MMC Recruitment: ಮಂಗಳೂರು ಮಹಾನಗರ ಪಾಲಿಕೆಯಲ್ಲಿ ನೇಮಕಾತಿ; ತಿಂಗಳಿಗೆ 28,950ರವರೆಗೆ ಸಂಬಳ

ಮಂಗಳೂರಿನಲ್ಲಿ ಕೆಲಸ ನಿರ್ವಹಿಸಲು ಆಸಕ್ತಿ ಹೊಂದಿರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ನವೆಂಬರ್​ 23 ಆಗಿದೆ.

ಮಂಗಳೂರು ಮಹಾನಗರ ಪಾಲಿಕೆ

ಮಂಗಳೂರು ಮಹಾನಗರ ಪಾಲಿಕೆ

  • Share this:
    ಮಂಗಳೂರು ಮಹಾನಗರ ಪಾಲಿಕೆಯಲ್ಲಿ (Mangaluru City Corporation)  ಖಾಲಿ ಇರುವ 190 ಹುದ್ದೆಗಳಿಗೆ ನೇರ ನೇಮಕಾತಿಗೆ ಆದೇಶ ಹೊರಡಿಸಲಾಗಿದೆ. ಗ್ರೂಪ್​ ಡಿ ದರ್ಜೆಯ ಪೌರ ಕಾರ್ಮಿಕರ (Civil Labor) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಮಂಗಳೂರಿನಲ್ಲಿ ಕೆಲಸ ನಿರ್ವಹಿಸಲು ಆಸಕ್ತಿ ಹೊಂದಿರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ನವೆಂಬರ್​ 23 ಆಗಿದೆ.

    ಹುದ್ದೆ ವಿವರ (Job Details)















    ಹುದ್ದೆ   ಹುದ್ದೆ ಸಂಖ್ಯೆ ವೇತನ ವಯೋಮಿತಿ
    ಪೌರ ಕಾರ್ಮಿಕರು 190 17000-28950 ಕನಿಷ್ಠ 18- ಗರಿಷ್ಠ 45 ವರ್ಷ

    ಅರ್ಹತೆ (Qulification)
    ಈ ಹುದ್ದೆಗೆ ಯಾವುದೇ ವಿದ್ಯಾರ್ಹತೆ ಅನ್ವಯಿಸುವುದಿಲ್ಲ
    ಕನ್ನಡ ಮಾತನಾಡಲು ಗೊತ್ತಿರಬೇಕು
    ಪೌರಕಾರ್ಮಿಕ ಹುದ್ದೆಯಲ್ಲಿ ಕೆಲಸ ಮಾಡುತ್ತಿರುವ ಕ್ಷೇಮಾಭಿವೃದ್ಧಿ, ದಿನಗೂಲಿ, ಗುತ್ತಿಗೆ, ಹೊರಗುತ್ತಿಗೆ, ಸಮಾನ ಕೆಲಸಕ್ಕೆ ಸಮಾನ ವೇತನ ನೌಕರರು ಮಾತ್ರ ಅರ್ಜಿ ಸಲ್ಲಿಸಲು ಅರ್ಹ ರಾಗಿರುತ್ತಾರೆ

    ಅರ್ಜಿ ಶುಲ್ಕ (application Fee)
    ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ 1, ಅಂಗವಿಕಲರಿಗೆ ಅರ್ಜಿ ಶುಲ್ಕ 100 ರೂ ಆಗಿದೆ.
    ಸಾಮಾನ್ಯ ಇತರೆ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 200 ರೂ ಆಗಿದೆ.
    ಅರ್ಜಿ ಶುಲ್ಕ ಪಾವತಿಸಲು ಕಡೆಯ ದಿನಾಂಕ ನವೆಂಬರ್​ 23 ಆಗಿದೆ

    ಇದನ್ನು ಓದಿ: Amazonನಲ್ಲಿ ಅರೆಕಾಲಿಕ, ಪೂರ್ಣ ಉದ್ಯೋಗ; ಯಾವುದೇ ಪದವಿ ಬೇಡ, ಪರೀಕ್ಷೆ ಇಲ್ಲ; ಇಲ್ಲಿದೆ ಮಾಹಿತಿ

    ಅರ್ಜಿ ಸಲ್ಲಿಕೆ ವಿಧಾನ (How to apply)
    ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಭರ್ತಿ ಮಾಡಬೇಕು
    ಮಂಗಳೂರು ಮಹಾನಗರ ಪಾಲಿಕೆ ಈ ವೆಬ್​ತಾಣಕ್ಕೆ ಭೇಟಿ ನೀಡಬೇಕು
    ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ವೆಬ್​ಸೈಟ್​ನಲ್ಲಿರುವ ಪಿಎಫ್​ ಚಲನ್​ ಡೌನ್​ಲೋಡ್​ ಮಾಡಿಕೊಳ್ಳಬೇಕು
    ಕೆನರಾ ಬ್ಯಾಂಕ್​ನ ಯಾವುದೇ ಶಾಖೆಯಲ್ಲಿ ನಿಗದಿತ ಶುಲ್ಕ ಪಾವತಿ ಮಾಡಬೇಕು.
    ಶುಲ್ಕ ಪಾವತಿಸಿದ ಬಳಿಕ ಚಲನ್​ ಪ್ರತಿಯನ್ನ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸುವ ವೇಳೆ ಇತರೆ ದಾಖಲೆಗಳೊಂದಿಗೆ ಸ್ಕ್ಯಾನ್​ ಮಾಡಿ ಅಪ್​​ಲೀಡ್​ ಮಾಡಬೇಕು
    ಆನ್​ಲೈನ್​ ಮೂಲಕ ಅರ್ಜಿ ಸಲ್ಲುಸಲು ಮಹಾನಗರ ಪಾಲಿಕೆಯಲ್ಲಿನ ಸಹಾಯ ಕೇಂದ್ರ ಅಥವಾ ಜಿಲ್ಲೆಯ ನಾಗರೀಕ ಸೇವಾ ಕೇಂದ್ರಗಳಲ್ಲಿಯ ಸೇವೆ ಬಳಸಬಹುದು

    ಇದನ್ನು ಓದಿ: ಪ್ರಾದೇಶಿಕ ಭಾಷೆಗಳಲ್ಲಿ IBPS ಕ್ಲರ್ಕ್​ ಪರೀಕ್ಷೆ; ನಾಳೆಯಿಂದ ಅರ್ಜಿ ಸಲ್ಲಿಕೆ ಆರಂಭ

    ಪ್ರಮುಖ ಲಿಂಕ್​ಗಳು (important link
    ಮಂಗಳೂರು ಮಹಾನಗರ ಪಾಲಿಕೆ ಪೌರ ಕಾರ್ಮಿಕರ ನೇಮಕಾತಿಗೆ ಹೊರಡಿಸಿರುವ ಅಧಿಕೃತ ಅಧಿಸೂಚನೆ ವೀಕ್ಷಿಸಲು ಇಲ್ಲಿ ಕ್ಲಿಕ್​ ಮಾಡಿ
    ಪೌರ ಕಾರ್ಮಿಕ ಹುದ್ದೆಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್​ ಮಾಡಿ
    Published by:Seema R
    First published: