UPSC Recruitment: ಕೇಂದ್ರ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ: ಕೊನೆ ದಿನ ಸನ್ನಿಹಿತ, ಕೂಡಲೇ ಅಪ್ಲೈ ಮಾಡಿ

ತಾಂತ್ರಿಕ ಸಲಹೆಗಾರ ಹಾಗೂ ರೀಡರ್​ ಸೇರಿದಂತೆ ಒಟ್ಟು 16 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 11 ಆಗಸ್ಟ್ 2022 ಹಾಗೂ ಆನ್‌ಲೈನ್ ಅರ್ಜಿಯನ್ನು ಮುದ್ರಿಸಲು ಕೊನೆಯ ದಿನಾಂಕ: 12 ಆಗಸ್ಟ್ 2022.

ಹುದ್ದೆಗೆ ಅರ್ಜಿ

ಹುದ್ದೆಗೆ ಅರ್ಜಿ

  • Share this:
 ಕೇಂದ್ರ ಸರ್ಕಾರದ ಉದ್ಯೋಗ ಪಡೆಯಲು ಶ್ರಮ ಪಡುತ್ತಿರುವ ಅಭ್ಯರ್ಥಿಗಳಿಗೆ ಅದ್ಭುತ ಅವಕಾಶವೊಂದ ಒದಗಿ ಬಂದಿದೆ. ಕೇಂದ್ರ ಲೋಕ ಸೇವಾ ಆಯೋಗದಿಂದ (Union Public Service Commission) ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ತಾಂತ್ರಿಕ ಸಲಹೆಗಾರ ಹಾಗೂ ರೀಡರ್​ ಸೇರಿದಂತೆ ಒಟ್ಟು 16 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಆಗಸ್ಟ್​ 11 ಆಗಿದೆ.

ಸಂಸ್ಥೆಯ ಹೆಸರು: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC)
ಹುದ್ದೆಗಳ ಸಂಖ್ಯೆ: 16
ಉದ್ಯೋಗ ಸ್ಥಳ: ನವದೆಹಲಿ - ನಾಗ್ಪುರ - ಚಂಡೀಗಢ - ಅಖಿಲ ಭಾರತ
ಹುದ್ದೆಯ ಹೆಸರು: ತಾಂತ್ರಿಕ ಸಲಹೆಗಾರ, ರೀಡರ್
ಸಂಬಳ: UPSC ನಿಯಮಗಳ ಪ್ರಕಾರ



















































ಹುದ್ದೆಹದ್ದೆ ಸಂಖ್ಯೆವಿದ್ಯಾರ್ಹತೆವಯೋಮಿತಿ
ತಾಂತ್ರಿಕ ಸಲಹೆಗಾರ1ಮೆಕ್ಯಾನಿಕಲ್​ ಇಂಜಿನಿಯರಿಂಗ್​​ನಲ್ಲಿ ಪದವಿ50 ವರ್ಷ
ಸಹಾಯಕ ನಿರ್ದೇಶಕ11ಪದವಿ35 ವರ್ಷ
ಸಹಾಯಕ ಮಳಿಗೆ ಅಧಿಕಾರಿ1ಅರ್ಥಶಾಸ್ತ್ರ/ವಾಣಿಜ್ಯ/ಸಂಖ್ಯಾಶಾಸ್ತ್ರ/ವ್ಯಾಪಾರ ಅಧ್ಯಯನ/ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿ30 ವರ್ಷ
ರೀಡರ್​1ಜವಳಿ ಸಂಸ್ಕರಣೆ/ಜವಳಿ ರಸಾಯನಶಾಸ್ತ್ರ/ಎಂಜಿನಿಯರಿಂಗ್/ತಂತ್ರಜ್ಞಾನದಲ್ಲಿ ಪದವಿ40 ವರ್ಷ
ಹಿರಿಯ ಉಪನ್ಯಾಸಕರು (ಮೂಳೆರೋಗ)1ಆರ್ಥೋಪೆಡಿಕ್ಸ್‌ನಲ್ಲಿ ಎಂ.ಎಸ್50 ವರ್ಷ
ಹಿರಿಯ ಉಪನ್ಯಾಸಕರು (ರೇಡಿಯೋ ಡಯಾಗ್ನೋಸಿಸ್)11ರೇಡಿಯೊಡಯಾಗ್ನೋಸಿಸ್, ರೇಡಿಯಾಲಜಿಯಲ್ಲಿ ಎಂ.ಡಿ, ರೇಡಿಯಾಲಜಿಯಲ್ಲಿ ಎಂ.ಎಸ್50 ವರ್ಷ
ಅಸಿಸ್ಟೆಂಟ್ ಸ್ಟೋರ್ಸ್ ಆಫೀಸರ್:1ಅಭ್ಯರ್ಥಿಗಳು ಇಂಡೆಂಟಿಂಗ್, ಟೆಕ್ನಿಕಲ್ ಸ್ಟೋರ್ಸ್ ಮತ್ತು ಸ್ಟೋರ್ಸ್ ಅಕೌಂಟ್ ಅಥವಾ ಮೆಟೀರಿಯಲ್ ಮ್ಯಾನೇಜ್ಮೆಂಟ್ ಕ್ಷೇತ್ರದಲ್ಲಿ 1-2 ವರ್ಷಗಳ ಅನುಭವವನ್ನು ಹೊಂದಿರಬೇಕುನಿಗದಿಪಡಿಸಿಲ್ಲ

ವಯೋಮಿತಿ ಸಡಿಲಿಕೆ:
ಕೇಂದ್ರ ಲೋಕಸೇವಾ ಆಯೋಗದ ನಿಯಮಗಳ ಪ್ರಕಾರ

ಅರ್ಜಿ ಶುಲ್ಕ:
ಪ. ಜಾ, ಪ. ಪಂ, ವಿಕಲಚೇತನ  ಮತ್ತು ಮಹಿಳಾ ಅಭ್ಯರ್ಥಿಗಳು: ಶುಲ್ಕ ವಿನಾಯಿತಿ
ಸಾಮಾನ್ಯ/ಒಬಿಸಿ, ಪುರುಷ ಅಭ್ಯರ್ಥಿಗಳು: 25 ರೂ

ಪಾವತಿ ವಿಧಾನ: ಆನ್‌ಲೈನ್

ಇದನ್ನು ಓದಿ: ಬೆಂಗಳೂರಿನ ಜವಾಹರ್​​ಲಾಲ್​​ ನೆಹರು ಸಂಶೋಧನಾ ಸಂಸ್ಥೆಯಲ್ಲಿದೆ ಕೆಲಸ; ಇಲ್ಲಿದೆ ವಿವರ

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ ಮತ್ತು ಸಂದರ್ಶನ

ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 22 ಜುಲೈ 2022
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 11 ಆಗಸ್ಟ್ 2022
ಆನ್‌ಲೈನ್ ಅರ್ಜಿಯನ್ನು ಮುದ್ರಿಸಲು ಕೊನೆಯ ದಿನಾಂಕ: 12 ಆಗಸ್ಟ್ 2022

 ಅಧಿಸೂಚನೆ ಪ್ರಮುಖ ಲಿಂಕ್‌ಗಳು
ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್: upsc.gov.in

ಇದನ್ನು ಓದಿ: ತುಮಕೂರು, ಕೋಲಾರ, ಚಿತ್ರದುರ್ಗದಲ್ಲಿ ಪ್ರಾಂಶುಪಾಲರ ಹುದ್ದೆಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಕೆ ಪ್ರಕ್ರಿಯೆ

ಅಧಿಸೂಚನೆ ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಂಡು ಮುಂದುವರೆಯಿರಿ.

-ಅಧಿಕೃತ ಅಧಿಸೂಚನೆಯಿಂದ ಅರ್ಜಿ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ.

- ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ನೀಡಿ.

ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ಬಳಿಕ ಸಲ್ಲಿಸು ಬಟನ್​ ಕ್ಲಿಕ್​ ಮಾಡಿ.
Published by:Kavya V
First published: