NITK Recruitment: ಪ್ರಾಜೆಕ್ಟ್ ಅಸಿಸ್ಟೆಂಟ್, ಜೆಆರ್‌ಎಫ್ ಹುದ್ದೆ ನೇಮಕಾತಿ; ಬೇಗ ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಕೆಗೆ ಜೂನ್​ 30 ಕಡೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಇಮೇಲ್​​ ಮೂಲಕ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಎನ್​​ಐಟಿಕೆ

ಎನ್​​ಐಟಿಕೆ

 • Share this:
  ಸುರತ್ಕಲ್​ನಲ್ಲಿರುವ​ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (National Institute of Technology Karnataka) ಪ್ರಾಜೆಕ್ಟ್ ಅಸಿಸ್ಟೆಂಟ್, ಜೆಆರ್‌ಎಫ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ತಾಂತ್ರಿಕ ಶಿಕ್ಷಣದಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜೂನ್​ 30 ಕಡೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಇಮೇಲ್​​ ಮೂಲಕ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

  ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

  ಸಂಸ್ಥೆಯ ಹೆಸರು: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ (NIT ಕರ್ನಾಟಕ)
  ಹುದ್ದೆಯ ಹೆಸರು: ಪ್ರಾಜೆಕ್ಟ್ ಅಸಿಸ್ಟೆಂಟ್, ಜೆಆರ್ಎಫ್
  ಹುದ್ದೆಗಳ ಸಂಖ್ಯೆ: 2
  ಉದ್ಯೋಗ ಸ್ಥಳ: ಸುರತ್ಕಲ್ - ಕರ್ನಾಟಕ
  ವೇತನ: ರೂ.15000-35000ರೂ ಪ್ರತಿ ತಿಂಗಳು

  ಹುದ್ದೆಹುದ್ದೆ ಸಂಖ್ಯೆವೇತನವಯೋಮಿತಿ
  ಪ್ರಾಜೆಕ್ಟ್ ಅಸಿಸ್ಟೆಂಟ್11500023
  ಜೂನಿಯರ್ ರಿಸರ್ಚ್ ಫೆಲೋ (JRF)131000-3500030

  ವಿದ್ಯಾರ್ಹತೆ:

  ಪ್ರಾಜೆಕ್ಟ್ ಅಸಿಸ್ಟೆಂಟ್: ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ನಲ್ಲಿ ಬಿ.ಇ ಅಥವಾ ಬಿ.ಟೆಕ್, ಪವರ್ ಎಲೆಕ್ಟ್ರಾನಿಕ್ಸ್‌ನಲ್ಲಿ ಸ್ನಾತಕೋತ್ತರ ಪದವಿ
  ಜೂನಿಯರ್ ರಿಸರ್ಚ್ ಫೆಲೋ (JRF): ಬಿಇ ಅಥವಾ ಬಿಟೆಕ್​. ಎಂಇ ಅಥವಾ ಎಂಟೆಕ್​, ಎಂಎಸ್​ (ಆರ್​​​)

  ಹುದ್ದೆಯ ಅವಧಿ
  ಯೋಜನೆಯ ಸಹಾಯಕ: 09 ತಿಂಗಳುಗಳು
  ಜೂನಿಯರ್ ರಿಸರ್ಚ್ ಫೆಲೋ: 36 ತಿಂಗಳುಗಳು

  ವಯೋಮಿತಿ ಸಡಿಲಿಕೆ:
  ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ನಿಯಮಾವಳಿಗಳ ಪ್ರಕಾರ

  ಇದನ್ನು ಓದಿ: ಕ್ರೀಡಾ ಪ್ರಾಧಿಕಾರದಲ್ಲಿ ನೇಮಕಾತಿ; ಬೇಗ ಅರ್ಜಿ ಸಲ್ಲಿಸಿ

  ಆಯ್ಕೆ ಪ್ರಕ್ರಿಯೆ
  ಲಿಖಿತ ಪರೀಕ್ಷೆ ಮತ್ತು ಸಂದರ್ಶನ

  ಪ್ರಮುಖ ದಿನಾಂಕ
  ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: ಮೇ 27, 2022
  ಇ-ಮೇಲ್ ಕಳುಹಿಸಲು ಕೊನೆಯ ದಿನಾಂಕ: 30 ಜೂನ್ 2022

  ಇಮೇಲ್​ ಐಡಿ
  ಯೋಜನಾ ಸಹಾಯಕ v.vigneshkumar@nitk.edu.in
  ಜೂನಿಯರ್ ರಿಸರ್ಚ್ ಫೆಲೋ (JRF) mandeep.singh@nitk.edu.in

  ಯೋಜನಾ ಸಹಾಯಕ ಹುದ್ದೆಗೆ ಇಮೇಲ್​​ ಕಳುಹಿಸಲು ಜೂನ್​ 14 ಕಡೆಯ ದಿನವಾದರೆ, ಜೂನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಇಮೇಲ್ ಕಳುಹಿಸಲು ಜೂನ್​ 30 ಕಡೆಯ ದಿನವಾಗಿದೆ.

  ಇದನ್ನು ಓದಿ: ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ನೇಮಕಾತಿ; ಯಾವುದೇ ಪದವಿ ಆಗಿದ್ರೂ ಅರ್ಜಿ ಸಲ್ಲಿಸಿ

  ಅರ್ಜಿ ಸಲ್ಲಿಕೆ ವಿವರ

  ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ನೀಡಿ. ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಅವುಗಳನ್ನು ನೀಡಿ.

  - ನಿಗದಿತ ನಮೂನೆಯಲ್ಲಿ ಫಾರ್ಮ್ ಅಲ್ಲಿ ಶೈಕ್ಷಣಿಕ ಮಾಹಿತಿ, ಅನುಭವ ಸೇರಿದಂತೆ ಇತರೆ ವಿವರಗಳನ್ನು ನೀಡಿ. ಯಾವ ಹುದ್ದೆಗೆ ಎಂಬುದನ್ನು ಅರ್ಜಿಯಲ್ಲಿ ನಮೂದಿಸಿ.

  -ಕೊನೆಯದಾಗಿ ಅರ್ಜಿ ನಮೂನೆಯನ್ನು ಮೇಲ್ಕಂಡ ಇಮೇಲ್​ ವಿಳಾಸಕ್ಕೆ ಕಳುಹಿಸಬೇಕು.
  Published by:Seema R
  First published: