NVS Recruitment: ನವೋದಯ ವಿದ್ಯಾಲಯ ಸಮಿತಿಯಲ್ಲಿ 1616 ಹುದ್ದೆಗಳ ನೇಮಕಾತಿ; ಬಿಎಡ್​ ಆದವರಿಗೆ ಅವಕಾಶ

ಪ್ರಸಕ್ತ ಸಾಲಿನ ಹುದ್ದೆಗಳ ಭರ್ತಿಗೆ ನವೋದಯ ವಿದ್ಯಾಲಯ ಸಮಿತಿ ಮುಂದಾಗಿದ್ದು, ಈ ಹುದ್ದೆಗಳ ಆಯ್ಕೆ, ಅರ್ಜಿ ಸಲ್ಲಿಕೆ ಮತ್ತು ನೇಮಕಾತಿ ಸೇರಿದಂತೆ ಇನ್ನಿತರ ಮಾಹಿತಿ ಈ ಕೆಳಗಿನಂತಿದೆ.

ನವೋದಯ ವಿದ್ಯಾಲಯ ಸಮಿತಿ

ನವೋದಯ ವಿದ್ಯಾಲಯ ಸಮಿತಿ

  • Share this:
    ನವೋದಯ ವಿದ್ಯಾಲಯ ಸಮಿತಿಯು (Navodaya Vidyalaya Samiti) 1616 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಪ್ರಾಂಶುಪಾಲರು, ಮ್ಯೂಸಿಕ್ ಟೀಚರ್, ಪ್ರೋಸ್ಟ್‌ ಗ್ರಾಜುಯೇಟ್‌ ಟೀಚರ್, ಟ್ರೈನ್ಡ್‌ ಗ್ರಾಜುಯೇಟ್ ಟೀಚರ್, ಇತರೆ ಹಲವು ಗ್ರೂಪ್‌ ಬಿ (Group B Post) ಬೋಧಕ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ಕೇಂದ್ರ ಸರ್ಕಾರದಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶ ಆಗಿದೆ. ಶಿಕ್ಷಕ ವೃತ್ತಿಯಲ್ಲಿ ಕೆಲಸ ಹುಡುಕುತ್ತಿರುವ ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜುಲೈ 22 ಆಗಿದೆ. ಅಭ್ಯರ್ಥಿಗಳು ಆನ್​ಲೈನ್ (Online)​ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಇದೆ.

    ಪ್ರಸಕ್ತ ಸಾಲಿನ ಹುದ್ದೆಗಳ ಭರ್ತಿಗೆ ನವೋದಯ ವಿದ್ಯಾಲಯ ಸಮಿತಿ ಮುಂದಾಗಿದ್ದು, ಈ ಹುದ್ದೆಗಳ ಆಯ್ಕೆ, ಅರ್ಜಿ ಸಲ್ಲಿಕೆ ಮತ್ತು ನೇಮಕಾತಿ ಸೇರಿದಂತೆ ಇನ್ನಿತರ ಮಾಹಿತಿ ಈ ಕೆಳಗಿನಂತಿದೆ.

    ಸಂಸ್ಥೆಯ ಹೆಸರು: ನವೋದಯ ವಿದ್ಯಾಲಯ ಸಮಿತಿ (NVS)
    ಹುದ್ದೆಗಳ ಸಂಖ್ಯೆ: 1616
    ಉದ್ಯೋಗ ಸ್ಥಳ: ಅಖಿಲ ಭಾರತ
    ಹುದ್ದೆಯ ಹೆಸರು: ಪಿಜಿಟಿ, ಟಿಜಿಟಿ
    ವೇತನ: 44900-209200 ರೂ. ಪ್ರತಿ ತಿಂಗಳು































































    ಹುದ್ದೆಹುದ್ದೆ ಸಂಖ್ಯೆವಿದ್ಯಾರ್ಹತೆವಯೋಮಿತಿ
    ಪ್ರಾಂಶುಪಾಲರು12ಸ್ನಾತಕೋತ್ತರ ಪದವಿ, ಬಿಎಡ್​​50 ವರ್ಷ
    ಪಿಜಿಟಿ397ಸ್ನಾತಕೋತ್ತರ ಪದವಿ, ಬಿಎಡ್40 ವರ್ಷ
    ಟಿಜಿಟಿ683ಪದವಿ, ಬಿಎಸ್ಸಿ ಬಿಎಡ್​​35 ವರ್ಷ
    ಟಿಜಿಟಿ (ತೃತೀಯ ಭಾಷೆ)343ಪದವಿ, ಬಿಎಡ್​​35 ವರ್ಷ
    ಸಂಗೀತ ಶಿಕ್ಷಕ33ಪದವಿ, ಸಂಗೀತದಲ್ಲಿ ಸ್ನಾತಕೋತ್ತರ ಪದವಿ35 ವರ್ಷ
    ಕಲಾ ಶಿಕ್ಷಕ43ಡಿಪ್ಲೊಮಾ, ಫೈನ್​ ಆರ್ಟ್ಸ್​​ನಲ್ಲಿ ಬಿಎಡ್, ಕ್ರಾಫ್ಟ್​​​35 ವರ್ಷ
    ಪಿಇಟಿ ಪುರುಷ21ಡಿಪ್ಲೊಮಾ, ದೈಹಿಕ ಶಿಕ್ಷಣದಲ್ಲಿ ಡಿಪ್ಲೊಮಾ35 ವರ್ಷ
    ಪಿಇಟಿ ಸ್ತ್ರೀ31ದೈಹಿಕ ಶಿಕ್ಷಣದಲ್ಲಿ ಡಿಪ್ಲೊಮಾ35 ವರ್ಷ
    ಗ್ರಂಥಪಾಲಕ53ಲೈಬ್ರರಿ ಸೈನ್ಸ್​ನಲ್ಲಿ ಪದವಿ, ಡಿಪ್ಲೊಮಾ, ಪದವಿ35 ವರ್ಷ

    ವಯೋಮಿತಿ ಸಡಿಲಿಕೆ:
    ಒಬಿಸಿ ಅಭ್ಯರ್ಥಿಗಳು: 03 ವರ್ಷಗಳು
    ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳು: 05 ವರ್ಷಗಳು
    ವಿಕಲಚೇತನ (ಸಾಮಾನ್ಯ)/ಮಹಿಳಾ ಅಭ್ಯರ್ಥಿಗಳು: 10 ವರ್ಷಗಳು
    ವಿಕಲ ಚೇತನ ಒಬಿಸಿ ಅಭ್ಯರ್ಥಿಗಳು: 13 ವರ್ಷಗಳು
    ವಿಕಲಚೇತನ (ಪ.ಜಾ, ಪ.ಪಂ) ಅಭ್ಯರ್ಥಿಗಳು: 15 ವರ್ಷಗಳು

    ಇದನ್ನು ಓದಿ: ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುವ ಆಸಕ್ತಿ ಇದ್ರೆ ಬೇಗ ಅರ್ಜಿ ಸಲ್ಲಿಸಿ

    ಅರ್ಜಿ ಶುಲ್ಕ:
    ಪ.ಜಾ, ಪ.ಪಂ ಮತ್ತು ಒಬಿಸಿ ಅಭ್ಯರ್ಥಿಗಳು: ಶುಲ್ಕ ವಿನಾಯಿತಿ
    ಪ್ರಧಾನ ಹುದ್ದೆ: ಎಲ್ಲಾ ಇತರ ಅಭ್ಯರ್ಥಿಗಳು: 2000 ರೂ
    ಪಿಜಿಟಿ ಹುದ್ದೆ: ಎಲ್ಲಾ ಇತರ ಅಭ್ಯರ್ಥಿಗಳು: 1800 ರೂ

    ಟಿಜಿಟಿ, ಸಂಗೀತ/ಕಲಾ ಶಿಕ್ಷಕ,ಪಿಇಟಿ ಗ್ರಂಥಪಾಲಕ ಹುದ್ದೆಗಳು:

    ಎಲ್ಲಾ ಇತರ ಅಭ್ಯರ್ಥಿಗಳು: 1500 ರೂ.

    ಪಾವತಿ ವಿಧಾನ: ಆನ್‌ಲೈನ್

    ಆಯ್ಕೆ ಪ್ರಕ್ರಿಯೆ:
    ಕಂಪ್ಯೂಟರ್ ಆಧಾರಿತ ಪರೀಕ್ಷೆ, ವೈಯಕ್ತಿಕ ಸಂವಹನ ಮತ್ತು ಸಂದರ್ಶನ

    ಪ್ರಮುಖ ದಿನಾಂಕಗಳು:
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 02 ಜುಲೈ 2022
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 22 ಜುಲೈ 2022

    ಅಧಿಸೂಚನೆ ಪ್ರಮುಖ ಲಿಂಕ್‌ಗಳು
    ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: navodaya.gov.in

    ಇದನ್ನು ಓದಿ: ಎಂಎ ಆಗಿದ್ರೆ ಮೈಸೂರು ವಿವಿಯಲ್ಲಿದೆ ಉದ್ಯೋಗ; ಬೇಗ ಅರ್ಜಿ ಸಲ್ಲಿಸಿ

    ಅರ್ಜಿ ಸಲ್ಲಿಕೆ ವಿಧಾನ

    ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.

    ಅಧಿಕೃತ ವೆಬ್​ಸೈಟ್​ ಮೂಲಕ ಅರ್ಜಿ ನಮೂನೆಯನ್ನು ಡೌನ್​ಲೋಡ್​ ಮಾಡಿ ಸ್ವಯಂ ದೃಢೀಕರಿಸಿದ ಅರ್ಜಿಗಳನ್ನು ಮೇಲ್ಕಂಡ ಇಮೇಲ್​ ವಿಳಾಸಕ್ಕೆ ನಿಗದಿತ ದಿನಾಂಕದೊಳಗೆ ಕಳುಹಿಸಬೇಕು.

    ಅರ್ಜಿಜೊತೆಗೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ.

    ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಿ.

    ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಸಲ್ಲಿಸು ಬಟನ್ ಅನ್ನು ಕ್ಲಿಕ್ ಮಾಡಿ
    Published by:Seema R
    First published: