Mandya Anganwadi Recruitment 2021: ಮಂಡ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆ & ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್​ಲೈನ್ ಮೂಲಕ ನವೆಂಬರ್ 15ರವರೆಗೆ ಅರ್ಜಿ ಹಾಕಬಹುದು. ಹೆಚ್ಚಿನ ಮಾಹಿತಿಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕೃತ ವೆಬ್​ಸೈಟ್ anganwadirecruit.kar.nic.in ಗೆ ಭೇಟಿ ನೀಡಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
WCD Mandya Recruitment 2021: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ-ಮಂಡ್ಯ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 122 ಅಂಗನವಾಡಿ ಕಾರ್ಯಕರ್ತೆ, ಅಂಗನವಾಡಿ ಸಹಾಯಕಿ ಮತ್ತು ಮಿನಿ ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳು ಖಾಲಿ ಇವೆ. 10ನೇ ತರಗತಿ, 4ನೇ ತರಗತಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್​ಲೈನ್ ಮೂಲಕ ನವೆಂಬರ್ 15ರವರೆಗೆ ಅರ್ಜಿ ಹಾಕಬಹುದು. ಅಕ್ಟೋಬರ್ 12ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಹೆಚ್ಚಿನ ಮಾಹಿತಿಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕೃತ ವೆಬ್​ಸೈಟ್ anganwadirecruit.kar.nic.in ಗೆ ಭೇಟಿ ನೀಡಿ.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ-ಮಂಡ್ಯ
ಹುದ್ದೆಯ ಹೆಸರು ಅಂಗನವಾಡಿ ಕಾರ್ಯಕರ್ತೆ, ಅಂಗನವಾಡಿ ಸಹಾಯಕಿ, ಮಿನಿ ಅಂಗನವಾಡಿ ಕಾರ್ಯಕರ್ತೆ
ಒಟ್ಟು ಹುದ್ದೆಗಳು 122
ವಿದ್ಯಾರ್ಹತೆ 10ನೇ ತರಗತಿ, 4ನೇ ತರಗತಿ ಉತ್ತೀರ್ಣ
ಕೆಲಸದ ಸ್ಥಳ ಮಂಡ್ಯ
ವೇತನ ನಿಯಮಾನುಸಾರ
ಅರ್ಜಿ ಸಲ್ಲಿಸುವ ವಿಧಾನ ಆನ್​ಲೈನ್
ಅರ್ಜಿ ಸಲ್ಲಿಕೆ ಆರಂಭ ದಿನಾಂಕ 12/10/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15/11/2021
ವಯೋಮಿತಿ 18-35 ವರ್ಷಇದನ್ನೂ ಓದಿ:Indian Navy Recruitment 2021: 10th, ITI ಪಾಸಾಗಿದ್ರೆ ತಿಂಗಳಿಗೆ ₹ 56,900 ಸಂಬಳ, ನೌಕಾಪಡೆಯಲ್ಲಿ ಉದ್ಯೋಗ

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 12/10/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15/11/2021

ಹುದ್ದೆಯ ಮಾಹಿತಿ:

ಅಂಗನವಾಡಿ ಕಾರ್ಯಕರ್ತೆ: 10 ಹುದ್ದೆಗಳು
ಮಿನಿ ಅಂಗನವಾಡಿ ಕಾರ್ಯಕರ್ತೆ: 30 ಹುದ್ದೆಗಳು
ಅಂಗನವಾಡಿ ಸಹಾಯಕಿ: 82 ಹುದ್ದೆಗಳು
ಒಟ್ಟು-122 ಹುದ್ದೆಗಳು

ವಿದ್ಯಾರ್ಹತೆ:

ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ 4ನೇ ತರಗತಿ/10ನೇ ತರಗತಿ ಪಾಸ್ ಆಗಿರಬೇಕು.

ಇದನ್ನೂ ಓದಿ:UPSC Recruitment 2021: ಯುಪಿಎಸ್​ಸಿ ನೇಮಕಾತಿ, ತಿಂಗಳಿಗೆ ₹1,82,400 ಸಂಬಳ; 64 ಹುದ್ದೆಗಳು ಖಾಲಿ

ವಯೋಮಿತಿ:

ಅಭ್ಯರ್ಥಿಗಳು ಕನಿಷ್ಠ 18 ರಿಂದ ಗರಿಷ್ಠ 35 ವರ್ಷದೊಳಗಿನವರಾಗಿರಬೇಕು.

ಆಯ್ಕೆ ಪ್ರಕ್ರಿಯೆ:

  • ಲಿಖಿತ ಪರೀಕ್ಷೆ

  • ದಾಖಲಾತಿ ಪರಿಶೀಲನೆ

  • ವೈಯಕ್ತಿಕ ಸಂದರ್ಶನ


 
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

Published by:Latha CG
First published: