• Home
  • »
  • News
  • »
  • jobs
  • »
  • NESAC Recruitment 2022: ತಿಂಗಳಿಗೆ 1.77 ಲಕ್ಷ ಸಂಬಳ- ಬಿಇ/ ಬಿ ಟೆಕ್ ಆದವರಿಗೆ ಇಲ್ಲಿದೆ ಬಂಪರ್ ಉದ್ಯೋಗ

NESAC Recruitment 2022: ತಿಂಗಳಿಗೆ 1.77 ಲಕ್ಷ ಸಂಬಳ- ಬಿಇ/ ಬಿ ಟೆಕ್ ಆದವರಿಗೆ ಇಲ್ಲಿದೆ ಬಂಪರ್ ಉದ್ಯೋಗ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ನವೆಂಬರ್ 30, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಆಸಕ್ತರು ಈ ಸುವರ್ಣಾವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ.

  • Share this:

    NESAC Recruitment 2022: ಈಶಾನ್ಯ ಬಾಹ್ಯಾಕಾಶ ಅಪ್ಲಿಕೇಶನ್ ಕೇಂದ್ರ(North Eastern Space Application Centre)ದಲ್ಲಿ 19 ಜೂನಿಯರ್ ರಿಸರ್ಚ್​ ಫೆಲೋ(Junior Research Fellow), ರಿಸರ್ಚ್​ ಸೈಂಟಿಸ್ಟ್(Research Scientist)​ ಹುದ್ದೆಗಳು ಖಾಲಿ ಇವೆ. ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಹಾಕಿ. ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿ(Bengaluru)ನಲ್ಲಿ ಉದ್ಯೋಗ ನೀಡಲಾಗುತ್ತದೆ. ನವೆಂಬರ್ 30, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಆಸಕ್ತರು ಈ ಸುವರ್ಣಾವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಈಶಾನ್ಯ ಬಾಹ್ಯಾಕಾಶ ಅಪ್ಲಿಕೇಶನ್ ಕೇಂದ್ರ
    ಹುದ್ದೆಯ ಹೆಸರುಜೂನಿಯರ್ ರಿಸರ್ಚ್​ ಫೆಲೋ, ರಿಸರ್ಚ್​ ಸೈಂಟಿಸ್ಟ್
    ಒಟ್ಟು ಹುದ್ದೆ19
    ವಿದ್ಯಾರ್ಹತೆಬಿಇ, ಬಿ.ಟೆಕ್, ಎಂಇ, ಎಂಟೆಕ್
    ವೇತನಮಾಸಿಕ ₹ 31,000-1,77,500
    ಸ್ಥಳಬೆಂಗಳೂರು
    ಅರ್ಜಿ ಸಲ್ಲಿಕೆ ಬಗೆಆನ್​ಲೈನ್
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ14/11/2022
    ಅರ್ಜಿ ಸಲ್ಲಿಸಲು ಕೊನೆ ದಿನ30/11/2022


    ಹುದ್ದೆಯ ಮಾಹಿತಿ:
    ರಿಸರ್ಚ್​ ಸೈಂಟಿಸ್ಟ್​-10
    ಜೂನಿಯರ್ ರಿಸರ್ಚ್​ ಫೆಲೋ- 09
    ಒಟ್ಟು 19 ಹುದ್ದೆಗಳು


    NESAC Recruitment 2022: ಅರ್ಹತಾ ಮಾನದಂಡಗಳೇನು?


    ವಿದ್ಯಾರ್ಹತೆ:
    ಈಶಾನ್ಯ ಬಾಹ್ಯಾಕಾಶ ಅಪ್ಲಿಕೇಶನ್ ಕೇಂದ್ರದ ನೇಮಕಾತಿ ಅಧಿಸೂಚನೆ ಪ್ರಕಾರ, ಜೂನಿಯರ್ ರಿಸರ್ಚ್​ ಫೆಲೋ, ರಿಸರ್ಚ್​ ಸೈಂಟಿಸ್ಟ್​ ಹುದ್ದೆಗಳಿಗೆ ಅರ್ಜಿ ಹಾಕುವ ಅಭ್ಯರ್ಥಿಗಳು ಈ ಕೆಳಕಂಡ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಲೇಬೇಕು.


    ರಿಸರ್ಚ್​ ಸೈಂಟಿಸ್ಟ್​: ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್/ಸಿವಿಲ್ ಇಂಜಿನಿಯರಿಂಗ್/ಮಾಹಿತಿ ತಂತ್ರಜ್ಞಾನ/ಜಿಯೋ-ಇನ್ಫರ್ಮ್ಯಾಟಿಕ್ಸ್/ಜಿಯೋಮ್ಯಾಟಿಕ್ಸ್ ನಲ್ಲಿ ಪದವಿ, ನೈಸರ್ಗಿಕ ವಿಜ್ಞಾನದಲ್ಲಿ B.Sc, ಸಿವಿಲ್/ಕೃಷಿ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್/ಮಾಹಿತಿ ತಂತ್ರಜ್ಞಾನ/ಜಿಯೋಇನ್ಫರ್ಮ್ಯಾಟಿಕ್ಸ್/ಜಿಯೋಮ್ಯಾಟಿಕ್ಸ್‌ನಲ್ಲಿ B.E ಅಥವಾ B.Tech, ಭೂವಿಜ್ಞಾನ/ಅನ್ವಯಿಕ ಭೂವಿಜ್ಞಾನ/ಭೂಭೌತಶಾಸ್ತ್ರ/ಭೂವಿಜ್ಞಾನ, ಸಸ್ಯಶಾಸ್ತ್ರ/ಅರಣ್ಯಶಾಸ್ತ್ರ/ಪರಿಸರ ವಿಜ್ಞಾನ/ರಿಮೋಟ್ ಸೆನ್ಸಿಂಗ್/ಜಿಯೋಇನ್‌ಫರ್ಮ್ಯಾಟಿಕ್ಸ್, ಭೌತಶಾಸ್ತ್ರ/ಪವನಶಾಸ್ತ್ರ/ವಾತಾವರಣ ವಿಜ್ಞಾನ/ಅರ್ಥ್ ಸಿಸ್ಟಂ ವಿಜ್ಞಾನ/ಕಂಪ್ಯೂಟರ್ ವಿಜ್ಞಾನ, ಮಾಹಿತಿಯಲ್ಲಿ M.E ಅಥವಾ M.Tech, M.Sc ಪೂರ್ಣಗೊಳಿಸಿರಬೇಕು.


    ಇದನ್ನೂ ಓದಿ: KPSC Recruitment 2022: ಪದವೀಧರರೇ ಅಲರ್ಟ್​​- KPSCಯಲ್ಲಿ ಖಾಲಿ ಇರುವ 105 ಹುದ್ದೆಗಳಿಗೆ ಅರ್ಜಿ ಹಾಕಲು ನಾಳೆಯೇ ಕೊನೆ ದಿನ


    ಜೂನಿಯರ್ ರಿಸರ್ಚ್​ ಫೆಲೋ: ಸಿವಿಲ್ ಇಂಜಿನಿಯರಿಂಗ್, ಅಗ್ರಿಕಲ್ಚರ್ ಇಂಜಿನಿಯರಿಂಗ್, ಜಲಸಂಪನ್ಮೂಲ ಇಂಜಿನಿಯರಿಂಗ್, ಭೂ ವಿಜ್ಞಾನ ಇಂಜಿನಿಯರಿಂಗ್, ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್/ರಿಮೋಟ್ ಸೆನ್ಸಿಂಗ್, ಎಂಎಸ್ಸಿ ಜಿಯೋಲಾಜಿಕಲ್ ಸೈನ್ಸ್, ರಿಮೋಟ್ ಸೆನ್ಸಿಂಗ್ & ಜಿಐಎಸ್/ಜಿಯಾಲಜಿ/ಎನ್ವಿರಾನ್ಮೆಂಟಲ್ ಸೈನ್ಸ್, ನೆಟ್/ಗೇಟ್ ನಲ್ಲಿ M.E ಅಥವಾ M.Tech ಮಾಡಿರಬೇಕು.

    ಹುದ್ದೆಯ ಕುರಿತಾದ ನೋಟಿಫಿಕೇಶನ್ PDF ಇಲ್ಲಿದೆ:


    ನೋಟಿಫಿಕೇಶನ್


    ವಯೋಮಿತಿ:
    ರಿಸರ್ಚ್​ ಸೈಂಟಿಸ್ಟ್​- ಗರಿಷ್ಠ 35 ವರ್ಷ
    ಜೂನಿಯರ್ ರಿಸರ್ಚ್​ ಫೆಲೋ- ಗರಿಷ್ಠ 28 ವರ್ಷ


    ವಯೋಮಿತಿ ಸಡಿಲಿಕೆ:
    ಒಬಿಸಿ ಅಭ್ಯರ್ಥಿಗಳು- 3 ವರ್ಷ
    ಎಸ್​​ಸಿ/ಎಸ್​​ಟಿ ಅಭ್ಯರ್ಥಿಗಳು- 5 ವರ್ಷ


    ಅರ್ಜಿ ಶುಲ್ಕ:
    ಯಾವುದೇ ಅರ್ಜಿ ಶುಲ್ಕ ಇಲ್ಲ


    ಆಯ್ಕೆ ಪ್ರಕ್ರಿಯೆ:
    ಸಂದರ್ಶನ


    ವೇತನ:
    ರಿಸರ್ಚ್​ ಸೈಂಟಿಸ್ಟ್​- ಮಾಸಿಕ ₹ 56,100-1,77,500
    ಜೂನಿಯರ್ ರಿಸರ್ಚ್​ ಫೆಲೋ- ಮಾಸಿಕ ₹ 31,000


    ಅರ್ಜಿ ಸಲ್ಲಿಸುವುದು ಹೇಗೆ?


    ರಿಸರ್ಚ್​ ಸೈಂಟಿಸ್ಟ್ ಹುದ್ದೆಗೆ ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ.


    ಜೂನಿಯರ್ ರಿಸರ್ಚ್​ ಫೆಲೋ ಹುದ್ದೆಗೆ ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ.

    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 14/11/2022
    ಅರ್ಜಿ ಸಲ್ಲಿಸಲು ಕೊನೆ ದಿನ- 30/11/2022

    Published by:Latha CG
    First published: