Jobs in News 18 Kannada: ನ್ಯೂಸ್ 18 ಕನ್ನಡದಲ್ಲಿ ಉದ್ಯೋಗಾವಕಾಶ! ವಿವರ, ಅಪ್ಲೈ ಮಾಡಲು ಲಿಂಕ್ ಇಲ್ಲಿದೆ

Local 18: ಕನ್ನಡದ ಅಗ್ರಮಾನ್ಯ ಸುದ್ದಿ ಜಾಲತಾಣ ನ್ಯೂಸ್ 18 ಕನ್ನಡ ನಿಮ್ಮ ಪ್ರದೇಶದ ವಿದ್ಯಮಾನಗಳನ್ನು ಜಗತ್ತಿಗೆ ತೆರೆದಿಡಲು ನಿಮಗೆ ಅದ್ಭುತ ವೇದಿಕೆ ಒದಗಿಸುತ್ತಿದೆ. ಡಿಜಿಟಲ್ ಪತ್ರಕರ್ತರಾಗಲು (Digital Journalist) ಇರುವ ಸುವರ್ಣಾವಕಾಶದ ಕುರಿತು ನೀವೇ ತಿಳಿದುಕೊಳ್ಳಿ! ವಾಟ್ಸಪ್ ಮೂಲಕ ವಿಡಿಯೋ ನಮಗೆ ಕಳಿಸಿ.

ನ್ಯೂಸ್ 18 ಕನ್ನಡ ಸೇರಿ!

ನ್ಯೂಸ್ 18 ಕನ್ನಡ ಸೇರಿ!

  • Share this:
ಕರ್ನಾಟಕದ ಪ್ರಮುಖ ಸುದ್ದಿ ವೆಬ್‌ಸೈಟ್ ನ್ಯೂಸ್ 18 ಕನ್ನಡದಲ್ಲಿ ಅದ್ಭುತ ಅವಕಾಶಗಳು ನಿಮಗಾಗಿಯೇ ಕಾಯುತ್ತಿವೆ! ಹೌದು, ನ್ಯೂಸ್ 18 ಕನ್ನಡ (News 18 Kannada) ಉದ್ಯೋಗಗಳಿಗಾಗಿ ಅರ್ಹ ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸುತ್ತಿದೆ. ಕನ್ನಡ, ಇಂಗ್ಲೀಷ್ ಸೇರಿದಂತೆ ಒಟ್ಟು 12 ಭಾರತೀಯ ಭಾಷೆಗಳಲ್ಲಿ ವೆಬ್‌ಸೈಟ್‌ಗಳನ್ನು ಹೊಂದಿರುವ Network18  ಸಂಸ್ಥೆಯ ಬೃಹತ್ ಮಾಧ್ಯಮ ಸಮೂಹವನ್ನು ನೀವೂ ಸೇರಬಹುದಾಗಿದೆ. ಅಂದಹಾಗೆ ನೀವು ಡಿಜಿಟಲ್ ಪತ್ರಿಕೋದ್ಯಮದಲ್ಲಿ (Digital Journalism) ಮಿಂಚಲು ಬಯಸುತ್ತಿದ್ದೀರಾ? ನಿಮ್ಮ ಊರಲ್ಲೇ ಇದ್ದುಕೊಂಡು ನಿಮ್ಮ ಸುತ್ತಮುತ್ತಲಿನ ಆಗುಹೋಗುಗಳಿಗೆ (Local News) ಧ್ವನಿಯಾಗಲು ಬಯಸುತ್ತೀರಾ? ಈ ಅವಕಾಶ ನಿಮ್ಮ ಊರಿಗೆ ನಿಮ್ಮನ್ನು ಸ್ಟಾರ್  ಮಾಡಲಿದೆ. ಬನ್ನಿ, ನಿಮಗಾಗಿಯೇ ನ್ಯೂಸ್ 18 ಕನ್ನಡದ Local 18 ಗೆ ಸೇರಲು ಬಾಗಿಲು ತೆರೆದುಕೊಂಡಿದೆ.

ನ್ಯೂಸ್ 18 ಕನ್ನಡ ನಿಮ್ಮ ಪ್ರದೇಶದ ವಿದ್ಯಮಾನಗಳನ್ನು ಜಗತ್ತಿಗೆ ತೆರೆದಿಡಲು ನಿಮಗೆ ಅದ್ಭುತ ವೇದಿಕೆ ಒದಗಿಸುತ್ತಿದೆ. ಡಿಜಿಟಲ್ ಪತ್ರಕರ್ತರಾಗಲು (Digital Journalist) ಇರುವ ಸುವರ್ಣಾವಕಾಶದ ಕುರಿತು ನೀವೇ ತಿಳಿದುಕೊಳ್ಳಿ!

ಯಾವುದೇ ಹುದ್ದೆಗೆ ಅರ್ಜಿ ಹಾಕುವಾಗ ಅದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆದಿರುವುದು ಬಹಳ ಮುಖ್ಯ. ಹಾಗಾಗಿ ಈ ಹುದ್ದೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.























ಸಂಸ್ಥೆಯ ಹೆಸರುನ್ಯೂಸ್ 18 ಕನ್ನಡ
ಉದ್ಯೋಗ ಸ್ಥಳನಿಮ್ಮದೇ ಊರು-ಜಿಲ್ಲೆ
ಶೈಕ್ಷಣಿಕ ಅರ್ಹತೆಕನಿಷ್ಠ ಪದವಿ
ವಯೋಮಿತಿ30 ವರ್ಷಕ್ಕಿಂತ ಕಡಿಮೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ15-04-2022


1. Bengaluru Urban - ಬೆಂಗಳೂರು ನಗರ
2. Mangaluru - ಮಂಗಳೂರು
3. Hubballi-Dharwad - ಹುಬ್ಬಳ್ಳಿ-ಧಾರವಾಡ
4. Ballari - ಬಳ್ಳಾರಿ
5. Mysuru - ಮೈಸೂರು
6. Belagavi - ಬೆಳಗಾವಿ
7. Shivamogga - ಶಿವಮೊಗ್ಗ
8. Hassan -ಹಾಸನ
9. Mandya - ಮಂಡ್ಯ
10. Bengaluru Rural - ಬೆಂಗಳೂರು ಗ್ರಾಮಾಂತರ
11. Bidar - ಬೀದರ್
12. Davanagere - ದಾವಣಗೆರೆ
13. Chikkamagaluru - ಚಿಕ್ಕಮಗಳೂರು
14. Haveri - ಹಾವೇರಿ
15. Udupi - ಉಡುಪಿ
16. Uttara Kannada - ಉತ್ತರ ಕನ್ನಡ
17. Tumakuru - ತುಮಕೂರು
18. Koppala - ಕೊಪ್ಪಳ
19. Chamarajanagar - ಚಾಮರಾಜನಗರ
20. Bijapur - ಬಿಜಾಪುರ

ಅರ್ಜಿ ಸಲ್ಲಿಸಲು ಅರ್ಹತೆಯೇನು?
ಕನಿಷ್ಠ ಪದವಿ ಪೂರ್ಣಗೊಳಿಸಿರಬೇಕು. ಆದರೆ ಪತ್ರಿಕೋದ್ಯಮ ಪದವಿಯೇ ಆಗಬೇಕು ಅಂತೇನಿಲ್ಲ.

ವಯೋಮಿತಿ: 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು.

ಕೆಲಸದ ಸ್ಥಳ: ನೀವು ವಾಸಿಸುವ ಜಿಲ್ಲೆಗೆ ಮಾತ್ರ ಅರ್ಜಿ ಸಲ್ಲಿಸಿ. ನಿಮ್ಮ ನೆರೆಯ ಜಿಲ್ಲೆ ಅಥವಾ ಬೇರೆ ಜಿಲ್ಲೆಗಾಗಿ ಅರ್ಜಿ ಸಲ್ಲಿಸಬೇಡಿ.

ಅಗತ್ಯ ಕೌಶಲ: ಸಾಮಾಜಿಕ ಮಾಧ್ಯಮಗಳು ಮತ್ತು ಡಿಜಿಟಲ್ ಮಾಧ್ಯಮಗಳ ಕುರಿತು ಮಾಹಿತಿ ಇರಬೇಕು, ಪರಿಣಿತಿ ಇದ್ದರೆ ಇನ್ನೂ ಚೆನ್ನ.

ಅರ್ಜಿ ಸಲ್ಲಿಸುವುದು ಹೇಗೆ?

ಮೊದಲು ಕೆಳಗೆ ನೀಡಲಾದ ಲಿಂಕ್ ಅನ್ನು ಕ್ಲಿಕ್ ಮಾಡಿ.

ಅಪ್ಲೈ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಹಂತ 1: ಮೊದಲು ನಿಮ್ಮ ಹೆಸರಿನ ವಿವರಗಳನ್ನು ಭರ್ತಿ ಮಾಡಿ

ಹಂತ 2: ನೀವು ಅರ್ಜಿ ಸಲ್ಲಿಸುತ್ತಿರುವ ಜಿಲ್ಲೆಯನ್ನು ಆಯ್ಕೆಮಾಡಿ

ಹಂತ 3: ನಿಮ್ಮ ಇಮೇಲ್ ಐಡಿ ನಮೂದಿಸಿ.

ಹಂತ 4: ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.

ಇದನ್ನೂ ಓದಿ: Moneycontrol ಈಗ ನಂಬರ್ 1 ಹಣಕಾಸು ಸುದ್ದಿ ವೇದಿಕೆ! Economic Times ಹಿಂದಿಕ್ಕಿ ಈ ಸಾಧನೆ

ಹಂತ 5: ನಿಮ್ಮ ವಿಳಾಸ ಮತ್ತು ಇತರ ವಿವರಗಳನ್ನು ಭರ್ತಿ ಮಾಡಿ

ಹಂತ 6: ನಿಮ್ಮ ಜನ್ಮದಿನಾಂಕದ ವಿವರಗಳನ್ನು ನಮೂದಿಸಿ.

ಹಂತ 7: ನಿಮ್ಮ ರೆಸ್ಯೂಮ್ ಅನ್ನು ಅಪ್‌ಲೋಡ್ ಮಾಡಿ.

ಹಂತ 8: ನಿಮ್ಮ ಬಗ್ಗೆ 2 ನಿಮಿಷಗಳ ಸೆಲ್ಫಿ ವೀಡಿಯೊ ಮಾಡಿ. ನೀವು ನಿಮ್ಮ ಊರು ಮತ್ತು ಪ್ರದೇಶದ ಧ್ವನಿಯಾಗಲು ಏಕೆ ಬಯಸುತ್ತೀರಿ ಎಂದು ವಿಡಿಯೋದಲ್ಲಿ ವಿವರಿಸಿ. ಆ ವಿಡಿಯೋವನ್ನು  ಅಪ್‌ಲೋಡ್ ಮಾಡಿ. ನೆನಪಿಡಿ, ವೀಡಿಯೊ mp4  ಫಾರ್ಮ್ಯಾಟ್​ನಲ್ಲಿಯೇ  ಇರಬೇಕು.

ಹಂತ 9: ನೀವು ವಾಸಿಸುವ ಪ್ರದೇಶದಲ್ಲಿ ತುಂಬಾ ಜನಪ್ರಿಯ ಮತ್ತು ಆಸಕ್ತಿದಾಯಕ ವಿಷಯದ ಕುರಿತು 3 ರಿಂದ 5 ನಿಮಿಷಗಳಲ್ಲಿ ವಿವರಿಸಿ ವಿಡಿಯೋ ಮಾಡಿ. ಇದು ನಿಮ್ಮ ಸುತ್ತಲಿರುವ ಜನರ ಬಗ್ಗೆ ಆಗಿರಬಹುದು. ಸ್ಥಳ, ಆಹಾರ, ಫ್ಯಾಷನ್, ಉದ್ಯೋಗಗಳು, ಕ್ರೀಡೆ..ಹೀಗೆ ಯಾವುದೇ ಆಸಕ್ತಿಕರ ವಿಷಯವಾದರೂ ಆಗಿರಬಹುದು.   

ಅಥವಾ 6304923189 ಈ ಸಂಖ್ಯೆಗೆ ವಿಡಿಯೋಗಳನ್ನು ವಾಟ್ಸಪ್ ಮೂಲಕ ಕಳಿಸಿ

ಇದನ್ನೂ ಓದಿ: BDL Recruitment: ಭಾರತ್ ಡೈನಾಮಿಕ್ಸ್ ಲಿಮಿಟೆಡ್​ನಲ್ಲಿ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ - ತಿಂಗಳಿಗೆ 1 ಲಕ್ಷದ 80 ಸಾವಿರ ಸಂಬಳ

ಗಮನಿಸಿ, ನೀವು ವಿಡಿಯೋದಲ್ಲಿ ವಿವರಿಸುವ ವಿಷಯ ಮತ್ತು ವಿಧಾನ, ಎರಡೂ ಆಸಕ್ತಿದಾಯಕವಾಗಿರಲಿ, ನೋಡಿದ ತಕ್ಷಣ ಇಷ್ಟವಾಗುವಂತಿರಲಿ. ಜನರನ್ನು ಆಯಸ್ಕಾಂತದಂತೆ ಸೆಳೆಯುವಂತಿರಲಿ. ಪದೇ ಪದೇ ಆ ವಿಡಿಯೋವನ್ನು ನೋಡಬೇಕು, ಶೇರ್ ಮಾಡಬೇಕು ಎಂದು ಅನಿಸವಂತಿರಲಿ! ಈ ವಿಡಿಯೋ ಮಾಡಿ ಅಪ್​ಲೋಡ್ ಮಾಡಿ.  ಹಾ! ಈ ವೀಡಿಯೊ ಕೂಡ mp4 ಫಾರ್ಮ್ಯಾಟ್​​ನಲ್ಲೇ ಇರುವುದು ಕಡ್ಡಾಯ.

ಹಂತ 10: ಎಲ್ಲಾ ವಿವರಗಳನ್ನು ನೋಡಿ ಮತ್ತು ಸಬ್​ಮಿಟ್ ಆಯ್ಕೆಯನ್ನು ಕ್ಲಿಕ್ ಮಾಡಿ.

ಗಮನಿಸಿ: ನಿಮ್ಮ ರೆಸ್ಯೂಮ್ ಮತ್ತು ವಿಡಿಯೋಗಳನ್ನು ಕಳುಹಿಸಲು ಕೊನೆಯ ದಿನಾಂಕ: 15-04-2022.
Published by:guruganesh bhat
First published: