KSMCL Recruitment: ಕರ್ನಾಟಕ ಸ್ಟೇಟ್ ಮಿನರಲ್ಸ್​​ನಲ್ಲಿ 31 ಹುದ್ದೆಗೆ ನೇರ ಸಂದರ್ಶನ; ಇಲ್ಲಿದೆ ಸಂಪೂರ್ಣ ಮಾಹಿತಿ

ಈ ಹುದ್ದೆಗಳನ್ನು ಎರಡು ವರ್ಷದ ಅವಧಿಗೆ ತಾತ್ಕಾಲಿಕವಾಗಿ ನೇಮಕ ಮಾಡಲಾಗುತ್ತಿದೆ. ಬೆಂಗಳೂರು, ಬಾಗಲಕೋಟೆ, ಸಂಡೂರು ಮತ್ತು ಹಾಸನದಲ್ಲಿ ಈ ಹುದ್ದೆಗಳು ಖಾಲಿ ಇವೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

KSMCL

KSMCL

  • Share this:
    ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್​ನಲ್ಲಿ (Karnataka State Minerals Corporation Limited) ವಿವಿಧ ಹುದ್ದೆಗಳಿಗೆ ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ. ಜಿಯೋಲಾಜಿಕಲ್ ಕನ್ಸಲ್ಟೆಂಟ್, ಎಲೆಕ್ಟ್ರಿಕಲ್ ಇಂಜಿನಿಯರ್ ಸೇರಿದಂತೆ ಒಟ್ಟು 31 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಈ ನೇರ ಸಂದರ್ಶನದಲ್ಲಿ ಹಾಜರಾಗಬಹುದಾಗಿದೆ. ಸೆಪ್ಟೆಂಬರ್​ 9ರಂದು ಈ ಹುದ್ದೆಗಳಿಗೆ ವಾಕ್​ ಇನ್​ ಸಂದರ್ಶನ  ನಡೆಯಲಿದೆ.

    ಈ ಹುದ್ದೆಗಳನ್ನು ಎರಡು ವರ್ಷದ ಅವಧಿಗೆ ತಾತ್ಕಾಲಿಕವಾಗಿ ನೇಮಕ ಮಾಡಲಾಗುತ್ತಿದೆ. ಬೆಂಗಳೂರು, ಬಾಗಲಕೋಟೆ, ಸಂಡೂರು ಮತ್ತು ಹಾಸನದಲ್ಲಿ ಈ ಹುದ್ದೆಗಳು ಖಾಲಿ ಇವೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

    ಸಂಸ್ಥೆಯ ಹೆಸರು: ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್ (KSMCL)
    ಹುದ್ದೆಯ ಹೆಸರು: ಭೂವೈಜ್ಞಾನಿಕ ಸಲಹೆಗಾರ , ಎಲೆಕ್ಟ್ರಿಕಲ್ ಇಂಜಿನಿಯರ್
    ಹುದ್ದೆಗಳ ಸಂಖ್ಯೆ: 31
    ಉದ್ಯೋಗ ಸ್ಥಳ: ಬೆಂಗಳೂರು - ಹಾಸನ - ಸಂಡೂರು - ಬಾಗಲಕೋಟೆ
    ಸಂಬಳ: 15000-70000 ರೂ. ಪ್ರತಿ ತಿಂಗಳು












































































































    ಹುದ್ದೆಹುದ್ದೆ ಸಂಖ್ಯೆವಿದ್ಯಾರ್ಹತೆವಯೋಮಿತಿವೇತನ
    ಭೂವೈಜ್ಞಾನಿಕ ಸಲಹೆಗಾರ3ಜಿಯಾಲಾಜಿಯಲ್ಲಿ ಎಂಎಸ್ಸಿ ಪದವಿಗರಿಷ್ಟ 45 ವರ್ಷ70000 ರೂ ಮಾಸಿಕ
    ಸುರಕ್ಷತೆ ಮತ್ತು ಔದ್ಯೋಗಿಕ ಆರೋಗ್ಯ ಸಲಹೆಗಾರ1ಮೈನಿಂಗ್​ ಇಂಜಿನಿಯರಿಂಗ್​​​ ಪದವಿಗರಿಷ್ಟ 45 ವರ್ಷ65000ರೂ ಮಾಸಿಕ
    ಫೋರ್‌ಮ್ಯಾನ್-ಸರ್ವೆ2ಮೈನಿಂಗ್​, ಮೈನಿಂಗ್​ ಸರ್ವೇ ಯಲ್ಲಿ ಡಿಪ್ಲೊಮಾಗರಿಷ್ಟ 45 ವರ್ಷ40000ರೂ ಮಾಸಿಕ
    ಎಲೆಕ್ಟ್ರಿಕಲ್ ಇಂಜಿನಿಯರ್2ಎಲೆಕ್ಟ್ರಿಕಲ್​ನಲ್ಲಿ ಬಿಇ ಪದವಿಗರಿಷ್ಟ 40 ವರ್ಷ32000ರೂ ಮಾಸಿಕ
    ನಿರ್ವಾಹಕರು3ಹತ್ತನೇ ತರಗತಿಗರಿಷ್ಟ 35 ವರ್ಷ25000ರೂ ಮಾಸಿಕ
    ಸಹಾಯಕ (ಗಣಿ)4ಹತ್ತನೇ ತರಗತಿಗರಿಷ್ಟ 33 ವರ್ಷ18000ರೂ ಮಾಸಿಕ
    ಪುರುಷ ಕಾರ್ಮಿಕ 6 07th 22  150006ಏಳನೇ ತರಗತಿಗರಿಷ್ಟ 22 ವರ್ಷ15000 ರೂ ಮಾಸಿಕ
    ವೈದ್ಯಕೀಯ ಅಧಿಕಾರಿ1ಎಂಬಿಬಿಎಸ್​, ಜನರಲ್​ ಮೆಡಿಸಿನ್​ನಲ್ಲಿ ಎಂಡಿ ಪದವಿಗರಿಷ್ಟ 55 ವರ್ಷ80000ರೂ ಮಾಸಿಕ
    ನರ್ಸ್2ಬಿಎಸ್ಸಿ ನರ್ಸಿಂಗ್​​ಗರಿಷ್ಟ 35 ವರ್ಷ25000 ರೂ ಮಾಸಿಕ
    ಔಷಧಿಕಾರ1ಬಿ ಫಾರ್ಮ್​​ಗರಿಷ್ಟ 35 ವರ್ಷ25000 ರೂ ಮಾಸಿಕ
    ಡಿಜಿಎಂ ಮಾರ್ಕೆಟಿಂಗ್1ಮಾರ್ಕೆಟಿಂಗ್​ನಲ್ಲಿ ಎಂಬಿಎ ಪದವಿಗರಿಷ್ಟ 45 ವರ್ಷ50000ರೂ ಮಾಸಿಕ
    ಮಾರ್ಕೆಟಿಂಗ್ ಕನ್ಸಲ್ಟೆಂಟ್3ಬಿಬಿಎಂ, ಬಿಬಿಎ, ಮಾರ್ಕೆಂಟಿಂಗ್​ನಲ್ಲಿ ಎಂಬಿಎಗರಿಷ್ಟ 30 ವರ್ಷ 25000 ರೂ ಮಾಸಿಕ
    ಇಂಜಿನಿಯರ್ (ಸಿವಿಲ್)1ಸಿವಿಲ್​ ಇಂಜಿನಿಯರಿಂಗ್​​ಗರಿಷ್ಟ 40 ವರ್ಷ32000 ರೂ ಮಾಸಿಕ
    ಸಲಹೆಗಾರ (ಹಣಕಾಸು ನಿರ್ವಹಣೆ ಲೆಕ್ಕಪರಿಶೋಧನೆ)1ಕೆಎಸ್​​ಎಂಸಿಎಲ್​ ನೇಮಕಾತಿ ನಿಯಮ ಅನುಸಾರಗರಿಷ್ಟ 65 ವರ್ಷ50000ರೂ ಮಾಸಿಕ

    ಆಯ್ಕೆ ವಿಧಾನ: ನೇರ ಸಂದರ್ಶನ

    ಇದನ್ನು ಓದಿ: ರೈಲ್ವೆಯಲ್ಲಿದೆ ಕಂಪ್ಯೂಟರ್​ ಆಪರೇಟರ್​ ಹುದ್ದೆ; ಎಸ್​ಎಸ್​ಎಲ್​ಸಿ, ಐಟಿಐ ವಿದ್ಯಾರ್ಹತೆ

    ಪ್ರಮುಖ ದಿನಾಂಕಗಳು:
    ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 20 ಆಗಸ್ಟ್​ 2022
    ವಾಕ್-ಇನ್ ದಿನಾಂಕ: ಸೆಪ್ಟೆಂಬರ್ 5 ರಿಂದ 9ರವರೆಗೆ

    ಪ್ರಮುಖ ಲಿಂಕ್​ಗಳು

    ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: ksmc.karnataka.gov.in

    ಇದನ್ನು ಓದಿ: 138 ಪ್ರಾಜೆಕ್ಟ್​ ಸೈಟಿಂಸ್​ ಹುದ್ದೆಗೆ ಅರ್ಜಿ ಆಹ್ವಾನ; ಎಎಸ್ಸಿ ಆಗಿದ್ರೆ ಅವಕಾಶ

    ನೇರ ಸಂದರ್ಶನ ನಡೆಯುವ ಸ್ಥಳ:
    ಕಾರ್ಪೊರೇಟ್ ಕಚೇರಿ, ಟಿಟಿಎಂಸಿ, 'ಎ' ಬ್ಲಾಕ್, 5 ನೇ ಮಹಡಿ, ಬಿಎಂಟಿಸಿ ಕಟ್ಟಡ, ಕೆ.ಎಚ್​ ರಸ್ತೆ, ಶಾಂತಿನಗರ, ಬೆಂಗಳೂರು - 560027

    ನೇರ ಸಂದರ್ಶನದಲ್ಲಿ ಅಗತ್ಯವಾಗಿ ಕೊಂಡೊಯ್ಯಬೇಕಾದ ದಾಖಲೆ

    ಆಸಕ್ತ ಅಭ್ಯರ್ಥಿಗಳು ಭರ್ತಿಯಾದ ವೆಬ್​ಸೈಟ್​ನಲ್ಲಿ ನೀಡಿರುವ ನಿಗದಿತ ಅರ್ಜಿಯನ್ನು ಭರ್ತಿ ಮಾಡಿ ನೇರ ಸಂದರ್ಶನಕ್ಕೆ ಕೊಂಡೊಯ್ಯವುದು ಅವಶ್ಯ.
    ಪದವಿ ಮತ್ತು 10ನೇ ತರಗತಿ ಮಾರ್ಕ್ಸ್​ ಕಾರ್ಡ್​​
    ಸಕ್ಷಮ ಅಧಿಕಾರಿಗಳು ನೀಡಿದ ಅನುಭವ ಪ್ರಮಾಣಪತ್ರಗಳು/ಯಾವುದೇ ಸಂಬಂಧಿತ ಪ್ರಮಾಣಪತ್ರಗಳು/ ಪ್ರಶಂಸಾಪತ್ರಗಳು.
    ಜಾತಿ ಪ್ರಮಾಣ ಪತ್ರ
    ನಾನ್-ಕ್ರೀಮಿ ಲೇಯರ್ ಪ್ರಮಾಣಪತ್ರ ಅತ್ಯಗತ್ಯ
    ಶೈಕ್ಷಣಿಕ ಅರ್ಹತೆ ಸಂಬಂಧಿಸಿದ ಯಾವುದೇ ಇತರ ಸಂಬಂಧಿತ ಮಾಹಿತಿ.
    Published by:Seema R
    First published: