ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿನ ಪ್ರಖ್ಯಾತ ಮೋತಿಲಾಲ್ ನೆಹರು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (Motilal Nehru National Institute of Technology - MNNIT) ವಿವಿಧ ಹುದ್ದೆಗಳಿಗೆ ನೇಮಕಾತಿ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 145 ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಕಲಾ, ವಿಜ್ಞಾನ ಮತ್ತು ವಾಣಿಜ್ಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಮೇ 30 ಕಡೆಯ ದಿನಾಂಕವಾಗಿದೆ. ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬಹುದಾಗಿದೆ.
ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.
ಸಂಸ್ಥೆ: ಮೋತಿಲಾಲ್ ನೆಹರು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ
ಹುದ್ದೆ: ಸಹಾಯಕ ಪ್ರಾಧ್ಯಾಪಕ
ಉದ್ಯೋಗ ಸ್ಥಳ: ಪ್ರಯಾಗ್ರಾಜ್ (ಉತ್ತರ ಪ್ರದೇಶ)
ಖಾಲಿ ಹುದ್ದೆಗಳು: 145
ಹುದ್ದೆ | ಹುದ್ದೆ ಸಂಖ್ಯೆ | ವೇತನ |
ಸಹಾಯಕ ಪ್ರಾಧ್ಯಪಕರು (ಗ್ರೇಡ್ 2) | 30 | 6000 ರೂ ಮಾಸಿಕ |
ಸಹಾಯಕ ಪ್ರಾಧ್ಯಾಪಕರು (ಗ್ರೇಡ್ 2) | 47 | 7000 ರೂ ಮಾಸಿಕ |
ಸಹಾಯಕ ಪ್ರಾಧ್ಯಾಪಕರು (ಗ್ರೇಡ್ 1) | 68 | 8000 ರೂ ಮಾಸಿಕ |
ವಿದ್ಯಾರ್ಹತೆ: ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ ಎಂಎ, ಎಂಸಿಎ, ಎಂಬಿಎ, ಎಂಕಾಂ, ಎಂಎಸ್ಸಿ ಸ್ನಾತಕೋತ್ತರ ಪದವಿ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಕೆ ವಿಧಾನ
ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನು ಓದಿ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಟೆಕ್ನಿಕಲ್ ಪ್ರೋಗ್ರಾಮರ್ ಹುದ್ದೆಗೆ ಅರ್ಜಿ ಆಹ್ವಾನ
ವಯೋಮಿತಿ
ಅಧಿಸೂಚನೆ ಅನ್ವಯ ಪ್ರೆಷರ್ಗೆ ಮಾನ್ಯತೆ ಜೊತೆಗೆ ಗರಿಷ್ಠ ವಯೋಮಿತಿ 60 ವರ್ಷ ಮೀರಿರಬಾರದು.
ಅರ್ಜಿ ಶುಲ್ಕ
ಪ. ಜಾ, ಪ. ಪಂ, ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇಲ್ಲ
ಯುಆರ, ಒಬಿಸಿ ಮತ್ತು ಇಡಬ್ಯ್ಲೂ ಎಸ್ ಅಭ್ಯರ್ಥಿಗಳಿಗೆ 1000 ರೂ.
ಆಯ್ಕೆ ವಿಧಾನ
ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಪ್ರಮುಖ ಸೂಚನೆ
ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ ಏಪ್ರಿಲ್ 24, 2022
ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಮೇ 30, 2022
ಇದನ್ನು ಓದಿ: M.A, M.Ed ಆದವರಿಗೆ ಉದ್ಯೋಗ ಅವಕಾಶ; ಮೈಸೂರಿನಲ್ಲಿದೆ ಕೆಲಸ
ಪ್ರಮುಖ ಲಿಂಕ್ಗಳು
ಅಧಿಕೃತ ಅರ್ಜಿ ಅಧಿಸೂಚನೆಗೆ ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಕೆಗೆ ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್: http://www.mnnit.ac.in
ಅರ್ಜಿ ಸಲ್ಲಿಕೆ ವಿಧಾನ
ಅರ್ಜಿ ಸಲ್ಲಿಕೆ ಹೇಗೆ
-ಅಧಿಕೃತ ಸೈಟ್ http://www.mnnit.ac.in ಗೆ ಭೇಟಿ ನೀಡಿ
-ಮುಖಪುಟದಲ್ಲಿ, 'ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಯ ಜಾಹೀರಾತನ ಮೇಲೆ ಕ್ಲಿಕ್ ಮಾಡಿ.
-ಈಗ, 'ಆನ್‌ಲೈನ್‌ನಲ್ಲಿ ಅನ್ವಯಿಸು' ಕ್ಲಿಕ್ ಮಾಡಿ.
-ನಿಮ್ಮ ಮೂಲ ವಿವರಗಳನ್ನು ನಮೂದಿಸಿ ಮತ್ತು ಫೋಟೋಗಳು ಮತ್ತು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
-ಶುಲ್ಕವನ್ನು ಪಾವತಿಸಿ ಅಂದರೆ, ರೂ 1000ರೂ ಕಟ್ಟಬೇಕು.
-ಎಲ್ಲಾ ಅಪ್ಲಿಕೇಶನ್ ಪ್ರಕ್ರಿಯೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ.
-ನಂತರ, 'ಸಲ್ಲಿಸು' ಕ್ಲಿಕ್ ಮಾಡಿ ನಿಮ್ಮ ಫಾರ್ಮ್ ತುಂಬಿದೆ.
-ಡೌನ್‌ಲೋಡ್ ಮಾಡಿ ಮತ್ತು ಉಳಿಸಿ.
-ಮುಂದಿನ ಸಂಪರ್ಕದ ಉದ್ದೇಶದಿಂದ ಇದರ ಪ್ರಿಂಟ್ ಔಟ್ ಪಡೆಯಿರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ