• Home
  • »
  • News
  • »
  • jobs
  • »
  • KSP Recruitment 2022: ಕಾನ್ಸ್​ಟೇಬಲ್ ಹುದ್ದೆಗಳ ನೇಮಕಾತಿ, ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

KSP Recruitment 2022: ಕಾನ್ಸ್​ಟೇಬಲ್ ಹುದ್ದೆಗಳ ನೇಮಕಾತಿ, ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

ಕರ್ನಾಟಕ ರಾಜ್ಯ ಪೊಲೀಸ್

ಕರ್ನಾಟಕ ರಾಜ್ಯ ಪೊಲೀಸ್

ಕರ್ನಾಟಕ ರಾಜ್ಯ ಪೊಲೀಸ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 25 ವರ್ಷ ಇರಬೇಕು.

  • News18 Kannada
  • Last Updated :
  • Karnataka, India
  • Share this:

    KSP Recruitment 2022: ಕರ್ನಾಟಕ ರಾಜ್ಯ ಪೊಲೀಸ್ (Karnataka State Police) ಖಾಲಿ ಇರುವ 3484 ಪೊಲೀಸ್ ಕಾನ್ಸ್​​ಟೇಬಲ್(CAR/DAR) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಮೊದಲು ಅಕ್ಟೋಬರ್ 31, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ(Last Date)ವಾಗಿತ್ತು. ಈಗ ಅರ್ಜಿ ಸಲ್ಲಿಕೆ ದಿನಾಂಕವನ್ನು ಕರ್ನಾಟಕ ರಾಜ್ಯ ಪೊಲೀಸ್ ವಿಸ್ತರಿಸಿದೆ. ನವೆಂಬರ್ 30, 2022ರವರೆಗೆ ಅರ್ಜಿ ಸಲ್ಲಿಲಸಲು ಅವಕಾಶವಿದೆ. ಆಸಕ್ತ ಅಭ್ಯರ್ಥಿಗಳು(Candidates) ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಿ.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಕರ್ನಾಟಕ ರಾಜ್ಯ ಪೊಲೀಸ್
    ಹುದ್ದೆಯ ಹೆಸರುಪೊಲೀಸ್ ಕಾನ್ಸ್​ಟೇಬಲ್(CAR/DAR)
    ಒಟ್ಟು ಹುದ್ದೆ3484
    ವಿದ್ಯಾರ್ಹತೆಎಸ್​ಎಸ್​ಎಲ್​ಸಿ, ಪಿಯುಸಿ
    ಸ್ಥಳಬೆಂಗಳೂರು
    ವೇತನಮಾಸಿಕ ₹ 23500- 47650
    ಅರ್ಜಿ ಸಲ್ಲಿಕೆ ಬಗೆಆನ್​ಲೈನ್​
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ19/09/2022
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ30/11/2022


    ಹುದ್ದೆಯ ಮಾಹಿತಿ:
    ಸಶಸ್ತ್ರ ಪೊಲೀಸ್ ಕಾನ್ಸ್​ಟೇಬಲ್​(CAR/DAR)-ಕರ್ನಾಟಕ ರಾಜ್ಯ- 3064
    ಸಶಸ್ತ್ರ ಪೊಲೀಸ್ ಕಾನ್ಸ್​ಟೇಬಲ್​ (CAR/DAR)- ಕಲ್ಯಾಣ ಕರ್ನಾಟಕ- 420


    ಇದನ್ನೂ ಓದಿ: C-DOT Recruitment 2022: ಸೈಂಟಿಸ್ಟ್​ ಹುದ್ದೆಗಳಿಗೆ ಅರ್ಜಿ ಆಹ್ವಾನ, ಸಂಬಳ 2.18 ಲಕ್ಷ


    ಅರ್ಹತಾ ಮಾನದಂಡಗಳೇನು?


    ವಿದ್ಯಾರ್ಹತೆ:
    ಕರ್ನಾಟಕ ರಾಜ್ಯ ಪೊಲೀಸ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ, 12ನೇ ತರಗತಿ ಉತ್ತೀರ್ಣರಾಗಿರಬೇಕು.


    ವಯೋಮಿತಿ:
    ಕರ್ನಾಟಕ ರಾಜ್ಯ ಪೊಲೀಸ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 25 ವರ್ಷ ಇರಬೇಕು.


    ವಯೋಮಿತಿ ಸಡಿಲಿಕೆ:
    ಪ್ರವರ್ಗ-2ಎ/ಎಬಿ/3ಎ & 3ಬಿ ಅಭ್ಯರ್ಥಿಗಳು- 3 ವರ್ಷ
    ಎಸ್​​ಸಿ/ಎಸ್​ಟಿ ಅಭ್ಯರ್ಥಿಗಳು- 5 ವರ್ಷ


    ಅರ್ಜಿ ಶುಲ್ಕ:
    ಎಸ್​ಸಿ/ಎಸ್​ಟಿ/ ಪ್ರವರ್ಗ-1 ಅಭ್ಯರ್ಥಿಗಳು- 200 ರೂ.
    ಸಾಮಾನ್ಯ, ಪ್ರವರಗ 2ಎ, 2ಬಿ, 3ಎ & 3ಬಿ ಅಭ್ಯರ್ಥಿಗಳು- 400 ರೂ.
    ಪಾವತಿಸುವ ಬಗೆ: ಆನ್​ಲೈನ್​


    ಇದನ್ನೂ ಓದಿ: Sahitya Akademi: ತಿಂಗಳಿಗೆ 1.77 ಲಕ್ಷ ಸಂಬಳ; Sub Editor, ಸ್ಟೆನೋಗ್ರಾಫರ್ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ


    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ
    ದೈಹಿಕ ಗುಣಮಟ್ಟದ ಪರೀಕ್ಷೆ
    ಸಹಿಷ್ಣುತೆ ಪರೀಕ್ಷೆ
    ವೈದ್ಯಕೀಯ ಪರೀಕ್ಷೆ


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 19/09/2022
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30/11/2022
    ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 02/12/2022

    Published by:Latha CG
    First published: