ನಬಾರ್ಡ್ ಕನ್ಸಲ್ಟೆನ್ಸಿ ಸರ್ವಿಸ್ (NABARD Consultancy Services) ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ನಬಾರ್ಡ್ನ ಸ್ವಾಮ್ಯದ ಅಂಗಸಂಸ್ಥೆ ಮತ್ತು ಪ್ರಮುಖ ಸಲಹೆಗಾರ ನಬಾರ್ಡ್ ಕನ್ಸಲ್ಟೆನ್ಸಿ ಸರ್ವಿಸಸ್ (NABCONS Recruitment )ಇದಾಗಿದೆ. ಈ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಲು , ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಒಟ್ಟು 16 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರು, ಕಲ್ಕತ್ತಾ, ಚೆನ್ನೈನಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನ ಅಕ್ಟೋಬರ್ 21 ಆಗಿದೆ.
ಹುದ್ದೆಗಳ ವಿವರ (Job Details)
ಹುದ್ದೆ |
ಹುದ್ದೆಗಳ ಸಂಖ್ಯೆ |
ವಯೋಮಿತಿ |
ವೇತನ |
ಸಿನಿಯರ್ ಕನ್ಸಲ್ಟಂಟ್ |
3 |
45 |
1,25000 ರೂ |
ಕನ್ಸಲ್ಟಂಟ್- ಇಂಟರ್ನ್ಯಾಷನಲ್ ಬ್ಯುಸಿನೆಸ್ |
1 |
40 |
87,500 ರೂ |
ಅಸೋಸಿಯೆಟ್ಸ್ ಕನ್ಸಲ್ಟಂಟ್ -ಐಟಿ |
1 |
35 |
55,000 ರೂ |
ಅಸೋಸಿಯೆಟ್ಸ್ ಕನ್ಸಲ್ಟಂಟ್ |
11 |
35 |
55, 000 ರೂ |
ವಿದ್ಯಾರ್ಹತೆ
ಸಿನಿಯರ್ ಕನ್ಸಲ್ಟಂಟ್ |
ಎಂಬಿಎ , ಪದವಿ, ಸ್ನಾತಕೋತರ ಪದವಿ (ಕೃಷಿ/ ಸಂಬಂಧಿತ ವಲಯದಲ್ಲಿ ಕೃಷಿ/ ಆಹಾರ ತಂತ್ರಜ್ಞಾನ) |
ಕನ್ಸಲ್ಟಂಟ್- ಇಂಟರ್ನ್ಯಾಷನಲ್ ಬ್ಯುಸಿನೆಸ್ |
ಪದವಿ , ಸ್ನಾತಕೋತ್ತರ ಪದವಿ |
ಅಸೋಸಿಯೆಟ್ಸ್ ಕನ್ಸಲ್ಟಂಟ್ -ಐಟಿ |
ಬಿಟೆಕ್, ಎಂಟೆಕ್ |
ಅಸೋಸಿಯೆಟ್ಸ್ ಕನ್ಸಲ್ಟಂಟ್ |
ಬಿಟೆಕ್, ಎಂಟೆಕ್ |
ಆಯ್ಕೆ ಪ್ರಕ್ರಿಯೆ (Selection Process)
ಡ್ರಾಫ್ಟಿಂಗ್ ಸ್ಕಿಲ್ ಟೆಸ್ಟ್, ಕಂಪ್ಯೂಟರ್ ಸ್ಕಿಲ್ ಮತ್ತು ಸಂದರ್ಶನ
ಇದನ್ನು ಓದಿ: ಮಂಗಳೂರು ಮಹಾನಗರ ಪಾಲಿಕೆಯಲ್ಲಿ ನೇಮಕಾತಿ; ತಿಂಗಳಿಗೆ 28,950ರವರೆಗೆ ಸಂಬಳ
ಅರ್ಜಿ ಸಲ್ಲಿಕೆ (how to Apply)
-NABCONS ನೇಮಕಾತಿ ಅಧಿಸೂಚನೆ 2021 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ. ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುವುದನ್ನು ಖಚಿತಪಡಿಸಿಕೊಳ್ಳಿ
-NABCONS ಆಹ್ವಾನಿಸಿರುವ ಹುದ್ದೆಗಳ ಅರ್ಜಿ ಸಲ್ಲಿಕೆ ಲಿಂಕ್ ಮೇಲೆ ಕ್ಲಿಕ್ ಮಾಡಿ
-ಆನ್ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ಜೊತೆಗೆ ಇತ್ತೀಚಿನ ಫೋಟೋಗಳು ಹಾಗೂ ಅಗತ್ಯ ಪ್ರಮಾಣಪತ್ರಗಳು ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್ಲೋಡ್ ಮಾಡಿ
-NABCONS ನೇಮಕಾತಿ 2021 ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಬಳಿಕ ಸಿಗುವ ಅರ್ಜಿ ಸಂಖ್ಯೆಯನ್ನು ಪಡೆಯಿರಿ.
ಇದನ್ನು ಓದಿ: ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ ಕೆಲಸ ಮಾಡಬೇಕಾ; ಇಲ್ಲಿದೆ ಉತ್ತಮ ಅವಕಾಶ
ವಿಶೇಷ ಸೂಚನೆ (special Instruction)
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಭರಿಸಬೇಕಿಲ್ಲ
ಪ್ರಮುಖ ಲಿಂಕ್ (Important link)
ಹುದ್ದೆ ಕುರಿತು NABCONS ಹೊರಡಿಸಿರುವ ಅಧಿಸೂಚನೆ ವೀಕ್ಷಣೆಗೆ
ಇಲ್ಲಿ ಕ್ಲಿಕ್ ಮಾಡಿ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ