MPMRCL Recruitment 2021: ತಿಂಗಳಿಗೆ ₹ 2,80,000 ಸಂಬಳ, ಮೆಟ್ರೋದಲ್ಲಿ ವಿವಿಧ ಹುದ್ದೆಗಳು ಖಾಲಿ

ನವೆಂಬರ್ 10 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​ಲೈನ್(Online)​ ಮೂಲಕ ಅರ್ಜಿ ಸಲ್ಲಿಸಬೇಕು. ಡಿಸೆಂಬರ್ 5 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಮೆಟ್ರೋ

ಮೆಟ್ರೋ

  • Share this:
MPMRCL Recruitment 2021: ಮಧ್ಯಪ್ರದೇಶ ಮೆಟ್ರೋ ರೈಲ್​ ಕಾರ್ಪೊರೇಷನ್ ಲಿಮಿಟೆಡ್(Madhya Pradesh Metro Rail Corporation Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 10 ಮ್ಯಾನೇಜರ್(Manager), ಅಸಿಸ್ಟೆಂಟ್ ಮ್ಯಾನೇಜರ್(Assistant Manager), ಡೆಪ್ಯುಟಿ ಜನರಲ್ ಮ್ಯಾನೇಜರ್(Deputy General Manager), ಜನರಲ್ ಮ್ಯಾನೇಜರ್(General Manager) ಹುದ್ದೆಗಳು ಖಾಲಿ ಇದ್ದು, ಪದವಿ, ಬಿಇ, ಬಿ.ಟೆಕ್, ಎಲ್​ಎಲ್​ಬಿ, ಸಿಎ, ICWA, ಎಂಬಿಎ, ಪಿಜಿಡಿಎಂ, ಎಂ.ಕಾಂ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ನವೆಂಬರ್ 10 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​ಲೈನ್(Online)​ ಮೂಲಕ ಅರ್ಜಿ ಸಲ್ಲಿಸಬೇಕು. ಡಿಸೆಂಬರ್ 5 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ mpmetrorail.com ಗೆ ಭೇಟಿ ನೀಡಬಹುದು.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಮಧ್ಯಪ್ರದೇಶ ಮೆಟ್ರೋ ರೈಲ್​ ಕಾರ್ಪೊರೇಷನ್ ಲಿಮಿಟೆಡ್
ಹುದ್ದೆಯ ಹೆಸರುಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್, ಡೆಪ್ಯುಟಿ ಜನರಲ್ ಮ್ಯಾನೇಜರ್, ಜನರಲ್ ಮ್ಯಾನೇಜರ್
ಒಟ್ಟು ಹುದ್ದೆಗಳು10
ವಿದ್ಯಾರ್ಹತೆಪದವಿ, ಬಿಇ, ಬಿ.ಟೆಕ್, ಎಲ್​ಎಲ್​ಬಿ, ಸಿಎ, ICWA, ಎಂಬಿಎ, ಪಿಜಿಡಿಎಂ, ಎಂ.ಕಾಂ
ಉದ್ಯೋಗದ ಸ್ಥಳಭೋಪಾಲ್
ವೇತನಮಾಸಿಕ ₹ 50,000-2,80,000
ಅರ್ಜಿ ಸಲ್ಲಿಕೆ ವಿಧಾನಆನ್​ಲೈನ್
ಅರ್ಜಿ ಸಲ್ಲಿಕೆ ಆರಂಭ ದಿನಾಂಕ10/11/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ05/12/2021ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 10/11/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05/12/2021

ಇದನ್ನೂ ಓದಿ: KMC Recruitment 2021: ತಿಂಗಳಿಗೆ ₹ 22,000 ಸಂಬಳ, PUC ಪಾಸಾದವರು ಈಗಲೇ ಅರ್ಜಿ ಸಲ್ಲಿಸಿ

ಹುದ್ದೆಯ ಮಾಹಿತಿ:

ಜನರಲ್ ಮ್ಯಾನೇಜರ್- 1
ಡಿಜಿಎಂ ಫೈನಾನ್ಸ್​-1
ಡಿಜಿಎಂ ಪ್ರೊಕ್ಯೂರ್​​ಮೆಂಟ್​- 1
ಮ್ಯಾನೇಜರ್ ಸೆಕ್ಯುರಿಟಿ-1
ಮ್ಯಾನೇಜರ್ ಲೀಗಲ್-1
ಮ್ಯಾನೇಜರ್ ಫೈನಾನ್ಸ್​ & ಅಕೌಂಟ್ಸ್​-2
ಎಎಂ ಫೈನಾನ್ಸ್​-1
ಅಸಿಸ್ಟೆಂಟ್ ಮ್ಯಾನೇಜರ್ -1
ಎಎಂ-1
ಒಟ್ಟು 10 ಹುದ್ದೆಗಳು

ವಿದ್ಯಾರ್ಹತೆ:

ಜನರಲ್ ಮ್ಯಾನೇಜರ್- ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​​ನಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು. 5 ವರ್ಷ ಅನುಭವ
ಡಿಜಿಎಂ ಫೈನಾನ್ಸ್​-ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​​ನಿಂದ CA/ICWA ಪೂರ್ಣಗೊಳಿಸಿರಬೇಕು. 7 ವರ್ಷ ಅನುಭವ
ಡಿಜಿಎಂ ಪ್ರೊಕ್ಯೂರ್​​ಮೆಂಟ್​- ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​​ನಿಂದ ಎಂಜಿನಿಯರಿಂಗ್ ಪೂರ್ಣಗೊಳಿಸಿರಬೇಕು. 7 ವರ್ಷ ಅನುಭವ
ಮ್ಯಾನೇಜರ್ ಸೆಕ್ಯುರಿಟಿ- ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​​ನಿಂದ ಪದವಿ ಪಡೆದಿರಬೇಕು. 5 ವರ್ಷ ಅನುಭವ
ಮ್ಯಾನೇಜರ್ ಲೀಗಲ್- ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​​ನಿಂದ ಎಲ್​ಎಲ್​ಬಿ(ಕಾನೂನು ಪದವಿ) ಪಡೆದಿರಬೇಕು. 5 ವರ್ಷ ಅನುಭವ
ಮ್ಯಾನೇಜರ್ ಫೈನಾನ್ಸ್​ & ಅಕೌಂಟ್ಸ್​-ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​​ನಿಂದ ಪದವಿ ಪಡೆದಿರಬೇಕು. 5 ವರ್ಷ ಅನುಭವ
ಎಎಂ ಫೈನಾನ್ಸ್​-ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​​ನಿಂದ ಎಂಕಾಂ, ಎಂಬಿಎ ಪೂರ್ಣಗೊಳಿಸಿರಬೇಕು. 5 ವರ್ಷ ಅನುಭವ
ಅಸಿಸ್ಟೆಂಟ್ ಮ್ಯಾನೇಜರ್ -ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​​ನಿಂದ ಪದವಿ ಪಡೆದಿರಬೇಕು. 1 ವರ್ಷ ಅನುಭವ
ಎಎಂ-ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​​ನಿಂದ ಎಂಬಿಎ/ಪಿಜಿಡಿಎಂ ಪೂರ್ಣಗೊಳಿಸಿರಬೇಕು.

ಇದನ್ನೂ ಓದಿ: Karnataka High Court Jobs: ಕರ್ನಾಟಕ ಹೈಕೋರ್ಟ್​ನಲ್ಲಿ ಖಾಲಿ ಇರುವ ಟೈಪಿಸ್ಟ್​ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ

ವಯೋಮಿತಿ:

ಜನರಲ್ ಮ್ಯಾನೇಜರ್- 60 ವರ್ಷ
ಡಿಜಿಎಂ, ಮ್ಯಾನೇಜರ್- 50 ವರ್ಷ
ಅಸಿಸ್ಟೆಂಟ್ ಮ್ಯಾನೇಜರ್-40 ವರ್ಷ

ಉದ್ಯೋಗದ ಸ್ಥಳ:

ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್, ಡೆಪ್ಯುಟಿ ಜನರಲ್ ಮ್ಯಾನೇಜರ್, ಜನರಲ್ ಮ್ಯಾನೇಜರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಧ್ಯಪ್ರದೇಶದ ಭೋಪಾಲ್​ನಲ್ಲಿ ಉದ್ಯೋಗ ನೀಡಲಾಗುತ್ತದೆ.

ವೇತನ:

ಜನರಲ್​ ಮ್ಯಾನೇಜರ್- ಮಾಸಿಕ ₹ 1,20,000-2,80,000
ಡಿಜಿಎಂ-ಮಾಸಿಕ ₹ 70,000-2,00,000
ಮ್ಯಾನೇಜರ್- ಮಾಸಿಕ ₹ 60,000-1,80,000
ಅಸಿಸ್ಟೆಂಟ್ ಮ್ಯಾನೇಜರ್ (AM)- ಮಾಸಿಕ ₹ 50,000-1,60,000ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಆಯ್ಕೆ ಪ್ರಕ್ರಿಯೆ:

ಶಾರ್ಟ್​ಲಿಸ್ಟಿಂಗ್
ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ
Published by:Latha CG
First published: