಖಾಲಿ ಇದ್ದು, ಪಿಎಚ್​.ಡಿ, ಪದವಿ, ಸ್ನಾತಕೋತ್ತರ ಪದವಿ ಹಾಗೂ ಎಂಜಿನಿಯರಿಂಗ್ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದಾಗಿದೆ. ನವೆಂಬರ್ 20ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಅಭ್ಯರ್ಥಿಗಳು ಆನ್​ಲೈನ್(Online)​ ಮೂಲಕ ಅರ್ಜಿ ಸಲ್ಲಿಸಬೇಕು. ಡಿಸೆಂಬರ್ 12 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ನ್ಯಾಷನಲ್​ ಹಾರ್ಟಿಕಲ್ಚರ್ ಬೋರ್ಡ್​ನ ಅಧಿಕೃತ ವೆಬ್​ಸೈಟ್(Official Website)​ nhb.gov.in ಗೆ ಭೇಟಿ ನೀಡಬಹುದು.

ಅಭ್ಯರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಳ್ಳುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆನ್ಯಾಷನಲ್ ಹಾರ್ಟಿಕಲ್ಚರ್ ಬೋರ್ಡ್
ಹುದ್ದೆಯ ಹೆಸರುಕನ್ಸಲ್ಟೆಂಟ್, ಚೀಫ್ ಕನ್ಸಲ್ಟೆಂಟ್, ರಿಸೋರ್ಸ್​​ ಪರ್ಸನ್
ಒಟ್ಟು ಹುದ್ದೆಗಳು18
ವಿದ್ಯಾರ್ಹತೆಪಿಎಚ್​.ಡಿ, ಪದವಿ, ಸ್ನಾತಕೋತ್ತರ ಪದವಿ ಹಾಗೂ ಎಂಜಿನಿಯರಿಂಗ್ ಪದವಿ
ಉದ್ಯೋಗದ ಸ್ಥಳದೆಹಲಿ
ಮಾಸಿಕ ವೇತನ₹ 30,000-70,000
ಅರ್ಜಿ ಸಲ್ಲಿಕೆ ವಿಧಾನಆನ್​ಲೈನ್
ಅರ್ಜಿ ಸಲ್ಲಿಕೆ ಆರಂಭ ದಿನಾಂಕ20/11/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ20/12/2021

 

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 20/11/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20/12/2021ಇದನ್ನೂ ಓದಿ:  RDPR Karnataka Jobs: ತಿಂಗಳಿಗೆ ₹ 35,000 ಸಂಬಳ, ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆಯಲ್ಲಿ ಉದ್ಯೋಗ

ಹುದ್ದೆಯ ಮಾಹಿತಿ:

ಚೀಫ್​ ಕನ್ಸಲ್ಟೆಂಟ್- 05
ಕನ್ಸಲ್ಟೆಂಟ್-10
ರಿಸೋರ್ಸ್​ ಪರ್ಸನ್-03
ಒಟ್ಟು - 18 ಹುದ್ದೆಗಳು

ವಿದ್ಯಾರ್ಹತೆ:

ಚೀಫ್​ ಕನ್ಸಲ್ಟೆಂಟ್- ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್, ಪಿಎಚ್​.ಡಿ
ಕನ್ಸಲ್ಟೆಂಟ್-ಪದವಿ
ರಿಸೋರ್ಸ್​ ಪರ್ಸನ್-ಪದವಿ

ವಯೋಮಿತಿ:

ಚೀಫ್​ ಕನ್ಸಲ್ಟೆಂಟ್- 62 ವರ್ಷ
ಕನ್ಸಲ್ಟೆಂಟ್-40 ವರ್ಷ
ರಿಸೋರ್ಸ್​ ಪರ್ಸನ್-62 ವರ್ಷ

ಉದ್ಯೋಗದ ಸ್ಥಳ:

ಚೀಫ್​ ಕನ್ಸಲ್ಟೆಂಟ್, ಕನ್ಸಲ್ಟೆಂಟ್, ರಿಸೋರ್ಸ್​ ಪರ್ಸನ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ದೆಹಲಿಯಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.

ವೇತನ:

ಚೀಫ್​ ಕನ್ಸಲ್ಟೆಂಟ್- ಮಾಸಿಕ ₹ 70,000
ಕನ್ಸಲ್ಟೆಂಟ್- ಮಾಸಿಕ ₹ 50,000
ರಿಸೋರ್ಸ್​ ಪರ್ಸನ್- ಮಾಸಿಕ ₹ 30,000

ಇದನ್ನೂ ಓದಿ: Central Railway Recruitment 2021: ಸೆಂಟ್ರಲ್ ರೈಲ್ವೆಯಲ್ಲಿ ಶಿಕ್ಷಕ ಹುದ್ದೆಗಳು ಖಾಲಿ, ಮಾಸಿಕ ವೇತನ ₹ 27,500

ಆಯ್ಕೆ ಪ್ರಕ್ರಿಯೆ:

ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ


ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

Published by:Latha CG
First published: