KVS Recruitment 2022: ಕೇಂದ್ರೀಯ ವಿದ್ಯಾಲಯ ಸಂಘಟನೆ(Kendriya Vidyalaya Sangathan)ಯಲ್ಲಿ 13,404 ಹುದ್ದೆಗಳು ಖಾಲಿ ಇದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಸರ್ಕಾರಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಡಿಸೆಂಬರ್ 26, 2022 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್ಲೈನ್(Online) ಮೂಲಕ ಅರ್ಜಿ ಹಾಕಿ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಕೇಂದ್ರೀಯ ವಿದ್ಯಾಲಯ ಸಂಘಟನೆ |
ಹುದ್ದೆಗಳ ಹೆಸರು | ಪ್ರಾಂಶುಪಾಲ, ಅಸಿಸ್ಟೆಂಟ್ ಎಂಜಿನಿಯರ್ |
ಒಟ್ಟು ಹುದ್ದೆ | 13,404 |
ಉದ್ಯೋಗದ ಸ್ಥಳ | ಭಾರತದಲ್ಲಿ ಎಲ್ಲಿ ಬೇಕಾದರೂ |
ವೇತನ | ನಿಯಮಾನುಸಾರ |
13404-Primary-Teacher-TGT-Posts-Advt-Details-KVS
ಹುದ್ದೆಯ ಮಾಹಿತಿ:
ಪ್ರಾಥಮಿಕ ಶಿಕ್ಷಕರು (PRT)-6414
ಸಹಾಯಕ ಆಯುಕ್ತರು- 52
ಪ್ರಾಂಶುಪಾಲರು- 239
ಉಪ ಪ್ರಾಂಶುಪಾಲರು- 203
ಸ್ನಾತಕೋತ್ತರ ಶಿಕ್ಷಕರು (PGT)- 1409
ತರಬೇತಿ ಪಡೆದ ಪದವೀಧರ ಶಿಕ್ಷಕರು (ಟಿಜಿಟಿ)- 3176
ಗ್ರಂಥಪಾಲಕ- 355
PRT (ಸಂಗೀತ)- 303
ಹಣಕಾಸು ಅಧಿಕಾರಿ-6
ಸಹಾಯಕ ಇಂಜಿನಿಯರ್ (ಸಿವಿಲ್)-2
ಸಹಾಯಕ ವಿಭಾಗ ಅಧಿಕಾರಿ (ASO)- 156
ಹಿಂದಿ ಅನುವಾದಕ-11
ಹಿರಿಯ ಕಾರ್ಯದರ್ಶಿ ಸಹಾಯಕ (UDC)- 322
ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ (LDC)- 702
ಸ್ಟೆನೋಗ್ರಾಫರ್ ಗ್ರೇಡ್-II - 54
ಇದನ್ನೂ ಓದಿ: JOBS: ಮಂಗಳೂರು ಪೋರ್ಟ್ನಲ್ಲಿ ಕೆಲಸ ಖಾಲಿ ಇದೆ- ಡಿಗ್ರಿ ಆಗಿದ್ರೆ ಅರ್ಜಿ ಹಾಕಿ, ಸಂಬಳ 1.40 ಲಕ್ಷ
ಆಯ್ಕೆ ಪ್ರಕ್ರಿಯೆ:
ಕಂಪ್ಯೂಟರ್ ಆಧಾರಿತ ಪರೀಕ್ಷೆ
ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ?
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ- 05/12/2022
ಅರ್ಜಿ ಸಲ್ಲಿಸಲು ಕೊನೆ ದಿನ- 26/12/2022
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ