NDRI Recruitment: ಬೆಂಗಳೂರಿನ ರಾಷ್ಟ್ರೀಯ ಹೈನುಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ ಉದ್ಯೋಗ; ಎಂಎಸ್ಸಿ ಆಗಿದ್ರೆ ನೋಡಿ

ಮೂರು ವರ್ಷಗಳ ಕಾಲ ಅಂದರೆ, 2025ರವರೆಗೆ ಒಪ್ಪಂದ ಆಧಾರದ  ಹುದ್ದೆ ಇದಾಗಿದೆ.  ಈ ಹುದ್ದೆಗಳ ನೇಮಕಾತಿ, ಆಯ್ಕೆ ಪ್ರಕ್ರಿಯೆ, ಅರ್ಜಿ ಸಲ್ಲಿಕೆ ಸೇರಿದಂತೆ ಇನ್ನಿತರ ಮಾಹಿತಿ ಕೆಳಕಂಡಂತೆ ಇದೆ

ಬೆಂಗಳೂರಿನ ರಾಷ್ಟ್ರೀಯ ಹೈನುಗಾರಿಕಾ ಸಂಶೋಧನಾ ಸಂಸ್ಥೆ

ಬೆಂಗಳೂರಿನ ರಾಷ್ಟ್ರೀಯ ಹೈನುಗಾರಿಕಾ ಸಂಶೋಧನಾ ಸಂಸ್ಥೆ

 • Share this:
  ರಾಷ್ಟ್ರೀಯ ಹೈನುಗಾರಿಕಾ ಸಂಶೋಧನಾ ಸಂಸ್ಥೆ (National Dairy Research Institute)  ಬೆಂಗಳೂರು ಕೇಂದ್ರದಲ್ಲಿ (Bengaluru Centre)  ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಹಿರಿಯ ಸಂಶೋಧಕರ (Senior Research Fellow) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.  ನೇರ ಸಂದರ್ಶನದ ಮೂಲಕ ಹುದ್ದೆ ನೇಮಕಾತಿ ನಡೆಯಲಿದೆ. ಕೇಂದ್ರ ಸರ್ಕಾರದ ಈ ಹುದ್ದೆಯಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅಭ್ಯರ್ಥಿಗಳು ವಾಕ್​ ಇನ್​ ಇಂಟರ್​ವ್ಯೂನಲ್ಲಿ (Walk-in-Interview) ಭಾಗಿಯಾಗಬಹುದಾಗಿದೆ.

  ಮೂರು ವರ್ಷಗಳ ಕಾಲ ಅಂದರೆ, 2025ರವರೆಗೆ ಒಪ್ಪಂದ ಆಧಾರದ  ಹುದ್ದೆ ಇದಾಗಿದೆ.  ಈ ಹುದ್ದೆಗಳ ನೇಮಕಾತಿ, ಆಯ್ಕೆ ಪ್ರಕ್ರಿಯೆ, ಅರ್ಜಿ ಸಲ್ಲಿಕೆ ಸೇರಿದಂತೆ ಇನ್ನಿತರ ಮಾಹಿತಿ ಕೆಳಕಂಡಂತೆ ಇದೆ  ಹುದ್ದೆ ಮಾಹಿತಿಹುದ್ದೆ ವಿವರ
  ಸಂಸ್ಥೆರಾಷ್ಟ್ರೀಯ ಡೈರಿ ಸಂಶೋಧನಾ ಸಂಸ್ಥೆ (NDRI)
  ಹುದ್ದೆಗಳ ಸಂಖ್ಯೆ1
  ಉದ್ಯೋಗ ಸ್ಥಳ ಬೆಂಗಳೂರು
  ಹುದ್ದೆಯ ಹೆಸರುಹಿರಿಯ ಸಂಶೋಧಕ
  ಸಂಬಳ:ರಾಷ್ಟ್ರೀಯ ಡೈರಿ ಸಂಶೋಧನಾ ಸಂಸ್ಥೆ ನಿಯಮಗಳ ಪ್ರಕಾರ
  ಅಧಿಕೃತ ವೆಬ್​ ಸೈಟ್​ndri.res.in

  ವಿದ್ಯಾರ್ಹತೆ: ಅಧಿಕೃತ ಅಧಿಸೂಚನೆ ಅನ್ವಯ ಅಭ್ಯರ್ಥಿಯು ಡೈರಿ ತಂತ್ರಜ್ಞಾನ, ಡೈರಿ ಮೈಕ್ರೋಬಯೋಲಾಜಿ, ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ, ಪೌಷ್ಠಿಕಾಂಶ, ಆಹಾರ ರಸಾಯನ ಶಾಸ್ತ್ರ, ಪ್ರಾಣಿ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು
  ಅನುಭವ: ಸಂಬಂಧ ಪಟ್ಟ ಕ್ಷೇತ್ರದಲ್ಲಿ ಅಭ್ಯರ್ಥಿ ಸಂಶೋಧನ ಅನುಭವ ಹೊಂದಿರಬೇಕು.

  ವಯೋಮಿತಿ
  ಅಭ್ಯರ್ಥಿ ಗರಿಷ್ಠ 40 ವರ್ಷಗಳನ್ನು ಮೀರಿರಬಾರದು.

  ವಯೋಮಿತಿ ಸಡಿಲಿಕೆ
  ರಾಷ್ಟ್ರೀಯ ಡೈರಿ ರಿಸರ್ಚ್ ಇನ್‌ಸ್ಟಿಟ್ಯೂಟ್​ನ ನಿಯಮ ಅನುಸಾರ

  ಆಯ್ಕೆ ವಿಧಾನ
  ವಾಕ್​​-ಇನ್​-ಇಂಟರ್​ವ್ಯೂ

  ಪ್ರಮುಖ ದಿನಾಂಕ
  ವಾಕ್​ ಇನ್​ ಇಂಟರ್​ವ್ಯೂ ನಡೆಯುವ ದಿನಾಂಕ ಜೂನ್​ 29 ರಂದು ಬೆಳಗ್ಗೆ 10ಗಂಟೆಗೆ

  ಪ್ರಮುಖ ಲಿಂಕ್
  ಅಧಿಕೃತ ಅಧಿಸೂಚನೆ ಪಿಡಿಎಫ್​ಗೆ ಇಲ್ಲಿ ಕ್ಲಿಕ್​ ಮಾಡಿ
  ಅಧಿಕೃತ ವೆಬ್​ ಸೈಟ್​ : ndri.res.in

  ವಿಶೇಷ ಸೂಚನೆ
  ವಾಕ್​ ಇನ್​ ಇಂಟರ್​ವ್ಯೂಗೆ ಹಾಜರಾಗುವ ಅಭ್ಯರ್ಥಿಗಳು ಸ್ವಯಂ ದೃಢೀಕೃತ ಶೈಕ್ಷಣಿಕ ದಾಖಲಾತಿ, ಅನುಭಬ ಪ್ರಮಾಣ ಪತ್ರದ ಜೊತೆಗೆ ಎರಡು ಪಾಸ್​ಪೋರ್ಸ್​ ಸೈಜ್​ ಫೋಟೋವನ್ನು ಕಡ್ಡಾಯವಾಗಿ ತರಬೇಕು.

  ನೇರ ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ನಿಗದಿತ ಸಮಯಕ್ಕಿಂತ 30 ನಿಮಿಷ ಮುಂಚಿತವಾಗಿ ಸ್ಥಳದಲ್ಲಿ ಹಾಜರರಿರಬೇಕು

  ನೇರ ಸಂದರ್ಶನ ನಡೆಯು ಸ್ಥಳ

  ಸೆಮಿನಾರ್​ ಹಾಲ್​, ಎನ್​ಡಿಆರ್​ಐ, ಅಡುಗೋಡಿ, ಬೆಂಗಳೂರು-560030
  Published by:Seema R
  First published: