ಎಷ್ಟೋ ಜನ ಒಳ್ಳೆ ಹುದ್ದೆಗಾಗಿ (Post) ಕಾದಿರುತ್ತಾರೆ ಅದಕ್ಕಿಂತಲೂ ಹೆಚ್ಚಾಗಿ ಒಳ್ಳೆ ಸಂಬಳ ಸಿಗಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತೆ. ಅಂತಹ ಆಸೆ ಇರುವವರು ಇಲ್ಲೊಮ್ಮೆ ಗಮನಿಸಲೇ ಬೇಕು. ಬೆಂಗಳೂರು ಮೂಲದ ಸ್ಟಾರ್ಟಪ್‌ನೊಂದು ಮೀಮ್ ತಜ್ಞರನ್ನು ಹುಡುಕುತ್ತಿದೆ ಮತ್ತು ತಿಂಗಳಿಗೆ 1 ಲಕ್ಷ ಸಂಬಳ (1 Lack Salary) ನೀಡುವುದಾಗಿ ತಿಳಿಸಿದೆ. ನೋಡಿ ನಿಮ್ಮಲ್ಲಿರುವ ಕ್ರಿಯೇಟಿವಿಟಿಗೆ ಎಷ್ಟು ಬೆಲೆ ಇದೆ ಅಂತ. ಸರಿಯಾದ ಅಭ್ಯರ್ಥಿಯನ್ನು ಸಜೆಸ್ಟ್ (Suggest) ಮಾಡುವವರಿಗೆ ಉಚಿತ ಐಪ್ಯಾಡ್ ಅನ್ನು ಸಹ ನೀಡುತ್ತಿದೆ.
ಬೆಂಗಳೂರು ಮೂಲದ ಸ್ಟಾರ್ಟ್‌ಅಪ್‌ನೊಂದು 'ಚೀಫ್ ಮೆಮ್ ಆಫೀಸರ್' ಹುದ್ದೆಗೆ ನೇಮಕಾತಿ ಆರಂಭಿಸಿದೆ. ಆಕರ್ಷಕ ಸ್ಯಾಲರಿ ಉಳ್ಳ ಹುದ್ದೆಗೆ ನಿಮ್ಮನ್ನು ಆಯ್ಕೆ ಮಾಡಿಕೊಳ್ಳುವ ಸಲುವಾಗಿ ನೇಮಕಾತಿ ಆರಂಭಿಸಿದೆ. ಆಸಕ್ತರು ಈ ಕೂಡಲೇ ಅಪ್ಲೈ ಮಾಡಬಹುದು. ಇಲ್ಲಿ ನಾವು ನಿಮಗೆ ಬೇಕಾದ ಎಲ್ಲಾ ವಿವರಗಳನ್ನೂ ಸಹ ನೀಡಿದ್ದೇವೆ. ಕೇವಲ ಬೆರಳೆಣಿಕೆಯಷ್ಟು ಹುದ್ದೆಗಳು ಮಾತ್ರ ಖಾಲಿ ಇವೆ. ಇದರ ಜೊತೆಗೆ ನಿಮಗೆ ಆಕರ್ಷಕ ಸ್ಯಾಲರಿ ಕೂಡಾ ಲಭ್ಯವಿದೆ. ಆದಷ್ಟು ಬೇಗ ಅಪ್ಲೈ ಮಾಡಿ.
ಇದನ್ನೂ ಓದಿ: REC Recruitment: 125 ಕೇಂದ್ರ ಸರ್ಕಾರಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ₹2 ಲಕ್ಷದವರೆಗೆ ಸಂಬಳ
ಸ್ಟಾಕ್‌ಗ್ರೋ ಹೆಸರಿನ ಸ್ಟಾರ್ಟಪ್ ಲಿಂಕ್ಡ್‌ಇನ್‌ನಲ್ಲಿ ಖಾಲಿ ಹುದ್ದೆಯನ್ನು ಪೋಸ್ಟ್ ಮಾಡಿದೆ. ಇದು ಸಾಕಷ್ಟು ಜನರ ಗಮನ ಸೆಳೆದಿದೆ. ಇಷ್ಟು ಮಾತ್ರವಲ್ಲದೆ, ಸರಿಯಾದ ಅಭ್ಯರ್ಥಿಯನ್ನು ಸೂಚಿಸುವವರಿಗೆ ಬಹುಮಾನವನ್ನು ನೀಡಲಾಗುತ್ತದೆ ಎಂದು ಹೇಳಲಾಗಿದೆ. ಆದರೆ ಈ ಸುದ್ದಿ ತುಂಬಾ ವೈರಲ್ ಕೂಡಾ ಆಗುತ್ತಿದೆ.
ತಿಂಗಳಿಗೆ ಒಂದು ಲಕ್ಷ ಸ್ಯಾಲರಿ
ಟೋನ್ ಮತ್ತು ಮೆಸೇಜಿಂಗ್ ಶೈಲಿಯ meme ರಚಿಸಲು ತಿಳಿದಿರುವ ಅಭ್ಯರ್ಥಿಗಳು ಇದಕ್ಕೆ ಅಪ್ಲೈ ಮಾಡಬಹುದು. ತಿಂಗಳಿಗೆ ಒಂದು ಲಕ್ಷ ಸ್ಯಾಲರಿ ನಿಮ್ಮದಾಗುತ್ತದೆ. ಇಲ್ಲಿ ಮುಖ್ಯವಾಗಿ ನಿಮ್ಮ ಕೌಶಲ್ಯಕ್ಕೆ ಪ್ರಾಧಾನ್ಯತೆ ಇದೆ. ನಮಗೆ ನಗುವುದು ಮಾತ್ರವಲ್ಲದೆ ನಮ್ಮ ಬ್ರ್ಯಾಂಡ್‌ನ ಧ್ವನಿ ಮತ್ತು ಸಂದೇಶಕ್ಕೆ ಹೊಂದಾಣಿಕೆಯಾಗುವ ಅಭ್ಯರ್ಥಿಗಳು ಬೇಕು ಎಂದು ಕಂಪನಿ ತಿಳಿಸಿದೆ. ಇದರ ಜೊತೆಗೆ, ಫಿನ್‌ಟೆಕ್ ಸ್ಟಾರ್ಟ್ಅಪ್, ಮತ್ತೊಂದು ಪೋಸ್ಟ್‌ನಲ್ಲಿ, ಸರಿಯಾದ ಅಭ್ಯರ್ಥಿಯನ್ನು ಉಲ್ಲೇಖಿಸುವ ವ್ಯಕ್ತಿಯು ಉಚಿತ ಐಪ್ಯಾಡ್ ನೀಡಲಾಗುತ್ತದೆ ಎಂದು ಹೇಳಿರುವುದು ಈ ಸುದ್ದಿ ಎಲ್ಲೆಡೆ ಹರಡಲು ಕಾರಣವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ