KSMCL Recruitment: ಟ್ರೈನಿ ಮೈನಿಂಗ್ ಇಂಜಿನಿಯರಿಂಗ್ ಹುದ್ದೆಗೆ ವಾಕ್​-ಇನ್​-ಇಂಟರ್​ವ್ಯೂ

ಬೆಂಗಳೂರಿನಲ್ಲಿ 2, ಬಳ್ಳಾರಿ- 1, ಬಾಗಲಕೋಟೆ-1 ಮತ್ತು ಹಾಸಾನದಲ್ಲಿ-1 ಖಾಲಿ ಇರುವ ಹುದ್ದೆಗೆ ನೇಮಕಾತಿ ನಡೆಯಲಿದೆ.

KSMCL

KSMCL

  • Share this:
    ಕರ್ನಾಟಕ ಸ್ಟೇಟ್​ ಮಿನರಲ್ಸ್​ ಕಾರ್ಪೊರೇಷನ್​ ಲಿಮಿಟೆಡ್ (Karnataka State Minerals Corporation Limited) ​​ ಖಾಲಿಯಿರುವ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಸ್ಟೈಫಂಡ್ ಆಧಾರದ ಮೇಲೆ ಒಂದು ವರ್ಷದ ಗುತ್ತಿಗೆಗೆ ಕಾರ್ಯ ನಿರ್ವಹಿಸಲು ಟ್ರೈನಿ ಮೈನಿಂಗ್ ಇಂಜಿನಿಯರಿಂಗ್ (Trainee Mining Engineer) ಹುದ್ದೆ ಭರ್ತಿಗೆ ಸಂಸ್ಥೆ ಮುಂದಾಗಿದೆ. ಐದು​ ಹುದ್ದೆ ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ವಾಕ್​ ಇನ್​ ಇಂಟರ್​ವ್ಯೂನಲ್ಲಿ ಭಾಗಿಯಾಗಬಹುದಾಗಿದೆ. ವಾಕ್​ ಇನ್​ ಇಂಟರ್ವ್ಯೂ ನಡೆಯುವ ದಿನಾಂಕ ಜೂ 24 ಆಗಿದೆ.

    ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.



























    ಹುದ್ದೆ ವಿವರಮಾಹಿತಿ
    ಸಂಸ್ಥೆಕರ್ನಾಟಕ ಸ್ಟೇಟ್​ ಮಿನರಲ್ಸ್​ ಕಾರ್ಪೊರೇಷನ್​ ಲಿಮಿಟೆಡ್
    ಹುದ್ದೆಟ್ರೈನಿ ಮೈನಿಂಗ್​ ಇಂಜಿನಿಯರ್​
    ಹುದ್ದೆ ಸಂಖ್ಯೆ5
    ಆಯ್ಕೆ ವಿಧಾನವಾಕ್ ಇನ್​ ಇಂಟರ್​ವ್ಯೂ
    ವೇತನ20,000 ರೂ ಮಾಸಿಕ

    ಹುದ್ದೆಗಳ ಸಂಖ್ಯೆ

    ಸಂಸ್ಥೆಯಲ್ಲಿ ಖಾಲಿಯಿರುವ ಟ್ರೈನಿ ಮೈನಿಂಗ್​ ಇಂ​​ಜಿನಿಯರಿಂಗ್​ ಹುದ್ದೆ 1 ವರ್ಷದ ಗುತ್ತಿಗೆ ಆಧಾರಿತ ಹುದ್ದೆ ಆಗಿದೆ. ಬೆಂಗಳೂರಿನಲ್ಲಿ 2, ಬಳ್ಳಾರಿ- 1, ಬಾಗಲಕೋಟೆ-1 ಮತ್ತು ಹಾಸಾನದಲ್ಲಿ-1 ಖಾಲಿ ಇರುವ ಹುದ್ದೆಗೆ ನೇಮಕಾತಿ ನಡೆಯಲಿದೆ.

    ಶೈಕ್ಷಣಿಕ ಅರ್ಹತೆ
    ವಿಶ್ವವಿದ್ಯಾಲಯಗಳಿಂದ ಮೈನಿಂಗ್ ಇಂಜಿನಿಯರಿಂಗ್‌ನಲ್ಲಿ ಪದವಿಯನ್ನು ಪೂರ್ಣಗೊಳಿಸಿರಬೇಕು

    ವಯೋಮಿತಿ:
    ಅಭ್ಯರ್ಥಿ ಗರಿಷ್ಠ 30 ವರ್ಷಗಳನ್ನು ಮೀರಿರಬಾರದು
    ಅನುಭವ: ನಿರ್ಧಿಷ್ಟ ಕ್ಷೇತ್ರದಲ್ಲಿ ಅನುಭವ ಇರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

    ಅರ್ಜಿ ಸಲ್ಲಿಕೆ ವಿಧಾನ
    ನೇರ ಸಂದರ್ಶನ

    ಸಂದರ್ಶನ ನಡೆಯುವ ದಿನಾಂಕ ಜೂ 24, 2022 ಆಗಿದ್ದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1 ಗಂಟೆ ಆಗಿದೆ.

    ಇದನ್ನು ಓದಿ: ಎಸ್​ಎಸ್​ಎಲ್​ಸಿ, ಪಿಯುಸಿ ಆದವರಿಗೆ ಉತ್ತರ ಕನ್ನಡ ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗ ಅವಕಾಶ

    ಪ್ರಮುಖ ಲಿಂಕ್​ಗಳು

    ಅಧಿಕೃತ ಅಧಿಸೂಚನೆಗೆ ಇಲ್ಲಿ ಕ್ಲಿಕ್​ ಮಾಡಿ
    ಅಧಿಕೃತ ವೆಬ್​ ಸೈಟ್​: ksmc.karnataka.gov.in

    ಸೂಚನೆ
    ಅಂಚೆ ಮೂಲಕ ಅಥವಾ ಖುದ್ದಾಗಿ ನೇರ ಸಂದರ್ಶನದ ದಿನಾಂಕದಂದು ಸಲ್ಲಿಸಲಾಗುವ ಅರ್ಜಿಯನ್ನು ಪರಿಗಣಿಸುವುದಿಲ್ಲ.

    ಸಂದರ್ಶನಕ್ಕೆ ಹಾಜರಾಗುವ ಸ್ಥಳ
    ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಅರ್ಜಿ ಭರ್ತಿ ಮಾಡಬೇಕು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳನ್ನು ಸಲ್ಲಿಸಬೇಕು.

    ಇದನ್ನು ಓದಿ: ಮೆಸ್ಕಾಂನಲ್ಲಿ 183 ಹುದ್ದೆಗಳು ಖಾಲಿ; ಪದವಿ, ಡಿಪ್ಲೋಮಾ ಆಗಿದ್ರೆ ಅರ್ಜಿ ಸಲ್ಲಿಸಿ

    ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಸರಿಯಾದ ಪ್ರಮಾಣಪತ್ರ, ಅನುಭವದ ಒರಿಜಿನಲ್​ ಡಾಕ್ಯುಮೆಂಟ್​ನೊಂದಿಗೆ ಹಾಜರಾಗಬೇಕು.

    ಜನರಲ್ ಮ್ಯಾನೇಜರ್ (ನಿರ್ವಾಹಕರು ಮತ್ತು ವಿಜಿಲೆನ್ಸ್), ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್, T.T.M.C, A ಬ್ಲಾಕ್, 5 ನೇ ಮಹಡಿ, B.M.T.C ಕಟ್ಟಡ, K.H. ಗೆ ಕಳುಹಿಸಬೇಕಾಗುತ್ತದೆ. ರಸ್ತೆ, ಶಾಂತಿ ನಗರ, ಬೆಂಗಳೂರು - 560027

    ಆಯ್ಕೆ ವಿಧಾನ
    ಮೆರಿಟ್​
    ಅನುಭವ
    ನೇರ ಸಂದರ್ಶನದಲ್ಲಿನ ಫಾರ್ಮಮೆನ್ಸ್​​ ಆಧಾರದ ಮೇಲೆ
    Published by:Seema R
    First published: