NEET 2021: ದೇಶಾದ್ಯಂತ ಇಂದು ನೀಟ್ ಪರೀಕ್ಷೆ; ಅಭ್ಯರ್ಥಿಗಳ ಡ್ರೆಸ್​ ಕೋಡ್ ಹೇಗಿರಬೇಕು? ಯಾವ ವಸ್ತುಗಳಿಗೆ ನಿಷೇಧ?

ಸೋಂಕಿತ ವಿದ್ಯಾರ್ಥಿಗಳೂ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಸೋಂಕಿನ ಲಕ್ಷಣ ಇರುವವರೆಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ. ಕೆಮ್ಮು, ಜ್ವರ, ನೆಗಡಿಯಂತಹ ಲಕ್ಷಣವಿರುವವರಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ನಡೆಸಲಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
ನವದೆಹಲಿ(ಸೆ.12): ಇಂದು ಬಹು ನಿರೀಕ್ಷಿತ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ(NEET-2021) ನಡೆಯಲಿದ್ದು, ದೇಶಾದ್ಯಂತ ಸುಮಾರು 16 ಲಕ್ಷ ವಿದ್ಯಾರ್ಥಿಗಳು ನೊಂದಣಿ ಮಾಡಿಕೊಂಡಿದ್ದಾರೆ. ಇಂದು ಮಧ್ಯಾಹ್ನ 2-5 ಗಂಟೆಯವರೆಗೆ ಭಾರತದಾದ್ಯಂತ 202 ನಗರಗಳಲ್ಲಿ ನೀಟ್ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಕೊಠಡಿಗಳಲ್ಲಿ ಕೋವಿಡ್​ ಮಾರ್ಗಸೂಚಿಗಳನ್ನು ಪಾಲಿಸುವುದರ ಜೊತೆಗೆ, ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದೆ. ನಕಲು ತಂತ್ರಗಳಿಗೆ ಯಾವುದೇ ಅವಕಾಶವಿರುವುದಿಲ್ಲ. ಕಟ್ಟುನಿಟ್ಟಿನ ನಿಯಮಗಳೊಂದಿಗೆ ಪರೀಕ್ಷೆ ನಡೆಸಲಾಗುತ್ತದೆ.

ಈ ಮೊದಲು ನೀಟ್​-2021 ಪರೀಕ್ಷಾ ದಿನಾಂಕವನ್ನು ಆಗಸ್ಟ್​​ 1ರಂದು ನಿಗದಿಪಡಿಸಲಾಗಿತ್ತು. ಬಳಿಕ ಸೆಪ್ಟೆಂಬರ್​ 12ಕ್ಕೆ ಮುಂದೂಡಲಾಗಿತ್ತು. ಈ ದಿನಾಂಕವನ್ನೂ ಮುಂದೂಡುವಂತೆ ಸುಪ್ರೀಂ ಕೋರ್ಟ್​​ಗೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಸುಪ್ರೀಂ ಕೋರ್ಟ್​ ಆ ಅರ್ಜಿಯನ್ನು ತಿರಸ್ಕರಿಸಿ ಸೆ.12ರಂದೇ ಪರೀಕ್ಷೆ ನಡೆಸಲು ಹೇಳಿತ್ತು. ಬಳಿಕ ಎನ್​ಟಿಎ ಅಡ್ಮಿಟ್​ ಕಾರ್ಡ್​ನ್ನು ಪ್ರಕಟ ಮಾಡಿತ್ತು. ಸುಪ್ರೀಂ ಕೋರ್ಟ್​​​ ಆದೇಶದಂತೆ ಇಂದು ದೇಶಾದ್ಯಂತ ನೀಟ್​-2021 ಪರೀಕ್ಷೆ ನಡೆಯಲಿದೆ.

NEET 2021 ಪರೀಕ್ಷೆಯನ್ನು ಒಟ್ಟು 13 ಭಾಷೆಗಳಲ್ಲಿ ನಡೆಸಲಾಗುತ್ತದೆ. ಹಿಂದಿ, ಪಂಜಾಬಿ, ಅಸ್ಸಾಮಿ, ಬೆಂಗಾಳಿ, ಒಡಿಯಾ, ಗುಜರಾತಿ, ಮರಾಠಿ, ತೆಲುಗು, ಮಲೆಯಾಳಂ, ಕನ್ನಡ, ತಮಿಳು, ಉರ್ದು ಮತ್ತು ಇಂಗ್ಲಿಷ್​ ಭಾಷೆಗಲ್ಲಿ ನೀಟ್​ ಪರೀಕ್ಷೆ ನಡೆಯಲಿದೆ. ಇವುಗಳಲ್ಲಿ ಪಂಜಾಬಿ ಮತ್ತು ಮಲೆಯಾಳಂ ಭಾಷೆಗಳನ್ನು ಇತ್ತೀಚೆಗೆ ಸೇರ್ಪಡೆ ಮಾಡಲಾಯಿತು.

ದಿ ನ್ಯಾಷನಲ್​ ಟೆಸ್ಟಿಂಗ್ ಏಜೆನ್ಸಿ (NTA)ಯು ಭದ್ರತಾ ದೃಷ್ಟಿಯಿಂದ ಸಿಸಿಟಿವಿ ಕ್ಯಾಮೆರಾಗಳು, ಜಾಮರ್‌ಗಳು, ಇನ್‌ವಿಜಿಲೇಟರ್‌ಗಳನ್ನು ಇರಿಸಿದೆ. ಇದಲ್ಲದೇ ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಯಲ್ಲಿ ಅನುಸರಿಸಬೇಕಾದ ನಿಯಮಗಳ ಬಗ್ಗೆ ಹೇಳಿದೆ. ನೀವು ನೀಟ್- 2021 ಪರೀಕ್ಷೆಗೆ ಹಾಜರಾಗುತ್ತಿದ್ದರೆ, ಇಲ್ಲಿದೆ ಒಂದು ಮಾರ್ಗಸೂಚಿ. ಡ್ರೆಸ್​ ಕೋಡ್ ಜೊತೆಗೆ ವಿದ್ಯಾರ್ಥಿಗಳು ಎಕ್ಸಾಂ ಹಾಲ್​ಗೆ ಈ ವಸ್ತುಗಳನ್ನು ಕೊಂಡೊಯ್ಯಬಾರದು ಎಂದು ನಿಷೇಧ ಹೇರಿದೆ.

ಇದನ್ನೂ ಓದಿ: DRDO Recruitment 2021: ಜೂನಿಯರ್​ ರಿಸರ್ಚ್ ಫೆಲೋ ನೇಮಕಾತಿ; ನೇರ ಸಂದರ್ಶನ, ಬೆಂಗಳೂರಿನಲ್ಲೇ ಉದ್ಯೋಗ

ಹುಡುಗಿಯರಿಗೆ ಡ್ರೆಸ್​ ಕೋಡ್ ಏನು?

 • ನೀಟ್ ಪರೀಕ್ಷೆಗೆ ಹೋಗುವ ಹುಡುಗಿಯರು ಎನ್​ಟಿಎ ಸೂಚಿಸಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು.

 • ಉದ್ದ ತೋಳಿನ ಡ್ರೆಸ್​​ಗಳನ್ನು ಹಾಕುವಂತಿಲ್ಲ. ವಿಸ್ತಾರವಾದ ಕಸೂತಿ, ಹೂವುಗಳು, ಬ್ರೂಚಸ್ ಮತ್ತು ದೊಡ್ಡ ಗುಂಡಿಗಳನ್ನು ಹೊಂದಿರುವ ಬಟ್ಟೆಗಳನ್ನು ಧರಿಸಲು ಅನುಮತಿ ಇಲ್ಲ.

 • ಹುಡುಗಿಯರು ಹೆಚ್ಚು ಎತ್ತರದ ಚಪ್ಪಲಿಗಳನ್ನು ಧರಿಸುವಂತಿಲ್ಲ. ಜೊತೆಗೆ ಶೂಗಳನ್ನು ಧರಿಸುವುದಕ್ಕೆ ನಿರ್ಬಂಧ ಹಾಕಲಾಗಿದೆ.

 • ಕಿವಿಗೆ ಯಾವುದೇ ರೀತಿಯ ಆಭರಣ, ಮೂಗುತಿ, ಬಳೆ, ಪೆಂಡಂಟ್ಸ್​, ನೆಕ್​​ಲೇಸ್, ಬ್ರೇಸ್​ಲೆಟ್ಸ್​ ಮತ್ತು ಆಂಕ್ಲೆಟ್ಸ್​​ಗಳನ್ನು ಧರಿಸುವಂತಿಲ್ಲ.


ಹುಡುಗರಿಗೆ ಡ್ರೆಸ್​ ಕೋಡ್ ಏನು?

 • ಹುಡುಗರು ಅರ್ಧ ತೋಳಿನ ಶರ್ಟ್, ಟಿ-ಶರ್ಟ್​, ಸಿಂಪಲ್ ಪ್ಯಾಂಟ್​ಗಳನನ್ಉ​​ ಧರಿಸುವಂತೆ ಹೇಳಲಾಗಿದೆ. ತುಂಬು ತೋಳಿನ ಶರ್ಟ್ಸ್​ ಧರಿಸಿ ಬಂದವರಿಗೆ ನೀಟ್​ ಎಕ್ಸಾಂಗೆ ಪ್ರವೇಶವಿಲ್ಲ.

 • ಜಿಪ್ ಪಾಕೆಟ್ಸ್ ಇರುವ, ದೊಡ್ಡ ಬಟನ್​ಗಳಿರುವ, ಕಸೂತಿ ಹಾಕಿರುವ ಬಟ್ಟೆಗಳನ್ನು ಧರಿಸುವಂತಿಲ್ಲ.

 • ಸಂಪೂರ್ಣ ಕವರ್ ಆಗಿರುವ ಶೂಗಳನ್ನು ಧರಿಸಲು ಅನುಮತಿ ಇಲ್ಲ. ಸಿಂಪಲ್ ಚಪ್ಪಲಿಗಳನ್ನು ಧರಿಸಬೇಕು ಎಂದು ಎನ್​ಟಿಎ ಹೇಳಿದೆ.

 • ಎಲ್ಲಾ ಅಭ್ಯರ್ಥಿಗಳು ಕಡ್ಡಾಯವಾಗಿ ಮಾಸ್ಕ್​​, ಕೈಗವಸುಗಳನ್ನು ಧರಿಸಬೇಕು ಹಾಗೂ ಪರೀಕ್ಷಾ ಕೇಂದ್ರದಲ್ಲಿ ಕೋವಿಡ್ ನಿಯಮಗಳನ್ನು ತಪ್ಪದೇ ಪಾಲಿಸಬೇಕು ಎಂದು ಹೇಳಲಾಗಿದೆ.


ನೀಟ್​ ಎಕ್ಸಾಂ ಸೆಂಟರ್​ಗೆ ಈ ವಸ್ತುಗಳನ್ನು ತೆಗೆದುಕೊಂಡು ಹೋಗುವಂತಿಲ್ಲ

 • ಯಾವುದೇ ಸ್ಟೇಷನರಿ ಸಾಮಾಗ್ರಿಗಳು, ಸಂವಹನ ಸಾಧನ, ಪರಿಕರಗಳು, ತಿನ್ನುವ ವಸ್ತುಗಳು, ಆಭರಣಗಳನ್ನು ಪರೀಕ್ಷಾ ಕೇಂದ್ರಕ್ಕೆ ಕೊಂಡೊಯ್ಯುವಂತಿಲ್ಲ.

 • ಜೊತೆಗೆ ನೀರಿನ ಬಾಟಲಿಗಳು, ಚಹಾ, ಕಾಫಿ, ತಂಪು ಪಾನೀಯಗಳು ಅಥವಾ ತಿಂಡಿಗಳನ್ನು ಪರೀಕ್ಷಾ ಕೇಂದ್ರದ ಒಳಗೆ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

 • ಆದರೆ ಮಧುಮೇಹದಿಂದ ಬಳಲುತ್ತಿರುವ ಅಭ್ಯರ್ಥಿಗಳಿಗೆ ಸಕ್ಕರೆ ಮಾತ್ರೆಗಳು/ಹಣ್ಣುಗಳು ಮತ್ತು ಪಾರದರ್ಶಕ ನೀರಿನ ಬಾಟಲಿಗಳಂತಹ ಆಹಾರ ಪದಾರ್ಥಗಳನ್ನು ತೆಗೆದುಕೊಂಡು ಹೋಗಲು ಅನುಮತಿ ನೀಡಲಾಗಿದೆ. ಈ ಬಗ್ಗೆ ಅಭ್ಯರ್ಥಿಗಳು ಸಂಬಂಧಪಟ್ಟವರಿಗೆ ಮುಂಚಿತವಾಗಿ ತಿಳಿಸಿರಬೇಕು.

 • ವಾಚ್, ಫುಲ್ ಸ್ಲೀವ್ಸ್ ಡ್ರೆಸ್, ಶೂ, ಬ್ಯಾಗ್, ಪರ್ಸ್ ನಿಷೇಧ

 • ಕ್ಯಾಲ್ಕುಲೇಟರ್, ಮೊಬೈಲ್ ನಂತಹ ಎಲೆಕ್ಟ್ರಾನಿಕ್ ವಸ್ತು ಕೊಂಡೊಯ್ಯುವಂತಿಲ್ಲ


ಇದನ್ನೂ ಓದಿ: Career Options: NEET ಪರೀಕ್ಷೆ ಬಳಿಕ ಈ ವೃತ್ತಿಪರ ಕೋರ್ಸ್​ಗಳನ್ನು​ ಆಯ್ಕೆ ಮಾಡಿಕೊಳ್ಳಿ..!

ಕರ್ನಾಟಕದಲ್ಲಿ ಒಟ್ಟು 9 ನಗರಗಳಲ್ಲಿ ನೀಟ್ ಪರೀಕ್ಷೆ ನಡೆಯಲಿದೆ. ಬೆಂಗಳೂರು, ಬೆಳಗಾಂ, ದಾವಣಗೆರೆ, ಧಾರವಾಡ, ಗುಲ್ಬರ್ಗಾ, ಹುಬ್ಬಳ್ಳಿ, ಮೈಸೂರು, ಮಂಗಳೂರು ಮತ್ತು ಉಡುಪಿಯಲ್ಲಿ ಪರೀಕ್ಷೆ ನಡೆಯಲಿದೆ.

ಒಟ್ಟು 180 ಪ್ರಶ್ನೆಗಳು, ಪ್ರತೀ ಪ್ರಶ್ನೆಗೆ 4 ಅಂಕಗಳಂತೆ, ಒಟ್ಟು 720 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತದೆ. ಪ್ರತೀ ಪ್ರಶ್ನೆಯ ತಪ್ಪು ಉತ್ತರಕ್ಕೆ ಒಂದು ನೆಗೆಟಿವ್ ಅಂಕ ಕಡಿತ ಮಾಡಲಾಗುತ್ತದೆ. 3 ಗಂಟೆಗಳ ಕಾಲ ಪರೀಕ್ಷೆ ನಡೆಯಲಿದೆ.

ಸೋಂಕಿತ ವಿದ್ಯಾರ್ಥಿಗಳೂ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಸೋಂಕಿನ ಲಕ್ಷಣ ಇರುವವರೆಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ. ಕೆಮ್ಮು, ಜ್ವರ, ನೆಗಡಿಯಂತಹ ಲಕ್ಷಣವಿರುವವರಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ನಡೆಸಲಾಗುತ್ತದೆ.

ಕೋವಿಡ್ ಮಾರ್ಗಸೂಚಿ ಅನುಸರಿಸಿ ನೀಟ್ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆ ಮುಗಿಯುವವರೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಸಾಮಾಜಿಕ ಅಂತರ ಕಾಪಾಡುವುದು, ಹ್ಯಾಂಡ್ ಸ್ಯಾನಿಟೈಸರ್ ಬಳಸುವಂತೆ ಸೂಚನೆ ನೀಡಲಾಗಿದೆ.

ಒಂದು ಬೆಂಚಿಗೆ ಒಬ್ಬ ಅಭ್ಯರ್ಥಿ ಕೂರಲು ಅವಕಾಶ ನೀಡಲಾಗಿದೆ. ಜಿಗ್ ಜಾಗ್ ಮಾದರಿಯಲ್ಲಿ ಕುಳಿತುಕೊಳ್ಳಲು ಸೂಚಿಸಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಬೆಳಗ್ಗೆ 11 ರಿಂದ ದಾಖಲೆಗಳ ಪರಿಶೀಲನೆ ಪ್ರಾರಂಭವಾಗಲಿದೆ. ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ದಾಖಲೆಗಳ ಪರಿಶೀಲನಾ ಕಾರ್ಯ ನಡೆಯಲಿದೆ. ಅರ್ಧ ಗಂಟೆ ಮುಂಚಿತವಾಗಿ ಪರೀಕ್ಷಾ ಕೊಠಡಿಯೊಳಗೆ ಹಾಜರಿರಬೇಕು. ವಿದ್ಯಾರ್ಥಿಗಳು ಪರೀಕ್ಷೆಗೆ ಪೆನ್ ಕೊಂಡೊಯ್ಯುವಂತಿಲ್ಲ.  ಪರೀಕ್ಷಾ ಕೇಂದ್ರದಲ್ಲಿ ಕೊಡುವ ಪೆನ್ ಬಳಸಿ ಪರೀಕ್ಷೆ ಬರೆಯಬೇಕು.

2020 ರಲ್ಲಿ ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಕಠಿಣ ಮುನ್ನೆಚ್ಚರಿಕೆಗಳ ನಡುವೆ ಸೆಪ್ಟೆಂಬರ್ 13 ರಂದು ನೀಟ್​ ಪರೀಕ್ಷೆಯನ್ನು ನಡೆಸಲಾಗಿತ್ತು. ಪರೀಕ್ಷೆಯಲ್ಲಿ ಒಟ್ಟು 13.66 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದು, ಅವರಲ್ಲಿ 7,71,500 ಮಂದಿ ಅರ್ಹತೆ ಪಡೆದಿದ್ದಾರೆ.
Published by:Latha CG
First published: