NFL Recruitment 2021: ನ್ಯಾಷನಲ್ ಫರ್ಟಿಲೈಸರ್ಸ್​ ಲಿಮಿಟೆಡ್​ನಲ್ಲಿ ಪದವಿ ಆದವರಿಗೆ ಉದ್ಯೋಗ

ಕನ್ಸಲ್ಟೆಂಟ್​ ಮತ್ತು ಸೀನಿಯರ್ ಕನ್ಸಲ್ಟೆಂಟ್​ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಬೋರ್ಡ್​​ನಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು. ಜೊತೆಗೆ ಸಂಬಂಧಿತ ಕ್ಷೇತ್ರದಲ್ಲಿ ಅನುಭವ ಹೊಂದಿರಬೇಕು.

NFL

NFL

  • Share this:
ನ್ಯಾಷನಲ್ ಫರ್ಟಿಲೈಸರ್ಸ್​ ಲಿಮಿಟೆಡ್(National Fertilizers Limited- NFL) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 40 ಕನ್ಸಲ್ಟೆಂಟ್(Consultant)​, ಸೀನಿಯರ್ ಕನ್ಸಲ್ಟೆಂಟ್(Senior Consultant)​ ಹುದ್ದೆಗಳು ಖಾಲಿ ಇದ್ದು, ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ. ನವೆಂಬರ್ 26ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆಫ್​ಲೈನ್​(ಪೋಸ್ಟಲ್) ಮೂಲಕ ಅರ್ಜಿ ಸಲ್ಲಿಸಬೇಕು. ಡಿಸೆಂಬರ್ 15 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಎನ್​ಎಫ್​ಎಲ್(NFL)​ನ ಅಧಿಕೃತ ವೆಬ್​ಸೈಟ್​, nationalfertilizers.com ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.









































ಸಂಸ್ಥೆ ನ್ಯಾಷನಲ್ ಫರ್ಟಿಲೈಸರ್ಸ್​ ಲಿಮಿಟೆಡ್
ಹುದ್ದೆಯ ಹೆಸರು ಕನ್ಸಲ್ಟೆಂಟ್​, ಸೀನಿಯರ್ ಕನ್ಸಲ್ಟೆಂಟ್​
ಒಟ್ಟು ಹುದ್ದೆಗಳು 40
ವಿದ್ಯಾರ್ಹತೆ ಯಾವುದೇ ಪದವಿ
ಉದ್ಯೋಗದ ಸ್ಥಳ ಪಾಣಿಪತ್
ವೇತನ ನಿಯಮಾನುಸಾರ
ಅರ್ಜಿ ಸಲ್ಲಿಸುವ ವಿಧಾನ ಆಫ್​ಲೈನ್​
ಅರ್ಜಿ ಸಲ್ಲಿಕೆ ಆರಂಭ ದಿನಾಂಕ 26/11/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15/12/2021



ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 26/11/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15/12/2021

ಇದನ್ನೂ ಓದಿ: RLDA Recruitment 2021: ತಿಂಗಳಿಗೆ ₹ 54,600 ಸಂಬಳ, ರೈಲ್ವೆ ಇಲಾಖೆಯಲ್ಲಿ BE, B Tech ಆದವರಿಗೆ ಉದ್ಯೋಗ

ಹುದ್ದೆಯ ಮಾಹಿತಿ:

ಸೀನಿಯರ್ ಕನ್ಸಲ್ಟೆಂಟ್-12
ಕನ್ಸಲ್ಟೆಂಟ್- 28
ಒಟ್ಟು 40 ಹುದ್ದೆಗಳು

ವಿದ್ಯಾರ್ಹತೆ

ಕನ್ಸಲ್ಟೆಂಟ್​ ಮತ್ತು ಸೀನಿಯರ್ ಕನ್ಸಲ್ಟೆಂಟ್​ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಬೋರ್ಡ್​​ನಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು. ಜೊತೆಗೆ ಸಂಬಂಧಿತ ಕ್ಷೇತ್ರದಲ್ಲಿ ಅನುಭವ ಹೊಂದಿರಬೇಕು.

ವಯೋಮಿತಿ:

ಕನ್ಸಲ್ಟೆಂಟ್​ ಮತ್ತು ಸೀನಿಯರ್ ಕನ್ಸಲ್ಟೆಂಟ್​ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 1957, ಜುಲೈ 1ಕ್ಕಿಂತ ಮುಂಚೆ ಜನಿಸಿರಬಾರದು.

ಉದ್ಯೋಗದ ಸ್ಥಳ:

ಕನ್ಸಲ್ಟೆಂಟ್​ ಮತ್ತು ಸೀನಿಯರ್ ಕನ್ಸಲ್ಟೆಂಟ್​ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಹರಿಯಾಣದ ಪಾಣಿಪತ್​ನಲ್ಲಿ ಉದ್ಯೋಗ ನೀಡಲಾಗುತ್ತದೆ.

ಇದನ್ನೂ ಓದಿ:HPCL Recruitment 2021: ಗ್ರಾಜುಯೇಟ್​ ಅಪ್ರೆಂಟಿಸ್​ ಹುದ್ದೆಗಳಿಗೆ ಅರ್ಜಿ ಆಹ್ವಾನ; ಮಾಸಿಕ ವೇತನ ₹ 25,000

ವೇತನ:

ಕನ್ಸಲ್ಟೆಂಟ್​ ಮತ್ತು ಸೀನಿಯರ್ ಕನ್ಸಲ್ಟೆಂಟ್​ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವೇತನ ನೀಡಲಾಗುತ್ತದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಆಯ್ಕೆ ಪ್ರಕ್ರಿಯೆ:

ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ
Published by:Latha CG
First published: