NFL Recruitment 2021: ಪದವಿ ಆದವರಿಗೆ ನ್ಯಾಷನಲ್ ಫರ್ಟಿಲೈಸರ್ಸ್​ ಲಿಮಿಟೆಡ್​ನಲ್ಲಿ ಉದ್ಯೋಗ, ತಿಂಗಳ ಸಂಬಳ ₹50,000

 NFL Recruitment 2021: ಅಭ್ಯರ್ಥಿಗಳು ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸುವ ಮೊದಲು NFLನ ನೇಮಕಾತಿ 2021 ಅಧಿಸೂಚನೆಯಲ್ಲಿ ಉಲ್ಲೇಖಿಸಲಾದ ಅರ್ಹತಾ ಮಾನದಂಡಗಳನ್ನು ಎಚ್ಚರಿಕೆಯಿಂದ ಪರೀಕ್ಷಿಸಬೇಕು.

NFL

NFL

  • Share this:
ನ್ಯಾಷನಲ್ ಫರ್ಟಿಲೈಸರ್ಸ್​ ಲಿಮಿಟೆಡ್(National Fertilizers Limited- NFL) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅಕ್ಟೋಬರ್ 20, 2021ರಂದು ನೇಮಕಾತಿ ಅಧಿಸೂಚನೆ(Notification)ಯನ್ನು ಬಿಡುಗಡೆ ಮಾಡಿದೆ. 183 ನಾನ್​-ಎಕ್ಸಿಕ್ಯುಟಿವ್(Non-Executive) ಹುದ್ದೆಗಳಿಗೆ ಆನ್​ಲೈನ್(Online)​ ಅರ್ಜಿ ಪ್ರಕ್ರಿಯೆ ಇಂದು ಆರಂಭವಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಎನ್​ಎಫ್​ಎಲ್(NFL)​ನ ಅಧಿಕೃತ ವೆಬ್​ಸೈಟ್​, nationalfertilizers.com ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. ನೋಂದಣಿ(Registration) ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕೊನೆಯ ದಿನಾಂಕ ನವೆಂಬರ್ 10, 2021.

ಸದ್ಯ ಖಾಲಿ ಇರುವ ಹುದ್ದೆಗಳ ಸಂಖ್ಯೆಯು ತಾತ್ಕಾಲಿಕವಾಗಿದೆ. NFLನ ವಿವೇಚನೆಯಿಂದ ಮತ್ತು ಅಧ್ಯಕ್ಷೀಯ ನಿರ್ದೇಶನಗಳ ಅನುಸಾರವಾಗಿ ಹುದ್ದೆಗಳ ಸಂಖ್ಯೆಯು ಬದಲಾಗಬಹುದು. ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.





































ಸಂಸ್ಥೆ ನ್ಯಾಷನಲ್ ಫರ್ಟಿಲೈಸರ್ಸ್​ ಲಿಮಿಟೆಡ್
ಹುದ್ದೆಯ ಹೆಸರು ನಾನ್​-ಎಕ್ಸಿಕ್ಯುಟಿವ್ ಹುದ್ದೆಗಳು
ಹುದ್ದೆಗಳ ಸಂಖ್ಯೆ 183
ಅರ್ಜಿ ಸಲ್ಲಿಸುವ ವಿಧಾನ ಆನ್​ಲೈನ್​
ಅರ್ಜಿ ಸಲ್ಲಿಕೆ ಆರಂಭ ದಿನಾಂಕ 21/10/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10/11/2021
ಸಂಬಳ ಮಾಸಿಕ ₹ 20,000-50,000
ವಿದ್ಯಾರ್ಹತೆ ಪದವಿ, ITI, Diploma

 ಅಭ್ಯರ್ಥಿಗಳು ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸುವ ಮೊದಲು NFLನ ನೇಮಕಾತಿ 2021 ಅಧಿಸೂಚನೆಯಲ್ಲಿ ಉಲ್ಲೇಖಿಸಲಾದ ಅರ್ಹತಾ ಮಾನದಂಡಗಳನ್ನು ಎಚ್ಚರಿಕೆಯಿಂದ ಪರೀಕ್ಷಿಸಬೇಕು. ಈ ನೇಮಕಾತಿ ಅಡಿಯಲ್ಲಿ ಖಾಲಿ ಇರುವ ಹುದ್ದೆಗಳು ಜೂನಿಯರ್ ಎಂಜಿನಿಯರ್ ಸಹಾಯಕ, ಅಟೆಂಡೆಂಟ್​ ಮತ್ತು ಲೋಕೋ ಅಟೆಂಡೆಂಟ್ ಇತ್ಯಾದಿ.

ಹುದ್ದೆಯ ಬಗ್ಗೆ ಮಾಹಿತಿ

























ವಿಭಾಗದ ಹೆಸರು ಹುದ್ದೆಗಳ ಸಂಖ್ಯೆ
ಪಾಣಿಪತ್ 62
ಬತಿಂದ 49
ವಿಜೈಪುರ 57
ಮಾರ್ಕೆಟಿಂಗ್ 15



ನಿಖರವಾದ ವರ್ಗವಾರು ಖಾಲಿ ಹುದ್ದೆಯ ವಿವರವನ್ನು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ:NADA Recruitment 2021: ತಿಂಗಳಿಗೆ ₹ 60,000 ಸಂಬಳ; ನ್ಯಾಷನಲ್ ಡೋಪಿಂಗ್ ವಿರೋಧಿ ಏಜೆನ್ಸಿಯಲ್ಲಿ ಉದ್ಯೋಗ

ಸಂಬಳ:

ಆಯ್ಕೆಯಾದ ಅಭ್ಯರ್ಥಿಗೆ ತಿಂಗಳಿಗೆ ₹20,000-50,000 ವೇತನ ನೀಡಲಾಗುತ್ತದೆ. ವೇತನವು ಹುದ್ದೆಯ ಶ್ರೇಣಿಯ ಆಧಾರದ ಮೇಲೆ ಬದಲಾಗುತ್ತದೆ. ಆಸಕ್ತಿ ಉಳ್ಳ ಅಭ್ಯರ್ಥಿಗಳು ಕೂಡಲೇ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಿ.

ವಿದ್ಯಾರ್ಹತೆ:

ಅಭ್ಯರ್ಥಿ ಕಡ್ಡಾಯವಾಗಿ ಪದವಿ ಪಡೆದಿರಬೇಕು. ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ITI ಅಥವಾ ಡಿಪ್ಲೋಮಾ ಪದವಿ ಪಡೆದಿರವೇಕು.

ಶೇ.50 ರಷ್ಟು ಅಂಕಗಳೊಂದಿಗೆ ಅಭ್ಯರ್ಥಿಯು ಉತ್ತೀರ್ಣರಾಗಿರಬೇಕು.

ವಯೋಮಿತಿ:

ಕನಿಷ್ಠ 18 ವರ್ಷ ಹಾಗೂ ಗರಿಷ್ಠ 30 ವರ್ಷ ಇರಬೇಕು.

ಅರ್ಜಿ ಶುಲ್ಕ:

ಸಾಮಾನ್ಯ, ಒಬಿಸಿ & ಇಡಬ್ಲ್ಯೂಎಸ್​ ವರ್ಗದ ಅಭ್ಯರ್ಥಿಗಳಿಗೆ 200 ರೂ. ಅರ್ಜಿ ಶುಲ್ಕ ಇರುತ್ತದೆ.

ಇದನ್ನೂ ಓದಿ:ONGC Recruitment 2021: BE, B. Tech ಪದವೀಧರರಿಗೆ ಒಎನ್​ಜಿಸಿಯಲ್ಲಿ ಉದ್ಯೋಗ, ಅರ್ಜಿ ಹಾಕಲು ಹೀಗೆ ಮಾಡಿ

ಆಯ್ಕೆ ಪ್ರಕ್ರಿಯೆ:

ಕಂಪ್ಯೂಟರ್ ಆಧಾರಿತ ಆನ್​ಲೈನ್​ ಆಬ್ಜೆಕ್ಟಿವ್​ ಮಾದರಿ ಪರೀಕ್ಷೆ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಬಳಿಕ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ ಮಾಡಲಾಗುತ್ತದೆ.

NFL ನೇಮಕಕಾತಿ-2021ರ ಕುರಿತು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್​ಸೈಟ್​ನಲ್ಲಿ ಲಗತ್ತಿಸಲಾದ ಅಧಿಸೂಚನೆಯನ್ನು ಓದಿ.


ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

Published by:Latha CG
First published: