• Home
  • »
  • News
  • »
  • jobs
  • »
  • MRPL Recruitment 2022: ಮಂಗಳೂರಲ್ಲಿ ಉದ್ಯೋಗಾವಕಾಶ, ತಿಂಗಳಿಗೆ 90 ಸಾವಿರ ರೂ. ವೇತನ

MRPL Recruitment 2022: ಮಂಗಳೂರಲ್ಲಿ ಉದ್ಯೋಗಾವಕಾಶ, ತಿಂಗಳಿಗೆ 90 ಸಾವಿರ ರೂ. ವೇತನ

ಕೂಡಲೇ ಅರ್ಜಿ ಸಲ್ಲಿಸಿ

ಕೂಡಲೇ ಅರ್ಜಿ ಸಲ್ಲಿಸಿ

ಸಂಬಂಧಪಟ್ಟ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸ್ವವಿವರದ ಜೊತೆಗೆ ಈ ದಾಖಲೆಗಳನ್ನೂ ಸಲ್ಲಿಸಬೇಕು. ಆಧಾರ್ ಕಾರ್ಡ್​​ನ ಪ್ರತಿ, ವಿದ್ಯಾರ್ಹತೆ ದಾಖಲೆಗಳ ಪ್ರತಿ ಹಾಗೂ ಭಾವಚಿತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು.

  • News18 Kannada
  • Last Updated :
  • Mangalore, India
  • Share this:

ಭಾರತದ ಅಗ್ರ ತೈಲ ಕಂಪನಿ ಒಎನ್‌ಜಿಸಿ ಅಂಗಸಂಸ್ಥೆಯಾದ ಮಂಗಳೂರು ರಿಫೈನರಿ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ನೇಮಕಾತಿಗೆ ಮುಂದಾಗಿದೆ. ಪ್ರತಿಷ್ಟಿತ ಸಂಸ್ಥೆಯಲ್ಲಿ ಉದ್ಯೋಗಾವಕಾಶಕ್ಕಾಗಿ ಎದುರು ನೋಡುತ್ತಿದ್ದ ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ ಇಲ್ಲಿದೆ. ಯಾವ ಹುದ್ದೆಯ ನೇಮಕಾತಿಗೆ ಆಹ್ವಾನಿಸಲಾಗಿದೆ. ವಿದ್ಯಾಭ್ಯಾಸ, ವಯೋಮಿತಿ, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹಾಗೂ ಅರ್ಜಿ ಸಲ್ಲಿಕೆಯ ಕೊನೆ ದಿನಾಂಕದ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.


ಸಂಬಂಧಪಟ್ಟ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸ್ವವಿವರದ ಜೊತೆಗೆ ಈ ದಾಖಲೆಗಳನ್ನೂ ಸಲ್ಲಿಸಬೇಕು.  ಆಧಾರ್ ಕಾರ್ಡ್ನ ಪ್ರತಿ, ವಿದ್ಯಾರ್ಹತೆ ದಾಖಲೆಗಳ ಪ್ರತಿ ಹಾಗೂ  ಭಾವಚಿತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು.

ಹುದ್ದೆಹುದ್ದೆಗಳ ಸಂಖ್ಯೆವೇತನಅರ್ಜಿ ಸಲ್ಲಿಕೆ ಕೊನೆ ದಿನಾಂಕ
ಹಿರಿಯ ವ್ಯವಸ್ಥಾಪಕರು (ಭದ್ರತೆ)0190,000 -2,40,00011-12-2022
ಹಿರಿಯ ವ್ಯವಸ್ಥಾಪಕರು (ವೈದ್ಯಕೀಯ ಸೇವೆಗಳು)0190,000 -2,40,00011-12-2022
ಸಹಾಯಕ ವ್ಯವಸ್ಥಾಪಕರು (ವೈದ್ಯಕೀಯ ಸೇವೆಗಳು)0170,000- 2,00,00011-12-2022

ಪ್ರಮುಖ ದಿನಾಂಕಗಳು


ಅರ್ಜಿ ಸಲ್ಲಿಸಲು ಆನ್‌ಲೈನ್ ಪೋರ್ಟಲ್ ತೆರೆಯುವ ದಿನಾಂಕ - 16-11-2022.


ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ - 11-12-2022.


ಸ್ಪೀಡ್ ಪೋಸ್ಟ್‌ / ಕೊರಿಯರ್ ಮೂಲಕ ಅರ್ಜಿಯ ಹಾರ್ಡ್ ಕಾಪಿಯನ್ನು ಸ್ವೀಕರಿಸಲು ಕೊನೆಯ ದಿನಾಂಕ - 15-12-2022.


ಇದನ್ನೂ ಓದಿ: MGIRED Recruitment 2022: ಬೆಂಗಳೂರಿನಲ್ಲಿ SSLC ಪಾಸಾದವರಿಗೆ ಉದ್ಯೋಗ, 35 ಸಾವಿರ ಸಂಬಳ


ಅರ್ಜಿ ಕಳುಹಿಸಲು ಪೋಸ್ಟಲ್​ ವಿಳಾಸ


ಮಂಗಳೂರು ರಿಫೈನರಿ ಎಂದ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್, ಕುತ್ತೆತ್ತೂರ ಅಂಚೆ, ಮಂಗಳೂರು -575030


ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್​ ಮಾಡಿ


ಅರ್ಜಿ ಸಲ್ಲಿಕೆ ಪ್ರಕ್ರಿಯೆ


1) ನೇಮಕಾತಿ ಅಧಿಸೂಚನೆ ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.


2) ರೆಸ್ಯೂಮ್​​ ಜೊತೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ.


3) ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಮೇಲಿನ ​ ವಿಳಾಸಕ್ಕೆ ನಿಗದಿತ ದಿನಾಂಕದ ಮುನ್ನ ಕಳುಹಿಸಬೇಕು.

Published by:Kavya V
First published: