• Home
  • »
  • News
  • »
  • jobs
  • »
  • Good News: ಶೀಘ್ರದಲ್ಲೇ 10 ಲಕ್ಷ ಸರ್ಕಾರಿ ಹುದ್ದೆಗಳ ಭರ್ತಿ; ಇಲಾಖಾವಾರು ಖಾಲಿ ಇರುವ ಉದ್ಯೋಗಗಳ ಮಾಹಿತಿ ಇಲ್ಲಿದೆ

Good News: ಶೀಘ್ರದಲ್ಲೇ 10 ಲಕ್ಷ ಸರ್ಕಾರಿ ಹುದ್ದೆಗಳ ಭರ್ತಿ; ಇಲಾಖಾವಾರು ಖಾಲಿ ಇರುವ ಉದ್ಯೋಗಗಳ ಮಾಹಿತಿ ಇಲ್ಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮುಂದಿನ ವರ್ಷದ ಅಂತ್ಯದ ವೇಳೆಗೆ 10 ಲಕ್ಷ ಉದ್ಯೋಗಗಳನ್ನು ಒದಗಿಸುವ ಗುರಿಯನ್ನು ತಲುಪಲು ಕೇಂದ್ರ ಸರ್ಕಾರ 5 ಅಂಶಗಳ ಯೋಜನೆಯನ್ನು ಹಾಕಿಕೊಂಡಿದೆ. ಈ ಕುರಿತಾಗಿ ಮಾತನಾಡಿರುವ ಸರ್ಕಾರದ ಉನ್ನತ ಅಧಿಕಾರಿಯೊಬ್ಬರು, "ಆದಷ್ಟು ಬೇಗ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು, ಈ ಕುರಿತಾಗಿ ಕೆಲಸಗಳು ನಡೆಯುತ್ತಿವೆ" ಎಂದು ಹೇಳಿದ್ದಾರೆ.

ಮುಂದೆ ಓದಿ ...
  • News18 Kannada
  • Last Updated :
  • New Delhi, India
  • Share this:

    ಕೇಂದ್ರ ಸರ್ಕಾರವು(Central Government) ನಿರುದ್ಯೋಗಿಗಳಿಗೆ(Unemployed) ಒಂದು ಸಿಹಿ ಸುದ್ದಿ ನೀಡಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಸರ್ಕಾರವು 2023ರ ಅಂತ್ಯದ ವೇಳೆಗೆ 10 ಲಕ್ಷ ನಿರುದ್ಯೋಗಿಗಳಿಗೆ ಉದ್ಯೋಗ(Employment) ಒದಗಿಸುವ ಗುರಿ ಹಾಕಿಕೊಂಡಿದೆ. ಈ ಉದ್ದೇಶ ಈಡೇರಿಕೆಗಾಗಿ ಸರ್ಕಾರವು ಹಲವು ಪ್ರಯತ್ನಗಳನ್ನು ಮಾಡುತ್ತಿದೆ. 


    ನಿರುದ್ಯೋಗ ಮತ್ತು ಉದ್ಯೋಗ ಪ್ರಮುಖ ರಾಜಕೀಯ ಸಮಸ್ಯೆಗಳಾಗಿ ಹೊರಹೊಮ್ಮುತ್ತಿರುವಾಗ ಪ್ರಧಾನಿ ನರೇಂದ್ರ ಮೋದಿಯವರು ಈ ಒಂದು ಮಹತ್ತರವಾದ ನಿರ್ಧಾರವನ್ನು ಕೈಗೊಂಡಿದ್ದಾರೆ. ಇದು ದೇಶದ ನಿರುದ್ಯೋಗಿ ಸಮೂಹಕ್ಕೆ ಸಂತಸದ ವಿಷಯವಾಗಿದೆ. 2023ರ ಅಂತ್ಯದ ವೇಳೆಗೆ ಕೇಂದ್ರ ಸರ್ಕಾರದ ಖಾಲಿ ಇರುವ ಎಲ್ಲಾ 10 ಲಕ್ಷ ಹುದ್ದೆಗಳನ್ನು ತುಂಬುವ ಮಹತ್ವಾಕಾಂಕ್ಷೆ ಯೋಜನೆಯನ್ನು ಘೋಷಿಸಿದ್ದಾರೆ.


    ಇದೇ ಅಕ್ಟೋಬರ್ ತಿಂಗಳಿನಲ್ಲಿ ಜರುಗಿದ್ದ ಮೊದಲ ರೋಜ್​ಗಾರ್​ ಮೇಳದಲ್ಲಿ ಪ್ರಧಾನಿ ಮೋದಿಯವರು, ಯುವ ಉದ್ಯೋಗಾಂಕ್ಷಿಗಳಿಗೆ 75,000 ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದ್ದರು.


    ಇದನ್ನೂ ಓದಿ: Central Government Job: ರೈಲ್ವೆ ಇಲಾಖೆಯಲ್ಲಿ ಗ್ರೂಪ್​ ಸಿ, ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ


    ಮುಂದಿನ ವರ್ಷದ ಅಂತ್ಯದ ವೇಳೆಗೆ 10 ಲಕ್ಷ ಉದ್ಯೋಗಗಳನ್ನು ಒದಗಿಸುವ ಗುರಿಯನ್ನು ತಲುಪಲು ಕೇಂದ್ರ ಸರ್ಕಾರ 5 ಅಂಶಗಳ ಯೋಜನೆಯನ್ನು ಹಾಕಿಕೊಂಡಿದೆ. ಈ ಕುರಿತಾಗಿ ಮಾತನಾಡಿರುವ ಸರ್ಕಾರದ ಉನ್ನತ ಅಧಿಕಾರಿಯೊಬ್ಬರು, "ಆದಷ್ಟು ಬೇಗ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು, ಈ ಕುರಿತಾಗಿ ಕೆಲಸಗಳು ನಡೆಯುತ್ತಿವೆ" ಎಂದು ಹೇಳಿದ್ದಾರೆ.


    5-ಅಂಶಗಳ ಯೋಜನೆ


    ಈ ಗುರಿಯ ಮೊದಲ ಅಂಶ-ವೇಕೆನ್ಸಿ ಸ್ಟೇಟಸ್​ ಪೋರ್ಟಲ್​ ಎಂಬ ಆಂತರಿಕ ಸರ್ಕಾರಿ ಪೋರ್ಟಲ್​ನ್ನು ರಚಿಸುವುದು. ಅದರಲ್ಲಿ ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳು ತಮ್ಮ ಇತ್ತೀಚಿನ ಡೇಟಾವನ್ನು ಅಪ್​ಲೋಡ್ ಮಾಡಲು ಹೇಳಲಾಗಿದೆ.


    ಎರಡನೇ ಅಂಶ- ಸರ್ಕಾರದ ಈ ಆಂತರಿಕ ಪೋರ್ಟಲ್​ನ್ನು ರೆಗ್ಯುಲರ್​ ಆಗಿ ಅಪ್​ಡೇಟ್ ಮಾಡಲು ಪ್ರತಿ ಸಚಿವಾಲಯ & ಇಲಾಖೆಯಲ್ಲಿ ಒಬ್ಬೊಬ್ಬ ನೋಡಲ್ ಅಧಿಕಾರಿಯನ್ನು ನೇಮಿಸುವುದು.


    ಮೂರನೇ ಅಂಶ- ಎಲ್ಲಾ ಸಚಿವಾಲಯಗಳಿಗೆ ದ್ವೈಮಾಸಿಕ ಗುರಿಗಳನ್ನು ನಿಗದಿಪಡಿಸಲಾಗಿದೆ. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು 2023ರ ಅಂತ್ಯದವರೆಗೆ ಪೂರ್ಣ ಕ್ಯಾಲೆಂಡರ್​ನ್ನು ರಚಿಸಲಾಗಿದೆ.


    ನಾಲ್ಕನೇ ಅಂಶ- ಮುಂಬರುವ ತಿಂಗಳುಗಳಲ್ಲಿ ನೇಮಕಾತಿ ಪತ್ರಗಳನ್ನು ನೀಡಬೇಕಾದ ಸಂಖ್ಯೆಗಳ ವಿವರಗಳೊಂದಿಗೆ ಪೋರ್ಟಲ್​ನ್ನು ನವೀಕರಿಸಲು 'ಏಕೀಕೃತ ಕಲೆಕ್ಟಿವ್ ಡಿಜಿಟಲ್ ವಿತರಣೆ ಮತ್ತು ನೇಮಕಾತಿ ಪತ್ರಗಳ ಕ್ರಿಯಾ ಯೋಜನೆ'ಯನ್ನು ಸರ್ಕಾರ ರೂಪಿಸಿದೆ. ಪ್ರತೀ ತಿಂಗಳು PMO ಮಟ್ಟದಲ್ಲಿ ಇದರ ಕುರಿತಾಗಿ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುತ್ತದೆ. ಕ್ಯಾಬಿನೆಟ್ ಕಾರ್ಯದರ್ಶಿ ಇದರ ಉಸ್ತುವಾರಿ ನೋಡಿಕೊಳ್ಳುತ್ತಾರೆ. ಎಲ್ಲಾ ಕಾರ್ಯದರ್ಶಿಗಳು ವಾರಕ್ಕೊಮ್ಮೆ ಪ್ರಗತಿ ಪರಿಶೀಲನಾ ಸಭೆ ನಡೆಸುತ್ತಾರೆ ಎಂದು ಸರ್ಕಾರದ ಉನ್ನತ ಮಟ್ಟದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


    ಐದನೇ ಅಂಶ- ನಿಗದಿತ ನಿವೃತ್ತಿಗಳಿಂದಾಗಿ 2023-2024 ರ ಆರ್ಥಿಕ ವರ್ಷದಲ್ಲಿ ಸೃಷ್ಟಿಯಾಗುವ ಖಾಲಿ ಹುದ್ದೆಗಳನ್ನು ಸಹ ಪರಿಗಣಿಸಲು ಸರ್ಕಾರ ನಿರ್ಧರಿಸಿದೆ. ಸಂಬಂಧಿತ ನೇಮಕಾತಿ ಏಜೆನ್ಸಿಗಳೊಂದಿಗೆ ಅಂತಹ ಖಾಲಿ ಹುದ್ದೆಗಳಿಗೆ ಇಂಡೆಂಟ್ ಅನ್ನು ಇರಿಸಲು ಕೇಂದ್ರವು ಎಲ್ಲಾ ಸಚಿವಾಲಯಗಳನ್ನು ಕೇಳಿದೆ. 'ಡೀಮ್ಡ್ ಅಬಾಲಿಶ್ಡ್' ವರ್ಗದ ಅಡಿಯಲ್ಲಿ ಬರುವ ಪೋಸ್ಟ್‌ಗಳ ರಿಕವರಿಗಾಗಿ ಪ್ರಸ್ತಾವನೆಗಳನ್ನು ಅದರ ಅನುಮೋದನೆಗಾಗಿ ವೆಚ್ಚದ ಇಲಾಖೆಗೆ ಸಲ್ಲಿಸುವಂತೆ ಸರ್ಕಾರವು ಎಲ್ಲಾ ಸಚಿವಾಲಯಗಳನ್ನು ಕೇಳಿದೆ.


    ಇದನ್ನೂ ಓದಿ: IIT Dharwad Recruitment 2022: ಜೂನಿಯರ್ ರಿಸರ್ಚ್​ ಫೆಲೋ ಹುದ್ದೆಗೆ ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ


    2023 ರ ಅಂತ್ಯದ ವೇಳೆಗೆ 10 ಲಕ್ಷ ಸರ್ಕಾರಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಪ್ರಧಾನಿ ಮೋದಿಯವರ ಭರವಸೆಯನ್ನು ಈಡೇರಿಸಲು ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಮಿಷನ್ ಮೋಡ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ನ್ಯೂಸ್ 18 ಈ ಹಿಂದೆ ವರದಿ ಮಾಡಿತ್ತು. ಕೇಂದ್ರ ಸರ್ಕಾರವು ಮುಂಬರುವ ತಿಂಗಳುಗಳಲ್ಲಿ ಹೆಚ್ಚಿನ ರೋಜ್​ಗಾರ್​ ಮೇಳಗಳನ್ನು ನಡೆಸಲು ಗುರಿ ಹಾಕಿಕೊಂಡಿದೆ.


    ಯಾವ್ಯಾವ ಇಲಾಖೆಯಲ್ಲಿ ಎಷ್ಟೆಷ್ಟು ಹುದ್ದೆಗಳಿವೆ?


    ಕೇಂದ್ರ ಸರ್ಕಾರವು ಇತ್ತೀಚೆಗೆ ಸಂಸತ್ತಿನಲ್ಲಿ ಲಿಖಿತ ಉತ್ತರದಲ್ಲಿ, ಮಾರ್ಚ್ 1, 2021ಕ್ಕೆ ಮಂಜೂರಾದ 40.35 ಲಕ್ಷ ಹುದ್ದೆಗಳಿಗೆ, ಕೇಂದ್ರ ಸರ್ಕಾರದ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಕೇವಲ 30.55 ಲಕ್ಷ ಉದ್ಯೋಗಿಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನೂ ಸುಮಾರು 9.8 ಲಕ್ಷ ಹುದ್ದೆಗಳು ಖಾಲಿ ಇವೆ. ರೈಲ್ವೇ ಸಚಿವಾಲಯದಲ್ಲಿ 2.94 ಲಕ್ಷ, ರಕ್ಷಣಾ (ನಾಗರಿಕ) ಇಲಾಖೆಯಲ್ಲಿ 2.64 ಲಕ್ಷ, ಗೃಹ ಸಚಿವಾಲಯದಲ್ಲಿ 1.4 ಲಕ್ಷ, ಅಂಚೆ ಇಲಾಖೆಯಲ್ಲಿ ಸುಮಾರು 90,000 ಹುದ್ದೆಗಳು ಮತ್ತು ಕಂದಾಯ ಇಲಾಖೆಯಲ್ಲಿ 80,000 ಹುದ್ದೆಗಳು ಖಾಲಿ ಇವೆ ಎಂದು ಹೇಳಿತ್ತು.

    Published by:Latha CG
    First published: