NGRI Recruitment: ಪದವೀಧರರಿಗೆ ಅರ್ಜಿ ಆಹ್ವಾನ; ನೇರ ಸಂದರ್ಶನದ ಮೂಲಕ ಆಯ್ಕೆ

ಸಂಸ್ಥೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸಲು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ರಾಷ್ಟ್ರೀಯ ಭೂಗೋಳ ಸಂಶೋಧನಾ ಸಂಸ್ಥೆ

ರಾಷ್ಟ್ರೀಯ ಭೂಗೋಳ ಸಂಶೋಧನಾ ಸಂಸ್ಥೆ

  • Share this:
    ಹೈದ್ರಾಬಾದ್​ನ ರಾಷ್ಟ್ರೀಯ ಭೂಗೋಳ ಸಂಶೋಧನಾ ಸಂಸ್ಥೆ (National Geography Research Institute) ವಿವಿಧ ಪದವೀಧರರಿಗೆ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಹೈದ್ರಾಬಾದ್​ನಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಪ್ರಾಜೆಕ್ಟ್ ಅಸಿಸ್ಟೆಂಟ್, ಪ್ರಾಜೆಕ್ಟ್ ಅಸೋಸಿಯೇಟ್ I ಸೇರಿ ಒಟ್ಟು 18 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅಭ್ಯರ್ಥಿಗಳು ವಾಕ್​ ಇನ್​ ಇಂಟರ್​​ವ್ಯೂನಲ್ಲಿ ಬಾಕಿಯಾಗಬಹುದಾಗಿದೆ.

    ಸಂಸ್ಥೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸಲು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗೆ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಜೂನ್​ 14 ರಿಂದ 28ರವರೆಗೆ ನಡೆಯುವ ನೇರ ಸಂದರ್ಶನದಲ್ಲಿ ಭಾಗಿಯಾಗಬಹುದಾಗಿದೆ. ಈ ಹುದ್ದೆಗಳ ನೇಮಕಾತಿ, ಆಯ್ಕೆ ಪ್ರಕ್ರಿಯೆ, ವೇತನ ಸೇರಿದಂತೆ ಇನ್ನಿತರ ಮಾಹಿತಿಗಳು ಈ ಕೆಳಗಿನಂತಿದೆ.

    ಸಂಸ್ಥೆ : ರಾಷ್ಟ್ರೀಯ ಭೂಗೋಳ ಸಂಶೋಧನಾ ಸಂಸ್ಥೆ
    ಹುದ್ದೆಗಳು : ಪ್ರಾಜೆಕ್ಟ್ ಅಸಿಸ್ಟೆಂಟ್, ಪ್ರಾಜೆಕ್ಟ್ ಅಸೋಸಿಯೇಟ್ I, ಹಿರಿಯ ಪ್ರಾಜೆಕ್ಟ್​ ಅಸೋಸಿಯೇಟ್​​
    ಒಟ್ಟು ಹುದ್ದೆ: 18
    ಕಾರ್ಯ ನಿರ್ವಹಿಸುವ ಸ್ಥಳ: ಹೈದ್ರಾಬಾದ್​
    ವೇತನ: 20000- 42000 ರೂ ಮಾಸಿಕ

































    ಹುದ್ದೆಹುದ್ದೆ ಸಂಖ್ಯೆವಿದ್ಯಾರ್ಹತೆವಯೋಮಿತಿ
    ಪ್ರಾಜೆಕ್ಟ್​ ಅಸಿಸ್ಟೆಂಟ್​2ಬಿಕಾಂಗರಿಷ್ಠ 50
    ಪ್ರಾಜೆಕ್ಟ್​ ಅಸಿಸ್ಟೆಂಟ್​​10ಬಿಎಸ್ಸಿಗರಿಷ್ಠ 50
    ಪ್ರಾಜೆಕ್ಟ್ ಅಸೋಸಿಯೇಟ್13ಎಂಎಸ್ಸಿಗರಿಷ್ಠ 35
    ಸೀನಿಯರ್​ ಪ್ರಾಜೆಕ್ಟ್​ ಅಸೋಸಿಯೇಟ್​3ಜಿಯೋಫಿಸಿಕ್ಸ್​ನಲ್ಲಿ ಸ್ನಾತಕೋತ್ತರ ಪದವಿಗರಿಷ್ಠ 40

    ವಯೋಮಿತಿ ಸಡಿಲಿಕೆ
    ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ
    ಹಿಂದುಳಿದ ಅಭ್ಯರ್ಥಿಗಳಿ 3 ವರ್ಷ
    ವಿಕಲ ಚೇತನ ಅಭ್ಯರ್ಥಿಗಳಿಗೆ 10 ವರ್ಷ

    ಆಯ್ಕೆ ಪ್ರಕ್ರಿಯೆ
    ನೇರ ಸಂದರ್ಶನ ಮೂಲಕ

    ನೇರ ಸಂದರ್ಶನ ನಡೆಯುವ ದಿನಾಂಕ
    ಜೂನ್​ 14, 15, 18 ಹಾಗೂ 29ರಂದು ಬೆಳಗ್ಗೆ 8ಗಂಟೆಗೆ

    ನೇರ ಸಂದರ್ಶನ ನಡೆಯು ಸ್ಥಳ : ಸಿಎಸ್​ಐಆರ್​, ನ್ಯಾಷನಲ್​ ಜಿಯೋಫಿಸಿಕ್ಸ್​ ರಿಸರ್ಚ್​ ಇನ್ಸೂಟಿಟ್​, ಉಪ್ಪಾಲ್​ ರಸ್ತೆ, ಹೈದ್ರಾಬಾದ್​: 500007

    ಇದನ್ನು ಓದಿ: ರಾಯಚೂರು ಕೃಷಿ ವಿವಿಯಲ್ಲಿ ನೇಮಕಾತಿ; 11 ಹುದ್ದೆಗೆ ಅರ್ಜಿ ಆಹ್ವಾನ

    ಅರ್ಜಿ ಶುಲ್ಕ
    ಅರ್ಜಿ ಶುಲ್ಕಕ್ಕೆ ವಿನಾಯಿತಿ ನೀಡಲಾಗಿದೆ.

    ಪ್ರಮುಖ ದಿನಾಂಕಗಳು:
    ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: ಜೂನ್​ 2
    ವಾಕ್-ಇನ್ ದಿನಾಂಕ: ಜೂನ್​ 14 ರಿಂದ 29ರವರೆಗೆ

    ಪ್ರಮುಖ ಲಿಂಕ್​ಗಳು
    ಹುದ್ದೆ ಕುರಿತ ಅಧಿಕೃತ ಅಧಿಸೂಚನೆಗೆ ಇಲ್ಲಿ ಕ್ಲಿಕ್  ಮಾಡಿ
    ಅಧಿಕೃತ ವೆಬ್​ಸೈಟ್​ ಗೆ ಇಲ್ಲಿ ಕ್ಲಿಕ್​​ ಮಾಡಿ

    ಇದನ್ನು ಓದಿ: ಮೆಟ್ರೋದಲ್ಲಿ ಬಿಇ ಆದವರಿಗೆ ಉದ್ಯೋಗಾವಕಾಶ; ಇಲ್ಲಿದೆ ಸಂಪೂರ್ಣ ವಿವರ

    ಪ್ರಮುಖ ಸೂಚನೆ
    -ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ
    -ಆನ್‌ಲೈನ್ ಮೋಡ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ.
    -ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ನೇರ ಸಂದರ್ಶನ ದಿನ ಅಭ್ಯರ್ಥಿಗಳು ಹಾಜರಾಗಬಹುದಾಗಿದೆ
    Published by:Seema R
    First published: