NFDC Recruitment: ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುವ ಆಸಕ್ತಿ ಇದ್ರೆ ಬೇಗ ಅರ್ಜಿ ಸಲ್ಲಿಸಿ

53ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಕೆಲಸ ನಿರ್ವಹಿಸಲು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಎನ್​ಎಫ್​ಡಿಸಿ

ಎನ್​ಎಫ್​ಡಿಸಿ

  • Share this:
    ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುವ ಕನಸು ಕಾಣುತ್ತಿರುವ ಅಭ್ಯರ್ಥಿಗಳಿಗಗೆ ನ್ಯಾಷನಲ್ ಫಿಲ್ಮ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (national Film Development Corporation of India ಅದ್ಬುತ ಅವಕಾಶ ನೀಡಿದೆ. ಸಿನಿಮಾ ವಿಭಾಗದ ವಿವಿಧ ವಲಯದಲ್ಲಿ ನೇಮಕಾತಿಗೆ ಮುಂದಾಗಿದೆ. ಫಿಲ್ಮ್ ಪ್ರೋಗ್ರಾಮರ್, ಫೆಸ್ಟಿವಲ್ ಕೋಆರ್ಡಿನೇಟರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜುಲೈ 10 ಆಗಿದೆ. ಅಭ್ಯರ್ಥಿಗಳು ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

    53ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಕೆಲಸ ನಿರ್ವಹಿಸಲು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳನ್ನು ಗುತ್ತಿ ಗೆ ಆಧಾರದ ಮೇಲೆ ನೇಮಕ ಮಾಡಲಾಗುತ್ತಿದೆ. ಈ ಹುದ್ದೆ ನೇಮಕಾತಿ, ಆಯ್ಕೆ ಪ್ರಕ್ರಿಯೆ ಸೇರಿದಂತೆ ಇತರೆ ಮಾಹಿತಿ ಈ ಕೆಳಗಿನಂತಿದೆ.

    ಸಂಸ್ಥೆಯ ಹೆಸರು: ಭಾರತೀಯ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (NFDC)
    ಹುದ್ದೆಯ ಹೆಸರು: ಚಲನಚಿತ್ರ ಪ್ರೋಗ್ರಾಮರ್, ಉತ್ಸವ ಸಂಯೋಜಕರು
    ಹುದ್ದೆಗಳ ಸಂಖ್ಯೆ: 34
    ಉದ್ಯೋಗ ಸ್ಥಳ: ಮುಂಬೈ - ದೆಹಲಿ - ಗೋವಾ - ಅಖಿಲ ಭಾರತ
    ವೇತನ: 25000-120000 ರೂ. ಪ್ರತಿ ತಿಂಗಳು






















































































































    ಹುದ್ದೆಹುದ್ದೆ ಸಂಖ್ಯೆವಿದ್ಯಾರ್ಹತೆ
     ಫಿಲ್ಮ್​​ ಪ್ರೋಗ್ರಾಮರ್2ಪದವಿ, ಸ್ನಾತಕೋತ್ತರ ಪದವಿ
    ಸಹಾಯಕ ಫಿಲ್ಮ್ ಪ್ರೋಗ್ರಾಮರ್4ಪದವಿ, ಸ್ನಾತಕೋತ್ತರ ಪದವಿ
    ಫೆಸ್ಟಿವಲ್​ ಕೊರ್ಡಿನೇಟರ್​5ಪದವಿ
    ಪ್ರತಿನಿಧಿ ನೋಂದಣಿ1ಪದವಿ
    ಚಲನಚಿತ್ರ ಶೆಡ್ಯೂಲರ್1ಪದವಿ
    ಫೆಸ್ಟಿವಲ್​ ಸಹಾಯಕ1ಪದವಿ
    ಅಡೆಂಟರ್​410ನೇ ತರಗತಿ
    ಅಸಿಸ್ಟಂಟ್​ ಡೈರೆಕ್ಟರ್​​1ಸ್ನಾತಕೋತ್ತರ ಪದವಿ
    ಹಿರಿಯ ಪ್ರೋಗ್ರಾಮರ್1ಸ್ನಾತಕೋತ್ತರ ಪದವಿ
    ಜೂನಿಯರ್ ಪ್ರೋಗ್ರಾಮರ್1ಪದವಿ
    ಸಲಹೆಗಾರ1ಪದವಿ
    ಸಹಾಯಕ ಪ್ರೋಗ್ರಾಮಿಂಗ್ ಸಂಯೋಜಕರು1ಪದವಿ
    ಸಂಪಾದಕ/ಸಹಾಯಕ ಪ್ರೋಗ್ರಾಮಿಂಗ್ ಸಂಯೋಜಕರು1ಪದವಿ
    ಇಂಡಸ್ಟ್ರಿ ಸ್ಕ್ರೀನಿಂಗ್/ಎಕ್ಸಿಬಿಷನ್ ಸ್ಟಾಲ್‌ಗಳಿಗೆ ಕಾರ್ಯನಿರ್ವಾಹಕರು1ಪದವಿ
    ಜೂನಿಯರ್ ಎಕ್ಸಿಕ್ಯೂಟಿವ್1ಪದವಿ
    ಹಿರಿಯ ಪ್ರೋಗ್ರಾಮರ್1ಪದವಿ
    ಹಿರಿಯ ಪ್ರೋಗ್ರಾಮರ್‌ಗೆ ಸಹಾಯಕ1ಸ್ನಾತಕೋತ್ತರ ಪದವಿ
    ನೋಂದಣಿ ಸಂಯೋಜಕರು1ಪದವಿ
    ಪ್ರೂಫ್ ರೀಡರ್1ಪದವಿ
    ಸಂಯೋಜಕರು-ವಿತರಣಾ ಕಾರ್ಯಾಗಾರಪದವಿ
    ಅಂತರರಾಷ್ಟ್ರೀಯ ಅತಿಥಿ ಸಂಬಂಧಗಳಿಗಾಗಿ ಕಾರ್ಯನಿರ್ವಾಹಕ1ಪದವಿ
    ದೇಶೀಯ ಅತಿಥಿ ಸಂಬಂಧಗಳ ಕಾರ್ಯನಿರ್ವಾಹಕಪದವಿ

    ವಯೋಮಿತಿ: ನ್ಯಾಷನಲ್ ಫಿಲ್ಮ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 45 ವರ್ಷಗಳು.

    ಇದನ್ನು ಓದಿ: ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗೆ ಅರ್ಜಿ ಆಹ್ವಾನ

    ವಯೋಮಿತಿ ಸಡಿಲಿಕೆ:
    ಭಾರತೀಯ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ ನಿಯಮಗಳ ಪ್ರಕಾರ

    ಆಯ್ಕೆ ಪ್ರಕ್ರಿಯೆ
    ಲಿಖಿತ ಪರೀಕ್ಷೆ ಮತ್ತು ಸಂದರ್ಶನ

    ಅರ್ಜಿ ಸಲ್ಲಿಕೆ: ಆಫ್​ಲೈನ್​

    ಅರ್ಜಿ ಶುಲ್ಕ: ವಿನಾಯಿತಿ

    ಪ್ರಮುಖ ದಿನಾಂಕಗಳು:
    ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 02 ಜುಲೈ 2022
    ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10 ಜುಲೈ 2022

    ಪ್ರಮುಖ ಲಿಂಕ್‌ಗಳು
    ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: nfdcindia.com

    ಇದನ್ನು ಓದಿ: ಶಿವಮೊಗ್ಗ ಜಿಲ್ಲಾ ನ್ಯಾಯಾಲಯದಲ್ಲಿ ನೇಮಕಾತಿ; ಪಿಯುಸಿ ಆಗಿದ್ರೆ ಅರ್ಜಿ ಸಲ್ಲಿಸಿ

    ಅರ್ಜಿ ಸಲ್ಲಿಕೆ ವಿಧಾನ

    ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.

    ಅಧಿಕೃತ ವೆಬ್​ಸೈಟ್​ ಮೂಲಕ ಅರ್ಜಿ ನಮೂನೆಯನ್ನು ಡೌನ್​ಲೋಡ್​ ಮಾಡಿ ಸ್ವಯಂ ದೃಢೀಕರಿಸಿದ ಅರ್ಜಿಗಳನ್ನು ಮೇಲ್ಕಂಡ ಇಮೇಲ್​ ವಿಳಾಸಕ್ಕೆ ನಿಗದಿತ ದಿನಾಂಕದೊಳಗೆ ಕಳುಹಿಸಬೇಕು.

    ಅರ್ಜಿಜೊತೆಗೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ ಈ ​ ವಿಳಾಸಕ್ಕೆ ಕಳುಹಿಸಬೇಕು.

    ಜನರಲ್ ಮ್ಯಾನೇಜರ್ (P&A), ನ್ಯಾಷನಲ್ ಫಿಲ್ಮ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್, ಡಿಸ್ಕವರಿ ಆಫ್ ಇಂಡಿಯಾ ಬಿಲ್ಡಿಂಗ್, 6ನೇ ಮಹಡಿ, ನೆಹರು ಸೆಂಟರ್, ಡಾ. ಅನ್ನಿ ಬೆಸೆಂಟ್ ರಸ್ತೆ, ವರ್ಲಿ, ಮುಂಬೈ - 400018
    Published by:Seema R
    First published: