ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ ಅಂಡ್ ರೂರಲ್ ಡೆವಲಪ್ಮೆಂಟ್ ( National Bank for Agriculture and Rural Development- NABARD) 171 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಸಹಾಯಕ ವ್ಯವಸ್ಥಾಪಕ (Assistant Manager) ಹುದ್ದೆ ಭರ್ತಿಗೆ ನಬಾರ್ಡ್ ಮುಂದಾಗಿದ್ದು, ಈ ಸಂಬಂಧ ಅರ್ಜಿ ಆಹ್ವಾನಿಸಿದೆ. ಗ್ರಾಮೀಣಾಭಿವೃದ್ಧಿ ಬ್ಯಾಂಕಿಂಗ್ ಸೇವೆ, ಪ್ರೋಟೋಕಾಲ್ ಮತ್ತು ಭದ್ರತಾ ಸೇವೆ, ರಾಜಭಾಷಾ ಸೇವೆ ಸೇರಿದಂತೆ ಮೂರು ಇಲಾಖೆಗಳಿಗೆ ಈ ಹುದ್ದೆ ಭರ್ತಿ ನಡೆಯಲಿದೆ. ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಆಗಸ್ಟ್ 7 ಆಗಿದೆ.
ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.
ಬ್ಯಾಂಕ್ ಹೆಸರು: ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ (ನಬಾರ್ಡ್)
ಹುದ್ದೆಯ ಹೆಸರು: ಸಹಾಯಕ ವ್ಯವಸ್ಥಾಪಕ
ಹುದ್ದೆಗಳ ಸಂಖ್ಯೆ: 170
ಉದ್ಯೋಗ ಸ್ಥಳ: ನವದೆಹಲಿ
ವೇತನ: ನಬಾರ್ಡ್ ನಿಯಮಗಳ ಪ್ರಕಾರ
ಹುದ್ದೆ |
ಹುದ್ದೆ ಸಂಖ್ಯೆ |
ಸಹಾಯಕ ವ್ಯವಸ್ಥಾಪಕರು (ಗ್ರಾಮೀಣಾಭಿವೃದ್ಧಿ ಬ್ಯಾಂಕಿಂಗ್ ಸೇವೆ) |
161 |
ಸಹಾಯಕ ವ್ಯವಸ್ಥಾಪಕರು (ರಾಜಭಾಷಾ ಸೇವೆ) |
7 |
ಸಹಾಯಕ ವ್ಯವಸ್ಥಾಪಕರು (ಪ್ರೋಟೋಕಾಲ್ ಮತ್ತು ಭದ್ರತಾ ಸೇವೆ) |
2 |
ಶೈಕ್ಷಣಿಕ ಅರ್ಹತೆ : ನಬಾರ್ಡ್ ನೇಮಕಾತಿ ನಿಯಮಗಳ ಪ್ರಕಾರ
ವಯೋಮಿತಿ: ಗ್ರೇಡ್ ಎ ಗ್ರಾಮೀಣಾಭಿವೃದ್ಧಿ ಬ್ಯಾಂಕಿಂಗ್ ಸೇವೆ ಮತ್ತು ರಾಜಭಾಷಾ ಹುದ್ದೆಗಳಿಗೆ ವಯೋಮಿತಿ 21 ರಿಂದ 30 ವರ್ಷಗಳು. ಭದ್ರತಾ ಸೇವೆಗೆ 25 ರಿಂದ 40 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಶೈಕ್ಷಣಿಕ ಅರ್ಹತೆ : ನಬಾರ್ಡ್ ನೇಮಕಾತಿ ನಿಯಮಗಳ ಪ್ರಕಾರ
ವಯೋಮಿತಿ: ಗ್ರೇಡ್ ಎ ಗ್ರಾಮೀಣಾಭಿವೃದ್ಧಿ ಬ್ಯಾಂಕಿಂಗ್ ಸೇವೆ ಮತ್ತು ರಾಜಭಾಷಾ ಹುದ್ದೆಗಳಿಗೆ ವಯೋಮಿತಿ 21 ರಿಂದ 30 ವರ್ಷಗಳು. ಭದ್ರತಾ ಸೇವೆಗೆ 25 ರಿಂದ 40 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಇದನ್ನು ಓದಿ: ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ನಲ್ಲಿ 108 ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಆಹ್ವಾನ
ಅರ್ಜಿ ಸಲ್ಲಿಕೆ ಪ್ರಕ್ರಿಯೆ
-ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಂಡು ಮುಂದುವರೆಯಿರಿ.
- ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ.
-ಅಧಿಕೃತ ಅಧಿಸೂಚನೆಯಿಂದ ಅರ್ಜಿ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ.
-ಅನ್ವಯಿಸಿದರೆ, ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಿ.
ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಸಲ್ಲಿಸು ಬಟನ್ ಅನ್ನು ಕ್ಲಿಕ್ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ