NMPT Recruitment: BA, Bsc, Bcom ಯಾವುದೇ ಪದವೀಧರರು ಅರ್ಜಿ ಸಲ್ಲಿಸಬಹುದು; ತಿಂಗಳಿಗೆ 40 ಸಾವಿರ ಸಂಬಳ

ಅಭ್ಯರ್ಥಿಗಳು ನವ ಮಂಗಳೂರು ಬಂದರು ಮಂಡಳಿಯ ಅಧಿಕೃತ ವೆಬ್​ ತಾಣದಲ್ಲಿ ನೀಡಲಾದ ಅರ್ಜಿಯಲ್ಲಿ ಮಾತ್ರ ತಮ್ಮ ಸಂಪೂರ್ಣ ವಿವರವನ್ನು ಭರ್ತಿ ಮಾಡಬೇಕು.

nmpt

nmpt

  • Share this:
    ನವ ಮಂಗಳೂರು ಬಂದರು ಮಂಡಳಿ (NMPT Recruitment)ಯಲ್ಲಿ ಸಹಾಯಕ ಕಾರ್ಯದರ್ಶಿ ಹುದ್ದೆಗೆ (asst secretary )ಅರ್ಜಿ ಆಹ್ವಾನಿಸಲಾಗಿದ್ದು, ಬೇರೆ ಇಲಾಖೆಗಳಲ್ಲಿ ಸರ್ಕಾರಿ ಕೆಲಸ ನಿರ್ವಹಿಸುತ್ತಿರುವ ಅರ್ಹ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್​ 16 ಕಡೆಯ ದಿನವಾಗಿದೆ. ಯಾವುದೇ ಅಂಗೀಕೃತ ವಿಶ್ವ ವಿದ್ಯಾನಿಲಯದಿಂದ ಯಾವುದೇ ಪದವಿ (any degree) ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

    ಹುದ್ದೆ ವಿವರ:
    ಸಹಾಯಕ ಕಾರ್ಯದರ್ಶಿ ಗ್ರೇಡ್​ 2 ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸರ್ಕಾರಿ ಸಂಸ್ಥೆಯಲ್ಲಿ ಮೂರು ವರ್ಷದ ಸೇವಾ ಅನುಭವವನ್ನು ಹೊಂದಿರಬೇಕು.















    ಹುದ್ದೆ ಹುದ್ದೆ ಸಂಖ್ಯೆ ವಿದ್ಯಾರ್ಹತೆ ವೇತನ
    ಸಹಾಯಕ ಕಾರ್ಯದರ್ಶಿ 3

    ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ

    ಅನುಭವ





    ಸರ್ಕಾರಿ ಕಚೇರಿಯಲ್ಲಿ ನಿರ್ವಹಣೆ ಮಾಡಿದ ಮೂರು ವರ್ಷದ ಸೇವಾ ಅನುಭವ
    ಮಾಸಿಕ 40 ಸಾವಿರದಿಂದ 1, 40, 000 ರೂ ವರೆಗೆ

    ಆಯ್ಕೆ ವಿಧಾನ : ಸರ್ಕಾರಿ ಹುದ್ದೆಯಲ್ಲಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.   ಅಭ್ಯರ್ಥಿಗಳನ್ನು Deputation (ನಿಯೋಜನೆ ಅಂದರೆ, ಅನ್ಯ ಸರ್ಕಾರಿ ಉದ್ಯೋಗದಿಂದ ಮೇಲ್ಕಂಡ ಹುದ್ದೆಗೆ ಆಯ್ಕೆ )​ ಪದ್ಧತಿ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುವುದು

    ವಿಶೇಷ ಸೂಚನೆ :  ಅರ್ಜಿ ಸಲ್ಲಿಸಿದ ಅಭ್ಯರ್ಥಿ ಗಳು ಸರ್ಕಾರದ ನಿಯಮಗಳ ಸಂಪೂರ್ಣ ಅರಿವನ್ನು ಹೊಂದಿರಬೇಕು.

    ಅರ್ಜಿ ಸಲ್ಲಿಕೆ ವಿಧಾನ: 
    ಅರ್ಜಿಯನ್ನು ಅಂಚೆ ಕಚೇರಿ, ಸ್ಪೀಡ್​ ಪೋಸ್ಟ್​ ಮೂಲಕ ನವ ಮಂಗಳೂರು ಬಂದರು ಕಚೇರಿಗೆ ಕಳುಹಿಸಬೇಕು. ಅಭ್ಯರ್ಥಿಗಳು ಆನ್​ಲೈನ್​​ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ಇರುವುದಿಲ್ಲ. ಅರ್ಜಿಯ ಕಳುಹಿಸುವ ಲಕೋಟೆ ಮೇಲೆ ಸಹಾಯಕರ ಕಾರ್ಯದರ್ಶಿ ಹುದ್ದೆಗೆ ಎಂಬುದನ್ನು ಸ್ಪಷ್ಟವಾಗಿ ನಮೂದಿಸಬೇಕು.

    ಇದನ್ನು ಓದಿ: 2016ರ ಟಾಪರ್ ಟೀನಾ ಡಾಬಿ ತಂಗಿ ರಿಯಾಗೆ ಯುಪಿಎಸ್​ಸಿಯಲ್ಲಿ 15ನೇ rank

    ವಯೋಮಿತಿ : ಅರ್ಜಿ ಸಲ್ಲಿಸುವ ಅಭ್ಯರ್ಥಿಯೂ ವಯೋಮಿತಿ ಗರಿಷ್ಠ 35ಕ್ಕಿಂತ ಹೆಚ್ಚರಿರ ಬಾರದು.

    ಅರ್ಜಿ ಸಲ್ಲಿಸಬೇಕಾದ ವಿಳಾಸ

    The Secretary,
    New Mangalore Port Trust,
    Panamburu
    Mangaluru-575010

    ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ : ಅಕ್ಟೋಬರ್ 16 ಆಗಿದೆ.

    ಅಭ್ಯರ್ಥಿಗಳು ನವ ಮಂಗಳೂರು ಬಂದರು ಮಂಡಳಿಯ ಅಧಿಕೃತ ವೆಬ್​ ತಾಣದಲ್ಲಿ ನೀಡಲಾದ ಅರ್ಜಿಯಲ್ಲಿ ಮಾತ್ರ ತಮ್ಮ ಸಂಪೂರ್ಣ ವಿವರವನ್ನು ಭರ್ತಿ ಮಾಡಬೇಕು. ಇದರ ಜೊತೆಗೆ ತಮ್ಮ ಇತ್ತೀಚಿನ ಭಾವಚಿತ್ರವನ್ನು ಅಂಟಿಸಬೇಕು. ಅಭ್ಯರ್ಥಿಯ ಸಂಪೂರ್ಣ ವಿವರ ಭರ್ತಿಯಾಗದಿದ್ದಲ್ಲಿ ಅದನ್ನು ತಿರಸ್ಕರಿಸಲಾಗುವುದು. ಆಕ್ಟೋಬರ್​ 16ರೊಳಗೆ ಅಭ್ಯರ್ಥಿಯ ಅರ್ಜಿಗಳು ಮೇಲ್ಕಂಡ ವಿಳಾಸಕ್ಕೆ ತಲುಪುವಂತೆ ನೋಡಿಕೊಳ್ಳಬೇಕು

    ಇದನ್ನು ಓದಿ: ವಿಶ್ವಸಂಸ್ಥೆಯ ಸಭೆಯಲ್ಲಿ ಪಾಕ್​ ಬೆವರಿಳಿಸಿದ ಸ್ನೇಹಾ ದುಬೆ: ಯುವ ಐಎಫ್​ಎಸ್​ ಅಧಿಕಾರಿ ಮಾತಿಗೆ ಮೆಚ್ಚುಗೆ ಮಹಾಪೂರ

    ಅಗತ್ಯ ಮಾಹಿತಿ
    ಅಭ್ಯರ್ಥಿ ಅರ್ಜಿಯಲ್ಲಿ ಕಳುಹಿಸುವ ತಮ್ಮ ಶೈಕ್ಷಣಿಕ ಮಾಹಿತಿಯ ದಾಖಲೆ ಮತ್ತು ಸರ್ಕಾರದಲ್ಲಿ ಕೆಲಸ ಮಾಡಿದ ಅನುಭವ ಕುರಿತು ದಾಖಲೆಗಳನ್ನು  ಡೈಪ್ಯೂಟಿ ಎಚ್​ಒಡಿ ಗಿಂತ ಮೇಲಾಧಿಕಾರಿಗಳಿಂದ ಪರಿಶೀಲಿಸಿ ಅವರ ಸಹಿ ಪಡೆದಿರಬೇಕು. ಎನ್ಒಸಿ ಪತ್ರದ ಜೊತೆಗೆ ಲಕೋಟೆಯಲ್ಲಿ ಎರಡು ಪಾಸ್​ಪೋರ್ಟ್​​​ ಸೈಜ್ ಫೋಟೋ ಕಳುಹಿಸಬೇಕು.

    ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ನೋಟಿಫಿಕೇಶನ್​ ಸೂಚನೆಗಳನ್ನು ಗಮನವಿಟ್ಟು ಪಾಲಿಸುವುದು ಅವಶ್ಯ. ಹೆಚ್ಚಿನ ಮಾಹಿತಿಗೆ ಈ ಲಿಂಕ್ ಕ್ಲಿಕ್​ ಮಾಡಿ

    ನವ ಮಂಗಳೂರು ಬಂದರು ಮಂಡಳಿಯ ವಿವರ ಕುರಿತು ಮಾಹಿತಿಗೆ ಇಲ್ಲಿ ಕ್ಲಿಕ್  ಮಾಡಿ
    Published by:Seema R
    First published: