ನ್ಯೂಸ್ 18 ಕನ್ನಡ ಡಿಜಿಟಲ್ ಮಾಧ್ಯಮ(News18 Kannada Digital Media) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಪತ್ರಿಕೋದ್ಯಮ ಅಭ್ಯರ್ಥಿಗಳು(Journalism Candidates) ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಸಬ್ ಎಡಿಟರ್ ಹಾಗೂ ಸೀನಿಯರ್ ಸಬ್ ಎಡಿಟರ್(Sub Editor and Senior Sub Editor) ಹುದ್ದೆಗಳು ಖಾಲಿ ಇವೆ. ಪ್ರಿಂಟ್/ ಎಲೆಕ್ಟ್ರಾನಿಕ್/ ಡಿಜಿಟಲ್ ಮಾಧ್ಯಮ (Print/Electronic/Digital Media)ದಲ್ಲಿ ಸುಮಾರು 2-3 ವರ್ಷ ಅನುಭವವುಳ್ಳ ಪತ್ರಿಕೋದ್ಯಮ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಇಂದಿನಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ನವೆಂಬರ್ 30 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ |
ನ್ಯೂಸ್ 18 ಕನ್ನಡ ಡಿಜಿಟಲ್ |
ಹುದ್ದೆಯ ಹೆಸರು |
ಸಬ್ ಎಡಿಟರ್, ಸೀನಿಯರ್ ಸಬ್ ಎಡಿಟರ್ |
ಹುದ್ದೆಗಳ ಸಂಖ್ಯೆ |
03 |
ವಿದ್ಯಾರ್ಹತೆ |
ಯಾವುದೇ ಪದವಿ, ಪತ್ರಿಕೋದ್ಯಮ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ |
ಅನುಭವ |
2-3 ವರ್ಷ |
ಉದ್ಯೋಗದ ಸ್ಥಳ |
ಬೆಂಗಳೂರು |
ವೇತನ |
ನಿಯಮಾನುಸಾರ |
ಆಯ್ಕೆ ಪ್ರಕ್ರಿಯೆ |
ಲಿಖಿತ ಪರೀಕ್ಷೆ, ಸಂದರ್ಶನ |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ |
30/11/2021 |
ವಿದ್ಯಾರ್ಹತೆ:
ಸಬ್ ಎಡಿಟರ್ ಮತ್ತು ಸೀನಿಯರ್ ಸಬ್ ಎಡಿಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್ನಿಂದ ಯಾವುದೇ ಪದವಿ ಪಡೆದಿರಬೇಕು. ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದವರೂ ಸಹ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ:Ministry of Culture Recruitment 2021: ಸಂಸ್ಕೃತಿ ಸಚಿವಾಲಯದಲ್ಲಿ ಉಪಕುಲಪತಿ ಹುದ್ದೆ ಖಾಲಿ; ಮಾಸಿಕ ವೇತನ ₹ 2,10,000
ಅನುಭವ:
ಸಬ್ ಎಡಿಟರ್ ಮತ್ತು ಸೀನಿಯರ್ ಸಬ್ ಎಡಿಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾಧ್ಯಮ ಕ್ಷೇತ್ರದ ಯಾವುದೇ ಪ್ರಿಂಟ್/ ಎಲೆಕ್ಟ್ರಾನಿಕ್/ ಡಿಜಿಟಲ್ ಮಾಧ್ಯಮದಲ್ಲಿ 2-3 ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು. ಸ್ಥಳೀಯ ಡಿಜಿಟಲ್ ಮಾಧ್ಯಮ/ ಇತರೆ ಸ್ಥಳೀಯ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ ಮಾಡಿದವರಿಗೆ ಮೊದಲ ಪ್ರಾಶಸ್ತ್ಯ ನೀಡಲಾಗುವುದು. ಸ್ಕ್ರಿಪ್ಟ್ ಬರವಣಿಗೆ ಉತ್ತಮವಾಗಿರುವ ಅಭ್ಯರ್ಥಿಗಳು ಆಯ್ಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ.
ಇತರೆ ಕೌಶಲ್ಯಗಳು:
- ಸಬ್ ಎಡಿಟರ್ ಮತ್ತು ಸೀನಿಯರ್ ಸಬ್ ಎಡಿಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮುಖ್ಯವಾಗಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಮೇಲೆ ಹಿಡಿತ ಹೊಂದಿರಬೇಕು.
- ಇಂಗ್ಲಿಷ್ ಭಾಷೆಯನ್ನು ಶುದ್ಧವಾಗಿ ಓದುವ, ಬರೆಯುವ ಮತ್ತು ಅರ್ಥಮಾಡಿಕೊಳ್ಳುವ ಕೌಶಲ್ಯ ಹೊಂದಿರಬೇಕು.
- ಅಂತೆಯೇ ಕನ್ನಡದಿಂದ ಇಂಗ್ಲಿಷ್ ಭಾಷೆಗೆ, ಇಂಗ್ಲಿಷ್ನಿಂದ ಕನ್ನಡ ಭಾಷೆಗೆ ತರ್ಜುಮೆ(ಟ್ರಾನ್ಸಲೇಟ್) ಮಾಡುವ ಕೌಶಲ್ಯವೂ ಅಭ್ಯರ್ಥಿಗೆ ಇರಬೇಕು.
- ಕನ್ನಡವನ್ನು ವ್ಯಾಕರಣ ತಪ್ಪಿಲ್ಲದೇ ಬರೆಯಬೇಕು.
ವೇತನ:
ಸಬ್ ಎಡಿಟರ್ ಮತ್ತು ಸೀನಿಯರ್ ಸಬ್ ಎಡಿಟರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕಂಪನಿಯ ನಿಯಮಾನುಸಾರ ವೇತನ ನೀಡಲಾಗುತ್ತದೆ.
ಉದ್ಯೋಗದ ಸ್ಥಳ:
ಸಬ್ ಎಡಿಟರ್ ಮತ್ತು ಸೀನಿಯರ್ ಸಬ್ ಎಡಿಟರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನ ನ್ಯೂಸ್ 18 ಕನ್ನಡ ಕಚೇರಿಯಲ್ಲಿ ಉದ್ಯೋಗ ನೀಡಲಾಗುತ್ತದೆ.
ಇದನ್ನೂ ಓದಿ:RRC Recruitment 2021: PUC ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ, ಅರ್ಜಿ ಸಲ್ಲಿಸಲು ಹೀಗೆ ಮಾಡಿ
ಆಯ್ಕೆ ಪ್ರಕ್ರಿಯೆ:
ಸಬ್ ಎಡಿಟರ್ ಮತ್ತು ಸೀನಿಯರ್ ಸಬ್ ಎಡಿಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೊದಲಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಅದರಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಶಾರ್ಟ್ಲಿಸ್ಟ್ ಮಾಡಿಕೊಂಡು, ಬಳಿಕ ಅವರಿಗೆ ಆನ್ಲೈನ್ ಸಂದರ್ಶನ ನಡೆಸಲಾಗುತ್ತದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ