Ministry of Culture Recruitment 2021: ಸಂಸ್ಕೃತಿ ಸಚಿವಾಲಯದಲ್ಲಿ ಉಪಕುಲಪತಿ ಹುದ್ದೆ ಖಾಲಿ; ಮಾಸಿಕ ವೇತನ ₹ 2,10,000

ನವೆಂಬರ್ 8ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆಫ್​ಲೈನ್​(ಪೋಸ್ಟಲ್​) ಮೂಲಕ ಅರ್ಜಿ ಸಲ್ಲಿಸಬೇಕು. ಜನವರಿ 4, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಸಂಸ್ಕೃತಿ ಸಚಿವಾಲಯ

ಸಂಸ್ಕೃತಿ ಸಚಿವಾಲಯ

  • Share this:
Ministry of Culture Recruitment 2021: ಸಂಸ್ಕೃತಿ ಸಚಿವಾಲಯವು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. 1 ಉಪಕುಲಪತಿ ಹುದ್ದೆ ಖಾಲಿ ಇದ್ದು, ಪಿಎಚ್​.ಡಿ ಪೂರ್ಣಗೊಳಿಸಿರುವವರು ಅರ್ಜಿ ಸಲ್ಲಿಸಬಹುದಾಗಿದೆ. ನವೆಂಬರ್ 8ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆಫ್​ಲೈನ್​(ಪೋಸ್ಟಲ್​) ಮೂಲಕ ಅರ್ಜಿ ಸಲ್ಲಿಸಬೇಕು. ಜನವರಿ 4, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ www.indiaculture.nic.in ಗೆ ಭೇಟಿ ನೀಡಬಹುದಾಗಿದೆ.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಸಂಸ್ಕೃತಿ ಸಚಿವಾಲಯ
ಹುದ್ದೆಯ ಹೆಸರುಉಪಕುಲಪತಿ
ಒಟ್ಟು ಹುದ್ದೆಗಳು01
ವಿದ್ಯಾರ್ಹತೆಪಿಎಚ್.​ಡಿ
ಉದ್ಯೋಗದ ಸ್ಥಳನವದೆಹಲಿ
ವೇತನಮಾಸಿಕ ₹ 2,10,000
ಅರ್ಜಿ ಸಲ್ಲಿಸುವ ವಿಧಾನಆಫ್​ಲೈನ್​
ಅರ್ಜಿ ಸಲ್ಲಿಕೆ ಆರಂಭ ದಿನಾಂಕ08/11/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ04/01/2022ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆ ಆರಂಭ ದಿನಾಂಕ:08/11/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 04/01/2022ಇದನ್ನೂ ಓದಿ:LIC Recruitment 2021: ತಿಂಗಳಿಗೆ ₹ 25,000 ಸಂಬಳ, ಪದವಿ ಪಾಸಾದವರಿಗೆ LICಯಲ್ಲಿ Part-Time ಉದ್ಯೋಗ

ವಿದ್ಯಾರ್ಹತೆ:

ಯುಜಿಸಿಯಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪಿಎಚ್​.ಡಿ ಪಡೆದಿರಬೇಕು.

ಅರ್ಹತೆ:

ಕೇಂದ್ರ ಸರ್ಕಾರ/ ರಾಜ್ಯ ಸರ್ಕಾರ/ಕೇಂದ್ರಾಡಳಿತ ಪ್ರದೇಶಗಳು/ ಸಾರ್ವಜನಿಕ ವಲಯದ ಕಚೇರಿಗಳಲ್ಲಿ ಅಧಿಕಾರಿಗಳಾಗಿರಬೇಕು. ಅಥವಾ ಮಾನ್ಯತೆ ಪಡೆದ ಸಂಶೋಧನಾ ಸಂಸ್ಥೆಗಳು/ ವಿಶ್ವವಿದ್ಯಾಲಯ/ ಸರ್ಕಾರಿ ಅಥವಾ ಸ್ವಾಯತ್ತ ಸಂಸ್ಥೆಗಳ ಅಡಿಯಲ್ಲಿ ಪ್ರೊಫೆಸರ್​/ ಅಸೋಸಿಯೇಟ್​ ಪ್ರೊಫೆಸರ್ ಆಗಿರಬೇಕು.

ವಯೋಮಿತಿ:

ಉಪಕುಲಪತಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 56 ವರ್ಷ ಮೀರಿರಬಾರದು.

ಉದ್ಯೋಗದ ಸ್ಥಳ:

ಉಪಕುಲಪತಿ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗೆ ನವದೆಹಲಿಯಲ್ಲಿ ಪೋಸ್ಟಿಂಗ್ ನೀಡಲಾಗುವುದು.

ವೇತನ:

ಉಪಕುಲಪತಿ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗೆ ತಿಂಗಳಿಗೆ ₹ 2,10,000 ವೇತನ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:

ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ

ಇದನ್ನೂ ಓದಿ: BEL Recruitment 2021: ತಿಂಗಳಿಗೆ ₹ 1,60,000 ಸಂಬಳ; BE, B Tech ಅಭ್ಯರ್ಥಿಗಳಿಗೆ BELನಲ್ಲಿ ಉದ್ಯೋಗ

ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಸಂಸ್ಕೃತಿ ಸಚಿವಾಲಯ, ನವದೆಹಲಿ- ಇವರಿಗೆ ಪೋಸ್ಟ್​ ಮುಖಾಂತರ ಕಳುಹಿಸಬೇಕು.


ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

Published by:Latha CG
First published: