Lok Sabha Recruitment 2021: ತಿಂಗಳಿಗೆ 65 ಸಾವಿರ ಸಂಬಳ; ಇಲ್ಲಿದೆ ಅರ್ಜಿ ಸಲ್ಲಿಸುವ ವಿಧಾನ

ಲೋಕಸಭಾ ಸೆಕ್ರೆಟರಿಯಟ್ ಕನ್ಸಲ್ಟೆಂಟ್​​ ಉದ್ಯೋಗಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಉದ್ಯೋಗ ಮಾಹಿತಿ

ಉದ್ಯೋಗ ಮಾಹಿತಿ

  • Share this:
    ಲೋಕಸಭೆಯಲ್ಲಿ ಉದ್ಯೋಗ ನೇಮಕಾತಿ  (Lok Sabha Recruitment 2021) ನಡೆಯುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಲೋಕಸಭಾ ಸೆಕ್ರೆಟರಿಯಟ್ ಕನ್ಸಲ್ಟೆಂಟ್​​ ಉದ್ಯೋಗಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಸೀನಿಯರ್ ಕನ್ಸಲ್ಟೆಂಟ್ (senior consultant), ಜೂನಿಯರ್ ಕನ್ಸಲ್ಟೆಂಟ್ (junior Consultant), ಜೂನಿಯರ್ ಕಂಟೆಂಟ್ ರೈಟರ್ (junior Content writer) , ಜೂನಿಯರ್ ಅಸೋಸಿಯೇಟ್( junior associates ),  ಸೀನಿಯರ್ ಕಂಟೆಂಟ್ (senior content witer) ರೈಟರ್ ಸೇರಿದಂತೆ ಒಟ್ಟು 11 ಹುದ್ದೆಗಳು ಖಾಲಿ ಇವೆ. ಈ ಹುದ್ದೆಗೆ ನೇಮಕ ಆದವರು ಲೋಕಸಭಾ ಸೆಕ್ರೆಟರಿಯೇಟ್‌ನ ಪಿಪಿಆರ್ ವಿಂಗ್‌ನಲ್ಲಿರುವ ಸಾಮಾಜಿಕ ಮಾಧ್ಯಮ ಮತ್ತು ಸಂವಹನ ಘಟಕದಲ್ಲಿ ಕಾರ್ಯಗಳನ್ನು ನಿರ್ವಹಿಸಬೇಕು

    ಇನ್ನು ಈ ಹುದ್ದೆಗಳಿಗೆ ಕೇವಲ ಒಂದು ವರ್ಷದ ಒಪ್ಪಂದದ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಯಲಿದ್ದು, ಮುಂದಿನ ಎರಡು ವರ್ಷಗಳ ಕಾಲ ವಿಸ್ತರಣೆ ಮಾಡುವ ಸಾಧ್ಯತೆ ಕೂಡ ಇದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಕ್ಟೋಬರ್​ 11 ಕೊನೆಯ ದಿನ ಆಗಿದೆ. ಈ ಉದ್ಯೋಗ ಹಾಗೂ ಅರ್ಜಿ ಸಲ್ಲಿಕೆ ಸೇರಿದಂತೆ ಹೆಚ್ಚಿನ ವಿವರ ಈ ಕೆಳಗಿನಂತಿದೆ.



















































     
    ಹುದ್ದೆಗಳು ಹುದ್ದೆ ಸಂಖ್ಯೆ ವಿದ್ಯಾರ್ಹತೆ ವೇತನ
    ಸೋಷಿಯಲ್​ ಮೀಡಿಯಾ ಮಾರ್ಕೆಟಿಂಗ್( ಸಿನಿಯರ್​ ಕನ್ಸಲ್ಟೆಂಟ್ ಬ್ಯುಸಿನೆಸ್​ ಮ್ಯಾನೇಜ್​ಮೆಂಟ್​, ಮಾರ್ಕೆಟಿಂಗ್, ಪತ್ರಿಕೋದ್ಯಮ, ಸಾರ್ವಜನಿಕ ಸಂಬಂಧಗಳು ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಅಗತ್ಯವಿದೆ. ಒಂದು ವರ್ಷದ ಅನುಭವ ಕಡ್ಡಾಯ 1 35,000 ರೂ
    ಸೋಷಿಯಲ್​ ಮೀಡಿಯಾ ಮಾರ್ಕೆಟಿಂಗ್( ಜೂನಿಯರ್​ ಕನ್ಸಲ್ಟೆಂಟ್​) ಎಂಜಿನಿಯರಿಂಗ್, ಬಿಸಿನೆಸ್ ಮ್ಯಾನೇಜ್‌ಮೆಂಟ್, ಮಾರ್ಕೆಟಿಂಗ್, ಪತ್ರಿಕೋದ್ಯಮ, ಸಾರ್ವಜನಿಕ ಸಂಬಂಧಗಳು ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು. ಎರಡು ವರ್ಷಗಳ ಅನುಭವ ಕಡ್ಡಾಯ. 1 65,000 ರೂ
    ಹಿರಿಯ ವಿಷಯ ಬರಹಗಾರ ಅಥವಾ ಮಾಧ್ಯಮ ವಿಶ್ಲೇಷಕ (ಹಿಂದಿ) ರಾಜ್ಯಶಾಸ್ತ್ರ, ಪತ್ರಿಕೋದ್ಯಮ, ಕಾನೂನು, ಹಿಂದಿ ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಗತ್ಯವಿದೆ. ಎರಡು ವರ್ಷಗಳ ಅನುಭವ ಕಡ್ಡಾಯ 1 45,000 ರೂ
    ಜೂನಿಯರ್ ಕಂಟೆಂಟ್ ರೈಟರ್ (ಹಿಂದಿ) ಸ್ನಾತಕೋತ್ತರ ಪದವಿ ಉತ್ತೀರ್ಣರಾಗಿರಬೇಕು. ಒಂದು ವರ್ಷದ ಅನುಭವ ಕಡ್ಡಾಯ 1 35.000 ರೂ
     ಜೂನಿಯರ್ ಕಂಟೆಂಟ್ ರೈಟರ್ (ಇಂಗ್ಲಿಷ್) ಸ್ನಾತಕೋತ್ತರ ಪದವಿ ಉತ್ತೀರ್ಣರಾಗಿರಬೇಕು. ಒಂದು ವರ್ಷದ ಅನುಭವ ಕಡ್ಡಾಯ 1 35,000 ರೂ
    ಸಾಮಾಜಿಕ ಮಾಧ್ಯಮ ಮಾರ್ಕೆಟಿಂಗ್ (ಅಸೋಸಿಯೇಟ್​) ಪದವಿ ಪೂರ್ಣಗೊಂಡಿರಬೇಕು 5 30, 000 ರೂ
    ಮ್ಯಾನೇಜರ್​ (ಈವೆಂಟ್ಸ್​) ಹೋಟೆಲ್ ಮ್ಯಾನೇಜ್‌ಮೆಂಟ್ ಮತ್ತು ಈವೆಂಟ್ ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ ಅಥವಾ ಮೂರು ವರ್ಷದ ಡಿಪ್ಲೊಮಾ ಹೊಂದಿರಬೇಕು. ಅಥವಾ ಸ್ನಾತಕೋತ್ತರ ಡಿಪ್ಲೊಮಾ ಅಥವಾ ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ. ಎರಡು ವರ್ಷಗಳ ಅನುಭವ ಕಡ್ಡಾಯ 1 50,000 ರೂ

    ವಿಶೇಷ ಸೂಚನೆಗಳು

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅಕ್ಟೋಬರ್ 11, 2021
    ಗುತ್ತಿಗೆ ಒಪ್ಪಂದದ ಮುಕ್ತಾಯ:  ಒಂದು ವರ್ಷ. ಕಾರ್ಯಕ್ಷಮತೆಯನ್ನು ಅವಲಂಬಿಸಿ ಒಪ್ಪಂದವನ್ನು ಎರಡು ವರ್ಷಗಳವರೆಗೆ ವಿಸ್ತರಿಸುವ ಸಾಧ್ಯತೆಯಿದೆ.
    ಅಭ್ಯರ್ಥಿಗಳ ವಯಸ್ಸು- 22 ರಿಂದ 58 ವರ್ಷಗಳು
    ಈ ಉದ್ಯೋಗ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ

    ಇದನ್ನು ಓದಿ: ಮುಂದಿನ ವರ್ಷದಿಂದ ಉದ್ಯೋಗಿಗಳಿಗೆ ದುಪ್ಪಟ್ಟು ಸಂಬಳ; ಯಾವ್ಯಾವ ಕಂಪನಿಗಳಲ್ಲಿ ಗೊತ್ತಾ!

    ಅರ್ಜಿ ಸಲ್ಲಿಸುವ ವಿಧಾನ

    ಹಂತ 1- ಅಭ್ಯರ್ಥಿಗಳು http://loksabhaph.nic.in/Recruitment/advandnot.aspx ವೆಬ್‌ಸೈಟ್ ತೆರೆಯಬೇಕು.
    ಹಂತ 2- ಮುಖಪುಟದಲ್ಲಿರುವ ಲೋಕಸಭಾ ಸೆಕ್ರೆಟರಿಯೇಟ್ ಲಿಂಕ್‌ನಲ್ಲಿ ಕನ್ಸಲ್ಟೆಂಟ್‌ಗಳ ನಿಶ್ಚಿತಾರ್ಥದ ಮೇಲೆ ಕ್ಲಿಕ್ ಮಾಡಿ.
    ಹಂತ 3- ಅಧಿಸೂಚನೆ ತೆರೆಯುತ್ತದೆ. ಅರ್ಜಿ ನಮೂನೆಯನ್ನು ಅಧಿಸೂಚನೆಯಲ್ಲಿ ಸೇರಿಸಲಾಗುವುದು.
    ಹಂತ 4- ಅರ್ಜಿ ನಮೂನೆಯನ್ನು ಮುದ್ರಿಸಿ.
    ಹಂತ 5- ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿ ಮತ್ತು ಕೊನೆಯ ದಿನಾಂಕದೊಳಗೆ ಅಧಿಸೂಚನೆಯಲ್ಲಿ ಉಲ್ಲೇಖಿಸಿರುವ ವಿಳಾಸಕ್ಕೆ ಕಳುಹಿಸಿ

    ಅರ್ಜಿಗಳನ್ನು ಕಳುಹಿಸಬೇಕಾದ ವಿಳಾಸ:
    Administration Branch-I,
    Room No. 619, Lok Sabha Secretariat,
    Parliament House Annexe, New Delhi – 110001.
    Published by:Seema R
    First published: