Small Business Ideas: ಸ್ವಂತ ಉದ್ಯಮ ಹೊಂದುವ ಕನಸಿದ್ಯಾ; ಕಡಿಮೆ ಬಂಡವಾಳದಲ್ಲಿ ದುಪ್ಪಟ್ಟು ಲಾಭ ಪಡೆಯಲು ಇಲ್ಲಿದೆ ಐಡಿಯಾ

ಸಣ್ಣ ಬಂಡವಾಳದ ಉದ್ಯಮ ಆರಂಭಿಸಲು ಇಲ್ಲಿದೆ ಹಲವು ಐಡಿಯಾ. ಅಷ್ಟೇ ಅಲ್ಲದೇ ಈ ಉದ್ಯಮ ಆರಂಭಿಸಲು   ನಿಮ್ಮ ಕೈಯಲ್ಲಿ ಕೇವಲ 20,000 ರೂ. ಹಣವಿದ್ದರೆ ಸಾಕು. 

ಉದ್ಯಮದ ಕನಸು ಈಗ ನನಸು

ಉದ್ಯಮದ ಕನಸು ಈಗ ನನಸು

  • Share this:
ತಿಂಗಳ ವೇತನಕ್ಕೆ ದುಡಿಯುವ ಬದಲು ತಮ್ಮದೇ ಆದ ಉದ್ಯಮ ಆರಂಭಿಸಿ, ನೆಮ್ಮದಿಯ  ಬದುಕು ಕಾಣಬೇಕೆಂಬ ಹಂಬಲ ಇರುತ್ತದೆ. ಆದರೆ, ಯಾವುದೇ ಉದ್ಯಮಕ್ಕೂ ಹೆಚ್ಚು ಬಂಡವಾಳ (investment) ಬೇಕಾಗುತ್ತದೆ. ಅಲ್ಲದೇ, ಈ ಉದ್ಯಮಗಳು ನಮಗೆ ಯಶಸ್ಸು ತಂದು ಕೊಡುತ್ತದೋ ಇಲ್ಲವೋ ಎಂಬ ಅನುಮಾನ ಹಲವರಲ್ಲಿರುತ್ತದೆ. ಆದರೆ, ಕೈಯಲ್ಲಿರುವ ಕಡಿಮೆ ಬಂಡವಾಳ ಹೂಡಿ (Low investment business) ಲಕ್ಷ ಲಕ್ಷ ಆದಾಯ ಸಂಪಾದಿಸದ ಅನೇಕರು ನಮ್ಮ ಮುಂದಿದ್ದಾರೆ. ಅವರಂತೆ ಸಣ್ಣ ಬಂಡವಾಳದ ಉದ್ಯಮ ಆರಂಭಿಸಲು ಇಲ್ಲಿದೆ ಹಲವು ಐಡಿಯಾ. ಅಷ್ಟೇ ಅಲ್ಲದೇ ಈ ಉದ್ಯಮ ಆರಂಭಿಸಲು   ನಿಮ್ಮ ಕೈಯಲ್ಲಿ ಕೇವಲ 20,000 ರೂ. ಹಣವಿದ್ದರೆ ಸಾಕು. 

ಯಾವುದೇ ವ್ಯವಹಾರ ಪ್ರಾರಂಭಿಸಲು ಅತ್ಯಂತ ದೃಢ ನಿಶ್ಚಯ ಮತ್ತು ಆತ್ಮವಿಶ್ವಾಸದ ಅಗತ್ಯವಿದೆ. ಆದರೆ ನೀವು ಉದ್ಯಮಶೀಲತೆಯ ರಂಗಕ್ಕೆ ಕಾಲಿಡುವ ಮೊದಲು ನಿಮ್ಮ ವ್ಯವಹಾರದ ಕಲ್ಪನೆಯ ಬಗ್ಗೆ ನೀವು ಸ್ಪಷ್ಟವಾಗಿರಬೇಕು. ಹಾಗಾದರೆ ಕೇವಲ 20 ಸಾವಿರ ರೂ. ಬಂಡವಾಳದಲ್ಲಿ ಯಾವ ಯಾವ ವ್ಯಾಪಾರ ಪ್ರಾರಂಭಿಸಬಹುದು ಇಲ್ಲಿದೆ ಮಾಹಿತಿ


1. ಮೇಣದ ಬತ್ತಿ
ಮೇಣದ ಬತ್ತಿಗೆ ತುಂಬಾ ಬೇಡಿಕೆ ಇದೆ. ಸಾಮಾನ್ಯವಾಗಿ ಧಾರ್ಮಿಕ ಮತ್ತು ಅಲಂಕಾರದ ಉದ್ದೇಶಗಳಿಂದ ಮೇಣದ ಬತ್ತಿಗಳಿಗೆ ಬೇಡಿಕೆ ಬರುತ್ತದೆ. ಅದರಲ್ಲೂ ಹಬ್ಬ ಹರಿದಿನಗಳಲ್ಲೇ ಹೆಚ್ಚು. ಇನ್ನು ಇತ್ತೀಚಿನ ದಿನಗಳಲ್ಲಿ ಪರಿಮಳಯುಕ್ತ ಮತ್ತು ಥೆರಪೆಟಿಕ್ ಮೇಣದ ಬತ್ತಿಗಳನ್ನು ಹೋಟೆಲ್, ರೆಸ್ಟೋರೆಂಟ್, ಮನೆಗಳಲ್ಲಿ ಬಳಸಲಾಗುತ್ತದೆ. ವ್ಯಾಪಾರ ಆರಂಭಿಸಲು ಮೇಣ, ವಿಕ್, ಅಚ್ಚುಗಳು, ದಾರ, ಸುಗಂಧ ತೈಲಗಳು ಬೇಕಾಗುತ್ತದೆ. ಪ್ರಮುಖ ಕಚ್ಚಾ ವಸ್ತುಗಳ ಹೊರತಾಗಿ, ನೀವು ಕೆಲವು ಮೇಣದಬತ್ತಿಗಳನ್ನು ತಯಾರಿಸುವ ಸಾಧನಗಳನ್ನು ಸಹ ಹೊಂದಿರಬೇಕು. ಇದು ಕರಗುವ ಮಡಕೆ, ಥರ್ಮಾಮೀಟರ್, ಸುರಿಯುವ ಮಡಕೆ, ತೂಕದ ಮಾಪಕ, ಸುತ್ತಿಗೆ ಮತ್ತು ಓವನ್ (ಮೇಣ ಕರಗಲು) ಒಳಗೊಂಡಿದೆ.


2. ಉಪ್ಪಿನಕಾಯಿ
ಊಟಕ್ಕೆ ಉಪ್ಪಿನಕಾಯಿ ಮುಖ್ಯ. ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲೂ ಉಪ್ಪಿನಕಾಯಿ ಇದ್ದೇ ಇರುತ್ತದೆ. ಈ ವ್ಯವಹಾರವು ಸಣ್ಣ ಮತ್ತು ಸುರಕ್ಷಿತ ಉದ್ಯಮ. ಭಾರತದ ಉಪ್ಪಿನಕಾಯಿಗೆ ಭಾರತಕ್ಕಿಂತ ಹೊರದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಇದಕ್ಕೆ 20 ರಿಂದ 25 ಸಾವಿರ ರೂ. ಬಂಡವಾಳ ಬೇಕಾಗಬಹುದು.


3. ಊದುಬತ್ತಿ ಅಥವಾ ಅಗರ ಬತ್ತಿ
ರಾಷ್ಟ್ರ ಮತ್ತು ಹೊರದೇಶಗಳಲ್ಲೂ ಅಗರಬತ್ತಿ ಉದ್ಯಮ ಬಹಳ ದೊಡ್ಡ ಉದ್ಯಮವಾಗಿ ಬೆಳೆಯುತ್ತಿದೆ. ದೇವರ ಪೂಜೆಗಳಲ್ಲಿ ಅಗ್ರಸ್ಥಾನ ಪಡೆದಿರುವ ಅಗರಬತ್ತಿ ತಯಾರಿಸಲು ಸಣ್ಣ ತೆಳುವಾದ ಬಿದಿರು ಕಡ್ಡಿಗಳು, ಶ್ರೀಗಂಧ, ಮಲ್ಲಿಗೆ, ಗುಲಾಬಿ, ಚಂಪಾ ಮೊದಲಾದ ಸುವಾಸನೆಯ ತೈಲಗಳು ಬೇಕಾಗುತ್ತದೆ. ಕಡ್ಡಿಗಳ ಮೇಲೆ ಎಣ್ಣೆಗಳನ್ನು ಲೇಪಿಸಿ ಒಣಗಿಸಲಾಗುತ್ತದೆ. 50,000 ರೂ.ಗಿಂತ ಸ್ವಯಂಚಾಲಿತ ಮತ್ತು ಅರೆ-ಸ್ವಯಂಚಾಲಿತ ಅಗರಬತ್ತಿ ತಯಾರಿಸುವ ಯಂತ್ರಗಳನ್ನು ಕೊಂಡು ಇದರಲ್ಲಿ ತಯಾರಿಸಿ, ಒಣಗಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು.


4. ಬಟನ್‍ಗಳು
ಉಡುಪು ಉದ್ಯಮದಲ್ಲಿ ಬಳಸುವ ಅತ್ಯಂತ ಅಗತ್ಯವಾದ ವಸ್ತುವಾಗಿದ್ದು, ದೊಡ್ಡ ಮಾರುಕಟ್ಟೆ ಸಾಮರ್ಥ್ಯ ಹೊಂದಿವೆ.ಪ್ಲಾಸ್ಟಿಕ್‍ನಿಂದ ಫ್ಯಾಬ್ರಿಕ್ ಮತ್ತು ಸ್ಟೀಲ್ ಬಟನ್‍ಗಳವರೆಗೆ, ಈ ವ್ಯಾಪಾರದ ವಿವಿಧ ವಿಭಾಗಗಳಿವೆ. ನಿಮ್ಮ ಆಸಕ್ತಿಗೆ ಅನುಗುಣವಾಗಿ ಆಯ್ಕೆ ಮಾಡಬಹುದು. ಈ ಉದ್ಯಮಕ್ಕೆ 30 ರಿಂದ 40 ಸಾವಿರ ರೂ. ಬಂಡವಾಳ ಹೂಡಬೇಕಾಗುತ್ತದೆ.


5. ಡಿಸೈನರ್ ಲೇಸ್
ಲೇಸ್ ಅನ್ನು ಸಾಮಾನ್ಯವಾಗಿ ಉಡುಪುಗಳಲ್ಲಿ ಮತ್ತು ಕರಕುಶಲ ಕೆಲಸಕ್ಕಾಗಿ ಬಳಸಲಾಗುತ್ತದೆ. ಇದು ಸಾಂಪ್ರದಾಯಿಕ ವ್ಯಾಪಾರವಾಗಿದೆ ಮತ್ತು ಇದನ್ನು ಮನೆಯಲ್ಲಿಯೇ ಸುಲಭವಾಗಿ ಆರಂಭಿಸಬಹುದು. ವಿವಿಧ ರೀತಿಯ ಲೇಸ್‍ಗಳಿಗೆ ಬೇಡಿಕೆ ಹೆಚ್ಚಾಗಿದೆ. ಲೇಸ್‍ಗಳನ್ನು ವಿವಿಧ ದೇಶಗಳಿಗೆ ರಫ್ತು ಮಾಡಲಾಗುತ್ತದೆ, ಇವುಗಳನ್ನು ಕೈ ಮೂಲಕ, ಬಾಬಿ ಯಂತ್ರಗಳು ಅಥವಾ ಸಂಪೂರ್ಣ ಗಣಕೀಕೃತ ಯಂತ್ರಗಳ ಮೂಲಕ ವಿನ್ಯಾಸಗೊಳಿಸಬಹುದು. ಸರಿ ಸುಮಾರು 25-50 ಸಾವಿರ ರೂಗಳ ಕಡಿಮೆ ಹೂಡಿಕೆಯೊಂದಿಗೆ ಈ ವ್ಯವಹಾರ ಪ್ರಾರಂಭಿಸಬಹುದು.


6. ಶೂ ಲೇಸ್
ಚೀನಾದ ನಂತರ ಭಾರತವು ಪಾದರಕ್ಷೆಗಳ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದೆ. ದೇಶವು ತಯಾರಿಸುವ ಶೂಗಳನ್ನು ಕ್ರೀಡೆ, ಔಪಚಾರಿಕ, ಸಾಂದರ್ಭಿಕ ಮತ್ತು ಇತರ ವರ್ಗಗಳಾಗಿ ವಿಂಗಡಿಸಬಹುದು. ಶೂಲೇಸ್‍ಗಳಿಗೆ ಬೇಡಿಕೆ ಹೆಚ್ಚಾಗಿದೆ, ಮತ್ತು ಶೂಲೇಸ್‍ಗಳನ್ನು ತಯಾರಿಸುವುದು ಲಾಭದಾಯಕ ಸಣ್ಣ ವ್ಯಾಪಾರವೂ ಆಗಿದೆ. ಶೂಲೇಸ್‍ಗಳಲ್ಲಿ ನೇಯ್ಗೆ ಮೂಲಕ ಮತ್ತು ಆಗ್ಲೆಟ್ ತಯಾರಿಸಲಾಗುತ್ತದೆ.


ಸರಳ, ನೇಯ್ದ ಲೇಸ್ ಅನ್ನು ಸಾಮಾನ್ಯವಾಗಿ ಹತ್ತಿ, ಪಾಲಿಯೆಸ್ಟರ್, ನೈಲಾನ್ ಇತ್ಯಾದಿಗಳಿಂದ ತಯಾರಿಸಲಾಗುತ್ತದೆ ಮತ್ತು ಆಗ್ಲೆಟ್ ಅನ್ನು ಪ್ಲಾಸ್ಟಿಕ್‍ನಿಂದ ತಯಾರಿಸಲಾಗುತ್ತದೆ. ಶೂ ಲೇಸ್ ಬ್ರೇಡಿಂಗ್ ಯಂತ್ರಗಳು ಸಹ ಲಭ್ಯವಿದೆ. ನಿಮಿಷಕ್ಕೆ ಹಲವಾರು ಮೀಟರ್ ಲೇಸ್ ನೇಯ್ಗೆ ಮಾಡಬಹುದು, ನಂತರ ನೇಯ್ದ ಬ್ಯಾಂಡ್‍ಗೆ ಆಗ್ಲೆಟ್ ಜೋಡಿಸಲು ಬಳಸಬಹುದು. ಅಂದಾಜು 25,000 ರೂ.ಗಳ ಸಣ್ಣ ಹೂಡಿಕೆಯೊಂದಿಗೆ ಆರಂಭಿಸಬಹುದು.


7. ಐಸ್‍ಕ್ರೀಂ ಕೋನ್
ಪ್ರತಿಯೊಬ್ಬರಿಗೂ ಐಸ್ ಕ್ರೀಮ್ ಎಂದರೆ ಪಂಚಪ್ರಾಣ. ಐಸ್ ಕ್ರೀಂ ಬಳಕೆ ಹೆಚ್ಚುತ್ತಿದ್ದಂತೆ ಐಸ್ ಕ್ರೀಮ್ ಕೋನ್‍ಗಳ ಬೇಡಿಕೆಯೂ ಹೆಚ್ಚಳವಾಗುತ್ತಿದೆ. ಆದ್ದರಿಂದ ಈ ಕಲ್ಪನೆಯು ಲಾಭದಾಯಕ ವ್ಯಾಪಾರ. ಸರಿಸುಮಾರು 1 ಲಕ್ಷದಿಂದ 1.5 ಲಕ್ಷದವರೆಗೆ ಹೂಡಿಕೆ ಮಾಡುವ ಮೂಲಕ ನೀವು ಸಣ್ಣ ಜಾಗದಲ್ಲಿ ಐಸ್ ಕ್ರೀಮ್ ಕೋನ್ ಉತ್ಪಾದನಾ ಘಟಕವನ್ನು ಆರಂಭಿಸಬಹುದು.


8. ಹ್ಯಾಂಡ್‍ಮೇಡ್ ಚಾಕೊಲೇಟ್
ಚಾಕೋಲೇಟ್ ಬಳಕೆಯಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. ಹಾಗಾಗಿ ಇದು ಲಾಭದಾಯಕ ಉದ್ಯಮವಾಗಿದೆ. ಈ ಉದ್ಯಮಕ್ಕೆ ಸುಮಾರು 40 ರಿಂದ 50 ಸಾವಿರ ರೂ. ಖರ್ಚಾಗುತ್ತದೆ. ಉತ್ಪಾದನೆ ಹೆಚ್ಚಿಸುವ ಸಲುವಾಗಿ ಯಂತ್ರಗಳನ್ನು ಬಳಸುವುದಾದರೆ 2 ಲಕ್ಷದಿಂದ 3 ಲಕ್ಷದವರೆಗೆ ವೆಚ್ಚವಾಗಬಹುದು.


9. ಕಾಟನ್ ಬಡ್ಸ್
ಕಿವಿಗಳ ಸ್ವಚ್ಛತೆಯ ವಿಚಾರಕ್ಕೆ ಬಂದಾಗ ಇದಕ್ಕೆ ಬೇಡಿಕೆ ಇದೆ. ಹತ್ತಿ, ಸಣ್ಣ ಪ್ಲಾಸ್ಟಿಕ್ ಕಡ್ಡಿಗಳಿದ್ದರೆ ಇದರ ಕಾರ್ಯ ಸುಲಭ. ಇದನ್ನು ತಯಾರಿಸುವ ಯಂತ್ರಗಳು ಸಹ ಲಭ್ಯವಿದೆ. ಸುಮಾರು 20 ರಿಂದ 40 ಸಾವಿರ ರೂ. ನಿಮ್ಮ ಕೈಯಲ್ಲಿದ್ದರೆ ಈ ಉದ್ಯಮ ಸುಲಭ ಮತ್ತು ಲಾಭದಾಯಕ.


10. ಹಪ್ಪಳ
ಹಲವಾರು ಶುಭ ಸಮಾರಂಭಗಳಲ್ಲಿ ಉಪ್ಪಿನಕಾಯಿಯಂತೆ ಹಪ್ಪಳಕ್ಕೂ ಬೇಡಿಕೆ ಹೆಚ್ಚು. ಗೋಧಿ ಹಿಟ್ಟು, ಎಣ್ಣೆ, ಮಸಾಲೆ ಪದಾರ್ಥಗಳಿದ್ದರೆ ಇದು ಸುಲಭ. ಈ ವ್ಯಾಪಾರಕ್ಕೆ ಹೆಚ್ಚು ಬೇಡಿಕೆ ಇದ್ದು ಸುಮಾರು 30 ಸಾವಿರದಿಂದ 40 ಸಾವಿರ ರೂ. ಬಂಡವಾಳದಲ್ಲಿ ಸುಲಭವಾಗಿ ತಯಾರಿಸಬಹುದು.


11. ನೂಡಲ್ಸ್
ವಿಶೇಷವಾಗಿ ಇದು ಭಾರತದಲ್ಲಿ ಗ್ರಾಮೀಣ ಮತ್ತು ನಗರ ಮಾರುಕಟ್ಟೆಗಳಲ್ಲಿ ಜನಪ್ರಿಯ ತಿಂಡಿ. ನೂಡಲ್ ಉತ್ಪಾದನಾ ಪ್ರಕ್ರಿಯೆಯು ಸರಳವಾಗಿದೆ ಮತ್ತು ಗೋಧಿ ಹಿಟ್ಟು, ಉಪ್ಪು, ಸಕ್ಕರೆ, ಪಿಷ್ಟ, ಮಸಾಲೆಗಳು, ಸಸ್ಯಜನ್ಯ ಎಣ್ಣೆಗಳಿದ್ದರೆ ನೂಡಲ್ಸ್‌ ರೆಡಿ. ಅರೆ ಸ್ವಯಂಚಾಲಿತ ಮತ್ತು ಸಂಪೂರ್ಣ ಸ್ವಯಂಚಾಲಿತ ನೂಡಲ್ ತಯಾರಿಸುವ ಯಂತ್ರಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಕಡಿಮೆ ಸಾಮರ್ಥ್ಯದ ನೂಡಲ್ ತಯಾರಿಸುವ ಯಂತ್ರಗಳ ಬೆಲೆ ರೂ 40,000 ಕ್ಕಿಂತ ಹೆಚ್ಚು ಸಾಮರ್ಥ್ಯವಿರುವ ಯಂತ್ರಗಳ ಬೆಲೆ 1.5 ಲಕ್ಷ ರೂ.ವರೆಗೆ ಇದೆ.


12. ಬಿಸಾಡಬಹುದಾದ ಆಹಾರ ತಟ್ಟೆಗಳು ಮತ್ತು ಕಪ್‍ಗಳು
ಭಾರತದಲ್ಲಿ ಈವೆಂಟ್‍, ಫಂಕ್ಷನ್‍ಗಳು, ಪಿಕ್ನಿಕ್‍ ಇತ್ಯಾದಿ ಸಮಯದಲ್ಲಿ ಆಹಾರದ ತಟ್ಟೆ, ಕಪ್‌ಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಅವುಗಳನ್ನು ಸಾಮಾನ್ಯವಾಗಿ ಕಾಗದದಿಂದ ತಯಾರಿಸಲಾಗುತ್ತದೆ, ಇದು ಪ್ಲಾಸ್ಟಿಕ್, ಸ್ಟೀಲ್, ಗ್ಲಾಸ್ ಇತ್ಯಾದಿಗಳಿಗೆ ಪರ್ಯಾಯವಾಗಿ ಹೊರಹೊಮ್ಮಿದೆ. ಪೇಪರ್ ಪ್ಲೇಟ್‍ಗಳು ಮತ್ತು ಕಪ್‍ಗಳನ್ನು ತಯಾರಿಸಲು, ಪೇಪರ್ ಅನ್ನು ಸ್ಥಳೀಯ ಸ್ಕ್ರ್ಯಾಪ್ ಶಾಪ್‍ಗಳಿಂದ ಕಡಿಮೆ ದರದಲ್ಲಿ ಪಡೆದುಕೊಳ್ಳಬಹುದು. ಪ್ಲೇಟ್ ತಯಾರಿಸುವ ಯಂತ್ರಗಳು 50,000 ರೂ. ವೆಚ್ಚದಲ್ಲಿ ಲಭ್ಯವಿದೆ.


13. ಸೆಣಬಿನ ಚೀಲ
ಈ ಜೈವಿಕ ವಿಘಟನೀಯ ಮತ್ತು ಮರುಬಳಕೆ ಮಾಡಬಹುದಾದ "ಗೋಲ್ಡನ್ ಫೈಬರ್"ನ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪ್ಲಾಸ್ಟಿಕ್ ನಿಷೇಧಿಸಲು ಜಗತ್ತು ಮುಂದಾಗಿರುವುದರಿಂದ, ಸೆಣಬಿನ ಚೀಲ ತಯಾರಿಕೆ ವ್ಯವಹಾರವು ಉತ್ತಮ ಆಯ್ಕೆಯಾಗಿದೆ. ಸೆಣಬಿನ ಚೀಲ ತಯಾರಿಸುವ ಪ್ರಕ್ರಿಯೆ ಸರಳವಾಗಿದೆ. ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಬ್ಯಾಗ್‍ಗಳು ಜನಪ್ರಿಯವಾಗಿವೆ ಮತ್ತು ಅವುಗಳನ್ನು ಬಹು ಉದ್ದೇಶಗಳಿಗಾಗಿ ಬಳಸಬಹುದು. ಈ ವ್ಯವಹಾರ ಆರಂಭಿಸಲು 50 ಸಾವಿರ ರೂ. - 1 ಲಕ್ಷದಷ್ಟು ಬಂಡವಾಳವಿದ್ದರೆ ಸಾಕು. ನೀವು ಸುಮಾರು 500 ಚದರ ಅಡಿಗಳ ಸಣ್ಣ ಪ್ರದೇಶದಲ್ಲಿ ಆರಂಭಿಸಬಹುದು.


ಇದನ್ನು ಓದಿ: ಓದಿದ್ದು ಎಂಜಿನಿಯರಿಂಗ್; ಕನ್ನಡದಲ್ಲಿ ಪರೀಕ್ಷೆ ಬರೆದು ಯುಪಿಎಸ್ಸಿಯಲ್ಲಿ ಸಾಧನೆ ಮಾಡಿದ ಶ್ರೀನಿವಾಸ್

14. ಸ್ಟೇಪಲ್ ಪಿನ್
ಶಾಲೆ, ಆಫೀಸ್, ಕಾಲೇಜು ಹೀಗೆ ನಾನಾ ಕಡೆ ಇದರ ಬಳಕೆ ಇದ್ದೇ ಇರುತ್ತದೆ. ಸ್ಟೇಪ್ಲರ್‌ಗಳು ಸ್ಟೇಪ್ಲರ್ ಪಿನ್‍ಗಳಿಲ್ಲದೆ ಕೆಲಸ ಮಾಡಲು ಸಾಧ್ಯವಿಲ್ಲ, ಮತ್ತು ಪಿನ್‍ಗಳನ್ನು ಸಾಮಾನ್ಯವಾಗಿ ಬಿಳಿ ಕಬ್ಬಿಣದ ತಂತಿಯಿಂದ ತಯಾರಿಸಲಾಗುತ್ತದೆ. ಪ್ರತಿ ನಿಮಿಷಕ್ಕೆ 350 ಪಿನ್‍ಗಳನ್ನು ತಯಾರಿಸಬಹುದಾದ ಸ್ಟೇಪಲ್ ಪಿನ್ ತಯಾರಿಸುವ ಯಂತ್ರಗಳ ಬೆಲೆ 3.5 ಲಕ್ಷ ರೂ.


15. ಕಾಗದ ತಯಾರಿಕೆ
ಕಾಗದವನ್ನು ಎಲ್ಲೆಡೆ ಬಳಸಲಾಗುತ್ತದೆ. ಶಾಲೆಗಳು ಮತ್ತು ಕಾಲೇಜುಗಳಿಂದ ಕಚೇರಿಗಳು ಮತ್ತು ದೊಡ್ಡ ಕಾರ್ಪೋರೇಟ್‍ಗಳವರೆಗೆ, ಕಾಗದದ ಬಳಕೆ ನಿಶ್ಚಿತ. ಪ್ರಪಂಚವು ಡಿಜಿಟಲ್ ಆಗುತ್ತಿರುವ ಹೊರತಾಗಿಯೂ ಈ ಉತ್ಪನ್ನಕ್ಕೆ ಅಂತ್ಯವಿಲ್ಲ. ಎ2, ಎ3 ಮತ್ತು ಎ4 ಹಾಳೆಗಳಿಂದ ಹಿಡಿದು ಸಣ್ಣ ಪ್ರತಿಗಳವರೆಗೆ, ಕಾಗದ ತಯಾರಿಕೆ ಉದ್ಯಮ ವಿಸ್ತಾರವಾಗಿದೆ. ಇದಕ್ಕೆ 2 ಲಕ್ಷದಿಂದ 2.5 ಲಕ್ಷ ರೂ.ವರೆಗೆ ಬಂಡವಾಳ ಬೇಕಾಗಬಹುದು.


16. ಸಾವಯವ ಸಾಬೂನುಗಳು
ಇದು ದಿನನಿತ್ಯದ ಕೋಟ್ಯಂತರ ಜನರು ಬಳಸುವ ಹೆಚ್ಚಿನ ಬೇಡಿಕೆಯ ಉತ್ಪನ್ನವಾಗಿದೆ. ಸಣ್ಣ ಗಿಡಮೂಲಿಕೆ ಸೋಪ್ ವ್ಯವಹಾರ ಪ್ರಾರಂಭಿಸಲು ನಿಮಗೆ ಗ್ಲಿಸರಿನ್, ಗಿಡಮೂಲಿಕೆಗಳು, ಸಾರಭೂತ ತೈಲಗಳು, ಅಚ್ಚುಗಳು, ಮೈಕ್ರೋವೇವ್ ಬೇಕಾಗುತ್ತವೆ. ಸುಮಾರು 1.5 ಲಕ್ಷದಿಂದ 2 ಲಕ್ಷ ರೂಪಾಯಿಗಳ ಹೂಡಿಕೆಯ ಅಗತ್ಯವಿದೆ. ಈ ಪ್ರಕ್ರಿಯೆಯನ್ನು ಕಲಿಯಲು ಬಯಸಿದಲ್ಲಿ ವಿವಿಧ ಸರ್ಕಾರಿ ಕೋರ್ಸ್‍ಗಳು ಲಭ್ಯವಿದೆ.


ಇದನ್ನು ಓದಿ: NMPT Recruitment: BA, Bsc, Bcom ಯಾವುದೇ ಪದವೀಧರರು ಅರ್ಜಿ ಸಲ್ಲಿಸಬಹುದು; ತಿಂಗಳಿಗೆ 40 ಸಾವಿರ ಸಂಬಳ

17. ಕೊಬ್ಬರಿ ಎಣ್ಣೆ ತಯಾರಿಕೆ
ಜನರು ಇತ್ತೀಚೆಗೆ ನೈಸರ್ಗಿಕ ಉತ್ಪನ್ನಗಳ ಮೊರೆ ಹೋಗುತ್ತಿದ್ದಾರೆ. ಆರೋಗ್ಯ ಮತ್ತು ಸೌಂದರ್ಯದ ವಿಷಯದಲ್ಲಿ ಗುಣಮಟ್ಟದ ಉತ್ಪನ್ನಗಳ ಮೇಲೆ ಹೆಚ್ಚು ಹಣ ಪಾವತಿಸಲು ಅನೇಕರು ಹಿಂಜರಿಯುವುದಿಲ್ಲ. ಆದ್ದರಿಂದ, ತೆಂಗಿನ ಎಣ್ಣೆ ಘಟಕವನ್ನು ಪ್ರಾರಂಭಿಸುವುದು ಉತ್ತಮ. ಈ ಕಡಿಮೆ ಬೆಲೆಯ ವ್ಯಾಪಾರ ಕಲ್ಪನೆಗೆ ಅಂದಾಜು 1 ಲಕ್ಷ ರೂ ಹೂಡಿಕೆ ಅಗತ್ಯವಿದೆ. ನೀವು ಒಂದು ಸಣ್ಣ ಕೃಷಿ ಭೂಮಿಯನ್ನು ಬಾಡಿಗೆಗೆ ಪಡೆಯುವ ಮೂಲಕ ಪ್ರಾರಂಭಿಸಬಹುದು.


18. ಟೆಂಪರ್ಡ್ ಗ್ಲಾಸ್ ಉದ್ಯಮ
ಜಾಗತಿಕ ಮಾರುಕಟ್ಟೆ ಕುಗ್ಗಿದರೂ ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆ ಮಾತ್ರ ಬೆಳೆಯುತ್ತಿದೆ. ಟೆಂಪರ್ಡ್ ಗ್ಲಾಸ್ ನಂತಹ ಸ್ಮಾರ್ಟ್ಫೋನ್‌ ಪರಿಕರಗಳಿಗೂ ಹೆಚ್ಚಿನ ಬೇಡಿಕೆಯಿದೆ. ಕಡಿಮೆ ಸಾಮರ್ಥ್ಯದ ಟೆಂಪರ್ಡ್ ಗ್ಲಾಸ್ ತಯಾರಿಕೆ ಯಂತ್ರಗಳ ಬೆಲೆ ಸುಮಾರು 75,000 ರೂ. ಆದರೆ ಹೆಚ್ಚಿನ ಸಾಮರ್ಥ್ಯದ ಬೆಲೆ 1.5 ಲಕ್ಷ ರೂ. ವರೆಗೆ ಇದೆ.


19. ಎನ್ವಲಪ್ಸ್ ಮತ್ತು ಫೈಲ್ಸ್
ಸಂವಹನವು ಡಿಜಿಟಲ್ ಆಗುತ್ತಿದ್ದರೂ, ಶಾಲೆಗಳು, ಕಾಲೇಜುಗಳು, ಕಾರ್ಪೋರೇಟ್‍ಗಳು, ಇತ್ಯಾದಿಗಳಲ್ಲಿ ಕಾಗದದ ಲಕೋಟೆಗಳಿಗೆ ಮತ್ತು ಫೈಲ್‍ಗಳಿಗೆ ಇನ್ನೂ ಹೆಚ್ಚಿನ ಬೇಡಿಕೆ ಇದೆ. ಖರೀದಿದಾರರ ಅಗತ್ಯತೆಗಳ ಆಧಾರದ ಮೇಲೆ ಮ್ಯಾಪ್ಲಿಥೋ ಪೇಪರ್ ಅಥವಾ ಸ್ಕ್ರ್ಯಾಪ್ ಪೇಪರ್‌ನಂತಹ ವಿವಿಧ ರೀತಿಯ ಪೇಪರ್ ಜೊತೆಗೆ ಗಮ್ ಮೂಲಕ ಇದನ್ನು ಸುಲಭವಾಗಿ ತಯಾರಿಸಬಹುದು. ಇದನ್ನು ತಯಾರಿಸುವ ಯಂತ್ರಗಳ ಬೆಲೆ 1.5 ಲಕ್ಷದಿಂದ 11 ಲಕ್ಷ ರೂ.ವರೆಗೆ ಇದೆ.


20. ಪೇಪರ್ ಬ್ಯಾಗ್
ಪರಿಸರ ಸ್ನೇಹಿ ಚೀಲಗಳು ಮತ್ತು ಕಾಗದದಿಂದ ತಯಾರಿಸಿದ ಬ್ಯಾಗ್‍ಗಳು ಇತ್ತೀಚೆಗೆ ಜನಪ್ರಿಯವಾಗಿವೆ. ಶಾಪಿಂಗ್ ವಸ್ತುಗಳು, ಆಹಾರ ಪದಾರ್ಥಗಳು, ವೈದ್ಯಕೀಯ ವಸ್ತುಗಳು, ಆಭರಣಗಳು ಮತ್ತು ಹೆಚ್ಚಿನವುಗಳನ್ನು ಪ್ಯಾಕ್ ಮಾಡಲು ಪೇಪರ್ ಬ್ಯಾಗ್‍ಗಳನ್ನು ಬಳಸಲಾಗುತ್ತಿದೆ. ಪ್ಲಾಸ್ಟಿಕ್ ಬ್ಯಾಗ್ ನಿಷೇಧದ ಹಿನ್ನೆಲೆ ಇದು ಮುನ್ನೆಲೆಗೆ ಬಂದಿದೆ. ಪೇಪರ್ ಬ್ಯಾಗ್ ತಯಾರಿಕೆಯನ್ನು ಸಣ್ಣ ಹೂಡಿಕೆಯೊಂದಿಗೆ ಆರಂಭಿಸಬಹುದು. ಸ್ವಯಂಚಾಲಿತ ಪೇಪರ್ ಬ್ಯಾಗ್ ತಯಾರಿಸುವ ಯಂತ್ರಗಳು ಸುಮಾರು 5 ಲಕ್ಷದಿಂದ ಆರಂಭವಾಗುತ್ತವೆ ಮತ್ತು ಅರೆ-ಸ್ವಯಂಚಾಲಿತ ಯಂತ್ರಗಳಿಗೂ 3 ಲಕ್ಷ ರೂ. ಖರ್ಚಾಗುತ್ತದೆ.


First published: