NBAIR Recruitment: ಯಂಗ್ ಪ್ರೊಫೆಷನಲ್ ಹುದ್ದೆಗೆ ನೇಮಕಾತಿ; ತಿಂಗಳಿಗೆ 35ಸಾವಿರ ರೂ ವೇತನ

ತಾತ್ಕಾಲಿಕ ನೇಮಕಾತಿಗೆ ಮೇಯಲ್ಲಿ ಭರ್ತಿ ಅಧಿಸೂಚನೆ ಹೊರಡಿಸಲಾಗಿದೆ. ಈ  ಹುದ್ದೆ ನೇಮಕಾತಿ, ಆಯ್ಕೆ ಪ್ರಕ್ರಿಯೆ ಸೇರಿದಂತೆ ಇನ್ನಿತರ ಮಾಹಿತಿಗಳು ಕೆಳಕಂಡಂತೆ ಇದೆ.

ಯಂಗ್ ಪ್ರೊಫೆಷನಲ್ ಹುದ್ದೆಗೆ ನೇಮಕಾತಿ

ಯಂಗ್ ಪ್ರೊಫೆಷನಲ್ ಹುದ್ದೆಗೆ ನೇಮಕಾತಿ

  • Share this:
    ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಬ್ಯೂರೋನಲ್ಲಿ (National Bureau of Agricultural Insect Resources) ಯುವ ವೃತ್ತಿಪರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಯಾವುದೇ ವಿಷಯದಲ್ಲಿ ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಸಂಸ್ಥೆಯ ಹಣಕಾಸು ಮತ್ತು ನಿರ್ವಹಣೆ ವಿಭಾಗದಲ್ಲಿ ಈ ನೇಮಕಾತಿ ನಡೆಯಲಿದ್ದು, ವಾಣಿಜ್ಯ ವಿಭಾಗದಲ್ಲಿ ಪದವಿ ಹೊಂದಿರುವ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಭಾಗಿಯಾಗಬಹುದಾಗಿದೆ.

    ತಾತ್ಕಾಲಿಕ ನೇಮಕಾತಿಗೆ ಮೇಯಲ್ಲಿ ಭರ್ತಿ ಅಧಿಸೂಚನೆ ಹೊರಡಿಸಲಾಗಿದೆ. ಈ  ಹುದ್ದೆ ನೇಮಕಾತಿ, ಆಯ್ಕೆ ಪ್ರಕ್ರಿಯೆ ಸೇರಿದಂತೆ ಇನ್ನಿತರ ಮಾಹಿತಿಗಳು ಕೆಳಕಂಡಂತೆ ಇದೆ.

    ಸಂಸ್ಥೆಯ ಹೆಸರು: ನ್ಯಾಷನಲ್ ಬ್ಯೂರೋ ಆಫ್ ಅಗ್ರಿಕಲ್ಚರಲ್ ಇನ್ಸೆಕ್ಟ್ ರಿಸೋರ್ಸಸ್ (NBAIR)
    ಹುದ್ದೆಯ ಹೆಸರು: ಯಂಗ್ ಪ್ರೊಫೆಷನಲ್
    ಹುದ್ದೆಗಳ ಸಂಖ್ಯೆ: 6
    ಉದ್ಯೋಗ ಸ್ಥಳ: ಬೆಂಗಳೂರು - ಕರ್ನಾಟಕ
    ವೇತನ: 25000-35000 ರೂ ಪ್ರತಿ ತಿಂಗಳು































    ಹುದ್ದೆಹುದ್ದೆ ಸಂಖ್ಯೆವಯೋಮಿತಿವಿದ್ಯಾರ್ಹತೆವೇತನ
    ವಾಣಿಜ್ಯ ಮತ್ತು ಆಡಳಿತ ಯಂಗ್ ಪ್ರೊಫೆಷನಲ್13ಕನಿಷ್ಟ 21-  ಗರಿಷ್ಠ 45 ವರ್ಷ25000 ರೂ ಮಾಸಿಕಬಿಕಾಂ, ಬಿಬಿಎ, ಬಿಬಿಎಸ್​
    ಯಂಗ್ ಪ್ರೊಫೆಷನಲ್-II ​2ಕನಿಷ್ಟ 21-  ಗರಿಷ್ಠ 45 ವರ್ಷ35000 ರೂ ಮಾಸಿಕಬಿಕಾಂ, ಬಿಬಿಎ, ಬಿಬಿಎಸ್
    ಪಿಎಂಇ ಸೆಲ್​ -ಯಂಗ್ ಪ್ರೊಫೆಷನಲ್1ಕನಿಷ್ಟ 21-  ಗರಿಷ್ಠ 45 ವರ್ಷ25000 ರೂ ಮಾಸಿಕಸಂಬಂಧಿತ ಕ್ಷೇತ್ರದಲ್ಲಿ ಪದವಿ

    ವಿದ್ಯಾರ್ಹತೆ : ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ವಾಣಿಜ್ಯ ಕ್ಷೇತ್ರದಲ್ಲಿ ಪದವಿ ಹೊಂದಿರಬೇಕು. ಪಿಎಂಇ ಸೆಲ್​ ಯಂಗ್ ಪ್ರೊಫೆಷನಲ್ ಹುದ್ದೆಗೆ ವಿಜ್ಞಾನ ಕ್ಷೇತ್ರದಲ್ಲಿ ಪದವಿ ಆಗಿರಬೇಕು

    ವಯೋಮಿತಿ ಸಡಿಲಿಕೆ: ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಬ್ಯೂರೋ ನಿಯಮದ ಅನುಸಾರ

    ಇದನ್ನು ಓದಿ: ಕುದುರೆಮುಖ ಕಬ್ಬಿಣದ ಅದಿರು ಕಂಪನಿಯಲ್ಲಿ ನೇಮಕಾತಿ; MBA, MSW ಆದವರಿಗೆ ಅವಕಾಶ

    ಆಯ್ಕೆ ಪ್ರಕ್ರಿಯೆ: ನೇರ ಸಂದರ್ಶನ

    ಅರ್ಜಿ ಸಲ್ಲಿಕೆ
    ಇಮೇಲ್ ಮುಖಾಂತರ

    ಪ್ರಮುಖ ದಿನಾಂಕ
    ಆನ್​ಲೈನ್​ ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ: ಮೇ 30, 2022
    ಆನ್​ಲೈನ್​ ಅರ್ಜಿ ಸಲ್ಲಿಕೆ ಮುಕ್ತಾಯದ ದಿನಾಂಕ: ಜೂನ್​ 20, 2022

    ಪ್ರಮುಖ ಲಿಂಕ್​ಗಳು
    ಹುದ್ದೆಯ ಅಧಿಕೃತ ಅಧಿಸೂಚನೆಗೆ ಇಲ್ಲಿ ಕ್ಲಿಕ್​ ಮಾಡಿ
    ಅಧಿಕೃತ ವೆಬ್​ ಸೈಟ್​​: nbair.res.in

    ಇದನ್ನು ಓದಿ: ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ನೇಮಕಾತಿ; ಯಾವುದೇ ಪದವಿ ಆಗಿದ್ರೂ ಅರ್ಜಿ ಸಲ್ಲಿಸಿ

    ಅರ್ಜಿ ಸಲ್ಲಿಕೆ ಪ್ರಕ್ರಿಯೆ
    ಅರ್ಜಿ ಸಲ್ಲಿಕೆ ಪ್ರಕ್ರಿಯೆ
    -ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ
    -ಆನ್‌ಲೈನ್ ಮೋಡ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ.
    ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ಈ ಇಮೇಲ್ ವಿಳಾಸಕ್ಕೆ hoa.nbair@icar.gov.inಅಭ್ಯರ್ಥಿಗಳು ಮೇಲ್​ ಮಾಡಬೇಕಿದೆ. ಇ ಮೇಲ್​ ಅನ್ನು ಜೂನ್​ 20ರ ಒಳಗೆ ಮಾಡಬೇಕಿದೆ.
    ನೇರ ಸಂದರ್ಶನ
    ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಶಾರ್ಟ್​ಲಿಸ್ಟ್ ಮಾಡಿ ಬಳಿಕ ನೇರ ಸಂದರ್ಶನಕ್ಕೆ ಆಹ್ವಾನಿಸಲಾಗುವುದು
    Published by:Seema R
    First published: