NADA Recruitment 2021: ತಿಂಗಳಿಗೆ ₹ 60,000 ಸಂಬಳ; ನ್ಯಾಷನಲ್ ಡೋಪಿಂಗ್ ವಿರೋಧಿ ಏಜೆನ್ಸಿಯಲ್ಲಿ ಉದ್ಯೋಗ

ಅಭ್ಯರ್ಥಿಗಳು ಆಫ್​ಲೈನ್​(ಪೋಸ್ಟಲ್​) ಮೂಲಕ ಅಕ್ಟೋಬರ್ 11ರಿಂದ ಅ.31ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಎನ್​ಎಡಿಎ

ಎನ್​ಎಡಿಎ

  • Share this:
NADA Recruitment 2021: ನ್ಯಾಷನಲ್ ಡೋಪಿಂಗ್​ ವಿರೋಧಿ ಏಜೆನ್ಸಿ(National Anti Doping Agency) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಒಟ್ಟು 18 ರಿಸರ್ಚ್ ಅಸೋಸಿಯೇಟ್(Research Associate), ಅಡ್ಮಿನಿಸ್ಟ್ರೇಟಿವ್​ ಅಸೋಸಿಯೇಟ್(Administrative Associate), ಟೆಕ್ನಿಕಲ್ ಅಸೋಸಿಯೇಟ್(Technical Associate), ಪ್ರೋಗ್ರಾಮ್​ ಅಸೋಸಿಯೇಟ್ (Programme Associate) ಹುದ್ದೆಗಳು ಖಾಲಿ ಇವೆ. ಎಲ್​ಎಲ್​ಬಿ(LLB), ಎಂಎಸ್ಸಿ(M.Sc), ಎಂ.ಫಾರ್ಮಾ(M.Pharma), ಪಿಎಚ್​.ಡಿ(Ph.D), ಬ್ಯಾಚಲರ್ ಡಿಗ್ರಿ(Bachelor Degree) ಮಾಡಿರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರು. ಅಭ್ಯರ್ಥಿಗಳು ಆಫ್​ಲೈನ್​(ಪೋಸ್ಟಲ್​) ಮೂಲಕ ಅಕ್ಟೋಬರ್ 11ರಿಂದ ಅ.31ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಕೇಂದ್ರ ಸರ್ಕಾರದ ಉದ್ಯೋಗ(Central Government Jobs) ಅರಸುತ್ತಿರುವವರು ಕೂಡಲೇ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.









































ಸಂಸ್ಥೆ ನ್ಯಾಷನಲ್ ಡೋಪಿಂಗ್ ವಿರೋಧಿ ಏಜೆನ್ಸಿ
ಹುದ್ದೆಯ ಹೆಸರು ರಿಸರ್ಚ್ ಅಸೋಸಿಯೇಟ್, ಅಡ್ಮಿನಿಸ್ಟ್ರೇಟಿವ್ ಅಸೋಸಿಯೇಟ್, ಟೆಕ್ನಿಕಲ್ ಅಸೋಸಿಯೇಟ್, ಪ್ರೋಗ್ರಾಮ್​ ಅಸೋಸಿಯೇಟ್
ಒಟ್ಟು ಹುದ್ದೆಗಳು 18
ವಿದ್ಯಾರ್ಹತೆ ಎಲ್​ಎಲ್​ಬಿ, ಎಂಎಸ್ಸಿ, ಎಂಫಾರ್ಮಾ, ಪಿಎಚ್​ಡಿ, ಬ್ಯಾಚಲರ್ ಡಿಗ್ರಿ
ಉದ್ಯೋಗದ ಸ್ಥಳ ಪ್ಯಾನ್ ಇಂಡಿಯಾ
ಸಂಬಳ ಮಾಸಿಕ  ₹ 25,000-60,000
ಅರ್ಜಿ ಸಲ್ಲಿಸುವ ಬಗೆ ಆಫ್​ಲೈನ್(ಪೋಸ್ಟಲ್)
ಅರ್ಜಿ ಸಲ್ಲಿಕೆ ಆರಂಭ ದಿನಾಂಕ 11/10/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31/10/2021



ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 11/10/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31/10/2021

ಹುದ್ದೆಯ ಮಾಹಿತಿ:







































ಹುದ್ದೆಯ ಹೆಸರು ಹುದ್ದೆಗಳ ಸಂಖ್ಯೆ
ಪ್ರೋಗ್ರಾಮ್​ ಅಸೋಸಿಯೇಟ್ 03
ಪ್ರೋಗ್ರಾಮ್ ಅಸೋಸಿಯೇಟ್-ಲೀಗಲ್ 02
ಪ್ರೋಗ್ರಾಮ್ ಅಸೋಸಿಯೇಟ್-ಎಜುಕೇಷನ್ 01
ರಿಸರ್ಚ್​ ಅಸೋಸಿಯೇಟ್ 05
ಅಡ್ಮಿನಿಸ್ಟ್ರೇಟಿವ್ ಅಸೋಸಿಯೇಟ್ 01
ಟೆಕ್ನಿಕಲ್ ಅಸೋಸಿಯೇಟ್-ಕೋಆರ್ಡಿನೇಷನ್ 03
ಟೆಕ್ನಿಕಲ್ ಅಸೋಸಿಯೇಟ್-ಡೋಪ್ ಟೆಸ್ಟಿಂಗ್ 03
ಒಟ್ಟು 18 ಹುದ್ದೆಗಳು



ಇದನ್ನೂ ಓದಿ:Indian Navy Recruitment 2021: 10th, ITI ಪಾಸಾಗಿದ್ರೆ ತಿಂಗಳಿಗೆ ₹ 56,900 ಸಂಬಳ, ನೌಕಾಪಡೆಯಲ್ಲಿ ಉದ್ಯೋಗ

ವಿದ್ಯಾರ್ಹತೆ:

ಪ್ರೋಗ್ರಾಮ್ ಅಸೋಸಿಯೇಟ್: ಎಂ.ಫಾರ್ಮಾ/ಎಂಎಸ್ಸಿ/ಮಾಸ್ಟರ್ಸ್​/ಫಾರ್ಮಕಾಲಜಿಯಲ್ಲಿ ಪಿಎಚ್​ಡಿ/ ಫಾರ್ಮಾಸ್ಯುಟಿಕಲ್ ಸೈನ್ಸಸ್/ಲೈಫ್​ ಸೈನ್ಸಸ್/ಕ್ರೀಡಾ ವಿಜ್ಞಾನದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು.

ಪ್ರೋಗ್ರಾಮ್​ ಅಸೋಸಿಯೇಟ್ ಲೀಗಲ್: ಕಾನೂನು ವಿಷಯದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು, ಜೊತೆಗೆ 5 ವರ್ಷ ಅನುಭವ ಇರಬೇಕು.

ಪ್ರೋಗ್ರಾಮ್​ ಅಸೋಸಿಯೇಟ್ ಎಜುಕೇಷನ್: ಸ್ಪೋರ್ಟ್ಸ್​ ಮ್ಯಾನೇಜ್​ಮೆಂಟ್​ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು, ಜೊತೆಗೆ 5 ವರ್ಷ ಅನುಭವ ಇರಬೇಕು.

ರಿಸರ್ಚ್​ ಅಸೋಸಿಯೇಟ್: M.Pharma/ M.Sc/ ಸ್ನಾತಕೋತ್ತರ/ ಪಿಎಚ್‌ಡಿ ಫಾರ್ಮಕಾಲಜಿ/ ಫಾರ್ಮಾಸ್ಯುಟಿಕಲ್ ಸೈನ್ಸಸ್/ ಲೈಫ್ ಸೈನ್ಸಸ್/ ಕ್ರೀಡಾ ವಿಜ್ಞಾನದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು.

ಅಡ್ಮಿನಿಸ್ಟ್ರೇಟಿವ್ ಅಸೋಸಿಯೇಟ್: ಯಾವುದೇ ವಿಷಯದಲ್ಲಿ ಪ್ರಥಮ ದರ್ಜೆಯಲ್ಲಿ ಪದವಿ ಪಡೆದಿರಬೇಕು. ಜೊತೆಗೆ 5 ವರ್ಷ ಅನುಭವ ಇರಬೇಕು. ಅಥವಾ ಕೇಂದ್ರ /ರಾಕ್ಯದ ಸರ್ಕಾರದ ಯಾವುದೇ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರಬೇಕು.

ಟೆಕ್ನಿಕಲ್ ಅಸೋಸಿಯೇಟ್ ಕೋಆರ್ಡಿನೇಷನ್: 3 ವರ್ಷಗಳ ಬಿ.ಫಾರ್ಮಾ ಮುಗಿಸಿ, 5 ವರ್ಷ ಕೆಲಸದ ಅನುಭವ ಹೊಂದಿರಬೇಕು. M.Pharma/ M.Sc/ ಸ್ನಾತಕೋತ್ತರ/ ಪಿಎಚ್‌ಡಿ ಫಾರ್ಮಕಾಲಜಿ/ ಫಾರ್ಮಾಸ್ಯುಟಿಕಲ್ ಸೈನ್ಸಸ್/ ಲೈಫ್ ಸೈನ್ಸಸ್/ ಕ್ರೀಡಾ ವಿಜ್ಞಾನದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು. ಜೊತೆಗೆ 1 ವರ್ಷ ಅನುಭವ ಇರಬೇಕು.

ಟೆಕ್ನಿಕಲ್ ಅಸೋಸಿಯೇಟ್ ಡೋಪ್​ ಟೆಸ್ಟಿಂಗ್: ಡಿಎಂಎಲ್​ಟಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣ, ಜೊತೆಗೆ 3 ವರ್ಷಗಳ ಅನುಭವ ಇರಬೇಕು. ಅಥವಾ ನರ್ಸಿಂಗ್​ನಲ್ಲಿ ಪದವಿ ಪಡೆದಿರಬೇಕು- 1 ವರ್ಷ ಅನುಭವ ಇರಬೇಕು. ಅಥವಾ
ವಿಜ್ಞಾನದಲ್ಲಿ ಪದವಿ ಪಡೆದಿರಬೇಕು- 1 ವರ್ಷ ಅನುಭವ ಇರಬೇಕು.

ವಯೋಮಿತಿ:

ಪ್ರೋಗ್ರಾಮ್​ ಅಸೋಸಿಯೇಟ್: 40 ವರ್ಷ
ರಿಸರ್ಚ್​ ಅಸೋಸಿಯೇಟ್: 40 ವರ್ಷ
ಅಡ್ಮಿನಿಸ್ಟ್ರೇಟಿವ್​ ಅಸೋಸಿಯೇಟ್: 65 ವರ್ಷ
ಟೆಕ್ನಿಕಲ್ ಅಸೋಸಿಯೇಟ್: 35 ವರ್ಷ

ಸಂಬಳ

ಪ್ರೋಗ್ರಾಮ್​ ಅಸೋಸಿಯೇಟ್: ಮಾಸಿಕ ₹ 60,000
ರಿಸರ್ಚ್​ ಅಸೋಸಿಯೇಟ್: ಮಾಸಿಕ ₹40,000
ಅಡ್ಮಿನಿಸ್ಟ್ರೇಟಿವ್ ಅಸೋಸಿಯೇಟ್: ಮಾಸಿಕ ₹40,000
ಟೆಕ್ನಿಕಲ್ ಅಸೋಸಿಯೇಟ್: ಮಾಸಿಕ ₹ 25,000

ಆಯ್ಕೆ ಪ್ರಕ್ರಿಯೆ:

ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ

 

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
Published by:Latha CG
First published: