KSP Recruitment: ಶೀಘ್ರದಲ್ಲಿಯೇ ಕೃತ್ಯ ಸ್ಥಳ ಪರಿಶೀಲನಾ ಅಧಿಕಾರಿಗಳ ನೇಮಕಾತಿ

ಕರ್ನಾಟಕ ಪೊಲೀಸ್​​ ಇಲಾಖೆಯಲ್ಲಿ ಕೆಲಸ ಮಾಡ ಬಯಸುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.

ಕರ್ನಾಟಕ ಪೊಲೀಸ್​​ ಇಲಾಖೆ ನೇಮಕಾತಿ

ಕರ್ನಾಟಕ ಪೊಲೀಸ್​​ ಇಲಾಖೆ ನೇಮಕಾತಿ

  • Share this:
    ಅಪರಾಧ ಕೃತ್ಯ ನಡೆದ ಸ್ಥಳದಲ್ಲಿ ವೈಜ್ಞಾನಿಕ ತಪಾಸಣೆ ನಡೆಸಿ, ಪ್ರಮುಖ ಮಾಹಿ ಸಂಗ್ರಹಿಸಲು ರಾಜ್ಯ ಪೊಲೀಸ್​ ಇಲಾಖೆಯಲ್ಲಿ ಕೃತ್ಯ ಸ್ಥಳ ಪರಿಶೀಲನಾ ಅಧಿಕಾರಿಗಳನ್ನು (Scene of Crime Officer) ಹುದ್ದೆ ಸೃಜಿಸುವುದಾಗಿ ಸರ್ಕಾರ ಹೇಳಿತ್ತು. ಈಗ ಈ ಹುದ್ದೆ ಮಂಜೂರು ಮಾಡಿ ಕರ್ನಾಟಕ ಸರ್ಕಾರ ಆದೇಶ ನೀಡಿದೆ. ಕರ್ನಾಟಕ ಪೊಲೀಸ್​​ ಇಲಾಖೆಯಲ್ಲಿ ಕೆಲಸ ಮಾಡ ಬಯಸುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.

    ಈ ಕುರಿತು ಅಧಿಸೂಚನೆ ಹೊರಡಿಸಿರುವ ಸರ್ಕಾರ ಯಾವುದೇ ವ್ಯಕ್ತಿಯಿಂದ ಸ್ವೀಕರಿಸಬಹುದಾದ ಯಾವುದೇ ಆಕ್ಷೇಪಣೆ ಅಥವಾ ಸಲಹೆಯನ್ನು ಪರಿಗಣಿಸುತ್ತದೆ. ಆಕ್ಷೇಪಣೆಗಳು ಮತ್ತು ಸಲಹೆಗಳನ್ನು 15ದಿನದೊಳಗೆ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ, ವಿಧಾನಸೌಧ, ಬೆಂಗಳೂರು -560001

    ಕರ್ನಾಟಕ ರಾಜ್ಯ ಪೊಲೀಸ್​ ಹುದ್ದೆ ಅಧಿಸೂಚನೆ (KSP Recruitment Notification)















    ಹುದ್ದೆ ವಿದ್ಯಾರ್ಹತೆ ಹುದ್ದೆ ಸಂಖ್ಯೆ ವೇತನ
    ಕೃತ್ಯ ಸ್ಥಳ ಪರಿಶೀಲನಾ ಅಧಿಕಾರಿ (Scene of Crime Officer)

    ಮಾನ್ಯತೆ ಪಡೆದ ವಿವಿಯಿಂದ ವಿಧಿ ವಿಜ್ಞಾನ ವಿಷಯದಲ್ಲಿ ಕನಿಷ್ಠ 55ರಷ್ಟು ಅಂಕದೊಂದಿಗೆ ಪದವಿ ಪಡೆದಿರಬೇಕು

    ಅಥವಾ

    ವಿಜ್ಞಾನ ವಿಷಯದಲ್ಲಿ ಪದವಿ, ವಿಧಿ ವಿಜ್ಞಾನ ವಿಷಯದಲ್ಲಿ ಡಿಪ್ಲೋಮೊ
    206 37900-70850 ರೂ ಮಾಸಿಕ ವೇತನ

    ಇನ್ನು ಈ ಹುದ್ದೆಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯದ  ನೇಮಕಾತಿ ಸೇವೆಗಳ ತಿದ್ದುಪಡಿ ಪ್ರಕಾರ ಅರ್ಜಿ ಆಹ್ವಾನಿಸಲಾಗುವುದು

    ವಯೋಮಿತಿ (Age limit)
    ಕರ್ನಾಟಕ ರಾಜ್ಯ ಪೊಲೀಸ್​ ನೇಮಕಾತಿ ನಿಯಮಾವಳಿಯಂತೆ ವಯೋಮಿತಿ ನಿಗದಿಸಲಾಗುವುದು. ಇದೇ ನಿಯಮಾವಳಿ ಅನುಸಾರ ವಯೋಮಿತಿ ಸಡಿಲಿಕೆ ಇರಲಿದೆ

    ಇದನ್ನು ಓದಿ: ಕೈಗಾದ ಅಣುಶಕ್ತಿ ಕೇಂದ್ರದಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ; ITI ಅಭ್ಯರ್ಥಿಗಳಿಗೆ ಉತ್ತಮ ಅವಕಾಶ

    ಆಯ್ಕೆ ಪ್ರಕ್ರಿಯೆ (Selection Process)
    ಲಿಖಿತ ಮತ್ತು ಸಂದರ್ಶನ

    ವಿಶೇಷ ಸೂಚನೆ (Specail instruction)
    ಈ ಹುದ್ದೆಗೆ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಸಂಬಂಧ ಪಟ್ಟ ಇಲಾಖೆ ಶೀಘ್ರದಲ್ಲಿ ನೇಮಕಾತಿ ಆದೇಶ ಹೊರಡಿಸಲಿದ್ದು, ಬಳಿಕ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಆರಂಭ ಮಾಡಬಹುದು.

    ಪ್ರಮುಖ ಲಿಂಕ್​ (Important link)

    ಶೀಘ್ರದಲ್ಲಿಯೇ ನೇಮಕಾತಿ ಆದೇಶ ಹೊರಡಿಸಲು ಸರ್ಕಾರ ಹೊರಡಿಸಿರುವ ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್​ ಮಾಡಿ

    ಕರ್ನಾಟಕ ಪೊಲೀಸ್​ ಇಲಾಖೆ ಅಧಿಕೃತ ಪೇಜ್​ಗೆ ಭೇಟಿ ನೀಡಲು ಈ ಲಿಂಕ್​ಗೆ ಕ್ಲಿಕ್​ ಮಾಡಿ
    Published by:Seema R
    First published: