Mangaluru Customs Recruitment 2021: ಮಂಗಳೂರು ಕಸ್ಟಮ್ಸ್​ ಕಚೇರಿಯಲ್ಲಿ ‘ಸಿ‘ ಗ್ರೂಪ್ ಹುದ್ದೆಗಳಿಗೆ ಅರ್ಜಿ ಆಹ್ವಾನ, 10th ಪಾಸಾಗಿದ್ದರೆ ಸಾಕು..!

‘ಸಿ‘ ಗ್ರೂಪ್(C Group)​ನ 19 ಹುದ್ದೆಗಳು ಖಾಲಿ ಇದ್ದು, ಜಾಹೀರಾತು ಪ್ರಕಟಗೊಂಡ 30 ದಿನಗಳೊಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 1, 2021.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Mangaluru Customs Recruitment 2021: ಮಂಗಳೂರು ಕಸ್ಟಮ್ಸ್​ ಕಚೇರಿ(Mangaluru Customs Office)ಯು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತರು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಕಸ್ಟಮ್ಸ್​ ಆಯುಕ್ತರ ಕಚೇರಿ(Customs Commissioner Office), ಹೊಸ ಕಸ್ಟಮ್ಸ್​ ಹೌಸ್(New Customs house), ಪಣಂಬೂರ್(Panambur), ಮಂಗಳೂರು(Mangaluru)-575010- ಇವರು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದಾರೆ. ‘ಸಿ‘ ಗ್ರೂಪ್(C Group)​ನ 19 ಹುದ್ದೆಗಳು ಖಾಲಿ ಇದ್ದು, ಜಾಹೀರಾತು ಪ್ರಕಟಗೊಂಡ 30 ದಿನಗಳೊಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 1, 2021.ಹುದ್ದೆಯ ಹೆಸರು(Post Name) ಹುದ್ದೆಯ ಸಂಖ್ಯೆ(No of Vacancies)
ಸೀಮ್ಯಾನ್(Seaman) 07
ಗ್ರೀಸರ್(Greaser) 03
ಟ್ರೇಡ್ಸ್​ ಮ್ಯಾನ್(Tradesman) 01
ಲಾಂಚ್ ಮೆಕ್ಯಾನಿಕ್(Launch Mechanic) 02
ಸುಖನಿ(Sukhani) 01
ಸೀನಿಯರ್ ಡೆಕ್ಕಾಂದ್(Senior Deckhand) 02
ಎಂಜಿನ್ ಡ್ರೈವರ್ (Engine Driver) 03

ವಯೋಮಿತಿ:

ಸೀಮ್ಯಾನ್: 18-25 ವರ್ಷ
ಗ್ರೀಸರ್: 18-25 ವರ್ಷ
ಟ್ರೇಡ್ಸ್​ ಮ್ಯಾನ್:25ವರ್ಷ ಮೀರಿರಬಾರದು
ಲಾಂಚ್ ಮೆಕ್ಯಾನಿಕ್: 30 ವರ್ಷ
ಸುಖನಿ: 30 ವರ್ಷ
ಸೀನಿಯರ್ ಡೆಕ್ಕಾಂದ್: 30 ವರ್ಷ
ಎಂಜಿನ್ ಡ್ರೈವರ್: 35

ಸಂಬಳ

ಸೀಮ್ಯಾನ್: ₹ 18,000-56,900/-
ಗ್ರೀಸರ್: ₹ 18,000-56,900/-
ಟ್ರೇಡ್ಸ್​ಮ್ಯಾನ್:₹ 19,900-63,200/-
ಲಾಂಚ್ ಮೆಕ್ಯಾನಿಕ್: ₹ 25,500-81,100
ಸುಖನಿ: ₹ 25,500-81,100/-
ಸೀನಿಯರ್ ಡೆಕ್ಕಂದ್: ₹ 21,700-69,100/-
ಎಂಜಿನ್ ಡ್ರೈವರ್: 25,500-81,100/-ಇದನ್ನೂ ಓದಿ:Railway Recruitment 2021: ರೈಲ್ವೆ ಇಲಾಖೆಯಲ್ಲಿ 28 ಹುದ್ದೆಗಳು ಖಾಲಿ; ಅರ್ಜಿ ಸಲ್ಲಿಸಲು ಹೀಗೆ ಮಾಡಿ

ವಿದ್ಯಾರ್ಹತೆ:

ಸೀಮ್ಯಾನ್: 10ನೇ ತರಗತಿ/ ಮೆಟ್ರಿಕ್ಯುಲೇಷನ್ ಪಾಸಾಗಿರಬೇಕು. ಸಮುದ್ರದಲ್ಲಿ ಹೋಗುವ ಹಡಗಿನಲ್ಲಿ ಕನಿಷ್ಠ 3 ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು. ಹೆಲ್ಸ್​ಮ್ಯಾನ್ ಮತ್ತು ಸೀಮ್ಯಾನ್ ಕೆಲಸದಲ್ಲಿ 2 ವರ್ಷ ಅನುಭವ ಇರಬೇಕು.

ಗ್ರೀಸರ್: 10ನೇ ತರಗತಿ/ಮೆಟ್ರಿಕ್ಯುಲೇಷನ್ ಪಾಸಾಗಿರಬೇಕು. ಸಮುದ್ರದಲ್ಲಿ ಹೋಗುವ ಹಡಗಿನಲ್ಲಿ ಮುಖ್ಯ & ಆಕ್ಸಿಲಿಯರಿ ಮೆಶಿನರಿ ನಿರ್ವಹಣೆಯಲ್ಲಿ ಕನಿಷ್ಠ 3 ವರ್ಷ ಕೆಲಸ ಮಾಡಿದ ಅನುಭವ ಇರಬೇಕು.

ಟ್ರೇಡ್ಸ್​ ಮ್ಯಾನ್: ಮೆಕ್ಯಾನಿಕ್/ ಡೀಸೆಲ್/ಫಿಟ್ಟರ್/ಟರ್ನರ್/ ವೆಲ್ಡರ್/ಎಲೆಕ್ಟ್ರಿಷಿಯನ್/ಇನ್​ಸ್ಟ್ರುಮೆಂಟಲ್ & ಕಾರ್ಪೆಂಟ್ರಿ ಯಾವುದೇ ವಿಭಾಗದಲ್ಲಿ ಐಟಿಐ(ITI) ಪಾಸಾಗಿರಬೇಕು.

ಲಾಂಚ್ ಮೆಕ್ಯಾನಿಕ್: 8ನೇ ತರಗತಿ ಪಾಸಾಗಿರಬೇಕು. ಸಮುದ್ರದಲ್ಲಿ ಚಲಿಸುವ ಹಡಗಿನಲ್ಲಿ ಕನಿಷ್ಠ 5 ವರ್ಷ ಕೆಲಸ ಮಾಡಿದ ಅನುಭವ ಇರಬೇಕು. ಜೊತೆಗೆ 1 ವರ್ಷ ಎಂಜಿನ್ & ಅಕ್ಸಿಲರಿ ಮೆಷಿನರಿಯಲ್ಲಿ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಿರಬೇಕು.

ಸುಖನಿ: 8ನೇ ತರಗತಿ ಪಾಸಾಗಿರಬೇಕು. ಸಮುದ್ರದಲ್ಲಿ ಚಲಿಸುವ ಹಡಗಿನಲ್ಲಿ ಕನಿಷ್ಠ 7 ವರ್ಷ ಕೆಲಸ ಮಾಡಿದ ಅನುಭವ ಇರಬೇಕು. ಜೊತೆಗೆ 2 ವರ್ಷ ಮೆಕ್ಯಾನೈಸ್​ಡ್ ಕ್ರಾಫ್ಟ್ & ಅಕ್ಸಿಲರಿ ಸೈಲ್ಸ್​​ನಲ್ಲಿ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಿರಬೇಕು.

ಸೀನಿಯರ್ ಡೆಕ್ಕಂದ್: 8ನೇ ತರಗತಿ ಪಾಸಾಗಿರಬೇಕು. ಸಮುದ್ರದಲ್ಲಿ ಚಲಿಸುವ ಹಡಗಿನಲ್ಲಿ ಕನಿಷ್ಠ 5 ವರ್ಷ ಕೆಲಸ ಮಾಡಿದ ಅನುಭವ ಇರಬೇಕು. ಜೊತೆಗೆ 2 ವರ್ಷ ಹೆಲ್ಸ್​ಮ್ಯಾನ್​ & ಸೀಮ್ಯಾನ್​ ಕೆಲಸ ನಿರ್ವಹಿಸಿರಬೇಕು.

ಎಂಜಿನ್ ಡ್ರೈವರ್: 8ನೇ ತರಗತಿ/ ಮೆಟ್ರಿಕ್ ಪಾಸಾಗಿರಬೇಕು. ಸಮುದ್ರದಲ್ಲಿ ಚಲಿಸುವ ಹಡಗಿನಲ್ಲಿ ಕನಿಷ್ಠ 10 ವರ್ಷ ಕೆಲಸ ಮಾಡಿದ ಅನುಭವ ಇರಬೇಕು. ಆಕ್ಸಿಲರಿ ಮೆಷನರಿಯಲ್ಲಿ 1 ವರ್ಷ ಸ್ವತಂತ್ರವಾಗಿ ಕೆಲಸ ನಿರ್ವಹಿಸಿರಬೇಕು.

ಆಯ್ಕೆ ಪ್ರಕ್ರಿಯೆ:

  • ಲಿಖಿತ ಪರೀಕ್ಷೆ

  • ದೈಹಿಕ ಸಾಮರ್ಥ್ಯದ ಪರೀಕ್ಷೆ


ಅರ್ಜಿ ಶುಲ್ಕ:
ಜಾಹೀರಾತಿನಲ್ಲಿ ನೀಡಿರುವ ಅನ್ವಯ

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ನಮೂನೆಯು A4 ಸೈಜಿನಲ್ಲಿ ಇರಬೇಕು. ಅರ್ಜಿ ನಮೂನೆಯ ಜೊತೆಗೆ ಕೇಳಿರುವ ಅಗತ್ಯ ದಾಖಲೆಗಳ ಪ್ರತಿಗಳನ್ನು ಅಟ್ಯಾಚ್ ಮಾಡಬೇಕು. ’’The Additional Commissioner of Customs, New Custom House, Panambur, Mangaluru 575010" ಇಲ್ಲಿಗೆ ಪೋಸ್ಟ್ ಮುಖಾಂತರ ಕಳುಹಿಸಬೇಕು. ಯಾವ ಹುದ್ದೆಗೆ ಅರ್ಜಿ ಸಲ್ಲಿಸುತ್ತಿದ್ದೀರಿ, ಯಾವ ವರ್ಗ ಎಂಬುದನ್ನು ಎನ್ವಲಪ್​ನ ಎಡಭಾಗದಲ್ಲಿ ನಮೂದಿಸಿರಬೇಕು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

https://kannada.news18.com/news/jobs/jobs-in-karnataka-india-abroad-government-private-it-company-sector-business-own-interview-634247.html
Published by:Latha CG
First published: