ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ(Karnataka State Open University)ವು ವಿವಿಧ ವಿಷಯಗಳ ಬೋಧಕ ಹುದ್ದೆ(Professor Posts)ಗಳ ಭರ್ತಿಗೆ ನೋಟಿಫಿಕೇಶನ್(Notification) ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ |
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ |
ಹುದ್ದೆಯ ಹೆಸರು |
ಬೋಧಕ ಹುದ್ದೆ |
ಒಟ್ಟು ಹುದ್ದೆಗಳು |
32 |
ವಿದ್ಯಾರ್ಹತೆ |
Ph.D / NET / SLET |
ಅರ್ಜಿ ಸಲ್ಲಿಕೆ ವಿಧಾನ |
ಆಫ್ಲೈನ್(ಪೋಸ್ಟಲ್) |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ |
11/11/2021 |
ವಿಷಯವಾರು ಪ್ರೊಫೆಸರ್ ಹುದ್ದೆಗಳು
ಕನ್ನಡ - 1
ಇಂಗ್ಲಿಷ್ - 1
ಕಾಮರ್ಸ್ - 1
ಮ್ಯಾನೇಜ್ಮೆಂಟ್ - 1
ಇತಿಹಾಸ - 1
ಸೋಷಿಯಾಲಜಿ - 1
ಪೊಲಿಟಿಕಲ್ ಸೈನ್ಸ್ - 1
ವಿಷಯವಾರು ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗಳು
ಕನ್ನಡ - 2
ಹಿಂದಿ - 1
ಇಂಗ್ಲಿಷ್ - 2
ಕಾಮರ್ಸ್ - 2
ಮ್ಯಾನೇಜ್ಮೆಂಟ್ - 2
ಇತಿಹಾಸ - 2
ಸೋಷಿಯಾಲಜಿ - 1
ಪೊಲಿಟಿಕಲ್ ಸೈನ್ಸ್ - 1
ಅರ್ಥಶಾಸ್ತ್ರ - 2
ಶಿಕ್ಷಣ - 1
ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ - 1
ಭೌತಶಾಸ್ತ್ರ - 1
ರಸಾಯನಶಾಸ್ತ್ರ - 1
ಗಣಿತ - 1
ಮೈಕ್ರೋಬಯೋಲಜಿ - 1
ಜಿಯೋಗ್ರಫಿ - 1
ಮನಃಶಾಸ್ತ್ರ - 1
ಕಂಪ್ಯೂಟರ್ ಸೈನ್ಸ್- 1
ಬಯೋಟೆಕ್ನಾಲಜಿ - 1
ಒಟ್ಟು 7 ಪ್ರೊಫೆಸರ್ ಹುದ್ದೆಗಳು, 25 ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗಳು ಖಾಲಿ ಇವೆ.
ಇದನ್ನೂ ಓದಿ: India Post Recruitment 2021: ತಿಂಗಳಿಗೆ ₹81,100 ಸಂಬಳ, 10ನೇ ತರಗತಿ ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಉದ್ಯೋಗ
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ :
ನವೆಂಬರ್ 11, 2021
ವಿದ್ಯಾರ್ಹತೆ
ವಿಷಯವಾರು ಹುದ್ದೆಗಳಿಗೆ ಅನುಗುಣವಾಗಿ ಆಯಾ ವಿಷಯದಲ್ಲಿ ಸ್ನಾತಕೋತ್ತರ ಪದವಿ ಜತೆಗೆ Ph.D / NET / SLET ಪಾಸ್ ಮಾಡಿರಬೇಕು.
ಅರ್ಜಿ ಶುಲ್ಕ ಎಷ್ಟು?
ಪ್ರೊಫೆಸರ್ ಪೋಸ್ಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ರೂ.1,500 (ST /SC / Cat-1 ರೂ.750), ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗಳಿಗೆ ರೂ.1,200 (SC / ST / Cat-1 ರೂ.600) ಅನ್ನು 'Finance officer, Karnataka State Open University, Mukthagangothri, Mysuru-560006' ಇವರ ಹೆಸರಲ್ಲಿ ಡಿಡಿ ತೆಗೆಯುವ ಮೂಲಕ ಅರ್ಜಿ ಶುಲ್ಕ ಪಾವತಿಸಬೇಕು. ನಂತರ ಅಪ್ಲಿಕೇಶನ್ ಜತೆಗೆ ಇದರ ಕಚೇರಿ ಕಾಪಿಯನ್ನು ಸಲ್ಲಿಸಬೇಕು.
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು KSOU ವೆಬ್ಸೈಟ್
www.ksoumysuru.ac.in ನಲ್ಲಿ ಅಥವಾ ಮುಕ್ತ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಅಪ್ಲಿಕೇಶನ್ ಪಡೆಯಬೇಕು. ನಂತರ ಭರ್ತಿ ಮಾಡಿದ ಅರ್ಜಿಯನ್ನು - 'ರಿಜಿಸ್ಟ್ರಾರ್, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಮುಕ್ತಗಂಗೋತ್ರಿ, ಮೈಸೂರು - 570006' ಇಲ್ಲಿಗೆ ತಲುಪಿಸಬೇಕು.
ಇದನ್ನೂ ಓದಿ:Karnataka Jobs: ಕರ್ನಾಟಕ ಖಾದಿ ಮಂಡಳಿಯಲ್ಲಿ ವಿವಿಧ ಹುದ್ದೆಗಳು ಖಾಲಿ; ತಿಂಗಳಿಗೆ ₹ 88,000 ಸಂಬಳ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ