PSI Recruitment: ತೃತೀಯ ಲಿಂಗಿಗಳಿಗೆ ಪೊಲೀಸ್ ಇಲಾಖೆಯಲ್ಲಿ ಕೆಲಸ; ಸಬ್​​ ಇನ್ಸ್​ಪೆಕ್ಟರ್​​ ಹುದ್ದೆಗೆ ಅರ್ಜಿ ಹಾಕಲು ಹೀಗೆ ಮಾಡಿ

5 ಹುದ್ದೆಗಳಲ್ಲಿ 4 ಹುದ್ದೆ ವಿಶೇಷ ಮೀಸಲಾತಿ ಸಬ್ ಇನ್ಸ್ ಪೆಕ್ಟರ್ - ಕರ್ನಾಟಕ , 1 ಹುದ್ದೆ ವಿಶೇಷ ಮೀಸಲಾತಿ ಸಬ್ ಇನ್ಸ್ ಪೆಕ್ಟರ್-ಇಂಡಿಯಾಗೆ ಮೀಸಲು ಇಡಲಾಗಿದೆ.

ಕರ್ನಾಟಕ ಪೊಲೀಸ್​​ ಇಲಾಖೆ ನೇಮಕಾತಿ

ಕರ್ನಾಟಕ ಪೊಲೀಸ್​​ ಇಲಾಖೆ ನೇಮಕಾತಿ

  • Share this:
ಕರ್ನಾಟಕ(Karnataka)ದಲ್ಲಿ ತೃತೀಯ ಲಿಂಗಿ(Transgender)ಯರಿಗೆ ಸುವರ್ಣಾವಕಾಶ ಸಿಕ್ಕಿದೆ. ತೃತೀಯ ಲಿಂಗಿಯರ ಬಹುದಿನಗಳ ಕನಸು ನನಸಾಗುತ್ತಿದೆ. ಇನ್ನು ಮುಂದೆ ಪೊಲೀಸ್ ಇಲಾಖೆ(Police Department)ಯಲ್ಲಿ ತೃತೀಯ ಲಿಂಗಿಯರೂ ಕೆಲಸ ಮಾಡಬಹುದು. ಹೌದು ಇಂತಹದ್ದೊಂದು ಸುವರ್ಣಾವಕಾಶವನ್ನು ಕರ್ನಾಟಕ ಪೊಲೀಸ್​ ಇಲಾಖೆ(Karnataka State Police) ತೃತೀಯ ಲಿಂಗಿಯರಿಗೆ ನೀಡಿದೆ. ದೇಶದಲ್ಲೇ ಪ್ರಪ್ರಥಮ ಬಾರಿಗೆ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಲು ತೃತೀಯ ಲಿಂಗಿಯರಿಂದ ಅರ್ಜಿ(Application) ಆಹ್ವಾನಿಸಿದೆ ಕರ್ನಾಟಕ ಪೊಲೀಸ್ ಇಲಾಖೆ.

ಒಟ್ಟು 70 ಹುದ್ದೆಗಳು ಖಾಲಿ

ಒಟ್ಟು 70 ವಿಶೇಷ ಮೀಸಲಾತಿ ಸಬ್ ಇನ್ಸ್​​ಪೆಕ್ಟರ್​ (KRSI & IRB) ಹುದ್ದೆಗಳು ಖಾಲಿ ಇದ್ದು, ಸರ್ಕಾರಿ ಉದ್ಯೋಗ ಅರಸುತ್ತಿರುವ ಹಾಗೂ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಲು ಇಚ್ಛಿಸುವ ತೃತೀಯ ಲಿಂಗಿಯರೂ ಸಹ ಅರ್ಜಿ ಸಲ್ಲಿಸಬಹುದು. ಜನವರಿ 18 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಸದ್ಯ ಖಾಲಿ ಇರುವ ವಿಶೇಷ ಮೀಸಲಾತಿ ಸಬ್​​-ಇನ್ಸ್​​ಪೆಕ್ಟರ್​ ಹುದ್ದೆಗಳಿಗೆ ಪುರುಷರು, ಮಹಿಳೆಯರು ಹಾಗೂ ತೃತೀಯ ಲಿಂಗಿಯರು ಅರ್ಜಿ ಹಾಕಬಹುದು.

ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಕರ್ನಾಟಕ ಪೊಲೀಸ್ ಇಲಾಖೆ
ಹುದ್ದೆಯ ಹೆಸರುವಿಶೇಷ ಮೀಸಲಾತಿ ಸಬ್ ಇನ್ಸ್​​ಪೆಕ್ಟರ್​ (KRSI & IRB)
ಒಟ್ಟು ಹುದ್ದೆಗಳು70
ವಿದ್ಯಾರ್ಹತೆಯಾವುದೇ ಪದವಿ
ಉದ್ಯೋಗದ ಸ್ಥಳಕರ್ನಾಟಕ
ವೇತನಮಾಸಿಕ ₹ 37,900-70,850
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ18/01/2022ಅರ್ಹತಾ ಮಾನದಂಡಗಳೇನು?

ವಿದ್ಯಾರ್ಹತೆ:
ವಿಶೇಷ ಮೀಸಲಾತಿ ಸಬ್ ಇನ್ಸ್​​ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಕಡ್ಡಾಯವಾಗಿ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.

ಇದನ್ನೂ ಓದಿ: ಬೆಂಗಳೂರು ಸಿಟಿ ಪೊಲೀಸ್ ಕಚೇರಿಯಲ್ಲಿ ವಿವಿಧ ಹುದ್ದೆಗಳು ಖಾಲಿ, ಮಾಸಿಕ ವೇತನ ₹ 75,000

ವಯೋಮಿತಿ:
ವಿಶೇಷ ಮೀಸಲಾತಿ ಸಬ್ ಇನ್ಸ್​​ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 21ರಿಂದ 26 ವರ್ಷದೊಳಗಿರಬೇಕು. ಮಾಸಜಿ ಸೈನಿಕರಿಗೆ ಗರಿಷ್ಠ ವಯೋಮಿತಿ ನೀಡಲಾಗಿದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷ, ಎಸ್​ಸಿ, ಎಸ್​ಟಿ ಅಭ್ಯರ್ಥಿಗಳಿಗೆ 40 ವರ್ಷ. ಜೊತೆಗೆ SC/ST ಅಭ್ಯರ್ಥಿಗಳಿಗೆ 2 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಅರ್ಜಿ ಶುಲ್ಕ:
ಸಾಮಾನ್ಯ/ ಒಬಿಸಿ(2ಎ, 2ಬಿ,3ಬಿ, 3ಎ)-500 ರೂ. ಅರ್ಜಿ ಶುಲ್ಕ
SC/ST ಅಭ್ಯರ್ಥಿಗಳಿಗೆ- 250 ರೂ. ಅರ್ಜಿ ಶುಲ್ಕ

ಇದನ್ನೂ ಓದಿ: KSP Recruitment 2021: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಅನೇಕ ಹುದ್ದೆಗಳು ಖಾಲಿ, ಪದವೀಧರರು ಅರ್ಜಿ ಸಲ್ಲಿಸಿ

ಆಯ್ಕೆ ಪ್ರಕ್ರಿಯೆ:
ಸಹಿಷ್ಣುತೆ ಪರೀಕ್ಷೆ
ದೈಹಿಕ ಗುಣಮಟ್ಟದ ಪರೀಕ್ಷೆ (PET)

ಈ ಹಿಂದೆ ತೃತೀಯ ಲಿಂಗಿಯರು ತಮಗೂ ಪೊಲೀಸ್ ಇಲಾಖೆಯಲ್ಲಿ ಕೆಲಸ ನೀಡುವಂತೆ ಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯ ತೃತೀಯ ಲಿಂಗಿಯರ ಬೇಡಿಕೆಗೆ ಅಸ್ತು ಎಂದಿದೆ. ಈ ಹಿನ್ನೆಲೆ ಪೊಲೀಸ್​ ಇಲಾಖೆ ತೃತೀಯ ಲಿಂಗಿಯರಿಗೆ ಮೀಸಲಾತಿ ನೀಡಿದೆ. ಇವರಿಗಾಗಿ 5 ಹುದ್ದೆಗಳನ್ನು ಮೀಸಲು ಇಟ್ಟಿದೆ. 5 ಹುದ್ದೆಗಳಲ್ಲಿ 4 ಹುದ್ದೆ ವಿಶೇಷ ಮೀಸಲಾತಿ ಸಬ್ ಇನ್ಸ್ ಪೆಕ್ಟರ್ - ಕರ್ನಾಟಕ , 1 ಹುದ್ದೆ ವಿಶೇಷ ಮೀಸಲಾತಿ ಸಬ್ ಇನ್ಸ್ ಪೆಕ್ಟರ್-ಇಂಡಿಯಾಗೆ ಮೀಸಲು ಇಡಲಾಗಿದೆ.

ಕೆಲಸ ಹುಡುಕುತ್ತಿದ್ದಾರಾ? ಬೇರೆ ಬೇರೆ ಉದ್ಯೋಗ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಹುದ್ದೆಗೆ ಅರ್ಜಿ ಸಲ್ಲಿಸಲು ಜಿಲ್ಲಾಧಿಕಾರಿಯಿಂದ ತೃತೀಯ ಲಿಂಗಿ ಧೃಡೀಕರಣ ಪತ್ರ ಕಡ್ಡಾಯವಾಗಿ ಇರಬೇಕು. ಧೃಡೀಕರಣ ಪತ್ರ ನೀಡಿಲ್ಲವಾದಲ್ಲಿ ಅಂತಹ ಅರ್ಜಿಯನ್ನು ತಿರಸ್ಕೃತ ಮಾಡಲಾಗುತ್ತದೆ. ಸದ್ಯ ತೃತೀಯ ಲಿಂಗಿಯರು ಇಲಾಖೆಯ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
Published by:Latha CG
First published: