News18 Kannada is Hiring: ಸಬ್​ ಎಡಿಟರ್ & ಸೀನಿಯರ್ ಸಬ್​ ಎಡಿಟರ್ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ, ಕಡೇ ದಿನಾಂಕ ಡಿಸೆಂಬರ್ 4

ಫ್ರೆಶರ್ಸ್​​ ಅಭ್ಯರ್ಥಿಗಳಿಗೆ ಸದ್ಯಕ್ಕೆ ಅವಕಾಶವಿಲ್ಲ ಕನಿಷ್ಠ 2-3 ವರ್ಷವಾದರೂ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅನುಭವ ಇರಲೇಬೇಕು. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಡಿಸೆಂಬರ್ 3 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ನ್ಯೂಸ್​ 18 ಕನ್ನಡ

ನ್ಯೂಸ್​ 18 ಕನ್ನಡ

  • Share this:
ನ್ಯೂಸ್​ 18 ಕನ್ನಡ ಡಿಜಿಟಲ್ ಮಾಧ್ಯಮ(News18 Kannada Digital Media) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಇನ್ನು ಕೇವಲ 3 ಹುದ್ದೆಗಳು ಖಾಲಿ ಇದ್ದು, ಅರ್ಜಿ ಸಲ್ಲಿಸಲು ನಾಲ್ಕೇ ದಿನ ಬಾಕಿ ಇದೆ. ಆಸಕ್ತ ಪತ್ರಿಕೋದ್ಯಮ ಅಭ್ಯರ್ಥಿಗಳು(Journalism Candidates) ಖಾಲಿ ಇರುವ ಹುದ್ದೆಗಳಿಗೆ ಶೀಘ್ರವೇ ಅರ್ಜಿ ಸಲ್ಲಿಸಬೇಕು. ಸಬ್​ ಎಡಿಟರ್ ಹಾಗೂ ಸೀನಿಯರ್ ಸಬ್​ ಎಡಿಟರ್(Sub Editor and Senior Sub Editor) ಹುದ್ದೆಗಳು ಖಾಲಿ ಇವೆ. ಪ್ರಿಂಟ್/ ಎಲೆಕ್ಟ್ರಾನಿಕ್​/ ಡಿಜಿಟಲ್ ಮಾಧ್ಯಮ (Print/Electronic/Digital Media)ದಲ್ಲಿ ಸುಮಾರು 2-3 ವರ್ಷ ಅನುಭವವುಳ್ಳ ಪತ್ರಿಕೋದ್ಯಮ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಫ್ರೆಶರ್ಸ್​​ ಅಭ್ಯರ್ಥಿಗಳಿಗೆ ಸದ್ಯ ಅವಕಾಶವಿಲ್ಲ. ಕನಿಷ್ಠ 2-3 ವರ್ಷವಾದರೂ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅನುಭವ ಇರಲೇಬೇಕು. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಡಿಸೆಂಬರ್ 3 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.









































ಸಂಸ್ಥೆ ನ್ಯೂಸ್​ 18 ಕನ್ನಡ ಡಿಜಿಟಲ್
ಹುದ್ದೆಯ ಹೆಸರು ಸಬ್​ ಎಡಿಟರ್, ಸೀನಿಯರ್ ಸಬ್​ ಎಡಿಟರ್
ಹುದ್ದೆಗಳ ಸಂಖ್ಯೆ 03
ವಿದ್ಯಾರ್ಹತೆ ಯಾವುದೇ ಪದವಿ, ಪತ್ರಿಕೋದ್ಯಮ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ
ಅನುಭವ 2-3 ವರ್ಷ(ಫ್ರೆಶರ್ಸ್​​ಗೆ ಅವಕಾಶವಿಲ್ಲ)
ಉದ್ಯೋಗದ ಸ್ಥಳ ಬೆಂಗಳೂರು
ವೇತನ ನಿಯಮಾನುಸಾರ
ಆಯ್ಕೆ ಪ್ರಕ್ರಿಯೆ ಲಿಖಿತ ಪರೀಕ್ಷೆ, ಸಂದರ್ಶನ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 03/12/2021



ವಿದ್ಯಾರ್ಹತೆ:
ಸಬ್​ ಎಡಿಟರ್ ಮತ್ತು ಸೀನಿಯರ್ ಸಬ್​ ಎಡಿಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​ನಿಂದ ಯಾವುದೇ ಪದವಿ ಪಡೆದಿರಬೇಕು. ಪತ್ರಿಕೋದ್ಯಮ ಪದವಿ ಪಡೆದಿರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದವರೂ ಸಹ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

News18 Kannada is Hiring: Apply for sub editor and senior sub editor posts in news 18 kannada digital before last date.
ನ್ಯೂಸ್​ 18 ಕನ್ನಡ


ಇದನ್ನೂ ಓದಿ: Police Recruitment 2021: ತಿಂಗಳಿಗೆ ₹ 22,000 ಸಂಬಳ, ಡಿಪ್ಲೋಮಾ ಆದವರಿಗೆ ಪೊಲೀಸ್ ಇಲಾಖೆಯಲ್ಲಿ ಉದ್ಯೋಗ

ಅನುಭವ:
ಸಬ್​ ಎಡಿಟರ್ ಮತ್ತು ಸೀನಿಯರ್ ಸಬ್​ ಎಡಿಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾಧ್ಯಮ ಕ್ಷೇತ್ರದ ಯಾವುದೇ ಪ್ರಿಂಟ್​/ ಎಲೆಕ್ಟ್ರಾನಿಕ್​/ ಡಿಜಿಟಲ್​ ಮಾಧ್ಯಮದಲ್ಲಿ 2-3 ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು. ಫ್ರೆಶರ್ಸ್​ ಅಭ್ಯರ್ಥಿಗಳಿಗೆ ಸದ್ಯಕ್ಕೆ ಅವಕಾಶವಿಲ್ಲ. ಸ್ಥಳೀಯ ಡಿಜಿಟಲ್ ಮಾಧ್ಯಮ/ ಇತರೆ ಸ್ಥಳೀಯ ಡಿಜಿಟಲ್​ ಮಾಧ್ಯಮಗಳಲ್ಲಿ ಕೆಲಸ ಮಾಡಿದವರಿಗೆ ಮೊದಲ ಪ್ರಾಶಸ್ತ್ಯ ನೀಡಲಾಗುವುದು. ಸ್ಕ್ರಿಪ್ಟ್​ ಬರವಣಿಗೆ ಉತ್ತಮವಾಗಿರುವ ಅಭ್ಯರ್ಥಿಗಳು ಆಯ್ಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ.

ಇತರೆ ಕೌಶಲ್ಯಗಳು:
ಸಬ್​ ಎಡಿಟರ್ ಮತ್ತು ಸೀನಿಯರ್ ಸಬ್​ ಎಡಿಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮುಖ್ಯವಾಗಿ ಕನ್ನಡ ಮತ್ತು ಇಂಗ್ಲಿಷ್​ ಭಾಷೆಯ ಮೇಲೆ ಹಿಡಿತ ಹೊಂದಿರಬೇಕು.
ಇಂಗ್ಲಿಷ್ ಭಾಷೆಯನ್ನು ಶುದ್ಧವಾಗಿ ಓದುವ, ಬರೆಯುವ ಮತ್ತು ಅರ್ಥಮಾಡಿಕೊಳ್ಳುವ ಕೌಶಲ್ಯ ಹೊಂದಿರಬೇಕು.
ಅಂತೆಯೇ ಕನ್ನಡದಿಂದ ಇಂಗ್ಲಿಷ್ ಭಾಷೆ​ಗೆ, ಇಂಗ್ಲಿಷ್​ನಿಂದ ಕನ್ನಡ ಭಾಷೆಗೆ ತರ್ಜುಮೆ(ಟ್ರಾನ್ಸಲೇಟ್​) ಮಾಡುವ ಕೌಶಲ್ಯವೂ ಅಭ್ಯರ್ಥಿಗೆ ಇರಬೇಕು.
ಕನ್ನಡವನ್ನು ವ್ಯಾಕರಣ ತಪ್ಪಿಲ್ಲದೇ ಬರೆಯಬೇಕು.

ಇದನ್ನೂ ಓದಿ: Excise Department Recruitment 2021: ಅಬಕಾರಿ ಇಲಾಖೆಯಲ್ಲಿ ವಿವಿಧ ಹುದ್ದೆಗಳು ಖಾಲಿ, PUC ಪಾಸಾದವರಿಗೂ ಅವಕಾಶ

ವೇತನ:
ಸಬ್​ ಎಡಿಟರ್ ಮತ್ತು ಸೀನಿಯರ್ ಸಬ್​ ಎಡಿಟರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕಂಪನಿಯ ನಿಯಮಾನುಸಾರ ವೇತನ ನೀಡಲಾಗುತ್ತದೆ.

ಉದ್ಯೋಗದ ಸ್ಥಳ:
ಸಬ್​ ಎಡಿಟರ್ ಮತ್ತು ಸೀನಿಯರ್ ಸಬ್​ ಎಡಿಟರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನ ನ್ಯೂಸ್​ 18 ಕನ್ನಡ ಕಚೇರಿಯಲ್ಲಿ ಉದ್ಯೋಗ ನೀಡಲಾಗುತ್ತದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಆಯ್ಕೆ ಪ್ರಕ್ರಿಯೆ:
ಸಬ್​ ಎಡಿಟರ್ ಮತ್ತು ಸೀನಿಯರ್ ಸಬ್​ ಎಡಿಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೊದಲಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಅದರಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಶಾರ್ಟ್​ಲಿಸ್ಟ್​ ಮಾಡಿಕೊಂಡು, ಬಳಿಕ ಅವರಿಗೆ ಆನ್​ಲೈನ್​​ ಸಂದರ್ಶನ ನಡೆಸಲಾಗುತ್ತದೆ.
Published by:Latha CG
First published: