NITM Belagavi Recruitment: ಬೆಳಗಾವಿಯಲ್ಲಿದೆ ಡಾಟಾ ಎಂಟ್ರಿ ಆಪರೇಟರ್​ ಹುದ್ದೆ; ಪಿಯುಸಿ ಆದವರಿಗೆ ಅವಕಾಶ

. ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗೆ ನಡೆಯುವ ನೇರ ಸಂದರ್ಶನದಲ್ಲಿ ಭಾಗಿಯಾಗಬಹುದಾಗಿದೆ. ಈ ಹುದ್ದೆಗೆ ಜುಲೈ 15ರಂದು ವಾಕ್​ ಇನ್​ ಇಂಟರ್​ವ್ಯೂ ನಡೆಯಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಳಗಾವಿಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟ್ರೆಡಿಷನಲ್ ಮೆಡಿಸಿನ್ (National Institute of Traditional Medicine) ನಲ್ಲಿ ತಾಂತ್ರಿಕ ಸಹಾಯಕ ( Technical Assistant) ಹಾಗೂ ಡಾಟಾ ಎಂಟ್ರಿ ಆಪರೇಟರ್ (Data Entry Operator)​ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 4 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗೆ ನಡೆಯುವ ನೇರ ಸಂದರ್ಶನದಲ್ಲಿ ಭಾಗಿಯಾಗಬಹುದಾಗಿದೆ. ಈ ಹುದ್ದೆಗೆ ಜುಲೈ 15ರಂದು ವಾಕ್​ ಇನ್​ ಇಂಟರ್​ವ್ಯೂ ನಡೆಯಲಿದೆ.

  ಈ ಮೇಲ್ಕಂಡ ಹುದ್ದೆಗಳನ್ನು ತಾತ್ಕಲಿಕವಾಗಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಸಲಾಗುತ್ತಿದೆ. ರಾಯಚೂರಿನ ಸಿರವಾರದಲ್ಲಿ ಸಂಸ್ಥೆ ನಡೆಸುತ್ತಿರುವ ಸಂಶೋಧನೆ ಹಿನ್ನಲೆ ಆಯ್ಕೆ ನಡೆಸುತ್ತಿದೆ. ಹುದ್ದೆ ಅವಧಿ ಒಂದು ವರ್ಷ ಆಗಿದ್ದು, ಈ ಹುದ್ದೆ ನೇಮಕಾತಿ, ಆಯ್ಕೆ ಪ್ರಕ್ರಿಯೆ ಸೇರಿದಂತೆ ಇನ್ನಿತರ ಮಾಹಿತಿ ಈ ಕೆಳಗಿನಂತಿದೆ.

  ಸಂಸ್ಥೆಯ ಹೆಸರು: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟ್ರೆಡಿಷನಲ್ ಮೆಡಿಸಿನ್ (NITM ಬೆಳಗಾವಿ)
  ಹುದ್ದೆಯ ಹೆಸರು: ತಾಂತ್ರಿಕ ಸಹಾಯಕ, ಡೇಟಾ ಎಂಟ್ರಿ ಆಪರೇಟರ್​​
  ಹುದ್ದೆಗಳ ಸಂಖ್ಯೆ: 4
  ಉದ್ಯೋಗ ಸ್ಥಳ: ರಾಯಚೂರು - ಬೆಳಗಾವಿ
  ವೇತನ: 17000-20000 ರೂ ಪ್ರತಿ ತಿಂಗಳು


  ಹುದ್ದೆಹುದ್ದೆ ಸಂಖ್ಯೆವಯೋಮಿತಿವಿದ್ಯಾರ್ಹತೆವೇತನ
  ತಾಂತ್ರಿಕ ಸಹಾಯಕ130 ವರ್ಷಮೈಕ್ರೋಬಯಾಲಜಿ/ಮಾಲಿಕ್ಯೂಲರ್ ಬಯಾಲಜಿ/ಬಯೋಟೆಕ್ನಾಲಜಿಯಲ್ಲಿ ಪದವಿ20000 ರೂ ಮಾಸಿಕ
  ಡೇಟಾ ಎಂಟ್ರಿ ಆಪರೇಟರ್125 ವರ್ಷವಿಜ್ಞಾನದಲ್ಲಿ ಪಿಯುಸಿ20000 ರೂ ಮಾಸಿಕ
  ಡೇಟಾ ಎಂಟ್ರಿ ಆಪರೇಟರ್-ಬಿ128 ವರ್ಷವಿಜ್ಞಾನದಲ್ಲಿ ಪಿಯುಸಿ18000 ರೂ ಮಾಸಿಕ
  ಡೇಟಾ ಎಂಟ್ರಿ ಆಪರೇಟರ್-ಎ125 ವರ್ಷಪಿಯುಸಿ, ಕಂಪ್ಯೂಟರ್ ಅಪ್ಲಿಕೇಶನ್‌ನಲ್ಲಿ ಪದವಿ17000 ರೂ ಮಾಸಿಕ

  ವಯೋಮಿತಿ ಸಡಿಲಿಕೆ:
  ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟ್ರೆಡಿಷನಲ್ ಮೆಡಿಸಿನ್ ನಿಯಮದ ಪ್ರಕಾರ

  ಇದನ್ನು ಓದಿ: ಕೇಂದ್ರ ಗುಪ್ತಚರ ಇಲಾಖೆಯಲ್ಲಿ 766 ಹುದ್ದೆಗಳ ನೇಮಕಾತಿ

  ಆಯ್ಕೆ ಪ್ರಕ್ರಿಯೆ
  ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನ

  ಪ್ರಮುಖ ದಿನಾಂಕಗಳು

  ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 01 ಜುಲೈ 2022
  ವಾಕ್-ಇನ್ ದಿನಾಂಕ: 15-ಜುಲೈ-2022 09:30 AM

  ಅಧಿಸೂಚನೆ ಪ್ರಮುಖ ಲಿಂಕ್‌ಗಳು
  ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ: ಇಲ್ಲಿ ಕ್ಲಿಕ್ ಮಾಡಿ
  ಅಧಿಕೃತ ವೆಬ್‌ಸೈಟ್: icmrnitm.res.in

  ವಾಕ್​- ಇನ್​- ಇಂಟರ್​ವ್ಯೂ ನಡೆಯುವ ಸ್ಥಳ

  ICMR - ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟ್ರೆಡಿಷನಲ್ ಮೆಡಿಸಿನ್, ನೆಹರು ನಗರ, ಬೆಳಗಾವಿ - 590010

  ಇದನ್ನು ಓದಿ: ತುಮಕೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ; ಮಾಸಿಕ 28 ಸಾವಿರ ವೇತನ

  ವಾಕ್​-ಇನ್​-ಇಂಟರ್ವ್ಯೂಗೆ ಈ ದಾಖಲೆ ಅವಶ್ಯ

  ಎರಡು ಪಾಸಪೋರ್ಸ್​ ಸೈಜ್​ ಫೋಟೋ
  -ವಯಸ್ಸಿನ ದೃಢೀಕರಣ ಅಥವಾ ವಯಸ್ಸು ದಾಖಲಾಗಿರುವ ಎಸ್​ಎಸ್​ಎಲ್ಸಿ ಪ್ರಮಾಣ ಪ್ರತ್ರ, ಶೈಕ್ಷಣಿಕ ದಾಖಲೆ, ಅನುಭವ, ಸಂಶೋಧಾನ ಪತ್ರಗಳು
  -ಜಾತಿ ಮತ್ತು ಮೀಸಲಾತಿ ಪ್ರಮಾಣ ಪತ್ರ ಇವುಗಳ ಒರಿಜಿನರಲ್​ ಹಾಗೂ ಎರಡು ಸೆಟ್​ ಪೋಟೋ ಕಾಪಿಗಳೊಂದಿಗೆ ನೇರ ಸಂದರ್ಶನದಲ್ಲಿ ಅಭ್ಯರ್ಥಿ ಹಾಜರಾಗಬೇಕಿದೆ.
  Published by:Seema R
  First published: