Jobs in Gadag: ಗದಗದಲ್ಲಿ ಅತಿಥಿ ಉಪನ್ಯಾಸಕರ ಹುದ್ದೆ; ನೇರ ಸಂದರ್ಶನದ ಮೂಲಕ ಆಯ್ಕೆ

ಈ  ಅತಿಥಿ ಅಧ್ಯಾಪಕರ ಹುದ್ದೆ ತಾತ್ಕಾಲಿಕವಾಗಿದೆ. 2022-23ರ ಸಾಲಿಗೆ ಮಾತ್ರ ನೇಮಕಾತಿ ನಡೆಸಲಾಗುತ್ತಿದೆ. 

ಬೇಗ ಅರ್ಜಿ ಸಲ್ಲಿಸಿ

ಬೇಗ ಅರ್ಜಿ ಸಲ್ಲಿಸಿ

  • Share this:
    ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾನಿಲಯದಲ್ಲಿ (Karnataka State Rural Development and Panchayat Raj University) ಅತಿಥಿ ಉಪನ್ಯಾಸಕರ (Guest Faculty) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅತಿಥಿ ಅಧ್ಯಾಪಕರು, ಪ್ರಾಜೆಕ್ಟ್ ಫೆಲೋ ಹುದ್ದೆ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಗದಗದಲ್ಲಿ ಕಾರ್ಯ ನಿರ್ವಹಿಸಲು ಇಚ್ಛಿಸುವ ಅಭ್ಯರ್ಥಿಗಳು ಈ ಹುದ್ದೆಗೆ ನಡೆಯಲಿರುವ ನೇರ ಸಂದರ್ಶನದಲ್ಲಿ ಭಾಗಿಯಾಗಬಹುದಾಗಿದೆ. ಈ ಹುದ್ದೆಗೆ ಆಗಸ್ಟ್​ 26ರಂದು ವಾಕ್​-ಇನ್​-ಇಂಟರ್​ವ್ಯೂ ನಡೆಯಲಿದೆ.

    ಈ  ಅತಿಥಿ ಅಧ್ಯಾಪಕರ ಹುದ್ದೆ ತಾತ್ಕಾಲಿಕವಾಗಿದೆ. 2022-23ರ ಸಾಲಿಗೆ ಮಾತ್ರ ನೇಮಕಾತಿ ನಡೆಸಲಾಗುತ್ತಿದೆ. ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

    ವಿಶ್ವವಿದ್ಯಾಲಯದ ಹೆಸರು: ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ (KSRDPRU)
    ಹುದ್ದೆಯ ಹೆಸರು: ಅತಿಥಿ ಫ್ಯಾಕಲ್ಟಿ, ಪ್ರಾಜೆಕ್ಟ್ ಫೆಲೋ
    ಹುದ್ದೆಗಳ ಸಂಖ್ಯೆ: ನಿರ್ದಿಷ್ಟಪಡಿಸಲಾಗಿಲ್ಲ
    ಕಾರ್ಯ ನಿರ್ವಹಣೆ ಸ್ಥಳ: ಗದಗ
    ವೇತನ: ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ನಿಯಮಗಳ ಪ್ರಕಾರ







































    ಹುದ್ದೆವಿದ್ಯಾರ್ಹತೆ
    ಅತಿಥಿ ಫ್ಯಾಕಲ್ಟಿಫುಡ್​ ಸೈನ್ಸ್​ ಅಂಡ್​ ಟೆಕ್ನಾಲಾಜಿಯಲ್ಲಿ ಎಂಎಸ್ಸಿ ಪದವಿ
    ಪ್ರಾಜೆಕ್ಟ್ ಫೆಲೋಫುಡ್​ ಸೈನ್ಸ್​ ಅಂಡ್​ ಟೆಕ್ನಾಲಾಜಿಯಲ್ಲಿ ಎಂಎಸ್ಸಿ ಪದವಿ
    ಅತಿಥಿ ಅಧ್ಯಾಪಕರು (ಕನ್ನಡ ಭಾಷೆ)ಕೆಎಸ್​ಆರ್​ಡಿಪಿಆರ್​ಯು ನೇಮಕಾತಿ ನಿಯಮಗಳ ಪ್ರಕಾರ
    ಅತಿಥಿ ಫ್ಯಾಕಲ್ಟಿ , ಪ್ರಾಜೆಕ್ಟ್ ಫೆಲೋಗ್ರಾಮೀಣ ನಿರ್ವಹಣೆ/ಕೃಷಿ ವ್ಯಾಪಾರ ನಿರ್ವಹಣೆಯಲ್ಲಿ ಎಂಬಿಎ
    ಪ್ರಾಜೆಕ್ಟ್ ಫೆಲೋಗ್ರಾಮೀಣ ನಿರ್ವಹಣೆ/ಕೃಷಿ ವ್ಯಾಪಾರ ನಿರ್ವಹಣೆಯಲ್ಲಿ ಎಂಬಿಎ
    ಅತಿಥಿ ಅಧ್ಯಾಪಕರುಸಹಕಾರ ನಿರ್ವಹಣೆ/ಉದ್ಯಮಶೀಲತೆಯಲ್ಲಿ ಎಂಕಾಂ
    ಪ್ರಾಜೆಕ್ಟ್ ಫೆಲೋಕಂಪ್ಯೂಟರ್ ಸೈನ್ಸ್‌ನಲ್ಲಿ ಎಂ.ಎಸ್ಸಿ
    ಅತಿಥಿ ಫ್ಯಾಕಲ್ಟಿಸಾರ್ವಜನಿಕ ಆರೋಗ್ಯದ ಸ್ನಾತಕೋತ್ತರ

    ವಯೋಮಿತಿ: ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ನೇಮಕಾತಿ ಅಧಿಸೂಚನೆಯ ಪ್ರಕಾರ, ನೇಮಕಾತಿ ನಿಯಮಗಳ ಪ್ರಕಾರ ವಯಸ್ಸಿನ ಮಿತಿಯನ್ನು ಹೊಂದಿರಬೇಕು.

    ಇದನ್ನು ಓದಿ: ಧಾರವಾಡದಲ್ಲಿದೆ ಸಹಾಯಕ ಪ್ರಾಧ್ಯಾಪಕರ ಹುದ್ದೆ; ಮಾಸಿಕ 45000 ರೂ ವೇತನ

    ವಯೋಮಿತಿ ಸಡಿಲಿಕೆ:
    ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ನಿಯಮಗಳ ಪ್ರಕಾರ

    ಆಯ್ಕೆ ಪ್ರಕ್ರಿಯೆ
    ನೇರ ಸಂದರ್ಶನ

    ನೇರ ಸಂದರ್ಶನ ಸ್ಥಳ
    ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ರೈತಭವನ, ಜನರಲ್ ಕಾರಿಯಪ್ಪ ವೃತ್ತ, ಗದಗ - 582101

    ಪ್ರಮುಖ ದಿನಾಂಕಗಳು:
    ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 18 ಆಗಸ್ಟ್​ 2022
    ವಾಕ್-ಇನ್ ದಿನಾಂಕ: ಆಗಸ್ಟ್ 25 ಮತ್ತು 26

    ಇದನ್ನು ಓದಿ: ಕುದುರೆಮುಖ ಕಬ್ಬಿಣದ ಅದಿರು ಕಂಪನಿಯಲ್ಲಿ ನೇರ ಸಂದರ್ಶನ​; ಬಿಇ, ಡಿಪ್ಲೊಮಾ ಆದವರಿಗಿದೆ ಕೆಲಸದ ಅವಕಾಶ

    ಪ್ರಮುಖ ಲಿಂಕ್​ಗಳು
    ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: ksrdpru.ac.in

    ನೇರ ಸಂದರ್ಶನದಲ್ಲಿ ಅಗತ್ಯವಾಗಿ ಕೊಂಡೊಯ್ಯಬೇಕಾದ ದಾಖಲೆ

    ಆಸಕ್ತ ಅಭ್ಯರ್ಥಿಗಳು ಭರ್ತಿಯಾದ ಅರ್ಜಿಯನ್ನು ನೇರ ಸಂದರ್ಶನಕ್ಕೆ ಕೊಂಡೊಯ್ಯವುದು ಅವಶ್ಯ.
    ಪದವಿ ಮತ್ತು 10ನೇ ತರಗತಿ ಮಾರ್ಕ್ಸ್​ ಕಾರ್ಡ್​​
    ಸಕ್ಷಮ ಅಧಿಕಾರಿಗಳು ನೀಡಿದ ಅನುಭವ ಪ್ರಮಾಣಪತ್ರಗಳು/ಯಾವುದೇ ಸಂಬಂಧಿತ ಪ್ರಮಾಣಪತ್ರಗಳು/ ಪ್ರಶಂಸಾಪತ್ರಗಳು.
    ಜಾತಿ ಪ್ರಮಾಣ ಪತ್ರ
    ನಾನ್-ಕ್ರೀಮಿ ಲೇಯರ್ ಪ್ರಮಾಣಪತ್ರ ಅತ್ಯಗತ್ಯ
    ಶೈಕ್ಷಣಿಕ ಅರ್ಹತೆ ಸಂಬಂಧಿಸಿದ ಯಾವುದೇ ಇತರ ಸಂಬಂಧಿತ ಮಾಹಿತಿ.
    Published by:Seema R
    First published: