• Home
 • »
 • News
 • »
 • jobs
 • »
 • Jobs in Vijayapura: ಲೈಬ್ರರಿ ಸಹಾಯಕರ ಹುದ್ದೆಗೆ ವಾಕ್​ ಇನ್​ ಇಂಟರ್​ವ್ಯೂ

Jobs in Vijayapura: ಲೈಬ್ರರಿ ಸಹಾಯಕರ ಹುದ್ದೆಗೆ ವಾಕ್​ ಇನ್​ ಇಂಟರ್​ವ್ಯೂ

ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಸಿ

ಅರ್ಹ ಪದವೀಧರರು ವಾಕ್​ ಇನ್​ ಇಂಟರ್​ವ್ಯೂ ನಲ್ಲಿ ಭಾಗಿಯಾಗಬಹುದಾಗಿದೆ. ಈ ಹುದ್ದೆಗೆ ಅಕ್ಟೋಬರ್​ 7ರಂದು ವಾಕ್​ ಇನ್​ ಇಂಟರ್​ವ್ಯೂ ನಡೆಯಲಿದೆ.

 • Share this:

  ವಿಜಯಪುರ ಕೃಷಿ ವಿಶ್ವವಿದ್ಯಾಲಯದಲ್ಲಿ ಲೈಬ್ರರಿ ಸಹಾಯಕ (Library Assistant) ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಿ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಧಾರವಾಡ (University of Agricultural Sciences Dharwad) ಅಧಿಸೂಚನೆ ಹೊರಡಿಸಿದೆ. ನೇರ ನೇಮಕಾತಿ ಮೂಲಕ ಲೈಬ್ರರಿ ಸಹಾಯಕರ ಹುದ್ದೆ ಭರ್ತಿಗೆ ಮುಂದಾಗಲಾಗಿದ್ದು, ಆಸಕ್ತ ಮತ್ತು ಅರ್ಹ ಪದವೀಧರರು ವಾಕ್​ ಇನ್​ ಇಂಟರ್​ವ್ಯೂ ನಲ್ಲಿ ಭಾಗಿಯಾಗಬಹುದಾಗಿದೆ. ಈ ಹುದ್ದೆಗೆ ಅಕ್ಟೋಬರ್​ 7ರಂದು ವಾಕ್​ ಇನ್​ ಇಂಟರ್​ವ್ಯೂ ನಡೆಯಲಿದೆ.


  ಈ ಹುದ್ದೆಗಳನ್ನು ತಾತ್ಕಾಲಿಕವಾಗಿ ಒಪ್ಪಂದದ ಆಧಾರದ ಮೇಲೆ ಭರ್ತಿ ಮಾಡಲಾಗುವುದು. ಈ ನೇಮಕಾತಿ ಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

  ಹುದ್ದೆ ನೇಮಕಾತಿಹುದ್ದೆ ವಿವರ
  ವಿಶ್ವವಿದ್ಯಾಲಯದ ಹೆಸರುಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಧಾರವಾಡ (UAS ಧಾರವಾಡ)
  ಹುದ್ದೆಯ ಹೆಸರುಗ್ರಂಥಾಲಯ ಸಹಾಯಕ
  ಹುದ್ದೆಗಳ ಸಂಖ್ಯೆ2
  ಉದ್ಯೋಗ ಸ್ಥಳವಿಜಯಪುರ
  ವೇತನ14000 ರೂ ಮಾಸಿಕ

  ಶೈಕ್ಷಣಿಕ ಅರ್ಹತೆ: ಧಾರವಾಡ ಅಧಿಕೃತ ಅಧಿಸೂಚನೆಯ ಪ್ರಕಾರ, ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಅಭ್ಯರ್ಥಿಯು ಗ್ರಂಥಾಲಯ ವಿಜ್ಞಾನದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಅನ್ನು  ಪೂರ್ಣಗೊಳಿಸಿರಬೇಕು.


  ಅನುಭವದ ವಿವರಗಳು
  ಅಭ್ಯರ್ಥಿಗಳು ಲೈಬ್ರರಿ, ಕಾಲೇಜು, ಸಂಶೋಧನಾ ಸಂಸ್ಥೆಯಲ್ಲಿ ವರ್ಗೀಕರಣ ಮತ್ತು ಕ್ಯಾಟಲಾಗ್ ಪುಸ್ತಕಗಳಲ್ಲಿ ಅನುಭವವನ್ನು ಹೊಂದಿರಬೇಕು


  ವಯೋಮಿತಿ:  ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಯುಎಎಸ್ ಧಾರವಾಡ ನಿಯಮಗಳ ಪ್ರಕಾರ ವಯಸ್ಸಿನ ಮಿತಿಯನ್ನು ಹೊಂದಿರಬೇಕು.
  ವಯೋಮಿತಿ ಸಡಿಲಿಕೆ:
  ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಧಾರವಾಡ ನಿಯಮಾವಳಿ ಪ್ರಕಾರ


  ಆಯ್ಕೆ ಪ್ರಕ್ರಿಯೆ
  ಲಿಖಿತ ಪರೀಕ್ಷೆ ಮತ್ತು ಸಂದರ್ಶನ


  ನೇರ ಸಂದರ್ಶನ ನಡೆಸುವ ಸ್ಥಳ
  ಸಂದರ್ಶನ ಕೊಠಡಿ, ಡೀನ್ (ಕೃಷಿ), ಕೃಷಿ ವಿಶ್ವವಿದ್ಯಾಲಯ, ವಿಜಯಪುರ, ಕರ್ನಾಟಕ


  ಪ್ರಮುಖ ದಿನಾಂಕಗಳು:
  ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 22ಸೆಪ್ಟೆಂಬರ್​ -2022
  ವಾಕ್-ಇನ್ ದಿನಾಂಕ: 07 ಅಕ್ಟೋಬರ್ 2022ರ ಬೆಳಗ್ಗೆ 10:30ಕ್ಕೆ


  ಇದನ್ನು ಓದಿ: ತೋಟಗಾರಿಕೆ ಸಂಶೋಧನಾ ಸಂಸ್ಥೆಯಲ್ಲಿ ಉದ್ಯೋಗ; ಮಾಸಿಕ 35000 ರೂ ವೇತನ


  ಅಧಿಸೂಚನೆ ಪ್ರಮುಖ ಲಿಂಕ್‌ಗಳು
  ಅಧಿಕೃತ ವೆಬ್‌ಸೈಟ್: uasd.edu


  ನೇರ ಸಂದರ್ಶನದ ವೇಳೆ ಈ ದಾಖಲೆ ಅವಶ್ಯ


  ನೇರ ಸಂದರ್ಶನದ ದಿನ ನೀಡುವ ನಿಗದಿತ ಅರ್ಜಿಯನ್ನು ಅಭ್ಯರ್ಥಿಗಳು ಭರ್ತಿ ಮಾಡಬೇಕಿದೆ. ಇದರ ಜೊತೆಗೆ ಈ ದಾಖಲೆಗಳನ್ನು ಲಗತ್ತಿಸುವುದು ಅವಶ್ಯವಾಗಿದೆ.


  -ಎರಡು ಪಾಸಪೋರ್ಸ್​ ಸೈಜ್​ ಫೋಟೋ
  -ವಯಸ್ಸಿನ ದೃಢೀಕರಣ ಅಥವಾ ವಯಸ್ಸು ದಾಖಲಾಗಿರುವ ಎಸ್​ಎಸ್​ಎಲ್ಸಿ ಪ್ರಮಾಣ ಪ್ರತ್ರ, ಶೈಕ್ಷಣಿಕ ದಾಖಲೆ, ಅನುಭವ, ಸಂಶೋಧಾನ ಪತ್ರಗಳು
  -ಜಾತಿ ಮತ್ತು ಮೀಸಲಾತಿ ಪ್ರಮಾಣ ಪತ್ರ

  Published by:Seema R
  First published: