Job Alert: ಮೆಕ್ಯಾನಿಕ್​ ಕೆಲಸ ಗೊತ್ತಿದ್ರೆ, ಕ್ರೇಡ್​ಆರ್​ ನೀಡುತ್ತಿದೆ ಅವಕಾಶ; ಮಿಸ್​ ಮಾಡಬೇಡಿ

ಮೆಕ್ಯಾನಿಕ್​ ಕೆಲಸ ಗೊತ್ತಿದ್ದು, ಈ ಬಗ್ಗೆ ಕೊಂಚ ಅನುಭವ ಇದ್ರೆ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಬೆಂಗಳೂರು ಸೇರಿದಂತೆ ದೇಶದ ನಾನಾ ನಗರಗಳಲ್ಲಿ ಈ ಸಂಸ್ಥೆಯಲ್ಲಿ ಹುದ್ದೆ ಖಾಲಿ ಇದೆ.

ಬೇಗ ಅರ್ಜಿ ಸಲ್ಲಿಸಿ

ಬೇಗ ಅರ್ಜಿ ಸಲ್ಲಿಸಿ

  • Share this:
    ಎಸ್​ಎಸ್​ಎಲ್​ಸಿ ಪಾಸಾಗಿದ್ದು, ಒಂದು ಒಳ್ಳೆ ಉದ್ಯೋಗದ ಕನಸನ್ನು ನೀವು ಕಾಣುತ್ತಿದ್ರೆ, ಕ್ರೇಡ್​ಆರ್ (CredR)​ ಸಂಸ್ಥೆ ನೀಡುತ್ತಿದೆ. ಒಂದೊಳ್ಳೆ ಅವಕಾಶ. ಈಗಾಗಲೇ ಬೈಕ್​ಗಳ ವಾಹಿವಾಟಿನಲ್ಲಿ ಬೆಂಗಳೂರು ಸೇರಿದಂತೆ ದೇಶದ ಹಲವು ನಗರಗಳಲ್ಲಿ ಹೆಸರು ಮಾಡಿರುವ ಈ ಕ್ರೇಡ್​ಆರ್​ ಸಂಸ್ಥೆ ಇದೀಗ ಉದ್ಯೋಗ ನಿರೀಕ್ಷಕರಿಗೂ ಅವಕಾಶ ನೀಡಿದೆ. ಸಂಸ್ಥೆಯಲ್ಲಿ ದ್ವಿಚಕ್ರ ವಾಹನ ಯಂತ್ರ ರಿಪೇರಿ ಮಾಡುವ ಮೆಕ್ಯಾನಿಕ್​ ನೇಮಕಕ್ಕೆ ಸಂಸ್ಥೆ ಅರ್ಜಿ ಆಹ್ವಾನಿಸಿದೆ.

    ಮೆಕ್ಯಾನಿಕ್​ ಕೆಲಸ ಗೊತ್ತಿದ್ದು, ಈ ಬಗ್ಗೆ ಕೊಂಚ ಅನುಭವ ಇದ್ರೆ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಬೆಂಗಳೂರು ಸೇರಿದಂತೆ ದೇಶದ ನಾನಾ ನಗರಗಳಲ್ಲಿ ಈ ಸಂಸ್ಥೆಯಲ್ಲಿ ಹುದ್ದೆ ಖಾಲಿ ಇದೆ.



























    ಹುದ್ದೆ ಮಾಹಿತಿಹುದ್ದೆ ವಿವರ
    ಸಂಸ್ಥೆCredR
    ಹುದ್ದೆಮೆಕಾನಿಕ್​​
    ಒಟ್ಟು ಹುದ್ದೆನಿಗದಿಪಡಿಸಿಲ್ಲ
    ಕಾರ್ಯ ನಿರ್ವಹಣೆ ಸ್ಥಳಬೆಂಗಳೂರು, ಪುಣೆ, ದೆಹಲಿ
    ವೇತನಕಂಪನಿಯ ನಿಯಮ ಅನುಸಾರ

    ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಯು 10ನೇ ತರಗತಿ ಅಥವಾ ಅದಕ್ಕೆ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
    ಟ್ರೇಡ್​ ಸ್ಕೂಲ್​ ಅಥವಾ ಮೆಕಾನಿಕ್​ ಶಿಕ್ಷಣ ಕುರಿತ ಔಪಚಾರಿಕ ಶಿಕ್ಷಣ ಪಡೆದ ಸಂಸ್ಥೆಯ ಸರ್ಟಿಫಿಕೆಟ್​ ಇದ್ದವರಿಗೆ ಆದ್ಯತೆ.

    ಇದನ್ನು ಓದಿ: ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್​ನಲ್ಲಿದೆ ಉದ್ಯೋಗ; ಇಲ್ಲಿದೆ ಹುದ್ದೆ ವಿವರ

    ಹುದ್ದೆಯ ಜವಾಬ್ದಾರಿ (Jobs Roles And Responsibility)
    -ಅಭ್ಯರ್ಥಿಗಳು ಮೋಟರ್​ಸೈಕಲ್​ ಸರ್ವೀಸ್​ ಟೆಕ್ನಿಕ್​ ಬಗ್ಗೆ ತಿಳಿದಿರಬೇಕು.
    -ಬೈಕ್​ಗಳ ಇಂಜಿನ್​ ಮತ್ತು ಟ್ರಾನ್ಸ್​ಮಿಷನ್​ ಸಿಸ್ಟಮ್​ಗಳನ್ನು ರಿಪೇರಿ ಮಾಡುವ ಸಾಮರ್ಥ್ಯವನ್ನು ಹೊಂದಿರಬೇಕು.
    -ಬೈಕ್​ ಕಾರ್ಯಾಚರಣೆಯ ಬಗ್ಗೆ ಅಲ್ಪ ಅರಿವಿರಬೇಕು.
    -ಎರಡು ವರ್ಷಗಳ ಕಾಲ ಮೆಕಾನಿಕ್​ ಆಗಿ ಸೇವೆ ಸಲ್ಲಿಸಿದ ಅನುಭವ ಇರಬೇಕು
    -ವಾಹನದ ಸಮಸ್ಯೆಗಳ ಶೀಘ್ರದಲ್ಲೇ ಪರಿಹರಿಸುವ ಸಾಮರ್ಥ್ಯ ಇರಬೇಕು
    ಪ್ರತಿನಿತ್ಯ ಕ್ರೇಡ್​ಆರ್​ ಸರ್ವಿಸ್​ ಹೆಡ್​ಗೆ ಪ್ರತಿನಿತ್ಯದ ಸರ್ವಿಸ್​ ವರದಿಯನ್ನು ನೀಡಬೇಕು.
    -ಗ್ರಾಹಕರೊಂದಿಗೆ ಉತ್ತಮ ಸಂವಹನ ಕೌಶಲ್ಯವನ್ನು ಹೊಂದಿರಬೇಕು.

    ಇದನ್ನು ಓದಿ: ತುಮಕೂರು, ಕೋಲಾರ, ಚಿತ್ರದುರ್ಗದಲ್ಲಿ ಪ್ರಾಂಶುಪಾಲರ ಹುದ್ದೆಗೆ ಅರ್ಜಿ ಆಹ್ವಾನ

    ಅರ್ಜಿ ಸಲ್ಲಿಕೆ ವಿಧಾನ: ಇಮೇಲ್​ ಮುಖಾಂತರ
    ಇಮೇಲ್​ ವಿಳಾಸ: hr@credr.com
    ಅಧಿಕೃತ ವೆಬ್​ಸೈಟ್​: credr.com

    ವಿಶೇಷ ಸೂಚನೆ (Special Instruction)
    ಮೇಲ್ಕಂಡ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿಯಲ್ಲಿ ಹುದ್ದೆ ಹೆಸರು- ಸ್ಥಳದ ಹೆಸರಿನ ಬಗ್ಗೆ ಸ್ಪಷ್ಟವಾಗಿ ನಮೂದಿಸಿ, ನವೀಕರಿಸಿ ರೆಸ್ಯೂಮ್​ ಅನ್ನು ಮೇಲಿನ ಇಮೇಲ್​ ವಿಳಾಸಕ್ಕೆ ಸಲ್ಲಿಸಬೇಕು.

    ಅರ್ಜಿ ಸಲ್ಲಿಕೆ ವಿಧಾನ (How To Apply)

    ಕಂಪನಿಯ ನೇಮಕಾತಿ ಅಧಿಸೂಚನೆ ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.

    ರೆಸ್ಯೂಮೆ ಜೊತೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ.

    ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಮೇಲಿನ ಇಮೇಲ್​ ವಿಳಾಸಕ್ಕೆ ನಿಗದಿತ ದಿನಾಂಕದ ಮುನ್ನ ಕಳುಹಿಸಬೇಕು
    Published by:Seema R
    First published: