KSMCL Recruitment: ರಾಜ್ಯ ಖನಿಜ ನಿಗಮದಲ್ಲಿ ನೇಮಕಾತಿ; ತಿಂಗಳಿಗೆ 55 ಸಾವಿರ ವೇತನ

ಈ ಹುದ್ದೆಗೆ ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿ ಅಕ್ಟೋಬರ್​ 22ರಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 1.30 ರೊಳಗೆ ನಡೆಯುವ ವಾಕ್​ ಇನ್​ ಇಂಟರ್​ವ್ಯೂ ಅಲ್ಲಿ ಭಾಗಿಯಾಗಬೇಕು

KSMCL Recruitment

KSMCL Recruitment

  • Share this:
    ಕರ್ನಾಟಕ ರಾಜ್ಯ ಖನಿಜ ನಿಗಮ ನಿಯಮಿತ (Karnataka State Minerals Corporation Limited)  ಭೂ ವಿಜ್ಞಾನಿಗಳು (Geologist) ಮತ್ತು ಮ್ಯಾನೇಜರ್​ (Manager) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. 7 ಹುದ್ದೆಗಳು ಖಾಲಿ ಇದ್ದು, ವಾಕ್​ ಇನ್​ ಇಂಟರ್​ವ್ಯೂ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ರಾಜ್ಯ ಸರ್ಕಾರ ಸ್ವಾಮ್ಯದ ಈ ಇಲಾಖೆಯಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಅರ್ಹ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶ ವಾಗಿದೆ. ಆಸಕ್ತ ಅಭ್ಯರ್ಥಿಗಳು 22 ಅಕ್ಟೋಬರ್​​ರಂದು ನಡೆಯುವ ವಾಕ್​ ಇನ್​ ಸಂದರ್ಶನದಲ್ಲಿ ಭಾಗಿಯಾಗಬಹುದಾಗಿದೆ.

    ಹುದ್ದೆ ಕುರಿತ ವಿವರ (Job Details)





















    ಹುದ್ದೆಗಳು ಹುದ್ದೆ ಸಂಖ್ಯೆ ವಯೋಮಿತಿ ವೇತನ
    ಭೂ ವಿಜ್ಞಾನ ಶಾಸ್ತ್ರಜ್ಞರು (ಟ್ರೈನಿ) 5 30 20.000
    ಮ್ಯಾನೇಜರ್ ಭೂವಿಜ್ಞಾನಿಗಳು 2 45 55,000

    ಈ ಹುದ್ದೆಗೆ ಆಯ್ಕೆಗೊಂಡ ಅಭ್ಯರ್ಥಿಗಳು 2 ವರ್ಷಗಳ ಅವಧಿಗೆ ಭೂವಿಜ್ಞಾನಿ ಟ್ರೈನಿಯ ಹುದ್ದೆ ನಿರ್ವಹಣೆ ಮಾಡಬೇಕು. ಕರ್ನಾಟಕ ರಾಜ್ಯದಾದ್ಯಂತ ವಿವಿಧ ಗಣಿ, ಕ್ವಾರಿಗಳಲ್ಲಿ, ಕಚೇರಿಗಳಲ್ಲಿ ಕೆಲಸ ಮಾಡಲು ಸಿದ್ದರಿರಬೇಕು.

    ವಿದ್ಯಾರ್ಹತೆ (Education Policy)
    ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಭೂವಿಜ್ಞಾನ, ಅನ್ವಯಿಕ ಭೂವಿಜ್ಞಾನ, ಭೂ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಅಥವಾ ಕಾನೂನು ಅಥವಾ ಸಮಾನ ಅರ್ಹತೆ ಹೊಂದಿರಬೇಕು.

    ಸಂದರ್ಶನ ನಡೆಯುವ ಸ್ಥಳ (Walk in interview place)
    ಈ ಹುದ್ದೆಗೆ ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿ ಅಕ್ಟೋಬರ್​ 22ರಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 1.30 ರೊಳಗೆ ನಡೆಯುವ ವಾಕ್​ ಇನ್​ ಇಂಟರ್​ವ್ಯೂ ಅಲ್ಲಿ ಭಾಗಿಯಾಗಬೇಕು. ಅಭ್ಯರ್ಥಿಗಳ ಸಂದರ್ಶನ ನಡೆಯುವ ಸ್ಥಳ
    ಕರ್ನಾಟಕ ರಾಜ್ಯ ಖನಿಜಗಳ ನಿಗಮ ನಿಯಮಿತ.
    ಕಚೇರಿ: ಟಿಟಿಎಂಸಿ ‘ಎ’ ಬ್ಲಾಕ್, 5 ನೇ ಮಹಡಿ,
    ಬಿಎಂಟಿಸಿ ಕಟ್ಟಡ, ಕೆಎಚ್ ರಸ್ತೆ, ಶಾಂತಿನಗರ,
    ಬೆಂಗಳೂರು-560027

    ಇದನ್ನು ಓದಿ: ಇಂಡಿಯನ್​ ಆಯಿಲ್​ ಕಾರ್ಪೊರೇಷನ್ ಲಿಮಿಟೆಡ್​ನಲ್ಲಿ ಭರ್ಜರಿ ಉದ್ಯೋಗಾವಕಾಶ

    ಪ್ರಮುಖ ಲಿಂಕ್​ಗಳು (Important links)
    ಭೂ ವಿಜ್ಞಾನ ಹುದ್ದೆ ಕುರಿತು ಹೊರಡಿಸಿರುವ ಅಧಿಕೃತ ಅಧಿಸೂಚನೆ ವೀಕ್ಷಣೆಗೆ ಇಲ್ಲಿ ಕ್ಲಿಕ್​ ಮಾಡಿ
    ಮ್ಯಾನೇಜರ್​ ಹುದ್ದೆ ಕುರಿತು ಕೆಎಸ್​ಎಂಸಿ ಹೊರಡಿಸಿರುವ ಅಧಿಕೃತ ಅಧಿಸೂಚನೆ ವೀಕ್ಷಣೆಗೆ ಇಲ್ಲಿ ಕ್ಲಿಕ್​ ಮಾಡಿ
    Published by:Seema R
    First published: