Mandya District Anganawadi: ಮಂಡ್ಯ ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ನೇಮಕಾತಿಗೆ ಅರ್ಜಿ ಆಹ್ವಾನ

ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ನವೆಂಬರ್​​ 15 ಆಗಿದೆ.

ಅಂಗನವಾಡಿ ಹುದ್ದೆ ನೇಮಕಾತಿ

ಅಂಗನವಾಡಿ ಹುದ್ದೆ ನೇಮಕಾತಿ

  • Share this:
    ಮಂಡ್ಯ ಜಿಲ್ಲೆಯಲ್ಲಿ ಖಾಲಿಯಿರುವ (Mandya District Anganawadi) ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರು ಮತ್ತು ಮಿನಿ ಅಂಗನವಾಡಿ ಕಾರ್ಯಕರ್ತೆಯರು ನೇಮಕಕ್ಕೆ ಕರ್ನಾಟಕ ಮಹಿಳಾ ಅಭಿವೃದ್ಧಿ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮುಂದಾಗಿದೆ. ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ನವೆಂಬರ್​​ 15 ಆಗಿದೆ. ಕರ್ನಾಟಕ ಅಂಗನವಾಡಿ ನೇಮಕಾತಿಯ ಅಧಿಕೃತ ವೆಬ್‌ಸೈಟ್ anganwadirecruit.kar.nic.in ಜಾಲತಾಣದಲ್ಲಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

    ಹುದ್ದೆಗಳ ವಿವರ (Job details)



    - ಅಂಗನವಾಡಿ ಕಾರ್ಯಕರ್ತೆಯರು 10

    -ಅಂಗನವಾಡಿ ಸಹಾಯಕಿಯರು 82

    -ಮಿನಿ ಅಂಗನವಾಡಿ ಕಾರ್ಯಕರ್ತೆಯರು 30

    ಗ್ರಾಮಗಳ ಪಟ್ಟಿ 

























































    ತಾಲೂಕುಗಳು ಅಂಗನವಾಡಿ ಕಾರ್ಯಕರ್ತೆಯರು ಮಿನಿ ಅಂಗನವಾಡಿ ಕಾರ್ಯಕರ್ತೆಯರು ಅಂಗನವಾಡಿ ಸಹಾಯಕಿ ಹುದ್ದೆ
    ಶ್ರೀರಂಗಪಟ್ಟಣ 1 2 7
    ಪಾಂಡವಪುರ 2 2 11
    ನಾಗಮಂಗಲ 1 14 5
    ಮಳವಳ್ಳಿ 1 6 13
    ಮದ್ದೂರು 1 3 18
    ಮಂಡ್ಯ 3 3 11
    ದುದ್ದ 0 2 10
    ಕೆಆರ್​ಪೇಟೆ 1 0 10

    ಅಂಗನವಾಡಿ ನೇಮಕಾತಿ 2021 ಶೈಕ್ಷಣಿಕ ಅರ್ಹತೆ ಮತ್ತು ವಯಸ್ಸಿನ ಮಿತಿ: 
    ಎಲ್ಲಾ ಕರ್ನಾಟಕ ಜಿಲ್ಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ಶಿಕ್ಷಣ ಸಂಸ್ಥೆಯಿಂದ 4, 8 ಮತ್ತು 9/ಎಸ್‌ಎಸ್‌ಎಲ್‌ಸಿ ತರಗತಿಗಳಲ್ಲಿ ಉತ್ತೀರ್ಣರಾಗಿರಬೇಕು. ಕೆಲಸಗಾರ ಮತ್ತು ಸಹಾಯಕ ಹುದ್ದೆಗಳಿಗೆ ಕನಿಷ್ಠ ವಯೋಮಿತಿ 18 ವರ್ಷಗಳು, ಗರಿಷ್ಠ ವಯಸ್ಸು 35 ವರ್ಷಗಳು

    ಇದನ್ನು ಓದಿ:  ಮಂಗಳೂರು ಮಹಾನಗರ ಪಾಲಿಕೆಯಲ್ಲಿ ನೇಮಕಾತಿ; ತಿಂಗಳಿಗೆ 28,950ರವರೆಗೆ ಸಂಬಳ

    ಅರ್ಜಿ ಸಲ್ಲಿಕೆ ವಿಧಾನ (Application Submission Procedure) 
    -ಅಭ್ಯರ್ಥಿಗಳು ಖಾಲಿ ಇರುವ ಹುದ್ದೆಗಳಿಗೆ ನೇರವಾಗಿ ಈ​​ ಲಿಂಕ್ ಗೆ ಕ್ಲಿಕ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು.
    -ಇಲ್ಲ, ಅಭ್ಯರ್ಥಿಗಳು ಸೂಚಿಸಿದ ಲಿಂಕ್‌ನಲ್ಲಿ ಅಂಗನವಾಡಿ ನೇಮಕಾತಿಯ ಅಧಿಕೃತ -ಅಧಿಸೂಚನೆಯ ಮೂಲಕವೂ ಹೋಗಿ ಅರ್ಜಿ ಸಲ್ಲಿಸಬಹುದು.
    -ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
    -ಅಂಗನವಾಡಿ ಕಾರ್ಯಕರ್ತರು ಅಥವಾ ಸಹಾಯಕಿಯರಿಗೆ ಅರ್ಜಿ ಸಲ್ಲಿಸುವವರು ಅಲ್ಲಿಯೇ ಸ್ಥಳೀಯರಾಗಿರಬೇಕು.
    -ನೀವು ಸ್ಥಳೀಯರು ಎಂಬ ದಾಖಲಾತಿಗೆ ಅರ್ಜಿ ಸಲ್ಲಿಸಲು ನಿಗದಿ ಪಡಿಸಿದ ದಿನಾಂಕದಿಂದ -ಕಳೆದೊಂದು ವರ್ಷದಿಂದ ಅಲ್ಲಿಯೇ ವಾಸಿಸುತ್ತೀದ್ದೀರಾ ಎಂದು ತಹಶೀಲ್ದಾರ್​ ಅಥವಾ -ಉಪ ತಹಶೀಲ್ದಾರರಿಂದ ವಾಸಸ್ಥಳ ದೃಢೀರಣ ಪತ್ರವನ್ನು ಅರ್ಜಿಯೊಂದಿಗೆ ಕಡ್ಡಾಯವಾಗಿ ಲಗತ್ತಿಸಬೇಕು.
    -ಇನ್ನು ಈ ಹುದ್ದೆಗೆ ಮಾಜಿ ದೇವದಾಸಿಯರ ಮಗಳು, ಯೋಜನಾ ನಿರಾಶ್ರಿತರು, ವಿಚ್ಛೇದಿತ ಮಹಿಳೆಯರು, ಪರಿತ್ಯಕ್ತೆಯರಿಗೆ ಐದು ಬೋನಸ್​ ಅಂಕ ಸಿಕ್ಕು ಅವರಿಗೆ ಆದ್ಯತೆ ಸಿಗಲಿದೆ.

    ಇದನ್ನು ಓದಿ: ಕೇಂದ್ರ ರೇಷ್ಮೆ ಮಂಡಳಿಯಲ್ಲಿ Walk-in-interview; ಬಿಟೆಕ್​, ಎಂಟೆಕ್​ ಪದವೀಧರರಿಗೆ ಅವಕಾಶ

    ಆಯ್ಕೆ ವಿಧಾನ (Selection Process)
    -ಆನ್​ ಲೈನ್​ ಮೂಲಕ ಅರ್ಜಿ ಸಲ್ಲಿಸಿದ ಕೊನೆಯ ದಿನಾಂಕದ ನಂತರ ಮುಂದಿನ 7 ಕೆಲಸದ ದಿನಗಳೊಳಗೆ ಸಮಿತಿ ಸಭೆಗೆ ಬರಬೇಕು
    -ಆಯ್ಕೆ ಸಮಿತಿಯಲ್ಲಿಯೇ ಅಭ್ಯರ್ಥಿಗಳ ಆನ್​ಲೈನ್​ ಅರ್ಜಿಗಳನ್ನು ದಾಖಲೆಗಳ ಪರಿಶೀಲನೆ ನಡೆಸಲಾಗುವುದು
    -ಈ ವೇಳೆ ಅರ್ಜಿಗದಾರರ ವಿದ್ಯಾರ್ಹತೆ, ಪಡೆದ ಅಂಕ ಮತ್ತು ಬೋನಸ್​ ಸೇರಿದಂತೆ ಇತರೆ ಅಂಶ ಪರಿಗಣಿಸಿ ಅಂದೇ ಆಯ್ಕೆ ಪಟ್ಟಿ ಪ್ರಕಟಿಸಲಾಗುವುದು

    ಪ್ರಮುಖ ಸೂಚನೆ (Important instruction)
    ಈ ಮೇಲ್ಕಂಡ ಹುದ್ದೆಗಳಿಗೆ ಅಕ್ಟೋಬರ್​ 12ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ.
    ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ನವೆಂಬರ್ 15 ಆಗಿದೆ.
    ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.
    ಹುದ್ದೆ ಕುರಿತು ಹೊರಡಿಸಿರುವ ಅಧಿಕೃತ ಅಧಿಸೂಚನೆ ವೀಕ್ಷಣೆಗೆ ಇಲ್ಲಿ ಕ್ಲಿಕ್​ ಮಾಡಿ
    Published by:Seema R
    First published: